ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮರ್ಪಣೆ
ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮರ್ಪಣೆ

June 21, 2018

ಮೈಸೂರು:  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಅಂಗವಾಗಿ ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕವು ವಿವಿಧ ಕ್ಷೇತ್ರಗಳ 6 ಮಂದಿಗೆ ಸಾಧಕರಿಗೆ `ನಾಲ್ವಡಿ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.

ಮೈಸೂರಿನ ರೋಟರಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನಿವೃತ್ತ ಪದವಿ ಪೂರ್ವ ನಿರ್ದೇಶಕ ಶ್ರೀಧರರಾಜೇ ಅರಸ್ (ಸಂಘಟನಾ ಕ್ಷೇತ್ರ), ಚಾಮುಂಡಿಬೆಟ್ಟದ ಅರ್ಚಕ ಎಂ.ಡಿ.ಸೋಮಣ್ಣ (ಧಾರ್ಮಿಕ), ನಿವೃತ್ತ ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕ ಎನ್.ಎಸ್.ರಂಗರಾಜು (ಪುರಾತತ್ವ), ಮಹಾರಾಣಿ ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಂ.ಎಸ್.ಅನಿತಾ (ಶಿಕ್ಷಣ), ಸಾಹಿತಿ ಡಾ.ಸುಜಾತಾ ಅಕ್ಕಿ (ಸಾಹಿತ್ಯ), ದೇವಸ್ಥಾನಗಳ ಖ್ಯಾತ ಶಿಲ್ಪಿ ಎ.ದೇವರಾಜ್ (ಶಿಲ್ಪ ಕಲೆ) ಇವರನ್ನು ಗೌರವಿಸಲಾಯಿತು.

ಇದಕ್ಕೂ ಮುನ್ನ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ದ್ವತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಸ್ಥಾನ ಪಡೆದ ಅನ್ನಿ ಜಾಸ್ಮಿನ್ ಡಿಮೆಲ್ಲೋ ಸೇರಿದಂತೆ 40 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ರಘುರಾಂ ವಾಜಪೇಯಿ, ಬಿಜೆಪಿ ಮುಖಂಡ ಎಂ.ಎನ್.ರಮೇಶ್, ಅರಸು ಮಂಡಳಿ ಸಂಘದ ಕೆಂಪರಾಜೇ ಅರಸ್, ಮರಿಮಲ್ಲಪ್ಪ ಕಾಲೇಜಿನ ಪ್ರಾಂಶುಪಾಲ ನೀಲಕಂಠ, ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »