ಸಚಿವ ಸಂಪುಟದಲ್ಲಿ ಆದಿಜಾಂಬವ ಸಮುದಾಯಕ್ಕೆ ಅನ್ಯಾಯ; ಖಂಡನೆ
ಮೈಸೂರು

ಸಚಿವ ಸಂಪುಟದಲ್ಲಿ ಆದಿಜಾಂಬವ ಸಮುದಾಯಕ್ಕೆ ಅನ್ಯಾಯ; ಖಂಡನೆ

June 8, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಆದಿಜಾಂಬವ ಸಮಾಜಕ್ಕೆ ಆದ್ಯತೆ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ರಾಜ್ಯ ಆದಿಜಾಂಬವ ಸಂಘದ ಅಧ್ಯಕ್ಷ ಎಡತೊರೆ ಎಂ.ನಿಂಗರಾಜ್ ಇಂದಿಲ್ಲಿ ಖಂಡಿಸಿದರು.

ಆರ್ಥಿಕ, ಸಾಮಾಜಿಕ, ಶೈಕ್ಷಣ ಕವಾಗಿ ತೀರಾ ಕೆಳಮಟ್ಟದಲ್ಲಿರುವ ಹಾಗೂ ಶೋಷಿತ ರಲ್ಲಿ ಅತೀ ಹಿಂದುಳಿದಿರುವ ಆದಿಜಾಂಬವ ಸಮಾಜದ ಯಾರೊಬ್ಬರಿಗೂ ಸಂಪುಟ ದಲ್ಲಿ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸದಾಶಿವ ಆಯೊಗದ ವರದಿ ಜಾರಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದರೂ ವರದಿ ಜಾರಿ ಮಾಡಿಲ್ಲ ಎಂಬ ಆಕ್ರೋಶದ ನಡುವೆಯೂ ಸರ್ಕಾರ ಸಚಿವ ಸಂಪುಟದಿಂದಲೂ ನಮ್ಮ ಸಮುದಾಯವನ್ನು ದೂರ ಇಡುವ ಮೂಲಕ ಸಮುದಾಯವನ್ನು ಸಂಪೂರ್ಣ ಕಡೆಗಣ ಸಿದೆ ಎಂದು ಆರೋಪಿಸಿದರು.

ಸಮುದಾಯದ ಶಾಸಕಿ ರೂಪಾ ಶಶಿಧರ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಈ ಮೂವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ಶಿವಸ್ವಾಮಿ, ಸುರೇಶ್, ನಟರಾಜು, ಸೋಮಣ್ಣ ಉಪಸ್ಥಿತರಿದ್ದರು.

Translate »