ಸುಭದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಹಕಾರ ಕೋರಿದ ಗೌಡರು
ಮೈಸೂರು

ಸುಭದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಹಕಾರ ಕೋರಿದ ಗೌಡರು

June 2, 2018

ಬೆಂಗಳೂರು: ಕರ್ನಾಟಕದಲ್ಲಿ ಸುಭದ್ರ ಸರ್ಕಾರ ನಡೆಸಲು ನಿಮ್ಮ ಸಹಕಾರ ಮುಂದು ವರಿಯಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ಮುಖಂಡರೊಂದಿಗೆ ಸಮಾ ಲೋಚನೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿ, ಮೈತ್ರಿ ಸರ್ಕಾರ ಉತ್ತಮವಾಗಿ ಕೆಲಸ ಆರಂಭಿಸಿದೆ.

ಕರ್ನಾಟಕದ ಅಭಿವೃದ್ಧಿ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗೂಡಿ ಕೆಗೆ ನಿಮ್ಮ ಸಹಕಾರ ಮತ್ತು ಬೆಂಬಲ ಅತ್ಯಗತ್ಯ. ಪ್ರಾದೇಶಿಕ
ಪಕ್ಷಗಳು ಮತ್ತು ಎನ್‍ಡಿಎ ವಿರುದ್ಧದ ಪಕ್ಷಗಳನ್ನು ಒಂದು ಸೂರಿನಡಿ ತರಲು ನೀವು ನಡೆಸಿರುವ ಯತ್ನಕ್ಕೆ ನಿನ್ನೆ ರಾಷ್ಟ್ರದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶ ಯಶಸ್ಸು ತಂದಿದೆ, ಇದಕ್ಕೆ ನಾನು, ನಿಮ್ಮನ್ನು ಅಭಿನಂದಿಸುತ್ತೇನೆ.

ಒಗ್ಗಟ್ಟಿನ ದೃಷ್ಟಿಯಿಂದ ರಾಜ್ಯದಲ್ಲಿ ನಿಮ್ಮ ಪಕ್ಷಕ್ಕೆ ಲಭ್ಯವಾಗಬೇಕಿದ್ದ ಉನ್ನತ ಅಧಿಕಾರವನ್ನೂ ತ್ಯಜಿಸಿದ್ದೀರಿ, ನಿಮ್ಮ ಮಾರ್ಗದರ್ಶನದಂತೆ ಎರಡೂ ಪಕ್ಷಗಳಿಗೆ ಜನಪ್ರಿಯತೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಬೆಂಬಲಕ್ಕೆ ಮಂತ್ರಿಗಳನ್ನು ಸೇರ್ಪಡೆ ಮಾಡಲು ಮುಕ್ತ ಅವಕಾಶ ನೀಡಿದ್ದೀರಿ, ಇದರಿಂದ ನಮ್ಮ ಮೈತ್ರಿ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಮತ್ತೊಮ್ಮೆ ಗೌಡರು ಕೃತಜ್ಞತೆ ಸಲ್ಲಿಸಿದರು.

Translate »