ಮೈಸೂರು

ಆಪರೇಷನ್ ಕಮಲದಿಂದ ಕಂಗೆಟ್ಟು ಕಾಂಗ್ರೆಸ್‍ನ ನಿಷ್ಠಾವಂತ ಹಿರಿಯರ ತಲೆದಂಡ
ಮೈಸೂರು

ಆಪರೇಷನ್ ಕಮಲದಿಂದ ಕಂಗೆಟ್ಟು ಕಾಂಗ್ರೆಸ್‍ನ ನಿಷ್ಠಾವಂತ ಹಿರಿಯರ ತಲೆದಂಡ

June 7, 2018

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲಕ್ಕೆ ಬೆದರಿದ ಕಾಂಗ್ರೆಸ್, ತನ್ನ ಕೆಲವು ನಿಷ್ಠಾವಂತ ಮತ್ತು ಹಿರಿಯ ಸದಸ್ಯರ ತಲೆದಂಡ ತೆರಬೇಕಾಯಿತು. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ್ದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ರೋಷನ್ ಬೇಗ್, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್, ಶಾಮ ನೂರು ಶಿವಶಂಕರಪ್ಪ, ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಎಂ.ಕೃಷ್ಣಪ್ಪ, ಸತೀಶ್ ಜಾರಕಿ ಹೊಳಿ ಸೇರಿದಂತೆ ಪ್ರಮುಖರಿಗೆ ಮಂತ್ರಿ ಯಾಗಲು ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪೂರ್ಣಾವಧಿಗೆ ಉಳಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ವರಿಷ್ಠರು, ಹಿರಿಯರಿಗೆ…

ಕಾವೇರಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ರಜನಿಕಾಂತ್ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಕಾವೇರಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ರಜನಿಕಾಂತ್ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ

June 7, 2018

ಮೈಸೂರು: ನಟ ರಜನಿಕಾಂತ್ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಸೌಹಾರ್ದತೆ ಹಾಗೂ ಸಾಮರಸ್ಯ ಕಾಯ್ದುಕೊಳ್ಳುವುದು ಮುಖ್ಯ. ಆದರೆ ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕಾವೇರಿ ವಿಚಾರವನ್ನು ಬಳಿಸಿಕೊಂಡರು. ಇದೀಗ ನಟ ರಜನಿಕಾಂತ್ ಅದೇ…

ಸುರಕ್ಷಾ ಸಂಚಾರಕ್ಕೆ ಎಂ-ಟ್ರ್ಯಾಕ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ
ಮೈಸೂರು

ಸುರಕ್ಷಾ ಸಂಚಾರಕ್ಕೆ ಎಂ-ಟ್ರ್ಯಾಕ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ

June 7, 2018

ಮೈಸೂರು: ಸಂಚಾರ ವ್ಯವಸ್ಥೆಯನ್ನು ಸದೃಢಗೊಳಿಸಲೆಂದು ರೂಪಿಸಿರುವ ಎಂ-ಟ್ರ್ಯಾಕ್ ಯೋಜನೆ ಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಹಾಗೂ ಬೆಂಗಳೂರಿನ ಸಂಚಾರ ಮತ್ತು ರಸ್ತೆ ಸುರಕ್ಷತೆ ಕಮೀಷ್ನರ್ ಡಾ. ಎಂ.ಎ.ಸಲೀಂ ಅವರು ಮೈಸೂರು ನಗರ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ. ಇಂದು ಮಧ್ಯಾಹ್ನ ಮೈಸೂರಿನ ನಜರ್ ಬಾದ್‍ನಲ್ಲಿರುವ ನಗರ ಪೊಲೀಸ್ ಕಮೀ ಷ್ನರ್ ಕಚೇರಿ ಸಭಾಂಗಣದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 2015ರಲ್ಲಿ ತಾವು ಮೈಸೂರು ನಗರ ಪೊಲೀಸ್…

ಮಹಿಳೆಯರ ಚಿಂತನೆಗಳು ಸಾಕಾರಗೊಳ್ಳಲು  ಆಕೆಗೆ ಪ್ರೋತ್ಸಾಹ ಅಗತ್ಯ: ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಭಿಮತ
ಮೈಸೂರು

ಮಹಿಳೆಯರ ಚಿಂತನೆಗಳು ಸಾಕಾರಗೊಳ್ಳಲು ಆಕೆಗೆ ಪ್ರೋತ್ಸಾಹ ಅಗತ್ಯ: ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಭಿಮತ

June 7, 2018

ಮೈಸೂರು: ಗುರಿ ಸಾಧಿಸದ ಹೊರತು ಮಹಿಳೆಯರ ಸಬಲೀಕರಣದ ಕನಸು ನನಸಾಗದು ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಇಂದಿಲ್ಲಿ ಅಭಿಪ್ರಾಯಪಟ್ಟರು.ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾರತೀಯ ಉದ್ಯಮ ಒಕ್ಕೂಟ (ಸಿಐಐ) ಮೈಸೂರು ವಿಭಾಗ ಬುಧವಾರ ಆಯೋಜಿಸಿದ್ದ `ಭಾರತೀಯ ಮಹಿಳೆಯನ್ನು ಬಲಪಡಿಸುವ ಕುರಿತ ಉನ್ನತ ನೋಟ’ ವಿಷಯದ ಬಗೆಗಿನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಎಂದರೆ ಸಾಮಾಜಿಕ, ಆರ್ಥಿಕ, ರಾಜಕೀಯ, ಜಾತಿ ಆಧಾರಿತ ಲಿಂಗ ತಾರತಮ್ಯದಿಂದ ಸ್ವತಂತ್ರಗೊಳಿಸುವುದು. ಅವರ ಚಿಂತನೆಗಳನ್ನು ಅಭಿವ್ಯಕ್ತಗೊಳಿಸಲು ಮತ್ತು ಸಂವಹನ ಮಾಡಲು ಸ್ವಯಂ ವಿಶ್ವಾಸ ಮೂಡಿಸಲು…

ಯಾವುದೇ ಷರತ್ತು ವಿಧಿಸದೇ ಎಲ್ಲಾ ರೈತರ ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ
ಮೈಸೂರು

ಯಾವುದೇ ಷರತ್ತು ವಿಧಿಸದೇ ಎಲ್ಲಾ ರೈತರ ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ

June 7, 2018

ಮೈಸೂರು:  ರಾಜ್ಯ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದು, ಯಾವುದೇ ಷರತ್ತುಗಳನ್ನೂ ವಿಧಿಸದೇ ಈ ಹಿಂದೆ ಘೋಷಣೆ ಮಾಡಿದಂತೆ 53 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಬೇಕೆಂದು ಕೋರಲು ಜೂ.8ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿವೆ. ಮೈಸೂರಿನ ಗನ್‍ಹೌಸ್ ಎದುರಿನ ಕುವೆಂಪು ಉದ್ಯಾನವನದಲ್ಲಿ ಸದರಿ ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ…

ಅರಿವು ಸಂಸ್ಥೆಯಿಂದ ಮೈಸೂರಲ್ಲಿ ಮಾಸ್ತಿ ಸ್ಮರಣೆ
ಮೈಸೂರು

ಅರಿವು ಸಂಸ್ಥೆಯಿಂದ ಮೈಸೂರಲ್ಲಿ ಮಾಸ್ತಿ ಸ್ಮರಣೆ

June 7, 2018

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 127ನೇ ಜಯಂತಿ ಅಂಗವಾಗಿ ಮೈಸೂರಿನ ಅರಿವು ಸಂಸ್ಥೆ ಚಾಮುಂಡಿಪುರಂ ಸಾರ್ವಜನಿಕ ಗ್ರಂಥಾಲಯದಲ್ಲಿ ಬುಧವಾರ `ಮಾಸ್ತಿ ಕನ್ನಡ ಆಸ್ತಿ’ ಆಯೋಜಿಸಿತ್ತು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾಸ್ತಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಮಾಸ್ತಿಯವರ ಮಾತೃಭಾಷೆ ತಮಿಳು. ಆದರೆ, ಅವರ ಹೃದಯ ಭಾಷೆ ಕನ್ನಡವಾಗಿತ್ತು. ಮೂಲತಃ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಕನ್ನಡ ಭಾಷೆಯನ್ನು ಪ್ರೀತಿಸುತ್ತಾ, ಸರ್ಕಾರಿ ಕಚೇರಿಗಳಲ್ಲಿಯೂ…

ಪಕ್ಷೇತರ ಅಭ್ಯರ್ಥಿ ಡಾ.ಎಸ್‍ಬಿಎಂ ಪ್ರಸನ್ನ ಮನವಿ : ಶಿಕ್ಷಕರ ಸಮಸ್ಯೆ ಸ್ವತಃ ಅರಿವಿರುವ ನನ್ನನ್ನು ಆಯ್ಕೆ ಮಾಡಿ
ಮೈಸೂರು

ಪಕ್ಷೇತರ ಅಭ್ಯರ್ಥಿ ಡಾ.ಎಸ್‍ಬಿಎಂ ಪ್ರಸನ್ನ ಮನವಿ : ಶಿಕ್ಷಕರ ಸಮಸ್ಯೆ ಸ್ವತಃ ಅರಿವಿರುವ ನನ್ನನ್ನು ಆಯ್ಕೆ ಮಾಡಿ

June 7, 2018

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ಪಕ್ಷೇತರ ಅಭ್ಯರ್ಥಿಯಾಗಿರುವ ತಮಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಡಾ.ಎಸ್.ಬಿ.ಎಂ.ಪ್ರಸನ್ನ ಇಂದಿಲ್ಲಿ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಅರೆಕಾಲಿಕ ಹಾಗೂ ಅತಿಥಿ ಶಿಕ್ಷಕನಾಗಿ ಸರ್ಕಾರಿ, ಖಾಸಗಿ, ವಿಶ್ವವಿದ್ಯಾನಿಲಯ ಮಟ್ಟದವರೆಗೆ ಶಿಕ್ಷಕನಾಗಿ ದುಡಿದು ಆ ಎಲ್ಲಾ ಕ್ಷೇತ್ರಗಳಲ್ಲಿ ಶಿಕ್ಷಕರು ಅನುಭವಿಸುತ್ತಿರುವ ನೋವನ್ನು ಸ್ವತಃ ನಾನೂ ಅನುಭವಿಸಿದ್ದೇನೆ. ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ…

ಜೂ.9, ವೈದ್ಯರಿಂದ ಪರಿಸರ ಗೀತೆಗಳ ಗಾಯನ
ಮೈಸೂರು

ಜೂ.9, ವೈದ್ಯರಿಂದ ಪರಿಸರ ಗೀತೆಗಳ ಗಾಯನ

June 7, 2018

ಮೈಸೂರು: ಮೈಸೂರಿನ ನಿಸರ್ಗ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಜೂ.9ರ ಸಂಜೆ 6 ಗಂಟೆಗೆ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ‘ನಿಸರ್ಗ ವಂದನ’ ವೈದ್ಯರಿಂದ ಪರಿಸರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಸಂಸ್ಥಾಪಕಿ ಎಚ್.ಆರ್.ಲೀಲಾವತಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಮತ್ತು ಮೈಸೂರಿನ 11 ವೈದ್ಯರು ಪರಿಸರ ಗೀತೆಗಳನ್ನು ಹಾಡಲಿದ್ದಾರೆ. ಆರೋಗ್ಯದ ಮೇಲೆ ಸಂಗೀತ ಪರಿಣಾಮಕಾರಿ ಔಷಧವಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಸ್ತ್ರಚಿಕಿತ್ಸೆ ವೇಳೆ ಸಂಗೀತವನ್ನು ಕೇಳಿಸಲಾಗುತ್ತದೆ. ಈ…

ಜೂ.15, ಆರ್ಯ ಈಡಿಗರ ಸಂಘದಿಂದ ಪ್ರತಿಭಾ ಪುರಸ್ಕಾರ
ಮೈಸೂರು

ಜೂ.15, ಆರ್ಯ ಈಡಿಗರ ಸಂಘದಿಂದ ಪ್ರತಿಭಾ ಪುರಸ್ಕಾರ

June 7, 2018

ಮೈಸೂರು:  ಆರ್ಯ ಈಡಿಗ ಸಮಾಜದ (ಈಡಿಗ, ಬಿಲ್ಲವ, ಹೆಳವ ಇತ್ಯಾದಿ) ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂ.15ರಂದು ಮೈಸೂರಿನ ಹೆಬ್ಬಾಳದ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಆರ್ಯ ಈಡಿಗ ಸಂಘ, ಈಡಿಗ ನೌಕರರ ಸಂಘ, ಆರ್ಯ ಈಡಿಗ ಮಹಿಳಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. 2017-18ನೇ ಸಾಲಿನಲ್ಲಿ…

1 1,567 1,568 1,569 1,570 1,571 1,611
Translate »