ಸುರಕ್ಷಾ ಸಂಚಾರಕ್ಕೆ ಎಂ-ಟ್ರ್ಯಾಕ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ
ಮೈಸೂರು

ಸುರಕ್ಷಾ ಸಂಚಾರಕ್ಕೆ ಎಂ-ಟ್ರ್ಯಾಕ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ

June 7, 2018

ಮೈಸೂರು: ಸಂಚಾರ ವ್ಯವಸ್ಥೆಯನ್ನು ಸದೃಢಗೊಳಿಸಲೆಂದು ರೂಪಿಸಿರುವ ಎಂ-ಟ್ರ್ಯಾಕ್ ಯೋಜನೆ ಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಹಾಗೂ ಬೆಂಗಳೂರಿನ ಸಂಚಾರ ಮತ್ತು ರಸ್ತೆ ಸುರಕ್ಷತೆ ಕಮೀಷ್ನರ್ ಡಾ. ಎಂ.ಎ.ಸಲೀಂ ಅವರು ಮೈಸೂರು ನಗರ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಇಂದು ಮಧ್ಯಾಹ್ನ ಮೈಸೂರಿನ ನಜರ್ ಬಾದ್‍ನಲ್ಲಿರುವ ನಗರ ಪೊಲೀಸ್ ಕಮೀ ಷ್ನರ್ ಕಚೇರಿ ಸಭಾಂಗಣದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 2015ರಲ್ಲಿ ತಾವು ಮೈಸೂರು ನಗರ ಪೊಲೀಸ್ ಕಮೀಷ್ನರ್ ಆಗಿದ್ದಾಗ ಸಂಚಾರ ವ್ಯವಸ್ಥೆಯನ್ನು ಸಬಲ ಗೊಳಿಸಿ ಸುರಕ್ಷಾ ಸಂಚಾರ ಸೌಲಭ್ಯ ಕಲ್ಪಿ ಸುವ ಸಲುವಾಗಿ ಬೆಂಗಳೂರು ಮಾದರಿ ಯಲ್ಲಿ ಎಂ-ಟ್ರ್ಯಾಕ್ ಯೋಜನೆ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.

ಮೈಸೂರಿನವರೇ ಆದ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವನೆಗೆ ಅನುಮೋದನೆ ನೀಡಿ ಅದರ ಅನುಷ್ಠಾನಕ್ಕೆ 13 ಕೋಟಿ ರೂ. ಅನುದಾನವನ್ನು ನೀಡಿ ದ್ದರು. ಅಷ್ಟೂ ಹಣ ಎರಡು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಪ್ರಸ್ತುತ ಇರುವ 52 ಟ್ರಾಫಿಕ್ ಸಿಗ್ನಲ್ ಲೈಟ್‍ಗಳನ್ನು ಅತ್ಯಾ ಧುನಿಕ ಉಪಕರಣಗಳೊಂದಿಗೆ ಉನ್ನತೀ ಕರಣಗೊಳಿಸಲಾಗಿದೆ. 59 ಸರ್ವೆಲನ್ಸ್ ಕ್ಯಾಮರಾ, 50 ಹೆಚ್ಚುವರಿ ಸಿಸಿ ಕ್ಯಾಮರಾ ಗಳನ್ನು ಜಂಕ್ಷನ್‍ಗಳು, ಪ್ರಮುಖ ಸರ್ಕಲ್ ಗಳಲ್ಲಿ ಅಳವಡಿಸಲಾಗಿದೆಯಲ್ಲದೆ, ಬ್ಲ್ಯಾಕ್ ಬೆರೀಸ್ ಬದಲಾಗಿ ಮಲ್ಟಿ ಫಂಕ್ಷನಲ್ ಉಪಕರಣಗಳನ್ನು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಒದಗಿಸಲಾಗಿದೆ ಎಂದು ಡಾ. ಸಲೀಂ ತಿಳಿಸಿದರು.

ಎಂ-ಟ್ರ್ಯಾಕ್ ಯೋಜನೆಯಡಿ ಬೆಂಗ ಳೂರು ಮಾದರಿಯಲ್ಲಿ ನಗರ ಪೊಲೀಸ್ ಕಮೀಷ್ನರ್ ಕಚೇರಿ ನೂತನ ಕಟ್ಟಡದಲ್ಲಿ ಸಂಚಾರ ನಿರ್ವಹಣಾ ಕೇಂದ್ರ (Traffic Management Centre)ವನ್ನು ಸಿದ್ಧಗೊಳಿಸುವುದೂ ಸೇರಿದಂತೆ ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಪೂರ್ಣ ಗೊಳಿಸಿ ಎಂದೂ ಅವರು ಸೂಚಿಸಿದರು.
ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ಮುಂದುವರಿಸಬೇಕು. ಅಗತ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸಿ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸುವಂತೆಯೂ ಡಾ. ಎಂ.ಎ.ಸಲೀಂ ಅವರು ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಮೈಸೂರು ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ಗಳಾದ ಮಹಾನಿಂಗ ನಂದಗಾವಿ, ಎನ್. ವಿಷ್ಣುವರ್ಧನ, ಸಂಚಾರ ವಿಭಾಗದ ಎಸಿಪಿ, ಎಲ್ಲಾ ಸಂಚಾರ ಠಾಣೆಗಳ ಇನ್ಸ್ ಪೆಕ್ಟರ್, ಸಬ್ ಇನ್ಸ್‍ಪೆಕ್ಟರ್‍ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »