ಮೈಸೂರು

ಜುಲೈ 5ರಂದು ಮೈತ್ರಿ ಬಜೆಟ್
ಮೈಸೂರು

ಜುಲೈ 5ರಂದು ಮೈತ್ರಿ ಬಜೆಟ್

June 23, 2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ ಜುಲೈ 2ರಿಂದ 12ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಇದೇ ಮೊದಲ ಬಾರಿಗೆ ಜುಲೈ 5ರಂದು ಬಜೆಟ್ ಮಂಡಿಸಲಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಈ ವಿಷಯ ತಿಳಿಸಿದರು. ಜುಲೈ 2 ರಂದು ರಾಜ್ಯಪಾಲರು ಜಂಟಿ ಸದನವನ್ನು ದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 5ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ ಎಂದು ಅವರು ಹೇಳಿ ದರು. ಸಂಪುಟ ಸಭೆಯಲ್ಲಿ…

ನಮ್ಮ ಮೆಟ್ರೋ ಪ್ರಯಾಣಿಕರಿಗೆ ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲಿಗೆ ಚಾಲನೆ
ಮೈಸೂರು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲಿಗೆ ಚಾಲನೆ

June 23, 2018

ಬೆಂಗಳೂರು: ಮೆಟ್ರೋ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದ್ದು, ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಿದ್ದು ಈ ರೈಲಿಗೆ ಬೈಯಪ್ಪನಹಳ್ಳಿಯಿಂದ ಚಾಲನೆ ನೀಡಲಾಗಿದೆ. ಪಿಕ್ ಟೈಂನಲ್ಲಿ ಮೆಟ್ರೋ ಪ್ರಯಾಣ ದುಸ್ತರವಾಗಿತ್ತು. ಹೆಚ್ಚು ಸಂಖ್ಯೆ ಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದ ರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸ ಬೇಕಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಕ್ಕಿದ್ದು, ನೇರಳೆ ಮಾರ್ಗ ದಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ಬೈಯ್ಯಪ್ಪನಹಳ್ಳಿ ನಾಯಂಡಹಳ್ಳಿವರೆಗೂ ಆರು ಬೋಗಿಗಳು ಮೆಟ್ರೋ…

ಹಜ್ ಭವನಕ್ಕೆ ‘ಟಿಪ್ಪು ಸುಲ್ತಾನ್ ಹಜ್‍ಘರ್’ ಎಂದು ನಾಮಕರಣಕ್ಕೆ  ಸಚಿವ ಜಮೀರ್ ಚಿಂತನೆ
ಮೈಸೂರು

ಹಜ್ ಭವನಕ್ಕೆ ‘ಟಿಪ್ಪು ಸುಲ್ತಾನ್ ಹಜ್‍ಘರ್’ ಎಂದು ನಾಮಕರಣಕ್ಕೆ ಸಚಿವ ಜಮೀರ್ ಚಿಂತನೆ

June 23, 2018

ಬೆಂಗಳೂರು: ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹಜ್‍ಘರ್ ಎಂಬ ನಾಮಕರಣ ಸಂಬಂಧ ಕಾಂಗ್ರೆಸ್‍ನ ಹಿರಿಯ ರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಜ್ ಭವನಕ್ಕೆ ಟಿಪ್ಪುಸುಲ್ತಾನ್ ಘರ್ ಹೆಸರಿಡಲು ಮುಸ್ಲಿಂ ಸಮುದಾಯದ ಮುಖಂಡರು ಸಲಹೆ ಮಾಡಿದ್ದಾರೆ. ಪಕ್ಷದ ಹಿರಿಯ ರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಜೊತೆ ಚರ್ಚಿಸಿ ನಿರ್ಧ ರಿಸಲಾಗುವುದು. ಟಿಪ್ಪು ಜಯಂತಿ ಆಚರಣೆ ವಿಚಾರವೇ ಬೇರೆ,…

ಜು.20ರಂದು ಮೊದಲ ಆಷಾಢ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ
ಮೈಸೂರು

ಜು.20ರಂದು ಮೊದಲ ಆಷಾಢ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

June 23, 2018

ಮೈಸೂರು: 2018ರ ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಭಕ್ತಾದಿಗಳಿಗೆ ಪೂಜಾ ಸೌಲಭ್ಯಗಳನ್ನು ಒದಗಿಸಲು ಸರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಆಷಾಢ ಶುಕ್ರವಾರಗಳಲ್ಲಿ, ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಇಂದು ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ನಿಗದಿತ ಸಮಯದೊಳಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು. ಜುಲೈ 20ರಂದು ಮೊದಲ…

ಮಂಗಳೂರು ಪೊಲೀಸರೊಂದಿಗೆ ಒಡನಾಡಿ ಕಾರ್ಯಾಚರಣೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಗಳಾಗಿದ್ದ 6 ಬಾಂಗ್ಲಾ ಯುವತಿಯರ ರಕ್ಷಣೆ
ಮೈಸೂರು

