ಮೈಸೂರು

ವಿಧಾನ ಪರಿಷತ್‍ಗೆ 11 ಮಂದಿ ಅವಿರೋಧ ಆಯ್ಕೆ
ಮೈಸೂರು

ವಿಧಾನ ಪರಿಷತ್‍ಗೆ 11 ಮಂದಿ ಅವಿರೋಧ ಆಯ್ಕೆ

June 5, 2018

ಬೆಂಗಳೂರು: ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿ ಮೂರು ಪಕ್ಷಗಳ ಹನ್ನೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 5, ಕಾಂಗ್ರೆಸ್‍ನ 4 ಹಾಗೂ ಜೆಡಿಎಸ್‍ನ ಇಬ್ಬರು ಅಭ್ಯರ್ಥಿಗಳು ಪರಿಷತ್ತಿಗೆ ಪ್ರವೇಶ ಪಡೆದಿದ್ದಾರೆ. ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೊರತಾಗಿ ಇನ್ನಾರೂ ನಾಮಪತ್ರ ಸಲ್ಲಿಕೆ ಮಾಡದ ಕಾರಣ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿದ ಚುನಾವಣಾಧಿಕಾರಿ ಕುಮಾರಸ್ವಾಮಿ, ಮೂರೂ ಪಕ್ಷಗಳ ಅಭ್ಯರ್ಥಿಗಳಿಗೆ ಅವಿರೋಧ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು. ವಿಧಾನ ಪರಿಷತ್ತಿಗೆ ಆಯ್ಕೆಗೊಂಡ ಮೂರು ಪಕ್ಷದ ಅಭ್ಯರ್ಥಿಗಳಿವರು:…

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಗೆಳೆಯನ ಬರ್ತ್‍ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ಸಾವು
ಮೈಸೂರು

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಗೆಳೆಯನ ಬರ್ತ್‍ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ಸಾವು

June 5, 2018

ಮಂಡ್ಯ:  ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿ ರುವ ಘಟನೆ ಶ್ರೀರಂಗಪಟ್ಟಣ ಸಮೀಪದ ಬಾಬು ರಾಯನಕೊಪ್ಪಲಿನ ಲೋಕಪಾವನಿ ಸೇತುವೆ ಬಳಿ ಸೋಮವಾರ ಮುಂಜಾನೆ ನಡೆದಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಅರುಣ್‍ಕುಮಾರ್ (25), ಬಾಬುರಾಯನ ಕೊಪ್ಪಲು ಗ್ರಾಮದ ಆದರ್ಶ(22) ಮೃತ ಯುವಕ ರಾಗಿದ್ದು, ಶಿವಕುಮಾರ್, ಮಂಜುನಾಥ್, ರಾಕೇಶ್ ಮತ್ತು ಪುನೀತ್ ಘಟನೆಯಲ್ಲಿ ತೀವ್ರ ವಾಗಿ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಸ್ನೇಹಿತನೊಬ್ಬನ ಹುಟ್ಟುಹಬ್ಬ ವನ್ನು ಆಚರಿಸಲು ಅರುಣ್‍ಕುಮಾರ್, ಆದರ್ಶ ಸೇರಿದಂತೆ…

ವಿವಿಧ ಲೋಹದ ಆಕರ್ಷಕ ಆಭರಣ ಮಾದರಿಗಳ ಪ್ರದರ್ಶನ
ಮೈಸೂರು

ವಿವಿಧ ಲೋಹದ ಆಕರ್ಷಕ ಆಭರಣ ಮಾದರಿಗಳ ಪ್ರದರ್ಶನ

June 5, 2018

ಮೈಸೂರು:  ಹೆಣ್ಣಿನ ಚೆಲುವನ್ನು ದ್ವಿಗುಣಗೊಳಿಸುವ ಬಗೆ ಬಗೆಯ ಆಭರಣಗಳು ಗಂಡಿನ ಪ್ರತಿಷ್ಠೆಯ ಸಂಕೇತವೂ ಹೌದು. ಅನಾದಿ ಕಾಲದಿಂದಲೂ ಮಾನವನ ಅಲಂಕಾರಿಕ ವಸ್ತುಗಳ ಸಾಲಿನಲ್ಲಿ ಚಿನ್ನಾಭರಣ ಅಗ್ರಸ್ಥಾನ ಪಡೆದುಕೊಂಡಿವೆ. ಇದೀಗ ಚಿನ್ನದ ಒಡವೆಗಳಿಗೂ ಸೆಡ್ಡು ಹೊಡೆಯುವ ವಿವಿಧ ಲೋಹಗಳ ಆಭರಣಗಳು ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿವೆ. ಬೆಳ್ಳಿ, ಕಂಚು ಹಾಗೂ ತಾಮ್ರ ಸೇರಿದಂತೆ ಹಲವು ಲೋಹಗಳ ಆಭರಣಗಳು ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಇಂತಹ ಲೋಹದ ಒಡವೆಗಳ ವಿನ್ಯಾಸದಲ್ಲಿ ವಿಶೇಷ ಪ್ರತಿಭೆಗಳು ತಮ್ಮ ಕೌಶಲ್ಯ ಮೆರೆದಿದ್ದಾರೆ. ಈ ಬಗೆಯ ಕೌಶಲ್ಯದಿಂದ…

