ಜೂ.10, ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ
ಕೊಡಗು

ಜೂ.10, ಮೈಸೂರಲ್ಲಿ ಅಪ್ಪಚ್ಚ ಕವಿ 150ನೇ ಜನ್ಮೋತ್ಸವ

June 8, 2018

ಮೈಸೂರು: ಮೈಸೂರಿನ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಮತ್ತು ಕೊಡವ ಸಮಾಜ ಕಲ್ಚ ರಲ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಸಂಯುಕ್ತಾ ಶ್ರಯದಲ್ಲಿ ಜೂನ್ 10ರಂದು ಬೆಳಿಗ್ಗೆ 9.30ಕ್ಕೆ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಯವರ 150ನೇ ಜನ್ಮೋತ್ಸವ ಏರ್ಪಡಿಸಲಾಗಿದೆ.

ಮೈಸೂರಿನ ಕೊಡವ ಸಮಾಜದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಲ್ಯಮಂಡ ಎಂ.ನಾಣಯ್ಯ ಸ್ವಾಗತ ಕೋರ ಲಿದ್ದು, ವಿರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ.ಮೊಣ್ಣಪ್ಪ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಅಪ್ಪಚ್ಚ ಕವಿ ಜನ್ಮೋತ್ಸವದ ಬಗ್ಗೆ ಬಾಚಿರಣ ಯಂಡ ಪಿ.ಅಪ್ಪಣ್ಣ ಮಾತನಾಡಿಲಿದ್ದು, ನೆಲ್ಲಮಕ್ಕಡ ವಿ.ಕಾವೇರಿಯಪ್ಪ, ಶ್ರೀಮತಿ ಇಟ್ಟಿರ ಪಾರ್ವತಿ ಕಾರ್ಯಪ್ಪ ಮತ್ತು ಶ್ರೀಮತಿ ಪೊಂಜಾಂಡ ಲವ್‍ಲಿ ಅಪ್ಪಯ್ಯ ಅವರು ಅಪ್ಪಚ್ಚ ಕವಿ ಕುರಿತು ಮಾತನಾಡಲಿದ್ದಾರೆ.

ಮೈಸೂರಿನ ಕೊಡವ ಜಾನಪದ ಕಲಾ ವಿದ ಚೇನಂಡ ಎಂ.ಉತ್ತಪ್ಪ (ರಘು) ಅವರ ಅಪ್ಪಚ್ಚ ಕವಿಯವರ ರಾಜ ನಾಟಕ ಅರಿಯಾಮೆ ಪ್ರದರ್ಶಿಸಲಿದ್ದು, ಸಾಹಿತಿ ಹಾಗೂ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ಅವರು ಅಪ್ಪಚ್ಚ ಕವಿ ಕಾವ್ಯ ನಿರೂಪಣೆ ಮಾಡಲಿದ್ದಾರೆ.

Translate »