ಮೈಸೂರು

ಜಠರ ಕರುಳಿನ ರಕ್ತಸ್ರಾವಕ್ಕೆ ಚಿಕಿತ್ಸೆ; ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಸಾಧನೆ
ಮೈಸೂರು

ಜಠರ ಕರುಳಿನ ರಕ್ತಸ್ರಾವಕ್ಕೆ ಚಿಕಿತ್ಸೆ; ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಸಾಧನೆ

June 8, 2018

ಮೈಸೂರು: ಜಠರ ಕರುಳಿನ ರಕ್ತಸ್ರಾವ ಚಿಕಿತ್ಸೆಯನ್ನು ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಜಠರ ಕರುಳಿನ ರಕ್ತಸ್ರಾವದ ಬಗ್ಗೆ ರೋಗಿಗಳು ಧೈರ್ಯಗೆಡದಿರುವಂತೆ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋ ಎಂಟೆರೋಲಜಿಸ್ಟ್ ಡಾ.ಎ.ಕೆ.ಸತೀಶ್‍ರಾವ್ ಇಂದಿಲ್ಲಿ ತಿಳಿಸಿದರು. ಪಿತ್ತ ಜನಕಾಂಗದ ಸಮಸ್ಯೆಯಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಉಬ್ಬಿಕೊಂಡ ರಕ್ತನಾಳಗಳು ಹೊಟ್ಟೆಯಲ್ಲಿಯೇ ಒಡೆದು ಹೋಗುವುದರಿಂದ ರಕ್ತ ವಾಂತಿಯಾಗಲಿದ್ದು, ಈ ಬಗ್ಗೆ ರೋಗಿಗಳು ಧೈರ್ಯಗೆಡದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ…

ಡಾ. ನಾಗೇಶ್ ವಿ.ಬೆಟಕೋಟೆ ಅವರಿಗೆ  ಸಂಗೀತ ವಿವಿ ಹಂಗಾಮಿ ಕುಲಪತಿ ಮಾಡದಿರುವುದಕ್ಕೆ ಆಕ್ಷೇಪ
ಮೈಸೂರು

ಡಾ. ನಾಗೇಶ್ ವಿ.ಬೆಟಕೋಟೆ ಅವರಿಗೆ  ಸಂಗೀತ ವಿವಿ ಹಂಗಾಮಿ ಕುಲಪತಿ ಮಾಡದಿರುವುದಕ್ಕೆ ಆಕ್ಷೇಪ

June 8, 2018

ಮೈಸೂರು: ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯಕ್ಕೆ ಹಂಗಾಮಿ ಕುಲಪತಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ಡಾ.ನಾಗೇಶ್ ವಿ.ಬೆಟಕೋಟೆ ಅವರನ್ನು ಅಸ್ಪøಶ್ಯ ಸಮುದಾಯದವರು ಎಂಬ ಕಾರಣಕ್ಕೆ ಅಕ್ರಮವಾಗಿ ಡಾ.ಆರ್.ರಾಜೇಶ್ ಅವರಿಗೆ ಹಂಗಾಮಿ ಕುಲಪತಿ ಸ್ಥಾನ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಆರ್.ರಾಜೇಶ್ ಅವರು ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕೇವಲ ಎರಡು ವರ್ಷ ಪಾಠ ಮಾಡಿದವರಾಗಿದ್ದು, ಸಂಗೀತ, ನೃತ್ಯ ಮತ್ತು…

ಮಹಾರಾಜ ಕಾಲೇಜು ಆವರಣದಲ್ಲಿ 150 ಗಿಡಗಳನ್ನು ನೆಟ್ಟು ಬಿಎಐನಿಂದ ವಿಶ್ವ ಪರಿಸರ ದಿನಾಚರಣೆ
ಮೈಸೂರು

ಮಹಾರಾಜ ಕಾಲೇಜು ಆವರಣದಲ್ಲಿ 150 ಗಿಡಗಳನ್ನು ನೆಟ್ಟು ಬಿಎಐನಿಂದ ವಿಶ್ವ ಪರಿಸರ ದಿನಾಚರಣೆ

June 8, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಬಿಐಎ) ಮೈಸೂರು ಕೇಂದ್ರವು ಪರಿಸರ ಮಾಸಾಚರಣೆ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಗುರುವಾರ ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಕಾಲೇಜು ಆವರಣದಲ್ಲಿ ನೇರಳೆ, ಹೊಂಗೆ, ಸಂಪಿಗೆ ಸೇರಿದಂತೆ 150 ಗಿಡಗಳನ್ನು ನೆಡಲಾಯಿತು. ಜೂ.15ರಂದು ಕೂಡ ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ಆವರಣದಲ್ಲಿ ವಿವಿಧ ಜಾತಿಯ 150 ಗಿಡಗಳನ್ನು ನೆಡಲಾಗುವುದು ಎಂದು ಕಾರ್ಯಕ್ರಮ ಸಂಚಾಲಕ ನಾಗರಾಜ ಭೈರಿ ತಿಳಿಸಿದರು….

ಜೂ.10ರಂದು `ನನ್ನ ದನಿ’ ವಿಶೇಷ ನಾಟಕ ಪ್ರದರ್ಶನ
ಮೈಸೂರು

ಜೂ.10ರಂದು `ನನ್ನ ದನಿ’ ವಿಶೇಷ ನಾಟಕ ಪ್ರದರ್ಶನ

June 8, 2018

ಮೈಸೂರು: ಮಂಗಳಮುಖಿ ಎ.ರೇವತಿ ರಚನೆಯ `ನನ್ನ ದನಿ’ ನಾಟಕ ಪ್ರದರ್ಶನವನ್ನು ಕದಂಬ ರಂಗವೇದಿಕೆ ವತಿಯಿಂದ ಜೂ.10ರ ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಂಗಳಮುಖಿಯಾದ ಎ.ರೇವತಿಯವರ ಜೀವನಾಧಾರಿತವಾಗಿ ರಚಿತವಾಗಿರುವ `ಎನ್ನ ಕೊರಳ್ ತಮಿಳ್’ ನಾಟಕವನ್ನು ಅವರೇ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ…

ಸಚಿವ ಸಂಪುಟದಲ್ಲಿ ಆದಿಜಾಂಬವ ಸಮುದಾಯಕ್ಕೆ ಅನ್ಯಾಯ; ಖಂಡನೆ
ಮೈಸೂರು

ಸಚಿವ ಸಂಪುಟದಲ್ಲಿ ಆದಿಜಾಂಬವ ಸಮುದಾಯಕ್ಕೆ ಅನ್ಯಾಯ; ಖಂಡನೆ

June 8, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಆದಿಜಾಂಬವ ಸಮಾಜಕ್ಕೆ ಆದ್ಯತೆ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ರಾಜ್ಯ ಆದಿಜಾಂಬವ ಸಂಘದ ಅಧ್ಯಕ್ಷ ಎಡತೊರೆ ಎಂ.ನಿಂಗರಾಜ್ ಇಂದಿಲ್ಲಿ ಖಂಡಿಸಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣ ಕವಾಗಿ ತೀರಾ ಕೆಳಮಟ್ಟದಲ್ಲಿರುವ ಹಾಗೂ ಶೋಷಿತ ರಲ್ಲಿ ಅತೀ ಹಿಂದುಳಿದಿರುವ ಆದಿಜಾಂಬವ ಸಮಾಜದ ಯಾರೊಬ್ಬರಿಗೂ ಸಂಪುಟ ದಲ್ಲಿ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸದಾಶಿವ ಆಯೊಗದ ವರದಿ ಜಾರಿಗಾಗಿ…

ಇನ್ಫೋಸಿಸ್ ಗಾರ್ಡನ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಇನ್ಫೋಸಿಸ್ ಗಾರ್ಡನ್ ಕಾರ್ಮಿಕರ ಪ್ರತಿಭಟನೆ

June 8, 2018

ಮೈಸೂರು: ಕಾರ್ಮಿಕ ವಿರೋಧಿ ನೀತಿ ಅನುಸರಿಸುವ ಮೂಲಕ ಕಾರ್ಮಿಕರ ಕೆಲಸಕ್ಕೆ ಕುತ್ತು ತರಲಾಗುತ್ತಿದೆ ಎಂದು ಆರೋಪಿಸಿ ಇನ್ಫೋಸಿಸ್ ಗಾರ್ಡನ್ ಕಾರ್ಮಿಕರು ಎಐಟಿಯುಸಿ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಸಂಸ್ಥೆಯ 4ನೇ ಗೇಟ್ ಎದುರು ಜಮಾಯಿಸಿದ ನೂರಾರು ಕಾರ್ಮಿಕರು, 10, 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಈಗ ಇದ್ದಕ್ಕಿದ್ದಂತೆ ರಾಜೀನಾಮೆ ಕೊಡಲು ಒತ್ತಾಯ ಮಾಡಲಾಗುತ್ತಿದೆ. ಇದರಿಂದ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. 30ಕ್ಕೂ ಹೆಚ್ಚು ಮಹಿಳೆಯರು ಹಾಗೂ 60ಕ್ಕೂ ಹೆಚ್ಚು ಪುರುಷರು ಇಲ್ಲಿ ಗುತ್ತಿಗೆ ಆಧಾರದಲ್ಲಿ ಗಾರ್ಡನ್ ಕಾರ್ಮಿಕರಾಗಿ…

ನಾಗರಹೊಳೆ ಅಭಯಾರಣ್ಯದಿಂದ ಗ್ರಾಮಗಳತ್ತ ದಾಳಿಯಿಡುತ್ತಿರುವ ಆನೆಗಳು
ಮೈಸೂರು

ನಾಗರಹೊಳೆ ಅಭಯಾರಣ್ಯದಿಂದ ಗ್ರಾಮಗಳತ್ತ ದಾಳಿಯಿಡುತ್ತಿರುವ ಆನೆಗಳು

June 8, 2018

ನಾಗರಹೊಳೆ ಅರಣ್ಯದಿಂದ ಗ್ರಾಮದ ಕಡೆ ಆನೆ ನಡೆ ಆನೆ ದಾಳಿಗೆ ಯುವಕನ ಬೈಕ್ ಜಖಂಗೊಂಡಿರುವುದು ಕಾಡಿನತ್ತ ಅಟ್ಟಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು ನಾಗರಹೊಳೆ: ನಾಗರಹೊಳೆ ಮೀಸಲು ಅರಣ್ಯ ಪ್ರದೇಶದಿಂದ ರೈಲ್ವೇ ಬ್ಯಾರಿಕೇಡ್ ಭೇದಿಸಿ ಹೊರ ಬರುತ್ತಿರುವ ಕಾಡಾನೆಗಳು, ವೀರನಹೊಸಹಳ್ಳಿ ಬಳಿಯ ಗ್ರಾಮಗಳತ್ತ ದಾಳಿ ನಡೆಸುತ್ತಿವೆ.ಕಳೆದ ರಾತ್ರಿ ಆನೆಯೊಂದು ಗ್ರಾಮದ ಜಮೀನುಗಳಿಗೆ ನುಗ್ಗಿ, ಬಾಳೆ ಹಾಗೂ ಇತರೆ ಬೆಳೆಗಳನ್ನು ನಾಶ ಮಾಡಿರುವುದಲ್ಲದೆ, ಹಾಡಿಯ ಯುವಕನೊರ್ವನ ಬೈಕ್ ಅನ್ನು ಜಖಂಗೊಳಿಸಿದೆ. ಬೆಳೆ ನಾಶ ಮಾಡಿದ ನಂತರ ಒಂಟಿ ಸಲಗವು ರೈಲ್ವೇ…

ಗೌರಿಲಂಕೇಶ ಹಂತಕರಿಂದ  ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ಎಸ್‍ಐಟಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಮೈಸೂರು

ಗೌರಿಲಂಕೇಶ ಹಂತಕರಿಂದ  ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ಎಸ್‍ಐಟಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

June 8, 2018

ಮೈಸೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ನಡೆಸಿದ್ದರೆಂಬ ಸ್ಫೋಟಕ ಮಾಹಿತಿ ಬಹಿ ರಂಗವಾಗಿದೆ. ಬೆಂಗಳೂರಿನ ಸ್ಪೆಷಲ್ ಇನ್ ವೆಸ್ಟಿಗೇಷನ್ ಟೀಂ (SIಖಿ) ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಲೇಖಕಿ, ಪತ್ರಕರ್ತೆ ಗೌರಿ ಲಂಕೇಶ್ ಹಂತಕರಾದ ಹೊಟ್ಟೆ ಮಂಜ ಹಾಗೂ ಅನಿಲ್ ಹೇಳಿಕೆಯಲ್ಲಿ ಈ ವಿಷಯ ಬಾಯ್ಬಿಟ್ಟಿದ್ದಾರೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ. ಹಿಂದೂ ಧರ್ಮದ ಉಳಿವಿಗೆ ಮೈಸೂ ರಿನ ಕೆ.ಎಸ್.ಭಗವಾನ್ ಅವರನ್ನು ಮುಗಿ ಸಲು ಸಂಚು ರೂಪಿಸಿ ಮುಹೂರ್ತವನ್ನು ಫಿಕ್ಸ್…

ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್
ಮೈಸೂರು

ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್

June 8, 2018

ಮೈಸೂರು: ಅಪ್ರವರಂಭೆ ವತಿಯಿಂದ ಆರಂಭಿಸುತ್ತಿರುವ ರವಿರಂಗ ಶಾಲೆಯ ವಾರಾಂತ್ಯ ತರಬೇತಿಗೆ ಜೂ.10ರಂದು ಆಡಿಷನ್ ನಡೆಸಲಾಗು ವುದು ಎಂದು ಅಪ್ರವರಂಬೆಯ ಕಾರ್ಯದರ್ಶಿ ನಾ.ನಾಗಚಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ರಂಗತರಬೇತಿ, ನಾಟಕೋತ್ಸವ, ವಿಚಾರಸಂಕಿರಣ, ಮಕ್ಕಳ ನಾಟಕೋತ್ಸವ, ರಂಗಕರ್ಮಿಗಳ ಸನ್ಮಾನ ಸೇರಿದಂತೆ ರಂಗಭೂಮಿಗೆ ತನ್ನದೇ ಸೇವೆ ಸಲ್ಲಿಸುತ್ತಿರುವ ಅಪ್ರವರಂಭೆ ಸಂಸ್ಥೆ ಈಗ ರವಿರಂಗ ವಾರಾಂತ್ಯ ರಂಗಶಾಲೆ ಶಿಬಿರವನ್ನು ಆರಂಭಿಸುತ್ತಿದೆ. ರಾಮಕೃಷ್ಣ ನಗರದ ಇ ಮತ್ತು ಎಫ್ ಬ್ಲಾಕ್‍ನಲ್ಲಿರುವ ನೃಪತುಂಗ ಕನ್ನಡ…

ಜೂ.10ರಂದು ಶ್ರೀಕೃಷ್ಣ ಕಥಾ, ಮಾರುತಿ ಪ್ರತಾಪ ಯಕ್ಷಗಾನ
ಮೈಸೂರು

ಜೂ.10ರಂದು ಶ್ರೀಕೃಷ್ಣ ಕಥಾ, ಮಾರುತಿ ಪ್ರತಾಪ ಯಕ್ಷಗಾನ

June 8, 2018

ಮೈಸೂರು: ಮೈಸೂರಿನ ಕಲಾಮಂದಿರದಲ್ಲಿ ಜೂ.10ರಂದು ಸಂಜೆ 4 ಗಂಟೆಗೆ ಶಿವಮೊಗ್ಗದ ನಾಟ್ಯಶ್ರೀ ಯಕ್ಷಗಾನ ಕಲಾ ತಂಡದಿಂದ `ಶ್ರೀಕೃಷ್ಣ ಕಥಾ’ ಹಾಗೂ `ಮಾರುತಿ ಪ್ರತಾಪ’ ಪೌರಾಣ ಕ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿದ್ವಾನ್ ದತ್ತಮೂರ್ತಿ ಭಟ್ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂಗೋಷ್ ಹೆಗ್ಡೆ, ಉದ್ಯಮಿ ಜಿ.ಎಂ.ಹೆಗಡೆ ಇನ್ನಿತರರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹೆಸರಾಂತ ಯಕ್ಷಗಾನ ಕಲಾವಿದರು ಮುಮ್ಮೇಳ…

1 1,565 1,566 1,567 1,568 1,569 1,611
Translate »