ಮೈಸೂರು

ವಿದ್ಯಾರ್ಥಿನಿಲಯ: ಅರ್ಜಿ ಆಹ್ವಾನ
ಮೈಸೂರು

ವಿದ್ಯಾರ್ಥಿನಿಲಯ: ಅರ್ಜಿ ಆಹ್ವಾನ

June 2, 2018

ಮೈಸೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನ ಅಜಾದ್ ಮಾದರಿ ಶಾಲೆ (ಆಂಗ್ಲ ಮಾದ್ಯಮ)ಗಳಿಗೆ  6 ಮತ್ತು 7ನೇ ತರಗತಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಮೈಸೂರಿನ ಗೌಸಿಯಾನಗರ ಹಾಗೂ ರಾಜೇಂದ್ರನಗರ, ಹುಣಸೂರಿನ ಟೌನ್ ಹಾಗೂ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನ ಅಜಾದ್ ಮಾದರಿ ಶಾಲೆ (ಆಂಗ್ಲ ಮಾದ್ಯಮ) ಪ್ರವೇಶಕ್ಕೆ ಅರ್ಜಿ ಆಹ್ವಾನಿsಸಿದೆ. ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರುರವರ ಕಛೇರಿ # 446, ಎಸ್.ಕೆ.ಎರ್. ವಿದ್ಯಾಸಂಸ್ಥೆ,…

ಯುವಕ ಕಣ್ಮರೆ
ಮೈಸೂರು

ಯುವಕ ಕಣ್ಮರೆ

June 2, 2018

ಮೈಸೂರು:  ಮೈಸೂರಿನ ಶಾರದಾದೇವಿನಗರ ನಿವಾಸಿ ವಿಕಾಸ(25) ಎಂಬುವರು ಮೇ 20ರಿಂದ ಕಣ್ಮರೆಯಾಗಿದ್ದಾರೆ. 6 ಅಡಿ ಎತ್ತರ, ತೆಳು ಶರೀರ, ಗೋಧಿ ಮೈಬಣ್ಣ ಹೊಂದಿರುವ ವಿಕಾಸ ಕನ್ನಡ ಇಂಗ್ಲಿಷ್ ಹಾಗೂ ತೆಲುಗು ಭಾಷೆ ಮಾತನಾಡಬಲ. ಆತನ ಸುಳಿವು ಪತ್ತೆಯಾದಲ್ಲಿ ಸರಸ್ವತಿಪುರಂ ಠಾಣೆ (0821-2418123) ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ (0821-2418339)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಇಂದು `ಭಾರತೀಯ ನಾರಿ-1951’ ನಾಟಕ ಪ್ರದರ್ಶನ
ಮೈಸೂರು

ಇಂದು `ಭಾರತೀಯ ನಾರಿ-1951’ ನಾಟಕ ಪ್ರದರ್ಶನ

June 2, 2018

ಮೈಸೂರು: ಭಾರತೀಯ ಮಹಿಳೆ ತನಗಾಗಿ ಬದುಕದೇ ಸದಾ ಇನ್ನೊಬ್ಬರಿಗಾಗಿ ಬದುಕುವಂತಾಗಿದ್ದು, ಈ ಕುರಿತಂತೆ ಜೂ.2ರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರ ಪಕ್ಕದಲ್ಲಿರುವ ಕಿರು ರಂಗಮಂದಿರದಲ್ಲಿ `ಭಾರತೀಯ ನಾರಿ-1951’ ನಾಟಕ ಪ್ರದರ್ಶಿಸಲಾಗುವುದು ಎಂದು ನಾಟಕ ನಿರ್ದೇಶಕ ಎಂ.ಸಿದ್ದರಾಜು ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕವನ್ನು ತಾವು ನಿರ್ದೇಶಿಸಿದ್ದು, ಪ್ರತಿಬಿಂಬ ರಂಗತಂಡದ ಐದು ಮಂದಿ ಮಹಿಳಾ ಕಲಾವಿದರೂ ಸೇರಿದಂತೆ ಒಟ್ಟು 25 ಮಂದಿ ಕಲಾವಿದರು ನಾಟಕ ಪ್ರಸ್ತುತಪಡಿಸಲಿದ್ದಾರೆ. ಟಿಕೆಟ್ ದರ ರೂ.30…

ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರಿಗೆ ಸನ್ಮಾನ
ಮೈಸೂರು

ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರಿಗೆ ಸನ್ಮಾನ

June 2, 2018

ಮೈಸೂರು: ಮೈಸೂರಿನ ಶ್ರೀ ಸ್ಥಾನಿಕವಾಸಿ ಜೈನ್ ಯುವ ಸಂಘಟನೆಯು ದತ್ತು ತೆಗೆದುಕೊಂಡು ನಡೆಸುತ್ತಿರುವ ಗೀತಾ ಮಂದಿರದ ರಸ್ತೆಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಮಾರ್ ಸ್ವಾಗತಿಸಿದರು. ದೀಪಕ್ ಬೋಹ್ರಾ ಅವರು ದೊಡ್ಡಯ್ಯ ಅವರ 35 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯನ್ನು ಕುರಿತು ಮಾತನಾಡಿದರು. ಯುವ ಸಂಘಟನೆಯ ಪರವಾಗಿ ಉಪಾಧ್ಯಕ್ಷ ಮನೋಹರ್ ಸಂಕ್ಲಾ ಅವರು ಮುಖ್ಯ ಶಿಕ್ಷಕ ದೊಡ್ಡಯ್ಯ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ…

ಶಿಕ್ಷಣದಲ್ಲಿ ಮಹಿಳಾ ನಿರ್ವಾಹಕರ ಸಾಮಥ್ರ್ಯ ನಿರ್ಮಾಣ ಕುರಿತು ಕಾರ್ಯಾಗಾರ
ಮೈಸೂರು

ಶಿಕ್ಷಣದಲ್ಲಿ ಮಹಿಳಾ ನಿರ್ವಾಹಕರ ಸಾಮಥ್ರ್ಯ ನಿರ್ಮಾಣ ಕುರಿತು ಕಾರ್ಯಾಗಾರ

June 2, 2018

ಮೈಸೂರು: ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವತಿಯಿಂದ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣೆ ಯೋಜನೆಯಡಿಯಲ್ಲಿ ಜೂ. 4 ರಿಂದ 8 ರವರೆಗೆ ಶಿಕ್ಷಣದಲ್ಲಿ ಮಹಿಳಾ ನಿರ್ವಾಹಕರ ಸಾಮಥ್ರ್ಯ ನಿರ್ಮಾಣ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ. ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯೊಂದಿಗೆ ಮಹಿಳಾ ಶಿಕ್ಷಣ ತಜ್ಞರಿಗಾಗಿ ಈ ಕಾರ್ಯಾಗಾರವನ್ನು `ಮಹಿಳೆಯರು ತಮ್ಮ ಸ್ಥಾನಗಳಿಗೆ ತಕ್ಕ ಹಾಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವಿಸ್ತರಣೆ, ವ್ಯವಸ್ಥೆಯೊಳಗೆ ಮಹಿಳೆಯರ ಪರಿಸ್ಥಿತಿಯ ಸೂಕ್ಷ್ಮಗ್ರಾಹಿಕೆ ಮತ್ತು ನಾಯಕತ್ವ ಪಾತ್ರಗಳಲ್ಲಿ ಅವರ ಉಪಸ್ಥಿತಿಯನ್ನು ಸೀಮಿತಗೊಳಿಸುವ ಅಂಶಗಳು ಎನ್ನುವ…

ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಬದಲಾವಣೆ ಪ್ರಕರಣ: ಡಿಕೆಶಿ ಬ್ರದರ್ಸ್ ಆಪ್ತರ ಮೇಲೆ ಸಿಬಿಐ ದಾಳಿ
ಮೈಸೂರು

ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಬದಲಾವಣೆ ಪ್ರಕರಣ: ಡಿಕೆಶಿ ಬ್ರದರ್ಸ್ ಆಪ್ತರ ಮೇಲೆ ಸಿಬಿಐ ದಾಳಿ

