ಮೈಸೂರು

ನಂಜನಗೂಡಿನಲ್ಲಿ ಬಸವ ಬಳಗ ಒಕ್ಕೂಟದಿಂದ ಜಗಜ್ಯೋತಿ ಬಸವ ಜಯಂತಿ ಆಚರಣೆ
ಮೈಸೂರು

ನಂಜನಗೂಡಿನಲ್ಲಿ ಬಸವ ಬಳಗ ಒಕ್ಕೂಟದಿಂದ ಜಗಜ್ಯೋತಿ ಬಸವ ಜಯಂತಿ ಆಚರಣೆ

April 19, 2018

ನಂಜನಗೂಡು:  ತಾಲೂಕಿನ ಬಸವ ಬಳಗ ಒಕ್ಕೂಟದ ವತಿಯಿಂದ ಇಂದು ಬೆಳಿಗ್ಗೆ ವಿಶ್ವಗುರು ಬಸವಣ್ಣನವರ 885ನೇ ಜಯಂತಿಯ ಪ್ರಯುಕ್ತ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಹಾಗೂ ಕಾಲ್ನಡಿಗೆ ಜಾಥಾ ನಡೆಯಿತು. ನಂತರ ಪ್ರಮುಖರು ಮಾತನಾಡಿ, 12ನೇ ಶತಮಾನದಲ್ಲಿ ಸಾಮಾನ್ಯರಾಗಿ ಹುಟ್ಟಿ, ಅಸಾಮಾನ್ಯರಾಗಿ ಬೆಳೆದು, ಕ್ರಾಂತಿ ಪುರುಷನಾಗಿ ಕಂಗೊಳಿಸಿ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳೆದ ಮಹಾ ಚೇತನ ಬಸವಣ್ಣನವರು ಕಂಡ ವರ್ಗ ರಹಿತ, ವರ್ಣ ರಹಿತ, ಜಾತಿ ರಹಿತ, ಧಾರ್ಮಿಕ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವಾಗಿದೆ ಎಂದರು. ಮೆರವಣಿಗೆ…

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ
ಮೈಸೂರು

ನೀತಿ ಸಂಹಿತೆ ನಡುವೆಯೂ ಕಾಮಗಾರಿ ಆರಂಭ

April 19, 2018

ಹುಣಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಸರ್ಕಾರಿ ಕಾಮಗಾರಿ ಆರಂಭಿಸಲಾಗಿದೆ. ಪಟ್ಟಣದ ಎಪಿಎಂಸಿ ಯಾರ್ಡ್‍ನ ಜಿ–ಬ್ಲಾಕ್‍ನಲ್ಲಿ ಪ್ರಾಂಗಣ ವಿಸ್ತರಣಾ ಕಾಮಗಾರಿಗೆ ಮಂಡ್ಯದ ಮುರಳೀಧರ್ ಎಂಬುವವರಿಗೆ 2017-18ನೇ ಸಾಲಿನಲ್ಲಿ ಟೆಂಡರ್ ನೀಡಲಾಗಿತ್ತು. ಆದರೆ ಕಾಮಗಾರಿ ಯನ್ನು ಏ.16ರಂದು ಆರಂ ಭಿಸಿದ್ದಾರೆ. ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋ ಪಿಸಿದ್ದಾರೆ. ಮಾ.27 ರಿಂದಲೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ಸಹ ಕಾರ್ಮಿಕರು ಕೆಲಸದಲ್ಲಿ ಕಾರ್ಯನಿರತರಾಗಿದ್ದು, ಸ್ಥಳದಲ್ಲಿ ಕಬ್ಬಿಣ,…

ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಸಾವು
ಮೈಸೂರು

ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಸಾವು

April 19, 2018

ಹೆಚ್.ಡಿ.ಕೋಟೆ:  ಕೊಳವೆ ಬಾವಿಯ ಕಬ್ಬಿಣ ಪೈಪ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಎಲೆಕ್ಟ್ರೀಷಿಯನ್  ಮೃತಪಟ್ಟಿರುವ ಘಟನೆ ಸಂಭವಿಸಿದೆ. ತಾಲೂಕಿನ ಜಿಯಾರ ಗ್ರಾಮದ ಸೋಮಶೆಟ್ಟಿ ಪುತ್ರ ಸತೀಶ್(37) ಮೃತಪಟ್ಟವರು. ಗ್ರಾಮದಲ್ಲಿ ಶುಂಠಿ ಜಮೀನೊದರಲ್ಲಿ ಕೊಳವೆ ಬಾವಿ ಮೋಟಾರು ಕೆಟ್ಟು ಹೋಗಿತ್ತು. ಇದನ್ನು ಸರಿಪಡಿಸಲು ಪೈಪ್‍ಗಳನ್ನು ಹೊರ ತೆಗೆಯುವಾಗ ಸಮೀಪದಲ್ಲಿಯೇ ಇದ್ದ 11 ಕೆವಿ ವಿದ್ಯುತ್‍ಗೆ ಆಕಸ್ಮಿಕವಾಗಿ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ ಗಾಯತ್ರಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು…

ಎಲೈಟ್ ಮಿಸೆಸ್ ಇಂಡಿಯಾ 2018 ಸ್ಪರ್ಧೆ
ಮೈಸೂರು

ಎಲೈಟ್ ಮಿಸೆಸ್ ಇಂಡಿಯಾ 2018 ಸ್ಪರ್ಧೆ

April 19, 2018

ಮೈಸೂರು: ಮಿಸೆಸ್ ಯೂನಿವರ್ಸಿಟಿ ಪ್ರೈ.ಲಿ. ವತಿಯಿಂದ ಏಪ್ರಿಲ್ 22 ರಂದು ಎಲೈಟ್ ಮಿಸೆಸ್ ಇಂಡಿಯಾ2018 ಸ್ಪರ್ಧೆಗೆ ಆಡಿಷನ್ ಹಮ್ಮಿ ಕೊಳ್ಳಲಾಗಿದೆ. 21ರಿಂದ 49 ವರ್ಷದ ವಿವಾಹಿತ ಮಹಿಳೆಯರು ಭಾಗವಹಿಸ ಬಹುದಾಗಿದೆ. ಹೋಟೆಲ್ ಫಾರ್ಚೂನ್ ಜೆ.ಪಿ.ಪ್ಯಾಲೇಸ್, ನಜರ್‍ಬಾದ್ ಮೈಸೂರು ಇಲ್ಲಿ 9.30ರಿಂದ 12.30ರವರೆಗೆ ಆಡಿಷನ್ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (ಖುಷಿ) 990108855, 9945002300 ಸಂಪರ್ಕಿಸಬಹುದು.  

ಬೇಸಿಗೆ ಶಿಬಿರ
ಮೈಸೂರು

ಬೇಸಿಗೆ ಶಿಬಿರ

April 19, 2018

ಮೈಸೂರು: ಮೈಸೂರಿನ ಸಿಎಸ್‍ಐ ಹಾಡ್ರ್ವಿಕ್ ಎಜುಕೇಷನಲ್ ವಿದ್ಯಾಸಂಸ್ಥೆ ಮತ್ತು ಅರೋರ ಎಜುಕೇಷನಲ್ ಟ್ರಸ್ಟ್ ಸಹಯೋಗದೊಂದಿಗೆ ಏ. 20 ರಿಂದ ಮೇ 20 ರವರೆಗೆ ಮಕ್ಕಳಿಗಾಗಿ ಒಂದು ತಿಂಗಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಚಿತ್ರಕಲೆ, ಪೇಯಿಂಟಿಂಗ್, ಸಂಗೀತ, ಕ್ಲೇವರ್ಕ್, ಯೋಗಾಸನ, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗು ವುದು. ಮಾಹಿತಿಗೆ ಮೊ. 9449680130, 9886896300 ಸಂಪರ್ಕಿಸಬಹುದು.

ಮಹಿಳೆಯರಿಗೆ ಉದ್ಯೋಗವಕಾಶ: ಬಿಜೆಪಿ ಅಭ್ಯರ್ಥಿ ಎಸ್. ಶಂಕರ್
ಮೈಸೂರು

ಮಹಿಳೆಯರಿಗೆ ಉದ್ಯೋಗವಕಾಶ: ಬಿಜೆಪಿ ಅಭ್ಯರ್ಥಿ ಎಸ್. ಶಂಕರ್

April 19, 2018

ತಿ.ನರಸೀಪುರ: ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಬನ್ನೂರು ಪಟ್ಟಣದಲ್ಲಿ ಗಾರ್ಮೆಂಟ್ಸ್ ಆರಂಭಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು. ತಾಲ್ಲೂಕಿನ ಬನ್ನೂರು ಪಟ್ಟಣದ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತ ನಾಡಿ, ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಆರ್ಥಿಕ ಸದೃಢತೆಯನ್ನು ಸಾಧಿಸುತ್ತಿರುವ ಮಹಿಳೆಯರು ಮತ್ತಷ್ಟು ಸಬಲತೆಯನ್ನು ಸಾಧಿಸಲು ಪೂರಕವಾಗಿ ಬನ್ನೂರು ಪಟ್ಟಣದಲ್ಲಿ ಗಾರ್ಮೇಂಟ್ಸ್ ಆರಂಭಿಸ ಬೇಕೆಂಬ ಚಿಂತನೆಯನ್ನು ನಡೆಸ ಲಾಗಿದೆ ಎಂದರು. ಕಳೆದೊಂದು ದಶಕ ದಿಂದಲೂ ಕ್ಷೇತ್ರದ ಶಾಸಕರಾಗಿದ್ದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಬನ್ನೂರು…

