ಕೊಡಗಿನ ರೆಸಾರ್ಟ್‍ವೊಂದರಲ್ಲಿ ಅತೃಪ್ತ ಸಚಿವ ಜಿ.ಟಿ.ದೇವೇಗೌಡ ಮನವೊಲಿಕೆಗೂ ಹೆಚ್.ಡಿ.ಕುಮಾರಸ್ವಾಮಿ ಯತ್ನ ಮೈಸೂರು: ನಿರೀಕ್ಷಿತ ಖಾತೆ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿರಂತರ ಹೆಣಗಾಡುತ್ತಿದ್ದಾರೆ. ಶನಿವಾರ ಈ ಇಬ್ಬರೂ ಸಚಿವರುಗಳ ಬೆಂಬಲಿಗರು ಮೈಸೂರು ಹಾಗೂ ಮಂಡ್ಯದಲ್ಲಿ ಭಾರೀ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಅವರು ಅಜ್ಞಾತ…
ವಿಧಾನ ಪರಿಷತ್ ಚುನಾವಣೆ :ನಾಳೆ ಮೈಸೂರಿನ ಮಹಾರಾಣಿ ವಾಣಿ ಜ್ಯ ಕಾಲೇಜಿನ ಹೊಸ ಕಟ್ಟಡದಲ್ಲಿ ಮತ ಎಣಿಕೆ
June 11, 2018ಮೈಸೂರು: ಜೂನ್ 8 ರಂದು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯ ಮತ ಎಣ ಕೆ ಕಾರ್ಯವು ಮೈಸೂರಿನ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣ ಸರ್ಕಾರಿ ವಾಣ ಜ್ಯ ಹಾಗೂ ನಿರ್ವಹಣಾ ಮಹಿಳಾ ಕಾಲೇಜು ಹೊಸ ಕಟ್ಟಡದಲ್ಲಿ ಜೂನ್ 12 ರಂದು ನಡೆಯಲಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳು, ಅವರ ಅಧಿಕೃತ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆದು ಕೇಂದ್ರದ ಹಾಲ್‍ನಲ್ಲಿ…
ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ ಆಚರಣೆ
June 11, 2018ಮೈಸೂರು: ಕೊಡವ ಸಂಸ್ಕೃತಿ ಮತ್ತು ಭಾಷೆಯನ್ನು ತಮ್ಮ ಸಾಹಿತ್ಯ ಕೃಷಿಯ ಮೂಲಕ ಶ್ರೀಮಂತಗೊಳಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಮೈಸೂರಿನ ವಿಜಯನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಕೊಡಗಿನ ಶೇಕ್ಸ್‍ಪಿಯರ್ ಎಂದೇ ಜನ ಮಾನಸದಲ್ಲಿ ನೆಲೆನಿಂತಿರುವ ಕೊಡಗಿನ ವರಕವಿ, ಶ್ರೇಷ್ಠ ನಾಟಕಕಾರರೂ ಆದ ಕೊಡಗಿನ ಆದಿಕವಿ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವವನ್ನು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಕನ್ನಡ ಲಿಪಿಯ ಮೂಲಕ ಕೊಡವ ಭಾಷೆ ಮತ್ತು ವೈವಿಧ್ಯತೆಯ ಸಿರಿಯನ್ನು ತಮ್ಮ ಸಾಹಿತ್ಯದಲ್ಲಿ…
ವಿಶ್ವ ಯೋಗದ ದಿನದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಭಾಗಿ
June 11, 2018ಜೂ.17ರಂದು ಮತ್ತೊಂದು ತಾಲೀಮು ಜೂ.21ರಂದು ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನ ಲಕ್ಕಿ ಡಿಪ್‍ನಲ್ಲಿ 10 ಮಂದಿಗೆ ಲಭಿಸಲಿದೆ ಪ್ರಶಸ್ತಿ ಮೈಸೂರು: ಈ ಬಾರಿಯೂ ವಿಶ್ವಯೋಗ ದಿನದಂದು ಬೃಹತ್ ಪ್ರದರ್ಶನ ನೀಡಿ ಕಳೆದ ವರ್ಷ ಮಾಡಿರುವ ಗಿನ್ನಿಸ್ ದಾಖಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಜಿಲ್ಲಾಡಳಿತ ಜೂ.21ರಂದು ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ಒಂದು ಲಕ್ಷ ಯೋಗಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಭಾನುವಾರ ಅರಮನೆಯ ಆವರಣದಲ್ಲಿ ನಡೆದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಗಮನ ಸೆಳೆದರು….
ಕಾಂಗ್ರೆಸ್ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಕೆ.ಎಸ್.ಈಶ್ವರಪ್ಪ ಬಾಂಬ್
June 11, 2018ಮೈಸೂರು: ಸಚಿವ ಸ್ಥಾನದಿಂದ ವಂಚಿತರಾಗಿ ಅತೃಪ್ತರಾಗಿರುವ ಕಾಂಗ್ರೆಸ್‍ನ ಹಲವು ಶಾಸಕರು ನನ್ನ ಸಂಪರ್ಕದಲ್ಲಿದ್ದು, ಮುಂದೇನಾಗುತ್ತದೆ ಕಾದು ನೋಡಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ. ಜನ್ಮ ದಿನದ ಹಿನ್ನೆಲೆಯಲ್ಲಿ ಭಾನುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಈ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಈಗಾಗಲೇ ಒಳಗೊಳಗೇ ಅಸಮಾಧಾನ ಹೆಚ್ಚಾಗಿದೆ. ಕಾಂಗ್ರೆಸ್ ಜೆಡಿಎಸ್‍ಗೆ ಶರಣಾದಂತೆ…
ಕ್ಲೀನ್ ಫೌಂಡೇಷನ್, ಯುವ ಬ್ರಿಗೇಡ್‍ನಿಂದ ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛತೆ
June 11, 2018ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲುಗಳಲ್ಲಿ ಚೆಲ್ಲಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸವನ್ನು ಭಾನುವಾರ ಮೈಸೂರಿನ ಕ್ಲೀನ್ ಫೌಂಡೇಷನ್ ಮತ್ತು ಯುವ ಬ್ರಿಗೇಡ್ ವತಿಯಿಂದ ಸ್ವಚ್ಛಗೊಳಿಸಿ ದಾರಿಯಲ್ಲಿರುವ ಮಂಟಪಗಳಿಗೆ ಬಣ್ಣ ಬಳಿಯುವ ಮೂಲಕ ಗಮನ ಸೆಳೆದರು. ಪ್ರಸಿದ್ಧ ಪ್ರವಾಸಿ ತಾಣವೂ ಹಾಗೂ ಧಾರ್ಮಿಕ ಕ್ಷೇತ್ರವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಪ್ರತಿ ದಿನ ಮೆಟ್ಟಿಲುಗಳ ಮೂಲಕ ಹಲವಾರು ಮಂದಿ ಭಕ್ತರು ಮತ್ತು ಪ್ರವಾಸಿಗರು ತೆರಳಲಿದ್ದು, ಮಾರ್ಗ ಮಧ್ಯೆ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲ್‍ಗಳನ್ನು ಎಸೆದು ಹೋಗುವ ಪರಿಪಾಠವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ…
ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ
June 11, 2018ರೈತ ಸಮುದಾಯದಲ್ಲಿ ಸಂತಸ ಕೆಆರ್‌ಎಸ್ ನೀರಿನ ಮಟ್ಟದಲ್ಲಿ ಹೆಚ್ಚಳ ಮಂಡ್ಯ: ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೇ ಪ್ರಸ್ತುತ ಅಣೆಕಟ್ಟೆಯಲ್ಲಿ 78 ಅಡಿಯಷ್ಟು ನೀರು ಸಂಗ್ರಹವಾಗಿರುವುದು ರೈತ ಸಮುದಾಯದಲ್ಲಿ ಸಂತಸ ಮನೆ ಮಾಡಿದೆ. ಗರಿಷ್ಠ 124.80ಅಡಿ ಸಾಮಥ್ರ್ಯದ ಕೆಆರ್‌ಎಸ್‌ನಲ್ಲಿ ಭಾನುವಾರ ಸಂಜೆ ವೇಳೆಗೆ 78.50 ಅಡಿ ನೀರು ಸಂಗ್ರಹವಾಗಿತ್ತು. ಕೆಆರ್‍ಎಸ್‍ಗೆ 4470 ಕ್ಯೂಸೆಕ್ಸ್…
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾವಿರಾರು ಸೀಡ್‍ಬಾಲ್ ತಯಾರಿಕೆ
June 11, 2018ಮೈಸೂರು: ಮೈಸೂರಿನ ಡಿಎಂಜಿ ಹಳ್ಳಿಯಲ್ಲಿರುವ ನವೋದಯ ಶಾಲೆಯ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸಾವಿರಾರು ಸೀಡ್‍ಬಾಲ್‍ಗಳನ್ನು ತಯಾರಿಸಿದರು. ಕರ್ನಾಟಕ ನವೋದಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೋಟಿ ಸೀಡ್‍ಬಾಲ್ ತಯಾರಿಕಾ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಒಟ್ಟು 28 ನವೋದಯ ವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಏರ್ಪಡಿಸಿದ್ದರ ಅಂಗವಾಗಿ ಮೈಸೂರಿನ ನವೋದಯ ಶಾಲೆಯಲ್ಲೂ ಈ ಕಾರ್ಯಕ್ರಮ ನಡೆಯಿತು. ಎಲ್ಲಾ ಶಾಲೆಗಳಿಂದ…
ಹೆಚ್‍ಡಿಕೆ ಮಾದರಿಯಲ್ಲೇ ಗ್ರಾಮ ವಾಸ್ತವ್ಯ ಹರದನಹಳ್ಳಿಯಲ್ಲಿ ಸಚಿವ ಸಾರಾ ಮಹೇಶ್ ಹೇಳಿಕೆ
June 11, 2018ಭೇರ್ಯ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿದ್ದ ಗ್ರಾಮವಾಸ್ತವ್ಯ ಮಾದರಿಯಲ್ಲೇ ತಾನೂ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಕಾರ್ಯ ಕ್ರಮ ಆರಂಭಿಸುವುದಾಗಿ ಪ್ರವಾಸೋ ದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಪ್ರಕಟಿಸಿದರು. ಅವರು ಕೆ.ಆರ್.ನಗರ ತಾಲೂಕು ಹರದನಹಳ್ಳಿಯಲ್ಲಿ ಭಾನುವಾರ ಗ್ರಾಮಸ್ಥ ರಿಂದ ಅಭಿನಂದನೆ ಸ್ವೀಕರಿಸಿ ಮಾತ ನಾಡಿದರು. ಹರದನಹಳ್ಳಿಯಿಂದಲೇ ಗ್ರಾಮವಾಸ್ತವ್ಯ ಕಾರ್ಯಕ್ರಮ ಪ್ರಾರಂಭ ಗೊಳ್ಳಲಿದ್ದು, ಜುಲೈ 6 ರಂದು ರಾತ್ರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿದ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡ ಲಾಗುವುದು. ಜು.7ರಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ 60…
ಒಂದೇ ನಂಬರ್‍ನ ಎರಡು ಬೈಕ್: ಓರ್ವನ ಬಂಧನ
June 11, 2018ಹುಣಸೂರು: ಒಂದೇ ನೋಂದಣಿ ಸಂಖ್ಯೆ ಇದ್ದ ಎರಡು ಬೈಕ್ ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಮಂಡ್ಯದಲ್ಲಿ ರಾಜ್ಯ ಮಟ್ಟದ ಪತ್ರಿಕೆ ಯೊಂದರ ಪ್ರಸಾರಣಾಧಿಕಾರಿ ಗಿರೀಶ್ ಬಂಧಿತನಾಗಿದ್ದು, ಅವರನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿವರ: ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಗರದ ಬೈಪಾಸ್ ರಸ್ತೆಯ ಕಿರಿಜಾಜಿ ಸರ್ಕಲ್‍ನಲ್ಲಿ ಹೆದ್ದಾರಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಮೈಸೂರು ಕಡೆಯಿಂದ ನಗರದ ಕಡೆಗೆ (ಕೆಎ 11-ವಿ 8117) ಒಂದೇ ನಂಬರಿನ…