ಮೈಸೂರು

ಮೈಸೂರಲ್ಲಿ ಆರಂಭವಾಯ್ತು ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಆರಂಭವಾಯ್ತು ಮಾವು, ಹಲಸು ಮೇಳ

June 2, 2018

ಮೈಸೂರು: ಮೈಸೂರು ಅರಮನೆ ಬಳಿ ಇರುವ ಕರ್ಜನ್ ಪಾರ್ಕ್ ಆವರಣದಲ್ಲಿ ಇಂದಿನಿಂದ ಮಾವು ಹಾಗೂ ಹಲಸಿನ ಮೇಳ ಆರಂಭವಾ ಯಿತು. ಒಟ್ಟು 36 ಮಳಿಗೆಗಳಲ್ಲಿ ಮಾವು, ಹಲಸಿನ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಜೂ.5ರವರೆಗೂ ಈ ಮೇಳ ನಡೆಯಲಿದೆ. ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳವನ್ನು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾಧಿ ಕಾರಿಗಳು, ಸ್ಥಳೀಯ ಮಾವು ಬೆಳೆಗಾರ ರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಜಿಲ್ಲೆಯ ಜನರಿಗೆ…

ಸುಭದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಹಕಾರ ಕೋರಿದ ಗೌಡರು
ಮೈಸೂರು

ಸುಭದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಹಕಾರ ಕೋರಿದ ಗೌಡರು

June 2, 2018

ಬೆಂಗಳೂರು: ಕರ್ನಾಟಕದಲ್ಲಿ ಸುಭದ್ರ ಸರ್ಕಾರ ನಡೆಸಲು ನಿಮ್ಮ ಸಹಕಾರ ಮುಂದು ವರಿಯಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ಮುಖಂಡರೊಂದಿಗೆ ಸಮಾ ಲೋಚನೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿ, ಮೈತ್ರಿ ಸರ್ಕಾರ ಉತ್ತಮವಾಗಿ ಕೆಲಸ ಆರಂಭಿಸಿದೆ. ಕರ್ನಾಟಕದ ಅಭಿವೃದ್ಧಿ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗೂಡಿ ಕೆಗೆ ನಿಮ್ಮ ಸಹಕಾರ ಮತ್ತು ಬೆಂಬಲ ಅತ್ಯಗತ್ಯ. ಪ್ರಾದೇಶಿಕ…

ಮೋದಿ ಸರ್ಕಾರ ನಮ್ಮ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ
ಮೈಸೂರು

ಮೋದಿ ಸರ್ಕಾರ ನಮ್ಮ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ

June 2, 2018

ಉಡುಪಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನಮ್ಮ ನಿರೀಕ್ಷೆ ಮಟ್ಟ ವನ್ನು ಮುಟ್ಟಿಲ್ಲ. ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಹೇಳಿದ್ದಾರೆ. ಮೋದಿ ನಾಯಕತ್ವದ ಸರ್ಕಾ ರದ ಮೇಲೆ ಬಹಳ ನಿರೀಕ್ಷೆಗಳಿತ್ತು. ಆದರೆ ಅವರು ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಲು ವಿಫಲರಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಪೇಜಾವರ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಭ್ರಷ್ಟಾ ಚಾರ ನಿಯಂತ್ರಣಕ್ಕೆ ಬಂದಿದೆ. ಆದರೆ ಕಪ್ಪುಹಣವನ್ನು ವಿದೇಶದಿಂದ ತರದೇ ಹೋಗಿರುವುದು, ಗಂಗಾ ಶುದ್ಧೀಕರಣ ಆಗದಿರುವುದು ಸರ್ಕಾರದ…

ಯೋಜನೆ ಅನುಷ್ಠಾನ, ಅಧಿಕಾರಿಗಳ ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ
ಮೈಸೂರು

ಯೋಜನೆ ಅನುಷ್ಠಾನ, ಅಧಿಕಾರಿಗಳ ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ

June 2, 2018

ಬೆಂಗಳೂರು: ಮೈತ್ರಿ ಸರ್ಕಾರದ ನೂತನ ಬಜೆಟ್‍ಗೆ ಮುನ್ನ ಯಾವುದೇ ಯೋಜನೆಗಳ ಅನುಷ್ಠಾನ ಹಾಗೂ ಅಧಿಕಾರಿಗಳ ವರ್ಗಾವಣೆ ಕುರಿತು ಮುಖ್ಯಮಂತ್ರಿಗಳ ಅನುಮತಿ ಪಡೆಯಬೇಕು ಎಂಬ ಆದೇಶ ಹೊರಡಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸೂಚನೆಯೊಂದನ್ನು ಹೊರಡಿಸಿದ್ದು, ಹಿಂದಿನ ಸರ್ಕಾರದಲ್ಲಿ ಲೇಖಾನುದಾನ ಪಡೆದಿರುವ ಯೋಜನೆಗಳಿಗೆ ಮಿತಿಗಿಂತ ಹೆಚ್ಚಿಗೆ ಅನುದಾನ ನೀಡಬಾರದು ಎಂದು ಸಂಬಂಧಪಟ್ಟ ಇಲಾಖಾ ಕಾರ್ಯ ದರ್ಶಿಗಳಿಗೆ ಕಟ್ಟಾದೇಶ ನೀಡಿದ್ದಾರೆ. ಯಾವುದೇ ಹೊಸ ಯೋಜನೆಗೆ ಮುಂದಿನ ಆದೇಶದವರೆಗೆ ಅನುಮತಿ ನೀಡಬಾರದು. ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಇಲಾಖಾ ಕಾರ್ಯದರ್ಶಿಗಳಿಗಲ್ಲದೆ,…

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ

June 2, 2018

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ಸ್ಪಷ್ಟಪಡಿಸಿ, ಸ್ಥಾನಗಳ ಹಂಚಿಕೆ ಕುರಿತು ಚುನಾವಣಾ ಪೂರ್ವದಲ್ಲಿ ನಿರ್ಧರಿಸಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ಲಭ್ಯವಾಗದ ಹಿನ್ನೆಲೆಯಲ್ಲಿ ಜಾತ್ಯಾತೀತ ಪಕ್ಷಗಳು ಒಂದಾಗಿ ಸರ್ಕಾರ ರಚಿಸಲಾಗಿದೆ. ಇದೇ ಮೈತ್ರಿ ಮತ್ತು ಒಗ್ಗಟ್ಟು ಮುಂಬರುವ ಲೋಕಸಭಾ ಚುನಾವಣೆಗೂ ಇರಲಿದೆ ಎಂದರು.

ಜೂನ್ 6ರಂದು ಸಂಪುಟ ವಿಸ್ತರಣೆ
ಮೈಸೂರು

ಜೂನ್ 6ರಂದು ಸಂಪುಟ ವಿಸ್ತರಣೆ

June 2, 2018

ಬೆಂಗಳೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲವನ್ನು ಜೂ. 6 (ಬುಧವಾರ)ರ ಮಧ್ಯಾಹ್ನ 2 ಗಂಟೆಗೆ ವಿಸ್ತರಿಸಲಿದ್ದಾರೆ. ಸರ್ಕಾರ ರಚನೆ ಮಾಡಿ ಹಲವು ದಿನದ ನಂತರ ಮೈತ್ರಿ ಪಕ್ಷಗಳು ಮಂತ್ರಿಮಂಡಲಕ್ಕೆ ತಮ್ಮ ಸದಸ್ಯರ ಆಯ್ಕೆ ಮತ್ತು ಖಾತೆ ಹಂಚಿಕೆ ವಿಷಯದಲ್ಲಿ ಸಫಲರಾಗಿದ್ದಾರೆ. ಉಭಯ ಪಕ್ಷಗಳ ಮುಖಂಡರು ಸುದೀರ್ಘ ಸಭೆಯ ನಂತರ ಸಂಜೆ ಮೈತ್ರಿ ಪಕ್ಷದ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪು-ರೇಷೆ ಹಾಗೂ ಸಮನ್ವಯ ಸಮಿತಿ ಕುರಿತಂತೆ ಮಾಹಿತಿ…

ಪ್ರೊ. ದುರಾನಿ ಇನ್ನಿಲ್ಲ
ಮೈಸೂರು

ಪ್ರೊ. ದುರಾನಿ ಇನ್ನಿಲ್ಲ

June 2, 2018

ಮೈಸೂರು: ಪ್ರೊ. ಮೊಹಮದ್ ಇಸ್ಮಾಯಿಲ್ ಖಾನ್ ದುರಾನಿ(91) ಅವರು ಮೈಸೂರಿನ ಮಂಡಿ ಮೊಹಲ್ಲಾದ ಬಿ.ಎನ್. ರಸ್ತೆಯಲ್ಲಿರುವ ನಿವಾಸ ‘ದುರಾನಿ ಮೆಂಜಿಲ್’ನಲ್ಲಿ ಇಂದು ನಿಧನರಾದರು. ಪ್ರೊ. ಎಂಐಕೆ ದುರಾನಿ ಎಂದೇ ಖ್ಯಾತರಾಗಿದ್ದ ಅವರು, ಪತ್ನಿ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ಮೈಸೂರಿನ ಕೇಂದ್ರ ಕಾರಾಗೃಹದ ಹಿಂಭಾಗದಲ್ಲಿರುವ ಹಳೇ ಕಬರಸ್ತಾನ ದಲ್ಲಿ ದುರಾನಿ ಅವರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪ್ರೊ.ದುರಾನಿ ಅವರು ಹವ್ಯಾಸಿ ಬರಹಗಾರರಾಗಿದ್ದು, ಅವರ ‘ರಿ ಕಲೆಕ್ಷನ್ಸ್’ ಅಂಕಣ…

