ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಿನಿ ಕಾರು ತಯಾರಿಕೆ
ಮೈಸೂರು

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಿನಿ ಕಾರು ತಯಾರಿಕೆ

June 23, 2018

ಮೈಸೂರು: ದಿನೆ ದಿನೆ ನಗರಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿ, ವಾಯು ಮಾಲಿನ್ಯ ವಿಪರೀತವಾಗಿ ಶುದ್ಧ ಗಾಳಿಗೆ ಬರಗಾಲ ಬರುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಿ.ಶ.2030ರೊಳಗೆ ಎಲ್ಲ ಕಾರುಗಳು ವಿದ್ಯುಚ್ಛಕ್ತಿಯಿಂದ ಚಲಿಸಬೇಕು ಎಂಬ ಕಾನೂನನ್ನು ತಂದಿದೆ.

ಆದರೆ ಈಗಿರುವ ವಿದ್ಯುತ್ ಕಾರುಗಳು ದುಬಾರಿ . ಮೈಸೂರಿನ ವಿದ್ಯಾವರ್ಧಕ ಇಂಜಿನೀರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡು ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಜೋಡಿಸಿ, ಒಂದು ಕಾರನ್ನು ಕೇವಲ ರೂ. 65,000/- ವೆಚ್ಚದಲ್ಲಿ ತಯಾರಿಸಿದ್ದಾರೆ. ಇದು 8ರಿಂದ 10 ಗಂಟೆ ಚಾರ್ಜ್ ಮಾಡಿದರೆ 20ರಿಂದ 25 ಕಿ.ಮೀ. ವೇಗದಲ್ಲಿ 15ರಿಂದ 20 ಕಿ.ಮೀ. ಚಲಿಸುತ್ತದೆ. ಇದರಲ್ಲಿ 3 ಜನ ಪ್ರಯಾಣಿಸಬಹುದಾಗಿದೆ. ಹತ್ತಿರದ ಮಾರುಕಟ್ಟೆಗೆ ಹೋಗಿ ಬರಲು ಹೇಳಿ ಮಾಡಿಸಿದಂತಿದೆ. ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶರತ್ ಗೌತಮ್, ಅಭಿಷೇಕ್ ಸಿ ಚ್,ದತ್ತಾತ್ರೇಯ ಶೆಟ್ಟಿ, ದರ್ಶನ್ ಕೆವಿ ಈ ಕಾರನ್ನು ತಯಾರಿಸಿದ್ದಾರೆ. ಪ್ರಾಂಶುಪಾಲರಾದ ಡಾ.ಬಿ. ಸದಾಶಿವೇಗೌಡ ವಿದ್ಯಾರ್ಥಿಗಳನ್ನು ಪ್ರಶಂಸಿಸಿದ್ದಾರೆ.

Translate »