ನಾಲ್ವಡಿ ಪುತ್ಥಳಿಗೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ
ಮೈಸೂರು

ನಾಲ್ವಡಿ ಪುತ್ಥಳಿಗೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ

June 5, 2018

ಮೈಸೂರು:  ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಅರಮನೆ ಮಂಡಳಿ ಕಚೇರಿ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿ ಅವರ ಜಯಂತಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಾದರಿ ಕರ್ನಾಟಕದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ನಮಗೆ ಮಾರ್ಗದರ್ಶ ಕರು.ಯುವಕರು ಹಾಗೂ ಈಗಿನ ಆಡಳಿ ತಕ್ಕೆ ಆ ಕಾಲದ ಪ್ರಭಾವ ಹಾಗೂ ಅಭಿವೃದ್ಧಿ ಯನ್ನು ನಾವು ಗೌರವಿಸಬೇಕಾಗಿದೆ. ಕರ್ನಾಟಕ ಇತಿಹಾಸದಲ್ಲಿ ಇದು ಉಲ್ಲೇ ಖನೀಯ ಎಂದರು.

ಈ ಸಂದರ್ಭದಲ್ಲಿ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀಧರರಾಜೇ ಅರಸ್, ಕರ್ನಾಟಕ ರಾಜ್ಯ ಅರಸು ಸಂಘದ ಅಧ್ಯಕ್ಷ ಸುಗಂಧ ರಾಜೇ ಅರಸ್, ಶ್ರೀರಾಮ ಸೇವಾ ಅರಸು ಮಂಡಳಿ ಅಧ್ಯಕ್ಷ ಲಕ್ಷ್ಮಿಕಾಂತರಾಜೇ ಅರಸ್, ಅರಸು ಮಹಾಸಂಘದ ಅಧ್ಯಕ್ಷ ನಂದೀಶ್ ಅರಸು, ಕಾರ್ಯದರ್ಶಿ ಸುಬ್ರಹ್ಮಣ್ಯ ರಾಜೇ ಅರಸ್, ಬಹುಜನ ಸಮಾಜ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಸಿದ್ದ ರಾಜು ಇನ್ನಿತರರು ಉಪಸ್ಥಿತರಿದ್ದರು.

Translate »