ಬಡ್ತಿ ನೀತಿ ವಿರೋಧಿಸಿ ಮೈಸೂರಲ್ಲಿ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಬಡ್ತಿ ನೀತಿ ವಿರೋಧಿಸಿ ಮೈಸೂರಲ್ಲಿ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

July 1, 2018

ಮೈಸೂರು:  ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯೊಂದಿಗೆ ತೋಟಗಾರಿಕಾ ಸಹಾಯಕರಾಗಿ ನೇಮಕಗೊಂಡಿರುವವರಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿ ಪದೋನ್ನತಿ ನೀಡುವುದನ್ನು ಖಂಡಿಸಿ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಾಗಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ತೋಟಗಾರಿಕೆ ಸಹಾಯಕರಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿ ಬಡ್ತಿ ನೀಡುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರೋಧವಾದುದು ಎಂದು ಆರೋಪಿಸಿದರು.

ಕೇವಲ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಮೇಲೆ ನೇಮಕ ಆದವರಿಗೆ, ಮುಂಬಡ್ತಿ ನೇಮಕ ಆದವರಿಗೆ ಮುಂಬಡ್ತಿ ನೀಡಿದರೆ ತಾವು ಪದವಿ ಪಡೆದು ಅವರೊಂದಿಗೆ ಮುಂಬಡ್ತಿಗೆ ಸ್ಪರ್ಧೆ ಮಾಡಬೇಕಾಗುತ್ತದೆ. ಈ ನೀತಿಯನ್ನು ರದ್ದುಗೊಳಿಸಿ ತೋಟಗಾರಿಕಾ ಕಾಲೇಜಿನಲ್ಲಿ ಪದವಿ ಪಡೆದ ತಮಗೆ ಆದ್ಯತೆ ಮೇಲೆ ಬಡ್ತಿ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದರು.
ಹುಣಸೂರು ರಸ್ತೆಯಲ್ಲಿರುವ ಎಲಚನಹಳ್ಳಿ ಸರ್ಕಾರಿ ತೋಟಗಾರಿಕಾ ಕಾಲೇಜಿನ ಕೆ.ಎನ್.ಕಿರಣ ಕೀರ್ತಿಶಂಕರ್, ಸಂಜಯ್, ಅಂಬರೀಷ್, ಆರ್.ಮನೋಜ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »