ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಗೆಳೆಯನ ಬರ್ತ್‍ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ಸಾವು
ಮೈಸೂರು

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಗೆಳೆಯನ ಬರ್ತ್‍ಡೇ ಆಚರಿಸಲು ಹೋಗುತ್ತಿದ್ದ ಇಬ್ಬರು ಸಾವು

June 5, 2018

ಮಂಡ್ಯ:  ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿ ರುವ ಘಟನೆ ಶ್ರೀರಂಗಪಟ್ಟಣ ಸಮೀಪದ ಬಾಬು ರಾಯನಕೊಪ್ಪಲಿನ ಲೋಕಪಾವನಿ ಸೇತುವೆ ಬಳಿ ಸೋಮವಾರ ಮುಂಜಾನೆ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಅರುಣ್‍ಕುಮಾರ್ (25), ಬಾಬುರಾಯನ ಕೊಪ್ಪಲು ಗ್ರಾಮದ ಆದರ್ಶ(22) ಮೃತ ಯುವಕ ರಾಗಿದ್ದು, ಶಿವಕುಮಾರ್, ಮಂಜುನಾಥ್, ರಾಕೇಶ್ ಮತ್ತು ಪುನೀತ್ ಘಟನೆಯಲ್ಲಿ ತೀವ್ರ ವಾಗಿ ಗಾಯಗೊಂಡಿದ್ದಾರೆ.

ಘಟನೆ ಹಿನ್ನೆಲೆ: ಸ್ನೇಹಿತನೊಬ್ಬನ ಹುಟ್ಟುಹಬ್ಬ ವನ್ನು ಆಚರಿಸಲು ಅರುಣ್‍ಕುಮಾರ್, ಆದರ್ಶ ಸೇರಿದಂತೆ 6 ಜನ ಸ್ನೇಹಿತರು ಕಳೆದ ರಾತ್ರಿಯೇ ಕರೀಘಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್ ಮಾಡಿ ಕೊಂಡಿದ್ದರು. ಅಂತೆಯೇ ಇಂದು ಮುಂಜಾನೆ 3.45ರÀಲ್ಲಿ ಕಾರ್(ಕೆಎ.09, ಜೆಡ್ 7405)ನಲ್ಲಿ ಬಾಬುರಾಯನಕೊಪ್ಪಲಿನ ಮೂಲಕ ಕರೀಘಟ್ಟದ ಕಡೆಗೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಲೋಕಪಾವನಿ ಸೇತುವೆ ಬಳಿ ರಸ್ತೆ ವಿಭಜಕಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದು ನಂತರ ಒಂದೆರಡು ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 6 ಜನ ಯುವಕರ ಪೈಕಿ ಅರುಣ್‍ಕುಮಾರ್ ಮತ್ತು ಆದರ್ಶ ಸ್ಥಳದಲ್ಲೇ ಸಾವನ್ನಪ್ಪಿದರೆ, ಶಿವಕುಮಾರ್, ಮಂಜುನಾಥ್, ರಾಕೇಶ್ ಮತ್ತು ಪುನೀತ್ ತೀವ್ರ ವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೆಯದ ಯುವಕರು ಗೆಳೆಯನ ಬರ್ತ್‍ಡೇ ಪಾರ್ಟಿ ಮಾಡಲು ಹೋಗಿ ಮಸಣ ಸೇರಿರು ವುದು ದುರಂತದ ಸಂಗತಿಯಾಗಿದೆ..!

Translate »