ಆದಾಯ ಗಳಿಕೆ, ನಿರ್ವಹಣೆಯಲ್ಲಿ ಬಿಎಸ್‍ಎನ್‍ಎಲ್ ಮೈಸೂರು ದೂರಸಂಪರ್ಕ ಜಿಲ್ಲೆ ಹೆಗ್ಗಳಿಕೆ
ಮೈಸೂರು

ಆದಾಯ ಗಳಿಕೆ, ನಿರ್ವಹಣೆಯಲ್ಲಿ ಬಿಎಸ್‍ಎನ್‍ಎಲ್ ಮೈಸೂರು ದೂರಸಂಪರ್ಕ ಜಿಲ್ಲೆ ಹೆಗ್ಗಳಿಕೆ

June 2, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಮೈಸೂರು ದೂರಸಂಪರ್ಕ ಜಿಲ್ಲೆಯ ಸೆಕೆಂಡರಿ ಸ್ವಿಚಿಂಗ್ ಏರಿಯಾ ಕಳೆದ ವರ್ಷ ರೂ.90 ಕೋಟಿ ಆದಾಯ ಗಳಿಸಿದ್ದು, ಕರ್ನಾಟಕದಲ್ಲಿ ಅತ್ಯುತ್ತಮ ನಿರ್ವಹಣೆಯ ಸೆಕೆಂಡರಿ ಸ್ವಿಚಿಂಗ್ ಏರಿಯಾ (ಎಸ್‍ಎಸ್‍ಎ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಿಎಸ್‍ಎನ್‍ಎಲ್ ಕರ್ನಾಟಕ ವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್.ಮಣ ಅವರು ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಪ್ರಾದೇಶಿಕ ದೂರಸಂಪರ್ಕ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮೈಸೂರು ಟೆಲಿಕಾಂ ಜಿಲ್ಲೆಯು ಹೆಚ್ಚಿನ ಬಳಕೆದಾರರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಉನ್ನತೀಕರಣ ಮತ್ತು ಮೊಬೈಲ್ ಗೋಪುರಗಳ ಹೆಚ್ಚುವರಿ ಜೋಡಣೆ ಕಾರ್ಯ ಕೈಗೊಂಡಿರುವ ಮೈಸೂರು ಟೆಲಿಕಾಂ ಜಿಲ್ಲೆಯು ಇದುವರೆಗೆ 4,000 ಧ್ವನಿ ಸಂಪರ್ಕಗಳು, 3,000 ಬ್ರಾಡ್‍ಬ್ಯಾಂಡ್ ಸಂಪರ್ಕ ಮತ್ತು 3,500 ಆಪ್ಟಿಕಲ್ ಫೈಬರ್ ನೆಟ್‍ವರ್ಕ್‍ಗಳನ್ನು ಒದಗಿಸಿದೆ ಎಂದರು.

ಮೈಸೂರು ಟೆಲಿಕಾಂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ಹೆಚ್ಚಿನ ವೇಗದ ಇಂಟರ್‍ನೆಟ್ ಸಂಪರ್ಕಗಳನ್ನು ಒದಗಿಸಿದ್ದು, ಗ್ರಾಮಾಂತರ ಪ್ರದೇಶದ ಜನರು ತಮ್ಮ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ತಾಲೂಕು ಕಚೇರಿ ಅಥವಾ ನಾಡ ಕಚೇರಿಗೆ ಹೋಗುವುದನ್ನು ತಪ್ಪಿಸಿದೆ ಎಂದು ಹೇಳಿದರು.
ಮೊಬೈಲ್ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ಬಿಎಸ್‍ಎನ್‍ಎಲ್ 112 ಸ್ಥಳಗಳಲ್ಲಿ ಹೆಚ್ಚು ವೇಗದ ಮೊಬೈಲ್ ನೆಟ್‍ವರ್ಕ್ ಕಲ್ಪಿಸಲು ಯೋಜನೆ ಮಾಡಿದೆ. ಈ ಪೈಕಿ 70 ಬೇಸ್ ಟ್ರಾನ್ಸಿವರ್ ಸ್ಟೇಷನ್‍ಗಳನ್ನು ಈಗಾಗಲೇ 3ಜಿಯಿಂದ 3.75ಜಿಗೆ ಮೇಲ್ದರ್ಜೆಗೇರಿಸಲಾಗಿದೆ.

ಪ್ರತಿ ಗ್ರಾಹಕರ ಮನೆ ಬಾಗಿಲಿಗೆ ಆಪ್ಟಿಕಲ್ ಫೈಬರ್ ಅನ್ನು ವಿಸ್ತರಿಸಲಾಗುವುದು. ಅದರಿಂದ ಹೆಚ್ಚಿನ ವೇಗದ ಇಂಟರ್‍ನೆಟ್ ಸೇರಿದಂತೆ ಯಾವುದೇ ಸೇವೆಯುವ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೀಡಲಾಗುತ್ತದೆ. ಇದೀಗ ಮೈಸೂರು ದೂರಸಂಪರ್ಕ ಜಿಲ್ಲೆಯು ಹೆಚ್ಚು ವೇಗದ ಇಂಟರ್‍ನೆಟ್ ಅಗತ್ಯವಿರುವ ಯಾವುದೇ ಗ್ರಾಹಕರಿಗೆ ಫೈಬರ್‍ಅನ್ನು ಮನೆಗೆ ಸಂಪರ್ಕಗಳನ್ನು ವಿಸ್ತರಿಸಲು ಸಿದ್ದವಾಗಿದೆ ಎಂದು ಹೇಳಿದರು.

ಮೈಸೂರು ಮತ್ತು ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಎಸ್‍ಎಸ್‍ಐಗಳು 10,000 ಚದರ ಕಿ.ಮೀ.ಗಳನ್ನು ಬಲಗೊಂಡಿದೆ. 139 ದೂರವಾಣ ವಿನಿಮಯ ಕೇಂದ್ರಗಳ ಮೂಲಕ ಸೇವೆ ಸಲ್ಲಿಸುತ್ತಿದೆ. 50,000 ಸ್ಥಿರ ದೂರವಾಣ ಗಳನ್ನು ಹಾಗೂ 18,000 ಬ್ರಾಡ್‍ಬ್ಯಾಂಡ್ ಮತ್ತು 6,500 ಆಪ್ಟಿಕಲ್ ಫೈಬರ್ ಗ್ರಾಹಕರಿದ್ದಾರೆ ಎಂದರು.
ಕರ್ನಾಟಕ ದೂರಸಂಪರ್ಕ ವಲಯವು 2017-18ರಲ್ಲಿ ಸುಮಾರು 2,000 ಕೋಟಿ ಆದಾಯವನ್ನು ಗಳಿಸಿದ್ದು, ದೇಶದಲ್ಲಿ ಇತರ ವಲಯಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ಗಳಿಕೆಯಾಗಿದೆ. 35 ಕೋಟಿಯಷ್ಟು ಮೌಲ್ಯ ವರ್ಧಿತ ಸೇವೆಯ ಆದಾಯದಲ್ಲಿಯೂ ಅತ್ಯುತ್ತಮವಾಗಿದೆ ಎಂಬ ಪ್ರಶಂಸೆಗೂ ಪಾತ್ರವಾಗಿದೆ ಎಂದು ತಿಳಿಸಿದರು.
ಕರ್ನಾಟಕ ದೂರಸಂಪರ್ಕ ವೃತ್ತ ಸೇವೆಗಳೂ 347 ನಗರ, ಪಟ್ಟಣಗಳು ಮತ್ತು 21,992 ಗ್ರಾಮಗಳಲ್ಲಿ ಹರಡಿದ್ದು, 10.5 ಲಕ್ಷ ಸ್ಥಿರ ದೂರವಾಣ ಸಂಪರ್ಕ ಮತ್ತು 3.2 ಬ್ರಾಡ್‍ಬ್ಯಾಂಡ್ ಹಾಗೂ 72 ಲಕ್ಷ ಮೊಬೈಲ್ ಸಂಪರ್ಕಗಳನ್ನು ಹೊಂದಿದೆ ಎಂದು ವಿವರಿಸಿದರು.

Translate »