June 1, 2018

ಬೆಂಗಳೂರು: ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಗಳನ್ನು ಬದಲಾವಣೆ ಮಾಡಿದ ಆರೋ ಪದ ಮೇಲೆ ಕಾಂಗ್ರೆಸ್‍ನ ಹಿರಿಯ ಮುಖಂಡ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್‍ಗೆ ಬಂಧನದ ಭೀತಿ ಎದುರಾಗಿದೆ. ನೋಟು ಅಮಾನ್ಯೀಕರಣಕ್ಕೆ ಸಂಬಂಧಿ ಸಿದಂತೆ ರಾಮನಗರದ ಕಾರ್ಪೋರೇಷನ್ ಬ್ಯಾಂಕ್, ರಾಷ್ಟ್ರೀಕೃತ ಮತ್ತೊಂದು ಬ್ಯಾಂಕ್ ಹಾಗೂ ಕನಕಪುರ, ರಾಮನಗರ ವ್ಯಾಪ್ತಿಯ ಕೆಲವು ಸಹಕಾರಿ ಬ್ಯಾಂಕುಗಳ ಸಿಬ್ಬಂದಿ ಹಾಗೂ ಅಮಾನ್ಯೀಕರಣಕ್ಕೆ ಸಹಕಾರ ನೀಡಿದವರ ಮೇಲೆ ಸಿಬಿಐ ತನಿಖೆ ಕೈಗೆತ್ತಿ ಕೊಂಡಿದೆ….

ಕಾಂಗ್ರೆಸ್‍ಗೆ ಒಲಿದ ರಾಜರಾಜೇಶ್ವರಿ
ಮೈಸೂರು

ಕಾಂಗ್ರೆಸ್‍ಗೆ ಒಲಿದ ರಾಜರಾಜೇಶ್ವರಿ

June 1, 2018

ಬೆಂಗಳೂರು: ರಾಜ್ಯದಲ್ಲಿ ಮೊದಲಿಗೆ ನಡೆದ ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮರು ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್‍ನ ಮುನಿರತ್ನ 108064 ಮತ ಪಡೆದು, ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರನ್ನು 25492 ಮತಗಳ ಅಂತರದಿಂದ ಪರಾಭವಗೊಳಿಸಿ, ಮರು ಆಯ್ಕೆಗೊಂಡಿದ್ದಾರೆ. ಜೆಡಿಎಸ್‍ನ ರಾಮಚಂದ್ರ 60,360 ಮತ ಪಡೆದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಿಂದ ಆ ಪಕ್ಷ ವಿಧಾನಸಭೆಯಲ್ಲಿ 78 ಸಂಖ್ಯಾ ಬಲ ಉಳಿಸಿಕೊಂಡಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್…

ನಟ-ನಿರೂಪಕ ಚಂದನ್ ಸಾವಿನಿಂದ ಮನನೊಂದ ಪತ್ನಿ, ಮಗನನ್ನು ಕೊಂದು ತಾನೂ ಆತ್ಮಹತ್ಯೆ
ಮೈಸೂರು

ನಟ-ನಿರೂಪಕ ಚಂದನ್ ಸಾವಿನಿಂದ ಮನನೊಂದ ಪತ್ನಿ, ಮಗನನ್ನು ಕೊಂದು ತಾನೂ ಆತ್ಮಹತ್ಯೆ

June 1, 2018

ಬೆಂಗಳೂರು:  ಕನ್ನಡದ ಕಿರುತೆರೆ ನಿರೂಪಕ, ನಟ ಚಂದನ್ ಇತ್ತೀಚೆಗಷ್ಟೇ ಅಪಘಾತವೊಂದರಲ್ಲಿ ಸಾವನ್ನ ಪ್ಪಿದ್ದು, ಪತಿಯ ಸಾವಿನಿಂದ ನೊಂದಿದ್ದ ಪತ್ನಿ ಮೀನಾ ಇಂದು ಬೆಳಿಗ್ಗೆ ಮಗನನ್ನು ಕೊಂದು ತಾನೂ ಆ್ಯಸಿಡ್ ಕುಡಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರದ ತನ್ನ ಮನೆ ಯಲ್ಲಿ ಮೀನಾ, ತಮ್ಮ ಮಗ 13 ವರ್ಷದ ತುಷಾರ್‍ನ ಕತ್ತು ಕೊಯ್ದು ನಂತರ ಆ್ಯಸಿಡ್ ಕುಡಿದಿದ್ದಾರೆ. ಈ ವೇಳೆ ತುಷಾರ್ ಮೃತಪಟ್ಟಿದ್ದು, ಮೀನಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ ಅಸುನೀಗಿದ್ದಾರೆ. ಕಳೆದ ಗುರುವಾರ…

ವಿಧಾನಸಭೆಯಿಂದ ವಿಧಾನ ಪರಿಷತ್‍ನ 11 ಸ್ಥಾನಕ್ಕೆ ಅವಿರೋಧ ಆಯ್ಕೆ ಖಚಿತ
ಮೈಸೂರು

ವಿಧಾನಸಭೆಯಿಂದ ವಿಧಾನ ಪರಿಷತ್‍ನ 11 ಸ್ಥಾನಕ್ಕೆ ಅವಿರೋಧ ಆಯ್ಕೆ ಖಚಿತ

June 1, 2018

ಬೆಂಗಳೂರು: ರಾಜ್ಯ ವಿಧಾನ ಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಅವಿ ರೋಧ ಆಯ್ಕೆಯಾಗುವುದು ಖಚಿತವಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ವಿಧಾನಸಭೆಯ ತಮ್ಮ ಪಕ್ಷದ ಸದಸ್ಯರ ಆಧಾರದ ಮೇಲೆ ಬಿಜೆಪಿಯಿಂದ 5, ಕಾಂಗ್ರೆಸ್ 4 ಹಾಗೂ ಜೆಡಿಎಸ್‍ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ವಿಧಾನಸಭೆ ಜಂಟಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಚುನಾ ವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅವರಿಗೆ 11 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಇಂದು ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ರಘುನಾಥ್ ಮಲ್ಕಾಪುರೆ, ಎನ್.ರವಿಕುಮಾರ್, ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ,…

ಸತತ ಎರಡು ದಿನಗಳ ಬ್ಯಾಂಕ್ ಬಂದ್ ಎಫೆಕ್ಟ್ : ಎಟಿಎಂಗಳಲ್ಲೂ ಹಣ ಖಾಲಿ…ಖಾಲಿ… ಪರದಾಡಿದ ಗ್ರಾಹಕರು
ಮೈಸೂರು

ಸತತ ಎರಡು ದಿನಗಳ ಬ್ಯಾಂಕ್ ಬಂದ್ ಎಫೆಕ್ಟ್ : ಎಟಿಎಂಗಳಲ್ಲೂ ಹಣ ಖಾಲಿ…ಖಾಲಿ… ಪರದಾಡಿದ ಗ್ರಾಹಕರು

June 1, 2018

ಮೈಸೂರು: ಎರಡು ದಿನಗಳ ಕಾಲ ರಾಷ್ಟ್ರೀಯ ಬ್ಯಾಂಕ್‍ಗಳು ಬಂದ ಆಗಿದ್ದ ಕಾರಣ ಬುಧವಾರ ರಾತ್ರಿಯೇ ಎಟಿಎಂಗಳಲ್ಲಿ ಹಣ ಬರಿದಾಗಿತ್ತು. ಎಟಿಎಂಗಳಲ್ಲಿ ಹಣ ಇಲ್ಲದ ಕಾರಣ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಉದ್ಯಮಿಗಳು, ವ್ಯಾಪಾರಿಗಳು, ವಾಣ ಜ್ಯ ವಹಿವಾಟು ನಡೆಸುವವರೂ ಸೇರಿದಂತೆ ಎಲ್ಲಾ ಬ್ಯಾಂಕ್ ಗ್ರಾಹಕರು ಗುರುವಾರ ಪರದಾಡುವಂತಾಯಿತು. ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಖಾತೆಗಳಿಗೆ ಹಣ ಜಮೆ ಮಾಡುವವರು, ಹಿಂಪಡೆಯುವವರು, ಡಿಡಿ, ಖರೀದಿ, ಹಣ ವರ್ಗಾವಣೆ, ಆರ್‍ಟಿಜಿಎಸ್, ಚೆಕ್ ಸರೆಂಡರ್, ಚೆಕ್ ಕ್ಲಿಯರೆನ್ಸ್, ಕಂತಿನ ಹಣ ಪಾವತಿಸುವುದೂ ಸೇರಿದಂತೆ…

1 1,574 1,575 1,576 1,577 1,578 1,611
Translate »