ಮೈಸೂರು

ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾ ದೊಡ್ಡ ಶತ್ರು
ಮೈಸೂರು

ಭಾರತಕ್ಕೆ ಪಾಕಿಸ್ತಾನಕ್ಕಿಂತ ಚೀನಾ ದೊಡ್ಡ ಶತ್ರು

July 1, 2018

ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕಶ್ಮೀರಿ ಲಾಲ್ ಜೀ ಅಭಿಮತ ಚೀನಾದ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ಭಾರತಕ್ಕೆ ರಫ್ತಾಗುತ್ತಿವೆ ಮೈಸೂರು: ಪಾಕಿಸ್ತಾನಕ್ಕಿಂತ ದೊಡ್ಡ ಶತ್ರು ಚೀನಾ. ಇದು ತಾನು ವರ್ಷಕ್ಕೆ 64 ಬಿಲಿಯನ್ ಡಾಲರ್‍ನಷ್ಟು ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆಯೇ ಹೊರತು ಭಾರತದಿಂದ ಹೆಚ್ಚು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಗೆ ಕೊಡಬೇಕಾದ ಹಣ ಹೆಚ್ಚಾಗುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕಶ್ಮೀರಿ ಲಾಲ್ ಜೀ ಅಭಿಪ್ರಾಯಪಟ್ಟರು. ಲಕ್ಷ್ಮೀಪುರಂನ ಗೋಪಾಲಸ್ವಾಮಿ…

ಇಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಮಹತ್ವದ ಸಭೆ
ಮೈಸೂರು

ಇಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಮಹತ್ವದ ಸಭೆ

July 1, 2018

ಶಾಂತಿವನದ ಬೆಳವಣಿಗೆ ನಂತರ ಹಾಲಿ-ಮಾಜಿ ಸಿಎಂ ಮುಖಾಮುಖಿ ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಆರಂಭವಾಗುವ ಮುನ್ನಾ ದಿನ ಅಂದರೆ ನಾಳೆ(ಜು.1) ಸಂಜೆ 4.30ಕ್ಕೆ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಸದ ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಸಮಿತಿ ನೀಡಿರುವ ವರದಿಯನ್ನಾಧರಿಸಿ ಬಜೆಟ್ ರೂಪರೇಷೆಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಜೆಟ್ ಮಂಡನೆ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಹೆಚ್.ಡಿ…

ಹಲಸಿನ ಹಣ್ಣು ತೊಳೆಕೊಡದಕ್ಕೆ ಹತ್ಯೆ: ಹಂತಕನಿಗೆ 10 ವರ್ಷ ಶಿಕ್ಷೆ
ಮೈಸೂರು

ಹಲಸಿನ ಹಣ್ಣು ತೊಳೆಕೊಡದಕ್ಕೆ ಹತ್ಯೆ: ಹಂತಕನಿಗೆ 10 ವರ್ಷ ಶಿಕ್ಷೆ

July 1, 2018

ಮೈಸೂರು: ಹಲಸಿನ ಹಣ್ಣಿನ ತೊಳೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಬೀದಿಬದಿ ವ್ಯಾಪಾರಿಯನ್ನು ಹತ್ಯೆಗೈದ ಹಂತಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ವನಮಾಲ ಯಾದವ ತೀರ್ಪು ನೀಡಿದ್ದಾರೆ. ಮೈಸೂರಿನ ಕೆ.ಜಿ. ಕೊಪ್ಪಲು ನಿವಾಸಿ ಟಿ.ನಿತ್ಯಾನಂದ (35) ಶಿಕ್ಷೆಗೆ ಗುರಿಯಾದವನಾಗಿದ್ದು, ಈತ 2015ರ ಜುಲೈ 2ರಂದು ಸರಸ್ವತಿಪುರಂನ ಕಾಂತರಾಜ್ ಅರಸ ರಸ್ತೆಯ ಜಿ.ಕೆ.ವೇಲು ಸ್ಟ್ಟುಡಿಯೋ ಮುಂಭಾಗ ಫುಟ್‍ಬಾತ್‍ನಲ್ಲಿ…

ಮೈಸೂರಲ್ಲಿ ಖಾಸಗಿ ಶಾಲಾ ವಾಹನಗಳ ತಪಾಸಣೆ ಆರಂಭ
ಮೈಸೂರು

ಮೈಸೂರಲ್ಲಿ ಖಾಸಗಿ ಶಾಲಾ ವಾಹನಗಳ ತಪಾಸಣೆ ಆರಂಭ

July 1, 2018

ಮೈಸೂರು: ಸಾರಿಗೆ ನಿಯಮ ಉಲ್ಲಂಘನೆ ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಖಾಸಗಿ ಶಾಲಾ ವಾಹನಗಳ ತಪಾಸಣಾ ಕಾರ್ಯಾಚರಣೆಯನ್ನು ಆರ್‍ಟಿಓ ಅಧಿಕಾರಿಗಳು ಇಂದಿನಿಂದ ಆರಂಭಿಸಿದ್ದಾರೆ. ಮೊದಲ ದಿನವಾದ ಇಂದು 5 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಿರುವ ಅಧಿಕಾರಿಗಳು, ನಂಬರ್ ಪ್ಲೇಟ್ ಇಲ್ಲದೇ ಓಡಾಡುತ್ತಿರುವ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಮೂರು ಸೀನಿಯರ್ ಮೋಟಾರ್ ವೆಹಿಕಲ್ ಇನ್ಸ್‍ಪೆಕ್ಟರ್‍ಗಳನ್ನೊಳಗೂಡಿ ಅಧಿಕಾರಿಗಳ ತಂಡವು ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಕಾರ್ಯಾಚರಣೆ ಮುಂದುವರೆಸಲಿದೆ ಎಂದು ಆರ್‍ಟಿಓ (ಪಶ್ಚಿಮ) ಎಂ.ಪ್ರಭುಸ್ವಾಮಿ…

ಜು.6ಕ್ಕೆ `ಪರಸಂಗ-ತಿಮ್ಮನ ಕಥೆ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ
ಮೈಸೂರು

ಜು.6ಕ್ಕೆ `ಪರಸಂಗ-ತಿಮ್ಮನ ಕಥೆ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ

July 1, 2018

ಮೈಸೂರು: ದ್ಯಾ ಸಿನಿಹೌಸ್ ಬ್ಯಾನರ್‍ನಡಿ ನಿರ್ಮಾಣಗೊಂಡಿರುವ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ `ಪರಸಂಗ-ತಿಮ್ಮನ ಕಥೆ’ ಜು.6ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಕೆ.ಎಂ.ರಘು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯ ಕಥಾಹಂದರದ ಸಿನಿಮಾ ಇದಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವುದು ವಿಶೇಷ ಎಂದು ಹೇಳಿದರು. ನಾಯಕರಾಗಿ ಮಿತ್ರ ಹಾಗೂ ನಾಯಕಿಯಾಗಿ ಅಕ್ಷತಾ…

ಇಂದು, ನಾಳೆ ಎಸ್‍ಡಿಪಿಐ ರಾಜ್ಯ ಪ್ರತಿನಿಧಿಗಳ ಸಭೆ
ಮೈಸೂರು

ಇಂದು, ನಾಳೆ ಎಸ್‍ಡಿಪಿಐ ರಾಜ್ಯ ಪ್ರತಿನಿಧಿಗಳ ಸಭೆ

July 1, 2018

ಮೈಸೂರು: ಎಸ್‍ಡಿಪಿಐ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರ ಆಯ್ಕೆಗಾಗಿ ಮೈಸೂರಿನಲ್ಲಿ ಜು.1 ಮತ್ತು 2ರಂದು ಪಕ್ಷದ ರಾಜ್ಯ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷವು ಭಾರತದ ಚುನಾವಣಾ ಆಯೋಗದ ನಿಯಮಗಳಿಗೆ ಬದ್ಧವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ತಳಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಆಂತರಿಕ ಚುನಾವಣೆ ಮೂಲಕ ಕಾರ್ಯಕಾರಣಿ ಸಮಿತಿ ಸದಸ್ಯರನ್ನು…

ಹೈಕೋರ್ಟ್ ತೀರ್ಪಿಗೆ ಜೆ.ಕೆ.ಟೈರ್ಸ್ ಕಾರ್ಮಿಕರ ಸ್ವಾಗತ
ಮೈಸೂರು

ಹೈಕೋರ್ಟ್ ತೀರ್ಪಿಗೆ ಜೆ.ಕೆ.ಟೈರ್ಸ್ ಕಾರ್ಮಿಕರ ಸ್ವಾಗತ

July 1, 2018

ಮೈಸೂರು: ಕಾರ್ಮಿಕರ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸಿ ನೀಡಿರುವ ಹೈಕೋರ್ಟ್ ತೀರ್ಪನ್ನು ಮೈಸೂರಿನ ಜೆ.ಕೆ. ಟೈರ್ಸ್ ಕಾರ್ಮಿಕರು ಸ್ವಾಗತಿಸಿದ್ದಾರೆ. ಕೆಆರ್‍ಎಸ್ ರಸ್ತೆಯಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ಎದುರು ಇಂದು ಮಧ್ಯಾಹ್ನ ಸಂಭ್ರಮಾಚರಣೆ ನಡೆಸಿರುವ ಅವರು ನ್ಯಾಯಾಲಯದ ತೀರ್ಪಿನಿಂದ ರಾಜ್ಯದಾದ್ಯಂತ ಲಕ್ಷಾಂತರ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಅವಲಂಭಿತ ಸದಸ್ಯರಿಗೆ ಅನುಕೂಲವಾಗಿದೆ ಎಂದು ವಿಟಿಇಯು ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ತಿಳಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ವಿಜಿ ಕೆ.ನಾಯಕ್, ಕಾರ್ಮಿಕ ಸಂಘದ ಅಧ್ಯಕ್ಷ ಭರತ್ ರಾಜ್, ಪದಾಧಿಕಾರಿಗಳಾದ…

