ಪ್ರವಾಸಿಗರಿಗೆ `ಮೈಸೂರು ಪಾಕ್’ ವಿತರಿಸಿ ನಾಲ್ವಡಿ ಜಯಂತಿ ಆಚರಣೆ
ಮೈಸೂರು

ಪ್ರವಾಸಿಗರಿಗೆ `ಮೈಸೂರು ಪಾಕ್’ ವಿತರಿಸಿ ನಾಲ್ವಡಿ ಜಯಂತಿ ಆಚರಣೆ

June 5, 2018

ಮೈಸೂರು:  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಸೇನಾ ಪಡೆಯಿಂದ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ, ಮೈಸೂರು ಅರಮನೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಮೈಸೂರು ಖ್ಯಾತಿಯ ಮೈಸೂರು ಪಾಕ್ ಹಂಚುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಕೆ.ರಘುರಾಂ, ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ರಾಜರ್ಷಿ ನಾಲ್ವಡಿಯವರು ಮೈಸೂರಿನ ಆಧುನಿಕ ಶಿಲ್ಪಿ ಎಂದರು. ಸಾಹಿತಿ ಬನ್ನೂರು ಕೆ ರಾಜು ಮಾತನಾಡಿ, ನಾಲ್ವಡಿಯವರು ಆಗಲೇ ಪ್ರಜಾಪ್ರತಿನಿಧಿ ಸಭೆ ಮಾಡಿ ಪ್ರತಿಯೊಬ್ಬರಿಗೂ ಮತದಾನ ಹಕ್ಕು ನೀಡಿದರು. ಮುಡಾ, ನಗರ ಪಾಲಿಕೆಗೆ, ಮೈಸೂರು ವಿಶ್ವವಿದ್ಯಾಲಯ, ಕನ್ನಂಬಾಡಿ ಕಟ್ಟೆ, ಶಿವನಸಮುದ್ರ ಜಲವಿದ್ಯುತ್ ಯೋಜನೆ ಸೇರಿದಂತೆ ಅನೇಕ ಕೈಗಾರಿಕೆಗಳ ಸ್ಥಾಪಕರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂ.ಎನ್.ದೊರೆಸ್ವಾಮಿ, ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಪದಾಧಿಕಾರಿಗಳಾದ ಶಾಂತಮೂರ್ತಿ ಆರ್, ಪ್ರಜೀಶ್, ಮನು ನಾಯಕ್, ಮಿನಿ ಬಂಗಾರಪ್ಪ, ಸುನಿಲ್ ಕುಮಾರ್, ಹರೀಶ್ ಅಂಕಿತ್, ಶಾಂತರಾಜೇ ಅರಸ್, ಅಕ್ಷಯ್, ವಿಜಯೇಂದ್ರ, ಬಸವಣ್ಣ, ರಾಜಶೇಖರ್, ನಟ, ಗುರುಮಲ್ಲಪ್ಪ, ನಂಜುಂಡಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »