ಮೈಸೂರು: ಜೂನ್ 8 ರಂದು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯ ಮತ ಎಣ ಕೆ ಕಾರ್ಯವು ಮೈಸೂರಿನ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣ ಸರ್ಕಾರಿ ವಾಣ ಜ್ಯ ಹಾಗೂ ನಿರ್ವಹಣಾ ಮಹಿಳಾ ಕಾಲೇಜು ಹೊಸ ಕಟ್ಟಡದಲ್ಲಿ ಜೂನ್ 12 ರಂದು ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಅಭ್ಯರ್ಥಿಗಳು, ಅವರ ಅಧಿಕೃತ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆದು ಕೇಂದ್ರದ ಹಾಲ್‍ನಲ್ಲಿ ಮತ ಎಣ ಕಾ ಕಾರ್ಯ ಆರಂಭವಾಗಲಿದೆ. ಚುನಾವಣಾಧಿಕಾರಿಗಳಾದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ ಎಣ ಕೆಗೆ ಕೇಂದ್ರದಲ್ಲಿ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದಾರೆ.
ಒಂದೇ ಹಾಲ್‍ನಲ್ಲಿ ಮೂರು ವಿಭಾಗಗಳನ್ನಾಗಿ ಮಾಡಿ ಮೂರೂ ಕ್ಷೇತ್ರಗಳ ಮತ ಎಣ ಕೆ ನಡೆಯಲಿದ್ದು, ಪ್ರತಿಯೊಂದು ಕ್ಷೇತ್ರಕ್ಕೆ 14 ಟೇಬಲ್‍ಗಳನ್ನು ಆಯೋಜನೆ ಮಾಡಿ, ಪ್ರತೀ ಟೇಬಲ್‍ಗೆ ರಿಟರ್ನಿಂಗ್ ಆಫೀಸರ್, ಸೂಪರ್‍ವೈಸರ್‍ಗಳು ಹಾಗೂ ಸಹಾಯಕರನ್ನು ನಿಯೋಜಿಸಲಾಗಿದೆ.
ಪ್ರಾಶಸ್ತ್ಯದ ಮತದಾನವಾದ್ದರಿಂದ ಮತ ಎಣ ಕೆ ವಿಳಂಬವಾಗಲಿದ್ದು, ತಡರಾತ್ರಿ ಅಥವಾ ಮರುದಿನ ಮುಂಜಾನೆ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಬಹುದೆಂದು ನಿರೀಕ್ಷಿಸಲಾಗಿದೆ.ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ಮರಿತಿಬ್ಬೇಗೌಡ, ಬಿಜೆಪಿಯ ಬಿ. ನಿರಂಜನಮೂರ್ತಿ, ಕಾಂಗ್ರೆಸ್‍ನ ಎಂ. ಲಕ್ಷ್ಮಣ ಸೇರಿದಂತೆ 9 ಮಂದಿ ಕಣದಲ್ಲಿದ್ದು, ಮತ ಎಣ ಕೆ ನಂತರವಷ್ಟೇ ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಲಿದೆ.
ಕೇಂದ್ರದಲ್ಲಿ ಮತ ಎಣ ಕೆಗೆ ಸಿಸಿಟಿವಿ ಕ್ಯಾಮರಾ, ಫೋಕಸಿಂಗ್ ಲೈಟ್, ಧ್ವನಿವರ್ಧಕ ಸೇರಿದಂತೆ ಸಕಲ ಸಿದ್ಧತೆ ಮಾಡಲಾಗಿದೆ.
ಸಂಚಾರ ನಿಷೇಧ: ಮತ ಎಣ ಕೆ ಹಿನ್ನೆಲೆಯಲ್ಲಿ ಜೂನ್ 12 ರಂದು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮತ ಎಣ ಕಾ ಕೇಂದ್ರಗಳ ಸುತ್ತಲಿನ ಈ ಕೆಳಕಂಡ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಹುಣಸೂರು ರಸ್ತೆಯ ಪಡುವಾರಹಳ್ಳಿ ಸಿಗ್ನಲ್ ಲೈಟ್ ಜಂಕ್ಷನ್‍ನಿಂದ ಕಲಾಮಂದಿರದವರೆಗೆ ಎರಡೂ ದಿಕ್ಕಿನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಲ್ಮೀಕಿ ರಸ್ತೆ ಹುಣಸೂರು ರಸ್ತೆ ಜಂಕ್ಷನ್‍ನಿಂದ ಕಾಳಿದಾಸ ರಸ್ತೆ ಜಂಕ್ಷನ್, ಮಾತೃ ಮಂಡಳಿ ಸರ್ಕಲ್‍ನಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ (ಆದಿಪಂಪ ರಸ್ತೆ)ವರೆಗೆ, ಸೆಂಟ್ ಜೋಸೆಫ್ ಕಾನ್ವೆಂಟ್‍ನಿಂದ ಪಡುವಾರಹಳ್ಳಿ ಜಂಕ್ಷನ್‍ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನಿಲುಗಡೆ ಸ್ಥಳ: ಮಾಧ್ಯಮ ಪ್ರತಿನಿಧಿಗಳು, ಚುನಾವಣಾ ಅಭ್ಯರ್ಥಿಗಳು, ಏಜೆಂಟರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಡುವಾರಹಳ್ಳಿಯ ಶ್ರೀ ಮಹದೇಶ್ವರ ದೇವಸ್ಥಾನದ ಹಿಂಭಾಗ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು. ಸಾರ್ವಜನಿಕರು ಆಕಾಶವಾಣ ಸರ್ಕಲ್‍ನಿಂದ ಪಶ್ಚಿಮ ಭಾಗದ ಕಾಳಿದಾಸ ರಸ್ತೆಯ ಎರಡೂ ಬದಿಗಳಲ್ಲಿ, ಮಾನಸ ಗಂಗೋತ್ರಿ ಮೈದಾನ, ಕಲಾಮಂದಿರ ಹಾಗೂ ಕುಕ್ಕರಹಳ್ಳಿ ಕೆರೆ ಪೂರ್ವ ಭಾಗದ ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು.