ಮೋದಿ ಸರ್ಕಾರ ನಮ್ಮ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ
ಮೈಸೂರು

ಮೋದಿ ಸರ್ಕಾರ ನಮ್ಮ ನಿರೀಕ್ಷೆಯ ಮಟ್ಟ ಮುಟ್ಟಿಲ್ಲ

June 2, 2018

ಉಡುಪಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನಮ್ಮ ನಿರೀಕ್ಷೆ ಮಟ್ಟ ವನ್ನು ಮುಟ್ಟಿಲ್ಲ. ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಹೇಳಿದ್ದಾರೆ. ಮೋದಿ ನಾಯಕತ್ವದ ಸರ್ಕಾ ರದ ಮೇಲೆ ಬಹಳ ನಿರೀಕ್ಷೆಗಳಿತ್ತು. ಆದರೆ ಅವರು ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಲು ವಿಫಲರಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಪೇಜಾವರ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಭ್ರಷ್ಟಾ ಚಾರ ನಿಯಂತ್ರಣಕ್ಕೆ ಬಂದಿದೆ. ಆದರೆ ಕಪ್ಪುಹಣವನ್ನು ವಿದೇಶದಿಂದ ತರದೇ ಹೋಗಿರುವುದು, ಗಂಗಾ ಶುದ್ಧೀಕರಣ ಆಗದಿರುವುದು ಸರ್ಕಾರದ ಹಿನ್ನೆಡೆಗೆ ಕಾರಣ. ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆ ಈಡೇರಿಸದೆ ಇರುವುದಾಗಲೀ, ವಿಪಕ್ಷಗಳೆಲ್ಲಾ ಸೇರಿ ಮೈತ್ರಿಕೂಟ ರಚನೆಗೆ ಮುಂದಾಗಿರುವುದಾಗಲೀ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗಂಗಾ ನದಿ ನೀರು ಶುದ್ಧೀಕರಣವಾಗಬೇಕಾಗಿರುವುದು ಇಂದಿನ ಅಗತ್ಯ ಎಂದು ಶ್ರೀಗಳು ಒತ್ತಿ ಹೇಳಿದ್ದು, ಶ್ರೀರಾಮಮಂದಿರ ನಿರ್ಮಾಣಕ್ಕೆ ಮುನ್ನ ಈ ಕೆಲಸವಾಗಬೇಕು ಎಂದಿದ್ದಾರೆ.

ರೆಸಾರ್ಟ್ ರಾಜಕೀಯಕ್ಕೆ ಬೇಸರ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣ ಗೆಗಳು ಬೇಸರ ತರಿಸಿದೆ. ರೆಸಾರ್ಟ್, ಆಪರೇಷನ್‍ನಲ್ಲಿ ಜನಪ್ರತಿನಿಧಿಗಳು ತಲ್ಲೀನರಾಗಿದ್ದಾರೆ. ಯಾವ ರಾಜಕೀಯ ಪಕ್ಷಗಳು ಸಹ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಶ್ರೀಗಳು ಅಸಮಾಧಾನ ತೋರಿದ್ದಾರೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಹೋದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಹೊಗುವ ಬದಲು ಸರ್ವಪಕ್ಷಗಳ ಆಡಳಿತ ಜಾರಿಗೆ ತರಬೇಕು ಎನ್ನುವುದು ನನ್ನ ಅನಿಸಿಕೆ. ನಾನು ಯಾವ ಪಕ್ಷದ ಪರವೂ ಇಲ್ಲ. ಒಳ್ಳೆಯ ಕೆಲಸ ಮಾಡಿದವರನ್ನು ಬೆಂಬಲಿಸುತ್ತೇನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬ ಅನುಭವಿ ರಾಜಕಾರಣ ಯಾಗಿದ್ದು,ಅವರು ಪೂರ್ಣಾವಧಿ ಆಡಳಿತ ನಡೆಸಲೆಂದು ನಾನು ಹಾರೈಸುತ್ತೇನೆ ಎಂದು ಶ್ರೀಗಳು ಶುಭಾಶೀರ್ವಾದ ಮಾಡಿದ್ದಾರೆ.

Translate »