ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ :ಕಡಿಮೆ ಬೆಲೆಯ ಸಿಎನ್‍ಸಿ ಕಟಿಂಗ್ ಯಂತ್ರ ಆವಿಷ್ಕಾರ
ಮೈಸೂರು

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ :ಕಡಿಮೆ ಬೆಲೆಯ ಸಿಎನ್‍ಸಿ ಕಟಿಂಗ್ ಯಂತ್ರ ಆವಿಷ್ಕಾರ

June 17, 2018

ಮೈಸೂರು:  ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ (ವಿವಿಸಿಇ) ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಸಾಧನೆ ಮೆರೆದಿದ್ದಾರೆ.

ಬೆಂಗಳೂರಿನ ದಯಾನಂದಸಾಗರ ಕಾಲೇಜಿನಲ್ಲಿ ನಡೆದ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಮೈಸೂರಿನ ವಿವಿಸಿಇ ವಿದ್ಯಾರ್ಥಿಗಳಾದ ಎಸ್‍ವಿ.ಗುಣರಾಮನ್, ಡಿ.ಸಂದೀಪ್, ವಿ.ಮನೀಶ್ ಭಂಡಾರಿ, ಬಿ.ಆರ್.ಸಂಜಯ್ ಆವಿಷ್ಕರಿಸಿದ ಅಗ್ಗದ ಸಿಎನ್‍ಸಿ ಲೇಸರ್ ಕಟಿಂಗ್ ಯಂತ್ರ ಪ್ರಥಮ ಬಹುಮಾನ ಪಡೆದುಕೊಂಡಿದೆ. ರಾಜ್ಯಮಟ್ಟದ ಪ್ರದರ್ಶನದಲ್ಲಿ 120ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಭಾಗವಹಿಸಿದ್ದವು. ಸಾಮಾನ್ಯವಾಗಿ ಮರ, ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಕತ್ತರಿಸುವ, ರಂಧ್ರ ಕೊರೆಯುವ ದೊಡ್ಡ ದೊಡ್ಡ ಯಂತ್ರಗಳಿರುತ್ತವೆ.

ಆದರೆ ನಾಜೂಕಾದ ಸಣ್ಣ ಸಣ್ಣ ಕೆಲಸಗಳಿಗೆ ತುಂಬಾ ದುಬಾರಿಯಾದ ಸೂಕ್ತ್ಮ ಯಂತ್ರಗಳೇ ಬೇಕು. ಈ ನಿಟ್ಟಿನಲ್ಲಿ ವಿವಿಸಿಇ ವಿದ್ಯಾರ್ಥಿಗಳು ಅಗ್ಗದ ಸಿಎನ್‍ಸಿ ಲೇಸರ್ ಕಟಿಂಗ್ ಯಂತ್ರವನ್ನು ಸಿದ್ದಪಡಿಸಿದ್ದಾರೆ. ಇದು ಮರ, ಪ್ಲಾಸ್ಟಿಕ್, ಅಕ್ರಿಲಿಕ್ ಮುಂತಾದ ವಸ್ತುಗಳನ್ನು ಅತೀ ಸೂಕ್ಷ್ಮ್ಮ ರೀತಿಯಲ್ಲಿ ಕತ್ತರಿಸುತ್ತದೆ. ಕಾಲೇಜಿನ ಡಾ.ಬಿ.ಸಿ.ಅಶೋಕ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಯಂತ್ರ ಸಿದ್ಧಪಡಿಸಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಧ್ಯಾಪಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

Translate »