ನನಗೆ ಶಾಸಕ ಸ್ಥಾನ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ
ಮೈಸೂರು

ನನಗೆ ಶಾಸಕ ಸ್ಥಾನ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ

June 5, 2018

ಮಂಡ್ಯ: ಪ್ರಸ್ತುತ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದು, ಶಾಸಕನಾಗಿ ಆಯ್ಕೆಯಾಗಿರುವುದು ನನಗೆ ಹೆಚ್ಚಿನ ಮೌಲ್ಯ ತಂದು ಕೊಟ್ಟಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕ ಮಹೇಶ್ ಅಭಿಪ್ರಾಯಪಟ್ಟರು. ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಈ ನನ್ನ ವಿಜಯ ಇಡೀ ಕರ್ನಾಟಕದ ಬಿಎಸ್‍ಪಿ ಪಕ್ಷದ ಕಾರ್ಯ ಕರ್ತರಿಗೆ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ಮುನ್ನಡೆಸಲು ಈ ಅಧಿಕಾರ ಮುನ್ನುಡಿಯಾಗಲಿದೆ….

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮೈಸೂರು

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

June 5, 2018

ಮೈಸೂರು:  ಮೈಸೂರಿನ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ಆಸಕ್ತ ವಿದ್ಯಾರ್ಥಿಗಳು ಅಂಕಪಟ್ಟಿ ಪ್ರತಿ, 2 ಭಾವಚಿತ್ರ ಹಾಗೂ ಸ್ವವಿವರದೊಂದಿಗೆ ಅರ್ಜಿಯನ್ನು ಜೂ. 24 ರೊಳಗೆ ಎಂ.ಜೆ. ಸುರೇಶ್‍ಗೌಡ, ಸಂಸ್ಥಾಪಕ ಅಧ್ಯಕ್ಷರು, ವಾಲ್ಮೀಕಿ ರಸ್ತೆ, ಒಂಟಿಕೊಪ್ಪಲ್ ಇವರಿಗೆ ಸಲ್ಲಿಸುವುದು….

ಉಚಿತ ಗಿಡ ವಿತರಣೆ, ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಉಚಿತ ಗಿಡ ವಿತರಣೆ, ಆರೋಗ್ಯ ತಪಾಸಣಾ ಶಿಬಿರ

June 5, 2018

ಮೈಸೂರು: ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ಹೆಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಜೂ. 5 ರಿಂದ 8 ರವರೆಗೆ ಉಚಿತವಾಗಿ ರೋಗ ನಿರೋಧಕ ಸಸ್ಯಗಳಾದ ಅಮೃತಬಳ್ಳಿ, ತುಳಸಿ, ಕರಿಬೇವು, ಇನ್ಸೂಲಿನ್ ಹಾಗೂ ಹೂವಿನ ಗಿಡಗಳ ವಿತರಣೆ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.5ರಂದು ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟದ ಹತ್ತಿರದ ಜೋಡಿ ರಸ್ತೆ, ಜೂ. 6ರಂದು ಚಿನ್ಮಯ ಉದ್ಯಾನವನ ಮತ್ತು ಜಗನ್ಮಯಿ ಉದ್ಯಾನವನದ ಮಧ್ಯಭಾಗದಲ್ಲಿ, ಜೂ.7ರಂದು ಸಮಸೋಪಾನ ಉದ್ಯಾನವನ (ಎ ಟು ಜೆಡ್…

ಇಂದು, ನಾಳೆ ಕೆಲವೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು, ನಾಳೆ ಕೆಲವೆಡೆ ವಿದ್ಯುತ್ ನಿಲುಗಡೆ

June 5, 2018

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿ ರುವುದರಿಂದ ಜೂ.5ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮೇಗಳಾಪುರ, ಕೀಳನಪುರ, ಸಿದ್ದರಾಮನಹುಂಡಿ, ಎಂ.ಸಿ.ಹುಂಡಿ, ಇನಾಂ ಉತ್ತನಹಳ್ಳಿ, ಕುಪ್ಪೆಗಾಲ, ಮುದ್ದೇಗೌಡನ ಹುಂಡಿ, ರಂಗನಾಥಪುರ, ಶ್ರೀನಿವಾಸಪುರ, ದೇವೆಗೌಡನಹುಂಡಿ, ಯಡಕೊಳ, ಕಡವೆಕಟ್ಟೆ ಹುಂಡಿ, ಹೊಸಹಳ್ಳಿ, ಗುರುಕಾರಪುರ, ದುದ್ದಗೆರೆ, ಮಹದೇವಿ ಕಾಲೋನಿ, ಲಕ್ಷ್ಮೀಪುರ, ಮಾಧವಗೆರೆ, ವರಕೋಡು ಪೇಪರ್ ಮಿಲ್, ಕುಪ್ಯ, ಬೊಮ್ಮನಾಯಕನ ಹಳ್ಳಿ, ಕೆ.ಪಿ.ಹುಂಡಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು. ನಂಜನಗೂಡು ವಿಭಾಗ ವ್ಯಾಪ್ತಿಯ ಕುಪ್ಯ ಗ್ರಾಮ…

ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ
ಮೈಸೂರು

ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ

June 4, 2018

ಸುತ್ತೂರು:  ರೈತ ಮುಖಂಡರು ಸರ್ಕಾರವನ್ನು ಸಾಲ ಮನ್ನಾ ಮಾಡಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ, ದೇಶಕ್ಕೆ ಅನ್ನ ನೀಡುವ ರೈತರು ಅನ್ನಕ್ಕಾಗಿ ಕೈ ಚಾಚಬಾರದು ಎಂದು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ ತಿಳಿಸಿದರು. ಅವರು ನಂಜನಗೂಡು ತಾಲೂಕು ಸರಗೂರು ಗ್ರಾಮದ ರೈತ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜುರವರು ತೋಟಕ್ಕೆ ಇಂದು ಭೇಟಿ ನೀಡಿ ಮಾತ ನಾಡುತ್ತಾ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆದು ಅದರಲ್ಲೂ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ…

ಕೆ.ಜಿ.ಕೊಪ್ಪಲು, ಜಯನಗರ ನಿವಾಸಿಗಳಿಂದ ಶಾಸಕ ಎಲ್.ನಾಗೇಂದ್ರಗೆ ಆತ್ಮೀಯ ಸನ್ಮಾನ
ಮೈಸೂರು

ಕೆ.ಜಿ.ಕೊಪ್ಪಲು, ಜಯನಗರ ನಿವಾಸಿಗಳಿಂದ ಶಾಸಕ ಎಲ್.ನಾಗೇಂದ್ರಗೆ ಆತ್ಮೀಯ ಸನ್ಮಾನ

June 4, 2018

ಮೈಸೂರು:  ಮೈಸೂರಿನ ಚಾಮರಾಜ ಕ್ಷೇತ್ರದ ನೂತನ ಶಾಸಕ ಎಲ್.ನಾಗೇಂದ್ರ ಅವರನ್ನು ಕನ್ನೇಗೌಡನ ಕೊಪ್ಪಲು ಹಾಗೂ ಜಯ ನಗರ ನಿವಾಸಿಗಳು, ಮೆರವಣ ಗೆಯಲ್ಲಿ ಕರೆದೊಯ್ದು, ಆತ್ಮೀಯವಾಗಿ ಅಭಿನಂದಿಸಿ, ಸಂಭ್ರಮಿಸಿದರು. ಆದಿಶಕ್ತಿ ಬಂದಂತಮ್ಮ ಕಾಳಮ್ಮ ಛಾರಿಟಬಲ್ ಟ್ರಸ್ಟ್ ಹಾಗೂ ಕನ್ನೇಗೌಡನ ಕೊಪ್ಪಲು ಒಕ್ಕಲಿಗರ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಕನ್ನೇಗೌಡನಕೊಪ್ಪಲು ಹಾಗೂ ಜಯನಗರ ನಿವಾಸಿಗಳು, ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ಗ್ರಾಮದ ಕೀರ್ತಿ ಬೆಳಗಿದ ಎಲ್. ನಾಗೇಂದ್ರ ಅವರನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಗ್ರಾಮದ ಚಾಮುಂಡೇ ಶ್ವರಿ ದೇವಾಲಯದ ಬಳಿ ಯಿಂದ…

ಮೈಸೂರಿಗೆ ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವೆ ಪುತ್ರಿ
ಮೈಸೂರು

ಮೈಸೂರಿಗೆ ಅರಮನೆ, ಮೃಗಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವೆ ಪುತ್ರಿ

June 4, 2018

ಮೈಸೂರು: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ಬನ್ಸೂರಿ ಸ್ವರಾಜ್ ಮತ್ತು ಅವರ ಸ್ನೇಹಿತೆಯರು ಇಂದು ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದ್ದರು. ಸಂಸದ ಪ್ರತಾಪ್ ಸಿಂಹ ಬನ್ಸೂರಿ ಅವರಿಗೆ ಮೈಸೂರು ದರ್ಶನ ಮಾಡಿಸುವುದರ ಜೊತೆ ಒಡೆಯರ್ ಇತಿಹಾಸವನ್ನು ಪರಿಚಯಿಸಿದ್ದಾರೆ. ಅರಮನೆ, ಮೃಗಾಲಯ ಸೇರಿದಂತೆ ಪ್ರೇಕ್ಷಣ ಯ ಸ್ಥಳಗಳಿಗೆ ಸುಷ್ಮಾ ಪುತ್ರಿ ಭೇಟಿ ನೀಡಿ ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದೇ ವೇಳೆ ಸಂಜೆ ಪ್ರತಾಪ್ ಸಿಂಹ ಕೆಲ ನಿಮಿಷ ಫೇಸ್‍ಬುಕ್ ಲೈವ್ ಬಂದು ತಾವು ಬನ್ಸೂರಿ…

1 1,570 1,571 1,572 1,573 1,574 1,611
Translate »