ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ ಆಚರಣೆ
ಮೈಸೂರು

ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ ಆಚರಣೆ

June 11, 2018

ಮೈಸೂರು: ಕೊಡವ ಸಂಸ್ಕೃತಿ ಮತ್ತು ಭಾಷೆಯನ್ನು ತಮ್ಮ ಸಾಹಿತ್ಯ ಕೃಷಿಯ ಮೂಲಕ ಶ್ರೀಮಂತಗೊಳಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಮೈಸೂರಿನ ವಿಜಯನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕೊಡಗಿನ ಶೇಕ್ಸ್‍ಪಿಯರ್ ಎಂದೇ ಜನ ಮಾನಸದಲ್ಲಿ ನೆಲೆನಿಂತಿರುವ ಕೊಡಗಿನ ವರಕವಿ, ಶ್ರೇಷ್ಠ ನಾಟಕಕಾರರೂ ಆದ ಕೊಡಗಿನ ಆದಿಕವಿ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವವನ್ನು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲಾಗಿತ್ತು.
ಕನ್ನಡ ಲಿಪಿಯ ಮೂಲಕ ಕೊಡವ ಭಾಷೆ ಮತ್ತು ವೈವಿಧ್ಯತೆಯ ಸಿರಿಯನ್ನು ತಮ್ಮ ಸಾಹಿತ್ಯದಲ್ಲಿ ಅನಾವರಣಗೊಳಿಸಿದ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಕೊಡವ ಸಮಾಜದ ವಿವಿಧ ಸಂಘಟನೆ ಗಳಿಂದ ವರ್ಷ ಪೂರ್ತಿ ಆಚರಿಸಲಾಗು ತ್ತಿದ್ದು, ಇದರ ಅಂಗವಾಗಿ 2017ರ ಸೆಪ್ಟಂ ಬರ್‍ನಲ್ಲಿ ನಾಪೋಕ್ಲು ಮೊದಲ ಕಾರ್ಯ ಕ್ರಮ ಜರುಗಿತ್ತು. ಮುಂಬರುವ ಸೆಪ್ಟಂ ಬರ್‍ವರೆಗೆ ಜನ್ಮೋತ್ಸವ ಕಾರ್ಯಕ್ರಮ ಗಳು ಮುಂದುವರೆಯಲಿವೆ.

ಇದರ ಭಾಗವಾಗಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ನಡೆದ ಕವಿಯ 150ನೇ ಜನ್ಮೋ ತ್ಸವ ಕಾರ್ಯಕ್ರಮದಲ್ಲಿ ಅಪ್ಪಚ್ಚ ಕವಿಯ ಸ್ಮರಣೆ ಮಾಡಲಾಯಿತು. ಅಖಿಲ ಕೊಡವ ಸಮಾಜ, ಕೊಡವ ಸಮಾಜ ಮೈಸೂರು, ಕೊಡವ ಸಮಾಜ ಕಲ್ಚರಲ್ ಅಂಡ್ ಸ್ಪೋಟ್ರ್ಸ್ ಕ್ಲಬ್‍ನ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಅಪ್ಪಚ್ಚ ಕವಿಯ ಚಿತ್ರ ಪಟಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ.ಮೊಣ್ಣಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೊಡವ ಭಾಷೆಗೆ ಜೀವ ತುಂಬಿದವರು ಅಪ್ಪಚ್ಚ ಕವಿ. ಕೊಡವರ ಆಚಾರ-ವಿಚಾರಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಅಪ್ಪಚ್ಚ ಕವಿ ಕೊಡಗಿನ ಆದಿಕವಿ. ಶೇಕ್ಸ್‍ಪಿಯರ್‍ನಂತೆ ಬಹುಮುಖ ಪ್ರತಿಭೆ ಸಂಪಾದಿಸಿದ್ದ ಅಪ್ಪಚ್ಚ ಮಹಾ ಕವಿಯ ಬಗ್ಗೆ ನಮ್ಮ ಯುವ ಸಮು ದಾಯಕ್ಕೆ ಹಾಗೂ ಮುಂದಿನ ಪೀಳಿಗೆಗೆ ಸಮಗ್ರವಾಗಿ ಪರಿಚಯಿಸಬೇಕಿದ್ದು, ಈ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಭರಣ ಆರ್ಟ್ ಗ್ಯಾಲರಿ ಸಂಸ್ಥಾಪಕ ನೆಲ್ಲಮಕ್ಕಡ ಬಿ.ಕಾವೇರಪ್ಪ ಮಾತನಾಡಿ, ಕನ್ನಡ ಲಿಪಿ ಬಳಸಿಕೊಂಡು ಕೊಡವ ಭಾಷೆ ಯಲ್ಲಿ ಸಾಹಿತ್ಯ ಕೃಷಿ ನಡೆಸಿದ ಅಪ್ಪಚ್ಚ ಕವಿಯು ವಿದ್ಯಾಭ್ಯಾಸ ಕೇವಲ 4ನೇ ತರಗತಿ. ಆದರೆ ಅವರ ಸಾಹಿತ್ಯ ಸಾಧನೆ ಅಗಾಧ ವಾದದು. ತಮ್ಮ 38ನೇ ವಯಸ್ಸಿನಲ್ಲಿ (1906) ಯಯಾತಿ ನಾಟಕ ರಚನೆ ಮಾಡಿದರು. 1908ರಲ್ಲಿ `ಶ್ರೀ ಸಾವಿತ್ರಿ’ ಮತ್ತು `ಸುಬ್ರಹ್ಮಣ್ಯಸ್ವಾಮಿ’ ನಾಟಕಗಳನ್ನು ಬರೆದರು. 1918ರಲ್ಲಿ `ಶ್ರೀ ಕಾವೇರಿ’ ನಾಟಕ ರಚಿಸಿ ಮಹಾನ್ ಕವಿ ಯಾಗಿ ಹೊರ ಹೊಮ್ಮಿದರು ಎಂದರು.

ಶೇಕ್ಸ್‍ಪಿಯರ್ ಇಂಗ್ಲೆಂಡಿನಲ್ಲಿ ಆಂಗ್ಲ ಸಾಹಿತ್ಯದ ಮೂಲಕ ಅಲ್ಲಿನ ಜನಜೀವನ, ಕಷ್ಟಕಾರ್ಪಣ್ಯ, ಪ್ರಕೃತಿ ಸೊಬಗು ಸೇರಿ ದಂತೆ ಆ ನೆಲದ ಬದುಕು-ಭಾವಗಳ ಮೇಲೆ ಬೆಳಕು ಚೆಲ್ಲಿ ಜಗದ್ವಿಖ್ಯಾತಿಯಾಗಿದ್ದಾರೆ. ಅದೇ ರೀತಿ ಅಪ್ಪಚ್ಚ ಕವಿಯವರೂ ಕೊಡ ಗಿನ ಮಹತ್ವ, ಕೊಡವ ಭಾಷೆಯ ವೈವಿಧ್ಯತೆ ಯನ್ನು ತಮ್ಮ ಅಕ್ಷರವೆಂಬ ಅಂಗಳದಲ್ಲಿ ಅಮರವಾಗಿಸಿದ್ದಾರೆ ಎಂದು ಸ್ಮರಿಸಿದರು.
ಹಿರಿಯ ಮಹಿಳಾ ಮುಖಂಡರಾದ ಇಟ್ಟಿರ ಪಾರ್ವತಿ ಕಾರ್ಯಪ್ಪ ಮಾತ ನಾಡಿ, ಯಯಾತಿ ನಾಟಕದಲ್ಲಿ ಅಪ್ಪಚ್ಚ ಕವಿಗಳು `ಪಾತ್ರಗಳು ಹಾಗೂ ಕೊಡವ ಭಾಷೆಗೆ’ ಜೀವಕಳೆ ತುಂಬಿದ್ದಾರೆ. ಪಾತ್ರ ಗಳ ನಡುವಿನ ಬಾಂಧವ್ಯ, ಮದ-ಮತ್ಸರ, ವೈಶಿಷ್ಟ್ಯಗಳನ್ನು ಕಣ ್ಣಗೆ ಕಟ್ಟುವಂತೆ ಚಿತ್ರಿಸಿ ದ್ದಾರೆ. ಇವರು ಕೇವಲ ಕವಿಯಲ್ಲ, ದೈವ ಸ್ವರೂಪಿ ಎಂದೇ ಆರಾಧಿಸಬೇಕೆಂಬ ಭಾವ ಮೂಡುತ್ತದೆ ಎಂದು ಭಾವುಕರಾದರು.

ಮಹಿಳಾ ಮುಖಂಡರಾದ ಪೊಂಜಾಂಡ ಲವ್ಲಿ ಅಪ್ಪಯ್ಯ ಮಾತನಾಡಿ, ಯಾವುದೇ ಭಾಷೆ ಜೀವಂತವಾಗಿದ್ದು ಶ್ರೀಮಂತಗೊಳ್ಳಲು ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ ಅಪ್ಪಚ್ಚ ಕವಿಯ ಸಾಹಿತ್ಯದ ಮೂಲಕ ಕೊಡವ ಭಾಷೆ ಶ್ರೀಮಂತ ಗೊಂಡಿದೆ. ಇವರನ್ನು ಕೊಡವರ ಕಾಳಿ ದಾಸ ಎಂದೂ ಸಹ ಅಭಿಮಾನದಿಂದ ಕರೆಯಲಾಗುತ್ತದೆ ಎಂದು ನುಡಿದರು.

ಇದೇ ವೇಳೆ ನೆಲ್ಲಮಕ್ಕಡ ಬಿ.ಕಾವೇರಪ್ಪ ರಚನೆಯ ಕೊಡವ ಸಮುದಾಯದ ಶವ ಸಂಸ್ಕಾರದ ಆಚಾರ-ವಿಚಾರ, ವಿಧಿವಿಧಾನ ಗಳ ಬಗ್ಗೆ ಮಾಹಿತಿ ಇರುವ `ಕೊಡವರ ಸಾವು ಪದ್ಧತಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಬಳಿಕ ಕೊಡವ ಜಾನ ಪದ ಕಲಾವಿದ ಜೇನಂಡ ಎ.ಉತ್ತಪ್ಪ (ರಘು) ಅವರು ಅಪ್ಪಚ್ಚ ಕವಿಯ ಯಯಾತಿ ನಾಟ ಕದ ಏಕಪಾತ್ರಾಭಿನಯ ಸಾದರ ಪಡಿಸಿ ದರು. ನಂತರ ಸಾಹಿತಿ, ರಂಗಕರ್ಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ಅವರು ಅಪ್ಪಚ್ಚ ಕವಿಯ ಕಾವ್ಯಗಳ ಮೇಲೆ ಬೆಳಕು ಚೆಲ್ಲಿದರು. ಕೊಡವ ಸಮಾಜ ಮೈಸೂರು ಅಧ್ಯಕ್ಷ ಬಲ್ಯಮಂಡ ಎಂ.ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕೊಡವ ಸಮಾಜ ಮೈಸೂರು ಉಪಾಧ್ಯಕ್ಷ ಪ್ರೊ. ಕೆ.ಸಿ.ಬೆಳ್ಳಿಯಪ್ಪ, ಕಾರ್ಯದರ್ಶಿ ಎಂ.ಎಂ. ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಐ.ಜ್ಯೋತಿ ಕಾಶಿಯಪ್ಪ, ಕೊಡವ ಸಮಾಜ ಕಲ್ಚರಲ್ ಅಂಡ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಎಂ.ಪಿ. ನಾಣಯ್ಯ ಸೇರಿದಂತೆ ಸಮುದಾಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »