ಜೂ.10ರಂದು `ನನ್ನ ದನಿ’ ವಿಶೇಷ ನಾಟಕ ಪ್ರದರ್ಶನ
ಮೈಸೂರು

ಜೂ.10ರಂದು `ನನ್ನ ದನಿ’ ವಿಶೇಷ ನಾಟಕ ಪ್ರದರ್ಶನ

June 8, 2018

ಮೈಸೂರು: ಮಂಗಳಮುಖಿ ಎ.ರೇವತಿ ರಚನೆಯ `ನನ್ನ ದನಿ’ ನಾಟಕ ಪ್ರದರ್ಶನವನ್ನು ಕದಂಬ ರಂಗವೇದಿಕೆ ವತಿಯಿಂದ ಜೂ.10ರ ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಂಗಳಮುಖಿಯಾದ ಎ.ರೇವತಿಯವರ ಜೀವನಾಧಾರಿತವಾಗಿ ರಚಿತವಾಗಿರುವ `ಎನ್ನ ಕೊರಳ್ ತಮಿಳ್’ ನಾಟಕವನ್ನು ಅವರೇ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ ಎಳೆಎಳೆಯಾಗಿ ಬಿಚ್ಚಿಟಿದ್ದಾರೆ. ಸ್ವತಃ ಅವರೇ ಅಭಿನಯಿಸುತ್ತಿದ್ದು, ರಾಜ್ಯದಲ್ಲಿ ಇದು ಮೂರನೇ ಪ್ರದರ್ಶನವಾಗಿದೆ ಎಂದು ಹೇಳಿದರು.

ಸಂಗೀತವನ್ನು ಸಂಗೀತ ನಿರ್ದೇಶಕ ಶ್ಯಾಂ ನೀಡಿದ್ದರೆ, ಕಲ್ಕಿ ಸುಬ್ರಮಣ್ಯ ಅವರು ಗೀತ ರಚನೆ ಮಾಡಿದ್ದಾರೆ. ಎ.ಮಂಗೈ ಅವರು ನಿರ್ದೇಶಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಪ್ರದರ್ಶನಕ್ಕೆ ಸಾಹಿತಿ ಡಾ.ಕಾಳೇಗೌಡ ನಾಗವಾರ ಚಾಲನೆ ನೀಡಲಿದ್ದು, ಪ್ರವೇಶ ಉಚಿತ ಎಂದು ತಿಳಿಸಿದರು. ಮುಖಂಡ ರಾದ ಬಿ.ತಿಪ್ಪಣ್ಣ, ವಿ.ಎಸ್.ರಾಮಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »