ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪರಿಷತ್‍ಗೆ ಚುನಾವಣೆ: ಜೂ.8ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ
ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪರಿಷತ್‍ಗೆ ಚುನಾವಣೆ: ಜೂ.8ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ

June 2, 2018

ಮೈಸೂರು:  ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಜೂ.8ರಂದು ಚುನಾವಣೆ ನಡೆಯಲಿದ್ದು, ನಿಗದಿತ ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತ ಚಲಾಯಿಸಬಹುದು. ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ, ತಿ.ನರಸೀಪುರದ ಮಿನಿ ವಿಧಾನಸೌಧ, ಹುಣಸೂರು ಹಾಗೂ ನಂಜನಗೂಡು ತಾಲೂಕು ಕಚೇರಿ ಮತಗಟ್ಟೆ ಕೇಂದ್ರಗಳಲ್ಲಿ ಆಯಾ ತಾಲೂಕಿನ ಶಿಕ್ಷಕರು ಮತ ಚಲಾಯಿಸಬಹುದು. ಮೈಸೂರು ನಗರದ ಪೀಪಲ್ಸ್ ಪಾರ್ಕ್ ಬಳಿಯಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 1ರಲ್ಲಿ ಮೈಸೂರು ತಾಲೂಕಿನ ಕ್ರಮ ಸಂಖ್ಯೆ 1ರಿಂದ 799…

ಮೈಸೂರಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ: ಎರಡನೇ ದಿನವೂ ಮೂವರಿಂದ ನೂತನ ದಾಖಲೆ
ಮೈಸೂರು

ಮೈಸೂರಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ: ಎರಡನೇ ದಿನವೂ ಮೂವರಿಂದ ನೂತನ ದಾಖಲೆ

June 2, 2018

ಮೈಸೂರು:  ಸರಸ್ವತಿಪುರಂನಲ್ಲಿರುವ ಮೈಸೂರು ವಿವಿಯ ಈಜುಕೊಳದಲ್ಲಿ ನಡೆದ 2ನೇ ದಿನದ ರಾಜ್ಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಬಾರೀ ಪೈಪೋಟಿ ಮೂಲಕ ಕಪಿಲ್ ಡಿ.ಶೆಟ್ಟಿ, ನೀನಾ ವೆಂಕಟೇಶ್ ಮತ್ತು ಸುವನ ಸಿ.ಭಾಸ್ಕರ್ ಅವರು ಹಳೇ ದಾಖಲೆ ಮುರಿದು, ನೂತನ ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕ ರಾಜ್ಯ ಈಜು ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಈಜು ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮೈಸೂರು ವಿವಿ ಈಜುಕೊಳದಲ್ಲಿ ಶುಕ್ರವಾರ ನಡೆದ ಪಂದ್ಯಾವಳಿಯ ಬಾಲಕರ ವಿಭಾಗದ 50ಮೀ ಬ್ಯಾಕ್‍ಸ್ಟ್ರೋಕ್ ಗ್ರೂಪ್ 2ರಲ್ಲಿ ಡಾಪ್‍ಫಿನ್ ಆಕ್ವಾಟಿಕ್ಸ್‍ನ ಕಪಿಲ್…

ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಗೊಂದಲದ ಹೇಳಿಕೆ: ಮಾಜಿ ಸಚಿವ ಎಂ.ಶಿವಣ್ಣ ಆರೋಪ
ಮೈಸೂರು

ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಗೊಂದಲದ ಹೇಳಿಕೆ: ಮಾಜಿ ಸಚಿವ ಎಂ.ಶಿವಣ್ಣ ಆರೋಪ

June 2, 2018

ಮೈಸೂರು: ಅಧಿಕಾರಕ್ಕೆ ಬಂದು 10 ದಿನಗಳಾದರೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಕುರಿತಂತೆ ಕೇವಲ ಗೊಂದಲದ ಹೇಳಿಕೆಗಳನ್ನು ನೀಡುತ್ತಾ, ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ. ಇದು ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಮಾಜಿ ಸಚಿವ, ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಪದೇ…

ರೈತರ ಸಾಲ ಮನ್ನಾ: ರಾಜ್ಯದ ಜನರಿಗೆ ತಕ್ಷಣ ಸ್ಪಷ್ಟನೆ ನೀಡಲು ರೈತಸಂಘ ಒತ್ತಾಯ
ಮೈಸೂರು

ರೈತರ ಸಾಲ ಮನ್ನಾ: ರಾಜ್ಯದ ಜನರಿಗೆ ತಕ್ಷಣ ಸ್ಪಷ್ಟನೆ ನೀಡಲು ರೈತಸಂಘ ಒತ್ತಾಯ

June 2, 2018

ಮೈಸೂರು:  ಸಾಲ ಮನ್ನಾ ಕುರಿತಂತೆ ಸರ್ಕಾರ ತಕ್ಷಣ ರಾಜ್ಯದ ಜನತೆಗೆ ಸ್ಪಷ್ಟನೆ ನೀಡದಿದ್ದರೆ ರೈತರನ್ನು ಬೇವರ್ಸಿಗಳಂತೆ ಸಮಾಜಕ್ಕೆ ಬಿಂಬಿಸಿದಂತಾಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡುವುದಾಗಿ ಹೇಳಿ, ರೈತರ ಕಿವಿಗೆ ಹೂ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಯಾವ ಮಾನದಂಡದ ಮೇಲೆ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಮೊದಲು ರಾಜ್ಯದ ಜನರಿಗೆ…

ಮೈಸೂರಲ್ಲಿ ಜೈಲು ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
ಮೈಸೂರು

ಮೈಸೂರಲ್ಲಿ ಜೈಲು ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

June 2, 2018

ಮೈಸೂರು: ಮೈಸೂ ರಿನ ಜೈಲು ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆದ 45ನೇ ತಂಡದ 88 ಮಹಿಳಾ ಜೈಲು ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚ ಲನ ಇಂದು ಮೈಸೂರಲ್ಲಿ ನಡೆಯಿತು. ಕಾರಾಗೃಹಗಳ ಮಹಾನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಅವರು, ಮೈಸೂ ರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ನಿರ್ಗಮನ ಪಥ ಸಂಚಲನವನ್ನು ಪರಿವೀಕ್ಷಿಸಿ, ವಂದನೆ ಸ್ವೀಕರಿಸಿದರು. ಪೊಲೀಸ್ ಉಪಮಹಾನಿರೀಕ್ಷಕ (ಕಾರಾಗೃಹ) ಹೆಚ್.ಎಸ್.ರೇವಣ್ಣ, ಹೆಚ್ಚು ವರಿ ಕಾರಾಗೃಹಗಳ ಮಹಾ ನಿರೀಕ್ಷಕ…

ಜೈಲು ಬಂದಿಗಳನ್ನು ಮನುಷ್ಯರಂತೆ ನೋಡಿ: ಸಿಬ್ಬಂದಿಗಳಿಗೆ ಎಡಿಜಿಪಿ ಎನ್.ಎಸ್.ಮೇಘರಿಕ್ ಕಿವಿಮಾತು
ಮೈಸೂರು

ಜೈಲು ಬಂದಿಗಳನ್ನು ಮನುಷ್ಯರಂತೆ ನೋಡಿ: ಸಿಬ್ಬಂದಿಗಳಿಗೆ ಎಡಿಜಿಪಿ ಎನ್.ಎಸ್.ಮೇಘರಿಕ್ ಕಿವಿಮಾತು

June 2, 2018

ಮೈಸೂರು: ಜೈಲು ಬಂಧಿಗಳನ್ನು ಮನುಷ್ಯರಂತೆ ನೋಡಿ, ಅವರ ವಿಷಯದಲ್ಲಿ ಮಾನವೀಯತೆ ಪ್ರದರ್ಶಿಸಿ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮತ್ತು ಕಾರಾಗೃಹಗಳ ಮಹಾ ನಿರೀಕ್ಷಕ ಎನ್.ಎಸ್.ಮೇಘರಿಕ್ ಅವರು ಕಾರಾಗೃಹಗಳ ಮಹಿಳಾ ವೀಕ್ಷಕಿಯರಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ವತಿಯಿಂದ ಮೈಸೂರಿನ ಸೆಂಟ್ರಲ್ ಜೈಲು ಆವರಣದಲ್ಲಿ ಇಂದು ಏರ್ಪಡಿಸಿದ್ದ 45ನೇ ತಂಡದ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖೈದಿಗಳನ್ನು ಮನುಷ್ಯರಂತೆ ನೋಡಿ ಎಂದು ನುಡಿದಿದ್ದಾರೆ. ಯಾವುದೋ ಕೆಟ್ಟ…

ಡಿಕೆಶಿ ವಿರುದ್ಧ ಕೇಂದ್ರ ಷಡ್ಯಂತರ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ಡಿಕೆಶಿ ವಿರುದ್ಧ ಕೇಂದ್ರ ಷಡ್ಯಂತರ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

June 2, 2018

ಮೈಸೂರು:  ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಪತನವಾಗಲು ಪ್ರಮುಖ ಕಾರಣರಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತರ ಮೇಲೆ ಕೇಂದ್ರ ಉದ್ದೇಶಪೂರ್ವಕವಾಗಿ ಸಿಬಿಐ ದಾಳಿ ನಡೆಸಿ, ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಮಣ ಸುವ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿ ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಕಚೇರಿ ಬಳಿ ಡಿಕೆಶಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ…

ಟಿ.ನರಸೀಪುರದಲ್ಲಿ ಬಿಎಸ್ಪಿ ಕಚೇರಿ ಉದ್ಘಾಟನೆ
ಮೈಸೂರು

ಟಿ.ನರಸೀಪುರದಲ್ಲಿ ಬಿಎಸ್ಪಿ ಕಚೇರಿ ಉದ್ಘಾಟನೆ

June 2, 2018

ತಿ.ನರಸೀಪುರ: ಪ್ರಸ್ತುತ ಸಮಾಜವನ್ನು ಚಾರಿತ್ರಿಕ ಜಾಗೃತಿ ಗೊಳಿಸಿ, ಬಹುಜನರನ್ನು ರಾಜಕೀಯ ಎಚ್ಚರಿ ಸುವುದೇ ಬಹುಜನ ಸಮಾಜ ಪಕ್ಷದ ಚಳವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಬಿಎಸ್ಪಿ ಕ್ಷೇತ್ರ ಉಸ್ತುವಾರಿ ಹಾಗೂ ಹಿರಿಯ ಮುಖಂಡ ಬಿ.ಆರ್.ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಕಾಲೇಜು ರಸ್ತೆಯಲ್ಲಿ ಶುಕ್ರವಾರ ನಡೆದ ಬಹುಜನ ಸಮಾಜ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಬುದ್ಧ ರಾಷ್ಟ್ರವಾಗಬೇಕಿದ್ದ ಭಾರತ ದೇಶದ ಹಲವಾರು ಐತಿಹಾಸಿಕ ಘಟನೆಗಳನ್ನು ಮರೆಮಾಚಿರುವ ಮನುವಾದಿ ವ್ಯವಸ್ಥೆ ಬರೀ ಸುಳ್ಳನ್ನೇ ಜನರ ತಲೆಯಲ್ಲಿ ತುಂಬುತ್ತಿದೆ. ಗತಕಾಲದಲ್ಲಿ ಮುಚ್ಚಿ ಹೋಗಿರುವ…

ಶುದ್ಧ ಕುಡಿಯುವ ನೀರು ಘಟಕ ಪರಿಶೀಲಿಸಿದ ಶಾಸಕ ಹರ್ಷವರ್ಧನ್
ಮೈಸೂರು

ಶುದ್ಧ ಕುಡಿಯುವ ನೀರು ಘಟಕ ಪರಿಶೀಲಿಸಿದ ಶಾಸಕ ಹರ್ಷವರ್ಧನ್

June 2, 2018

ಮಲ್ಕುಂಡಿ:  ನಂಜನಗೂಡು ತಾಲೂಕಿನ ಮಾದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಹರ್ಷವರ್ಧನ್ ಪರಿಶೀಲಿಸಿ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಮಾರು 124 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಸರಬರಾಜಿನ ಕನಸು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರದ್ದಾಗಿದ್ದು, ಅವರ ಅಭಿವೃದ್ದಿ ಶ್ರೀರಕ್ಷೆಯಿಂದ ನಾನು ಗೆಲುವು ಸಾದಿಸಿದೆ. ನಾನು ಮತದಾರರಿಗೆ ಚಿರಋಣ ಯಾಗಿ ಕೆಲಸ ಮಾಡುತ್ತೇನೆ ಎಂದರು. ಹುಲ್ಲಹಳ್ಳಿ ಭಾಗದ ನಾಡ ಕಛೇರಿ, ಪ್ರವಾಸಿ…

ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
ಮೈಸೂರು

ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

June 2, 2018

ಹುಣಸೂರು: ತಾಲೂಕಿನ ಗಾವಡಗೆರೆ ಸಮೀಪದ ಕಳ್ಳಿಕೊಪ್ಪಲು ಗ್ರಾಮದ ಜಮೀನೊಂದರಲ್ಲಿ ಇಂದು ಬೆಳಿಗ್ಗೆ ಚಿರತೆಯೊಂದು ಕಾಣ ಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಷಯ ತಿಳಿದು ಅರಣ್ಯ ಇಲಾಖೆಯ ವರು ಬಂದು ಗ್ರಾಮಸ್ಥರ ಸಹಾಯದಿಂದ ಚಿರತೆಗೆ ಅರವಳಿಕೆ ಚುಚುಮದ್ದು ನೀಡಿ ಬಲೆಯ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಾಗೇಗೌಡರ ಜಮೀನಿನಲ್ಲಿ ಉಳುಮೆ ಮಾಡುವಾಗ ಜಮೀನಿನ ಮರದ ಕೆಳಗೆ ಕರುವನ್ನು ಕಟ್ಟಿಹಾಕಲಾಗಿತ್ತು. ಇದನ್ನು ಕಂಡ ಚಿರತೆ ಮರದಿಂದ ಕೆಳಗೆ ಇಳಿದು ಬರುತಿದ್ದಂತೆ ಜಮೀನಿನಲ್ಲಿದ್ದ ನಾಲ್ಕು ನಾಯಿ…

1 1,573 1,574 1,575 1,576 1,577 1,611
Translate »