ಪ್ರೊ. ಕೆ.ಎಸ್.ಭಗವಾನ್ ಹತ್ಯೆ ಸಂಚು ಖಂಡಿಸಿ ದಸಂಸ ಪ್ರತಿಭಟನೆ
ಮೈಸೂರು

ಪ್ರೊ. ಕೆ.ಎಸ್.ಭಗವಾನ್ ಹತ್ಯೆ ಸಂಚು ಖಂಡಿಸಿ ದಸಂಸ ಪ್ರತಿಭಟನೆ

July 1, 2018

ಮೈಸೂರು: ವಿಚಾರವಾದಿ ಪ್ರೊ. ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದನ್ನು ಖಂಡಿಸಿ ದಸಂಸ ಪದಾಧಿಕಾರಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಈ ಹಿಂದೆ ಖ್ಯಾತ ಸಾಹಿತಿ ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವ ರನ್ನು ವ್ಯವಸ್ಥಿತವಾಗಿ ಸಂಚು ಮಾಡಿ ಹತ್ಯೆಗೈದ ಬೆನ್ನಲ್ಲೇ ಇದೀಗ ಪ್ರೊ. ಭಗವಾನ್ ಹತ್ಯೆಗೆ ಸಂಚು ರೂಪಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇ ಕೆಂದು ಅವರು ಒತ್ತಾಯಿಸಿದರು. ಇಂತಹ ಘಟನೆಗಳಿಗೆ ಕುಮ್ಮಕ್ಕು…

ಶಾಸಕ ವಿಶ್ವನಾಥ್‍ರ ಉದ್ಧಟತನಕ್ಕೆ ಕಾಂಗ್ರೆಸ್ ಖಂಡನೆ
ಮೈಸೂರು

ಶಾಸಕ ವಿಶ್ವನಾಥ್‍ರ ಉದ್ಧಟತನಕ್ಕೆ ಕಾಂಗ್ರೆಸ್ ಖಂಡನೆ

July 1, 2018

ಮೈಸೂರು: ಇತ್ತೀಚೆಗೆ ಹುಣಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಡಗೂರು ಎಚ್. ವಿಶ್ವನಾಥ್ ಅವರು ಕಾಂಗ್ರೆಸ್‍ನ ಮಹಿಳಾ ಜನಪ್ರತಿನಿಧಿಗಳೊಂದಿಗೆ ಉದ್ಧಟತನದಿಂದ ವರ್ತಿಸಿರುವುದಲ್ಲದೆ, ತಮ್ಮ ವಿರುದ್ಧ ಕೆಲವರು ರಾಜಕೀಯ ತೀಟೆ ಮಾಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ಹೆಚ್. ತೇಜಸ್ವಿ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವನಾಥ್ ಅವರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ತೀಟೆ ರಾಜಕಾರಣವನ್ನೇ ಮಾಡುತ್ತಾ ಬಂದಿದ್ದು, ಇನ್ನೊಬ್ಬರಿಗೆ ತೀಟೆ…

ಬಡ್ತಿ ನೀತಿ ವಿರೋಧಿಸಿ ಮೈಸೂರಲ್ಲಿ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಬಡ್ತಿ ನೀತಿ ವಿರೋಧಿಸಿ ಮೈಸೂರಲ್ಲಿ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

July 1, 2018

ಮೈಸೂರು:  ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯೊಂದಿಗೆ ತೋಟಗಾರಿಕಾ ಸಹಾಯಕರಾಗಿ ನೇಮಕಗೊಂಡಿರುವವರಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿ ಪದೋನ್ನತಿ ನೀಡುವುದನ್ನು ಖಂಡಿಸಿ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಾಗಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ತೋಟಗಾರಿಕೆ ಸಹಾಯಕರಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿ ಬಡ್ತಿ ನೀಡುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರೋಧವಾದುದು ಎಂದು ಆರೋಪಿಸಿದರು. ಕೇವಲ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಮೇಲೆ ನೇಮಕ ಆದವರಿಗೆ,…

1 1,514 1,515 1,516 1,517 1,518 1,611
Translate »