ಮೈಸೂರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 134ನೇ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 134ನೇ ಜಯಂತಿ ಆಚರಣೆ

June 5, 2018

ಮೈಸೂರು:  ಮೈಸೂರಿನ ನಿರ್ಮಾರ್ತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿಯನ್ನು ಸೋಮವಾರ ಮೈಸೂರಿನಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು. ಮೈಸೂರಿನ ಕೆ.ಆರ್.ವೃತ್ತದಲ್ಲಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಜಿಲ್ಲಾಡ ಳಿತ ಸೇರಿದಂತೆ ಅಧಿಕಾರಿಗಳು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಕೆ.ಆರ್.ವೃತ್ತದ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾ ರ್ಚನೆ ಮಾಡಿದರು. ಅವರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಜಿಲ್ಲಾ ಗ್ರಂಥಾ ಲಯ ಇಲಾಖೆ ಉಪ ನಿರ್ದೇಶಕ ಮಂಜು ನಾಥ್, ಮೈಸೂರು ಪಾಲಿಕೆ ವಲಯ 5ರ ಸಹಾಯಕ ಅಯುಕ್ತ ನಾಗರಾಜು ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.

ಶಾಸಕ ಎಸ್.ಎ.ರಾಮದಾಸ್ ಸಹ ನಾಲ್ವಡಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಅವರೊಂದಿಗೆ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ವಿದ್ಯಾ ಅರಸ್, ಕೆಂಪರಾಜ ಅರಸ್, ಕಿರಣ್, ಸುಮಾ, ಸುಚಿತ್ರಾ, ಬಾಲಕೃಷ್ಣ, ಕೃಷ್ಣ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

ನಾಲ್ವಡಿ ಪ್ರತಿಮೆಗೆ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಅವರು ಕೂಡ ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭ ದಲ್ಲಿ ಕಾಂಗ್ರೆಸ್ ದೇವರಾಜ ಬ್ಲಾಕ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಸ್.ದಿವಾಕರ್ ಇನ್ನಿತರರು ಇದ್ದರು.

ಉಪ ಮೇಯರ್ ಇಂದಿರಾ ಮಹೇಶ್ ಅವರು ನಾಲ್ವಡಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಮಾಜಿ ಮೇಯರ್ ಆರ್. ಲಿಂಗಪ್ಪ, ಪಾಲಿಕೆ ಆಯುಕ್ತ ಕೆ.ಹೆಚ್.ಜಗ ದೀಶ್, ಪಾಲಿಕೆ ಸದಸ್ಯರಾದ ಎಸ್‍ಬಿಎಂ ಮಂಜು, ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಆರ್.ಮುದ್ದುರಾಜ್, ಫಾಲ್ಕನ್ ಬೋರೇಗೌಡ, ಎಂ.ಎನ್. ರಾಮು, ಮಹಿಳಾ ನಗರಾಧ್ಯಕ್ಷೆ ಪ್ರೇಮಾ ಶಂಕರೇಗೌಡ, ಜಯರಾಮು, ರಾಜ್ಯ ಸಮಿತಿ ಸದಸ್ಯೆ ಹೇಮಾವತಿ, ಯಶೋ ಧಮ್ಮ ಇನ್ನಿತರು ಉಪಸ್ಥಿತರಿದ್ದರು.

 

Translate »