ಮೈಸೂರಲ್ಲಿ ಆರಂಭವಾಯ್ತು ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಆರಂಭವಾಯ್ತು ಮಾವು, ಹಲಸು ಮೇಳ

June 2, 2018

ಮೈಸೂರು: ಮೈಸೂರು ಅರಮನೆ ಬಳಿ ಇರುವ ಕರ್ಜನ್ ಪಾರ್ಕ್ ಆವರಣದಲ್ಲಿ ಇಂದಿನಿಂದ ಮಾವು ಹಾಗೂ ಹಲಸಿನ ಮೇಳ ಆರಂಭವಾ ಯಿತು. ಒಟ್ಟು 36 ಮಳಿಗೆಗಳಲ್ಲಿ ಮಾವು, ಹಲಸಿನ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಜೂ.5ರವರೆಗೂ ಈ ಮೇಳ ನಡೆಯಲಿದೆ. ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳವನ್ನು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾಧಿ ಕಾರಿಗಳು, ಸ್ಥಳೀಯ ಮಾವು ಬೆಳೆಗಾರ ರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಜಿಲ್ಲೆಯ ಜನರಿಗೆ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಪೂರೈಸುವ ನಿಟ್ಟಿನಲ್ಲಿ ಕರ್ಜನ್ ಪಾರ್ಕ್‍ನಲ್ಲಿ ಮಾವು ಮೇಳ ಏರ್ಪಡಿಸಲಾ ಗಿದೆ. ಜೂನ್ 5ರವರೆಗೆ ನಡೆಯಲಿರುವ ಮೇಳದಲ್ಲಿ ಮಾರಾಟ ಮಾಡಲಾಗುತ್ತಿರುವ ಮಾವಿನಹಣ ್ಣನ ಬೆಲೆ ಗ್ರಾಹಕರಿಗೆ ಕೈಗೆಟಕು ವಂತಿದೆ. ಒಂದೊಂದು ವಿಧದÀ ಮಾವಿಗೂ ಒಂದೊಂದು ಬೆಲೆಯಿದೆ. ಮಾರುಕಟ್ಟೆಯ ಬೆಲೆಗೆ ಹೋಲಿಸಿದರೆ ಕೆಜಿ ಮಾವಿನ ಹಣ ್ಣಗೆ 15ರಿಂದ 20 ರೂ ದರ ಕಡಿಮೆ ಇದೆ. ಅಲ್ಲದೆ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕ ಪದ್ದತಿಯಲ್ಲಿ ಮಾಗಿದ ಹಣ್ಣುಗಳನ್ನೇ ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಬಗೆ ಬಗೆಯ ಹಣ್ಣುಗಳು: ಮಾವು ಮತ್ತು ಹಲಸು ಮೇಳದಲ್ಲಿ ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಮಲಗೋವಾ, ಶಿರಸಿ ಲೋಕಲ್, ರತ್ನಗಿರಿ(ಆಲ್ಪನ್ಸ್), ಬಾದಾಮಿ, ರಸಪುರಿ, ಮಲ್ಲಿಕಾ, ಸೆಂಧೂರಾ, ತೋತಾ ಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್ ಪಸಂದ್ ಸೇರಿದಂತೆ ಅನೇಕ ರೀತಿಯ ತಳಿಯ ಹಣ್ಣುಗಳನ್ನು
ಮಾರಾಟಕ್ಕಿಡಲಾಗಿದೆ. ಕ್ಯಾಲ್ಸಿಯಂ ಕಾರ್ಬೈಟ್ ರಾಸಾಯನಿಕವನ್ನು ಸಿಂಪಡಿಸಿದ ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್, ಅಸ್ತಮಾ, ಕೆಮ್ಮು, ನೆಗಡಿ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣ ಸಿಕೊಳ್ಳುತ್ತದೆ. ನೈಸರ್ಗಿಕವಾಗಿ ಹಣ್ಣು ಮಾಡಿದ ಹಣ್ಣುಗಳ ಜತೆಗೆ ಮಾರುಕಟ್ಟೆಗೆ ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಮಾಗಿಸಿದ ಹಣ್ಣುಗಳು ಕೂಡ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿವೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿದ ಹಾಗೂ ನೈಸರ್ಗಿಕವಾದ ಹಣ್ಣು ಯಾವುದು ಎಂಬ ಗೊಂದಲ ಜನರಲ್ಲಿದೆ. ಆದರೆ, ಮೇಳದಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ಇಲ್ಲದೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ನಿಶ್ಚಿಂತೆಯಿಂದ ಖರೀದಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಸಸ್ಯ ಸಂತೆಯಲ್ಲಿ: ಮಾವು ಮತ್ತು ಹಲಸು ಮೇಳದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿವಿಧ ಹಣ್ಣು ಹಾಗೂ ಹೂವುಗಳ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ. ವಿವಿಧ ನರ್ಸರಿಗಳಲ್ಲಿರುವ ಗಿಡಗಳನ್ನು ಮೇಳದಲ್ಲಿ ತಂದು ಮಾರಾಟ ಮಾಡಲು ಇಡಲಾಗಿದೆ. ಮಾವು, ಹಲಸು, ಸೀಬೆ ಸೇರಿದಂತೆ ವಿವಿಧ ಹಣ್ಣುಗಳ ಗಿಡಗಳು, ನಿಂಬೆ ಗಿಡ, ನೆಲ್ಲಿ, ಹುಣಸೆ, ಕರಿಬೇವು, ಹೊಂಗೆ, ಸಂಪಿಗೆ, ಚಕ್ರಮುನಿ ಸೇರಿದಂತೆ ಹಲವು ಬಗೆಯ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಮೊದಲ ದಿನವೇ ಭಾರಿ ಜನ: ಮಾವು ಮತ್ತು ಹಲಸು ಮೇಳದ ಮೊದಲ ದಿನವಾದ ಶುಕ್ರವಾರ ಬೆಳಗ್ಗಿನಿಂದಲೇ ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಉದ್ಘಾಟನೆ ಮುನ್ನವೇ ತಂಡೋಪ ತಂಡವಾಗಿ ಆಗಮಿಸಿದ ಜನರು ತಮಗಿಷ್ಟವಾದ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸಿದರು. ಅಲ್ಲದೆ ಒಂದೇ ಸ್ಥಳದಲ್ಲಿ ಹಲವಾರು ಬಗೆಯ ಹಣ್ಣುಗಳು ದೊರೆತ ಹಿನ್ನೆಲೆಯಲ್ಲಿ ಮುಗಿ ಬಿದ್ದು ಹಣ್ಣುಗಳನ್ನು ಖರೀದಿಸಿದರು. ಅದರಲ್ಲಿ ನೈಸರ್ಗಿಕ ಪದ್ದತಿಯಲ್ಲಿ ಬೆಳೆದಿದ್ದ ಹಣ್ಣುಗಳೆ ಮಾರಾಟಕ್ಕಿಟ್ಟಿದ್ದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ಮಹಿಳೆಯರೇ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡು ಬಂದಿತು. ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಿಂದಲೇ ಬಟ್ಟೆ ಬ್ಯಾಗ್ ತರುತ್ತಿದ್ದರಲ್ಲದೆ, ಮತ್ತೆ ಕೆಲವರು ಮೇಳದಲ್ಲಿ ರಟ್ಟಿನ ಬಾಕ್ಸ್ ಮತ್ತು ಬಟ್ಟೆ ಬ್ಯಾಗ್ ಖರೀದಿಸಿ ಹಣ್ಣುಗಳನ್ನು ಕೊಂಡೊಯ್ದರು. ಜೂ.5ರವರೆಗೂ ಬೆಳಗ್ಗೆ 9ರಿಂದ ರಾತ್ರಿ 8ಗಂಟೆಯವರೆಗೂ ಮಾವು ಮತ್ತು ಹಲಸಿನ ಮೇಳದಲ್ಲಿ ಹಣ್ಣುಗಳನ್ನು ಖರೀದಿಸಬಹುದಾಗಿದೆ.

Translate »