ಆದಾಯ ಗಳಿಕೆ, ನಿರ್ವಹಣೆಯಲ್ಲಿ ಬಿಎಸ್‍ಎನ್‍ಎಲ್ ಮೈಸೂರು ದೂರಸಂಪರ್ಕ ಜಿಲ್ಲೆ ಹೆಗ್ಗಳಿಕೆ
ಮೈಸೂರು

ಆದಾಯ ಗಳಿಕೆ, ನಿರ್ವಹಣೆಯಲ್ಲಿ ಬಿಎಸ್‍ಎನ್‍ಎಲ್ ಮೈಸೂರು ದೂರಸಂಪರ್ಕ ಜಿಲ್ಲೆ ಹೆಗ್ಗಳಿಕೆ

June 2, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಮೈಸೂರು ದೂರಸಂಪರ್ಕ ಜಿಲ್ಲೆಯ ಸೆಕೆಂಡರಿ ಸ್ವಿಚಿಂಗ್ ಏರಿಯಾ ಕಳೆದ ವರ್ಷ ರೂ.90 ಕೋಟಿ ಆದಾಯ ಗಳಿಸಿದ್ದು, ಕರ್ನಾಟಕದಲ್ಲಿ ಅತ್ಯುತ್ತಮ ನಿರ್ವಹಣೆಯ ಸೆಕೆಂಡರಿ ಸ್ವಿಚಿಂಗ್ ಏರಿಯಾ (ಎಸ್‍ಎಸ್‍ಎ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಎಸ್‍ಎನ್‍ಎಲ್ ಕರ್ನಾಟಕ ವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್.ಮಣ ಅವರು ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಪ್ರಾದೇಶಿಕ ದೂರಸಂಪರ್ಕ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೈಸೂರು ಟೆಲಿಕಾಂ ಜಿಲ್ಲೆಯು ಹೆಚ್ಚಿನ ಬಳಕೆದಾರರ ಬೇಡಿಕೆಯನ್ನು…

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಾಲಿಕೆಯಿಂದ ಕಾಟಾಚಾರಕ್ಕೆ ಸ್ವಚ್ಛತಾ ಕಾರ್ಯಕ್ರಮ
ಮೈಸೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಾಲಿಕೆಯಿಂದ ಕಾಟಾಚಾರಕ್ಕೆ ಸ್ವಚ್ಛತಾ ಕಾರ್ಯಕ್ರಮ

June 2, 2018

ಸ್ವಚ್ಛತಾ ರಾಯಭಾರಿ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಪಾಲಿಕೆ ಅಗೌರವ ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸಲು ಮೈಸೂರು ನಗರಪಾಲಿಕೆ ಮೈಸೂರಿನ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮ ಬರೀ ಕಾಟಾಚಾರಕ್ಕೆ ಎಂಬಂತೆ ನಡೆಯಿತು. ಸ್ವಚ್ಛತಾ ರಾಯಭಾರಿಯಾಗಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಪ್ರಕಟಣೆ ನೀಡಿದ್ದರು. ಆದರೆ ನಿಜಸ್ಥಿತಿ ಎಂದರೆ ಪಾಲಿಕೆ ಅಧಿಕಾರಿಗಳು…

ಜುಲೈ ಅಂತ್ಯಕ್ಕೆ ಜಯದೇವ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಕಾರ್ಯಾರಂಭ
ಮೈಸೂರು

ಜುಲೈ ಅಂತ್ಯಕ್ಕೆ ಜಯದೇವ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಕಾರ್ಯಾರಂಭ

June 2, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಟೋಲ್ ಗೇಟ್ ಬಳಿ ಮೈಸೂರು-ಕೆಆರ್‍ಎಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಜೋಡಣೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಜುಲೈ ತಿಂಗಳಲ್ಲಿ ರೋಗಿಗಳ ಸೇವೆಗೆ ಆಸ್ಪತ್ರೆ ಸಜ್ಜಾಗಲಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಆಸ್ಪತ್ರೆ ನೂತನ ಕಟ್ಟಡದಲ್ಲಿ ಉಪಕರಣಗಳ ಅಳವಡಿಕೆಯ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ 150…

1 1,572 1,573 1,574 1,575 1,576 1,611
Translate »