ವಿಧಾನ ಪರಿಷತ್‍ಗೆ 11 ಮಂದಿ ಅವಿರೋಧ ಆಯ್ಕೆ
ಮೈಸೂರು

ವಿಧಾನ ಪರಿಷತ್‍ಗೆ 11 ಮಂದಿ ಅವಿರೋಧ ಆಯ್ಕೆ

June 5, 2018

ಬೆಂಗಳೂರು: ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿ ಮೂರು ಪಕ್ಷಗಳ ಹನ್ನೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 5, ಕಾಂಗ್ರೆಸ್‍ನ 4 ಹಾಗೂ ಜೆಡಿಎಸ್‍ನ ಇಬ್ಬರು ಅಭ್ಯರ್ಥಿಗಳು ಪರಿಷತ್ತಿಗೆ ಪ್ರವೇಶ ಪಡೆದಿದ್ದಾರೆ.
ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೊರತಾಗಿ ಇನ್ನಾರೂ ನಾಮಪತ್ರ ಸಲ್ಲಿಕೆ ಮಾಡದ ಕಾರಣ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿದ ಚುನಾವಣಾಧಿಕಾರಿ ಕುಮಾರಸ್ವಾಮಿ, ಮೂರೂ ಪಕ್ಷಗಳ ಅಭ್ಯರ್ಥಿಗಳಿಗೆ ಅವಿರೋಧ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು. ವಿಧಾನ ಪರಿಷತ್ತಿಗೆ ಆಯ್ಕೆಗೊಂಡ ಮೂರು ಪಕ್ಷದ ಅಭ್ಯರ್ಥಿಗಳಿವರು: ಬಿಜೆಪಿ: ರವಿ ಕುಮಾರ್, ತೇಜಸ್ವಿನಿ ಗೌಡ, ರಘುನಾಥ್, ಕೆಪಿ ನಂಜುಂಡಿ, ಮತ್ತು ರುದ್ರೇಗೌಡ ಕಾಂಗ್ರೆಸ್: ಕೆ.ಗೋವಿಂದರಾಜ್, ಸಿಎಂ ಇಬ್ರಾಹಿಂ, ಅರವಿಂದ ಕುಮಾರ ಅರಳಿ ಮತ್ತು ಹರೀಶ್ ಕುಮಾರ್. ಜೆಡಿಎಸ್: ಬಿಎಂ ಫಾರೂಖ್ ಮತ್ತು, ಎಸ್.ಐ. ಧರ್ಮೇಗೌಡ

Translate »