ಮಂಗಳೂರು ಪೊಲೀಸರೊಂದಿಗೆ ಒಡನಾಡಿ ಕಾರ್ಯಾಚರಣೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಗಳಾಗಿದ್ದ 6 ಬಾಂಗ್ಲಾ ಯುವತಿಯರ ರಕ್ಷಣೆ

June 23, 2018

ಮೈಸೂರು: ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಮತ್ತು ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿತರಾಗಿದ್ದ ಬಾಂಗ್ಲಾದೇಶದ 6 ಯುವತಿಯರನ್ನು ರಕ್ಷಿಸಿದ್ದಾರೆ. ಮಂಗಳೂರಿನ ಪಂಪ್ ವೆಲ್ ಬಳಿ ಇರುವ ಅನ್ನಪೂರ್ಣ ಲಾಡ್ಜ್ (ಗ್ರ್ಯಾಂಡ್ ರೀಜೆನ್ಸಿ) ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಒಡನಾಡಿ ಸೇವಾ ಸಂಸ್ಥೆಯ ಕಾರ್ಯಕರ್ತರು ಇಂದು ಮುಂಜಾನೆಯಿಂದಲೇ ಲಾಡ್ಜ್ ಸಮೀಪ ಬೀಡು ಬಿಟ್ಟು ದಾಳಿಗೆ ಕಾರ್ಯತಂತ್ರ ರೂಪಿಸಿದರು. ಮಂಗಳೂರು ಪೊಲೀಸರು ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳೊಂದಿಗೆ ಸೂಕ್ತ…

‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಶೃತಿ ಹರಿಹರನ್ ಚಾಲನೆ
ಮೈಸೂರು

‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಶೃತಿ ಹರಿಹರನ್ ಚಾಲನೆ

June 23, 2018

ಮೈಸೂರು: ಮೈಸೂರಿನ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ಇಂದಿನಿಂದ ಆರಂಭವಾಗಿರುವ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಟಿ ಶೃತಿ ಹರಿಹರನ್ ಉದ್ಘಾಟಿಸಿದರು. ಇಂದಿನಿಂದ ಜೂ.24ರವರೆಗೆ ಆಯೋಜಿಸಿರುವ ಮೇಳದಲ್ಲಿ ದೇಶಾದ್ಯಂತ 25ಕ್ಕೂ ಹೆಚ್ಚು ಆಭರಣ ಮಳಿಗೆಗಳ ತೆರೆಯಲಾಗಿದ್ದು, ಮೈಸೂರು ಜನರ ಅಭಿರುಚಿಗೆ ತಕ್ಕಂತೆ ವಿವಿಧ ಶೈಲಿಯ ಆಭರಣಗಳನ್ನು ವಿನ್ಯಾಸಗೊಳಿಸಿದ್ದು, ಒಂದೇ ಸೂರಿನಡಿ ವಿವಿಧ ವಿನ್ಯಾಸದ ಚಿನ್ನಾಭರಣಗಳು ಲಭ್ಯವಿವೆ. ಆಬುಷಣ್, ಅಮರಪಾಲಿ, ಧವನಮ್, ಎಂಪಿಎಸ್, ನೀಲಕಂಠ್, ನಿಖಾರ್, ಪಂಚಕೇಸರಿ ಬಂಡೇರಾ, ಪಿಎಂಜೆ, ಶ್ರೀವಾರಿ, ಶ್ರೀ ಗಣೇಶ್,…

ಜು. 6, 7 ರಂದು ಮೂಡಬಿದಿರೆ ಆಳ್ವಾಸ್ ವತಿಯಿಂದ ಬೃಹತ್ ಉದ್ಯೋಗ ಮೇಳ
ಮೈಸೂರು

ಜು. 6, 7 ರಂದು ಮೂಡಬಿದಿರೆ ಆಳ್ವಾಸ್ ವತಿಯಿಂದ ಬೃಹತ್ ಉದ್ಯೋಗ ಮೇಳ

June 23, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 10ನೇ ಬೃಹತ್ ಉದ್ಯೋಗ ಮೇಳ `ಆಳ್ವಾಸ್ ಪ್ರಗತಿ’ಯನ್ನು ಜು.6 ಮತ್ತು 7ರಂದು ಆಯೋಜಿಸಲಾಗಿದೆ ಎಂದು ಮೇಳದ ಮಾಧ್ಯಮ ಸಂಯೋಜಕಿ ಡಾ.ಮೌಲ್ಯ ಜೀವನ್‍ರಾಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಸತತ 9 ವರ್ಷಗಳಿಂದಲೂ `ಆಳ್ವಾಸ್ ಪ್ರಗತಿ’ ಶೀರ್ಷಿಕೆಯಡಿ ಉದ್ಯೋಗ ಮೇಳ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಉದ್ಯೋಗ ಮೇಳ ದಶಕದ ಸಂಭ್ರಮದೊಂದಿಗೆ ಈ ಎರಡು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿ…

ಆಯತಪ್ಪಿ ಖಾಸಗಿ ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು 2 ವರ್ಷದ ಮಗುವಿಗೆ ಗಾಯ, ವರುಣಾ ಗ್ರಾಮದ ಬಳಿ ಘಟನೆ
ಮೈಸೂರು

ಆಯತಪ್ಪಿ ಖಾಸಗಿ ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು 2 ವರ್ಷದ ಮಗುವಿಗೆ ಗಾಯ, ವರುಣಾ ಗ್ರಾಮದ ಬಳಿ ಘಟನೆ

June 23, 2018

ಮೈಸೂರು:  ಆಯತಪ್ಪಿ ಖಾಸಗಿ ಬಸ್ಸಿನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಎರಡು ವರ್ಷದ ಮಗು ಗಾಯಗೊಂಡಿರುವ ಘಟನೆ ಮೈಸೂರು ತಾಲೂಕು ವರುಣಾ ಗ್ರಾಮದ ಬಳಿ ಗುರುವಾರ ಸಂಜೆ ಸಂಭವಿಸಿದೆ. ಮೈಸೂರು ತಾಲೂಕು ದಂಡಿಕೆರೆ ಗ್ರಾಮದ ನಿವಾಸಿ ಚಿಕ್ಕಮಾದಯ್ಯ ಅವರ ಮಗ ಚಿಕ್ಕಣ್ಣ(30) ಸಾವನ್ನಪ್ಪಿದವರು ಘಟನೆಯಿಂದ ಅವರ ಪುತ್ರ, ಎರಡು ವರ್ಷದ ಮಹದೇವ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹಬ್ಬಕ್ಕೆಂದು ಅತ್ತೆಮನೆ ಭುಗತಗಳ್ಳಿಗೆ ಹೋಗಿದ್ದ ಚಿಕ್ಕಣ್ಣ ಗುರುವಾರ ಪುತ್ರ ಮಹದೇವನೊಂದಿಗೆ ಖಾಸಗಿ ಬಸ್ಸಿನಲ್ಲಿ ಭುಗತಗಳ್ಳಿಗೆ ಹೊರಟ್ಟಿದ್ದರು….

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಿನಿ ಕಾರು ತಯಾರಿಕೆ
ಮೈಸೂರು

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಿನಿ ಕಾರು ತಯಾರಿಕೆ

June 23, 2018

ಮೈಸೂರು: ದಿನೆ ದಿನೆ ನಗರಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿ, ವಾಯು ಮಾಲಿನ್ಯ ವಿಪರೀತವಾಗಿ ಶುದ್ಧ ಗಾಳಿಗೆ ಬರಗಾಲ ಬರುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಿ.ಶ.2030ರೊಳಗೆ ಎಲ್ಲ ಕಾರುಗಳು ವಿದ್ಯುಚ್ಛಕ್ತಿಯಿಂದ ಚಲಿಸಬೇಕು ಎಂಬ ಕಾನೂನನ್ನು ತಂದಿದೆ. ಆದರೆ ಈಗಿರುವ ವಿದ್ಯುತ್ ಕಾರುಗಳು ದುಬಾರಿ . ಮೈಸೂರಿನ ವಿದ್ಯಾವರ್ಧಕ ಇಂಜಿನೀರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡು ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಜೋಡಿಸಿ, ಒಂದು ಕಾರನ್ನು ಕೇವಲ ರೂ. 65,000/- ವೆಚ್ಚದಲ್ಲಿ ತಯಾರಿಸಿದ್ದಾರೆ. ಇದು 8ರಿಂದ 10…

ಶಾಸಕ ರಾಮದಾಸ್‍ರಿಂದ ಪಾದಯಾತ್ರೆ ಶ್ರೀರಾಮಪುರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಭರವಸೆ
ಮೈಸೂರು

ಶಾಸಕ ರಾಮದಾಸ್‍ರಿಂದ ಪಾದಯಾತ್ರೆ ಶ್ರೀರಾಮಪುರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ಭರವಸೆ

June 23, 2018

ಮೈಸೂರು: ಮೈಸೂರಿನ ಕೆ.ಆರ್. ಕ್ಷೇತ್ರ ವ್ಯಾಪ್ತಿಯ ಪಾಲಿಕೆ 13ನೇ ವಾರ್ಡ್‍ನಲ್ಲಿ ಶುಕ್ರವಾರ ಶಾಸಕ ಎಸ್.ಎ.ರಾಮದಾಸ್, ಪಾದಯಾತ್ರೆ ನಡೆಸಿ ಸ್ಥಳೀಯರ ಅಹವಾಲು ಆಲಿಸಿದರಲ್ಲದೆ, ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಪಾದಯಾತ್ರೆ ಆರಂಭಿಸಿದ ಎಸ್.ಎ.ರಾಮದಾಸ್ ಅವರು 13ನೇ ವಾರ್ಡ್ ವ್ಯಾಪ್ತಿಗೆ ಬರುವ ಶ್ರೀರಾಮಪುರ ಬಡಾವಣೆಯಲ್ಲೂ ಅಹವಾಲು ಆಲಿಸಿದರು. ಈ ವೇಳೆ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಕುಡಿಯುವ ನೀರಿನ ಅಸಮರ್ಪಕ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಸಲ್ಲಿಕೆಯಾದವು….

1 1,531 1,532 1,533 1,534 1,535 1,611
Translate »