ಹಲವು ಮುಖಂಡರು ಜೆಡಿಎಸ್ ಸೇರ್ಪಡೆ
ಮೈಸೂರು

ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

April 19, 2018

ತಿ.ನರಸೀಪುರ: ಮೂಗೂರು ಹೋಬಳಿ ಭಾಗದ ವೀರಶೈವ ಲಿಂಗಾಯತ ಸಮುದಾಯ ಈ ಬಾರಿ ಜಾತ್ಯಾ ತೀತ ಜನತಾದಳ ಪಕ್ಷವನ್ನು ಬೆಂಬಲಿಸುವ ಸಾಧ್ಯತೆಗಳಿದ್ದು, ಚುನಾವಣೆಯಲ್ಲಿ ಜೆಡಿಎಸ್ ಜಯಬೇರಿ ಭಾರಿಸುವುದು ಬಹುತೇಕ ಖಚಿತ ಎಂದು ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ಜೆಡಿಎಸ್ ಕಛೇರಿ ಆವರಣ ದಲ್ಲಿ ವಿವಿಧ ಗ್ರಾಮಗಳ ವೀರಶೈವ ಲಿಂಗಾಯತ ಸಮುದಾಯದ ನೂರಾರು ಯುವಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿ ಸುತ್ತಿದ್ದ ಮೂಗೂರು ಹೋಬಳಿಯ ವೀರಶೈವ ಲಿಂಗಾಯತರು ಈಗ ಜೆಡಿಎಸ್‍ನತ್ತ ಒಲವು…

ಏ. 20 ರಂದು ಚಿಕ್ಕಣ್ಣ ನಾಮಪತ್ರ ಸಲ್ಲಿಕೆ
ಮೈಸೂರು

ಏ. 20 ರಂದು ಚಿಕ್ಕಣ್ಣ ನಾಮಪತ್ರ ಸಲ್ಲಿಕೆ

April 19, 2018

ಹೆಚ್.ಡಿ. ಕೋಟೆ:  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ. ಕೋಟೆ ಕ್ಷೇತ್ರದಿಂದ ಏ. 20 ರಂದು ಜೆಡಿಎಸ್ ಅಭ್ಯರ್ಥಿಯಾಗಿ ಬೀಚನಹಳ್ಳಿ ಚಿಕ್ಕಣ್ಣ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಪಟ್ಟಣದ ಪತ್ರಕರ್ತರ ಭವನದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿಕ್ಕಣ್ಣ ಅವರು ಮಾತನಾಡಿ, ಅಂದು ಪಟ್ಟಣದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೇಟಿಕುಪ್ಪೆ ರಸ್ತೆಯಿಂದ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮಿನಿ ವಿಧಾನಸೌಧದಲ್ಲಿ ಮಧ್ಯಾಹ್ನ 1.30 ರಿಂದ 2.45 ರೊಳಗಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದರು. ತಾಲೂಕಿನ ಬಿಎಸ್‍ಪಿ ಕಾರ್ಯಕರ್ತರು, ಮುಖಂಡರು,…

ಮತದಾರರಿಗೆ ಆಮಿಷಗಳನ್ನೊಡ್ಡುತ್ತಿರುವ ಕಾಂಗ್ರೆಸ್: ಶಾಸಕ ಸಾ.ರಾ. ಮಹೇಶ್ ಆರೋಪ
ಮೈಸೂರು

ಮತದಾರರಿಗೆ ಆಮಿಷಗಳನ್ನೊಡ್ಡುತ್ತಿರುವ ಕಾಂಗ್ರೆಸ್: ಶಾಸಕ ಸಾ.ರಾ. ಮಹೇಶ್ ಆರೋಪ

April 19, 2018

ಕೆ.ಆರ್.ನಗರ: ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ರಾಜ್ಯದ  ಅಭಿವೃದ್ಧಿಗಾಗಿ ಈ ಬಾರಿ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕಿದ್ದು, ರಾಜ್ಯಾದ್ಯಂತ ಜನತೆಯ ಭಾವನೆಯು ಸಹ ಇದೇ ಆಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದವರು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಯೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ…

ವಿಷ ಸೇವಿಸಿ ಯುವಕ ಆತ್ಮಹತ್ಯೆ
ಮೈಸೂರು

ವಿಷ ಸೇವಿಸಿ ಯುವಕ ಆತ್ಮಹತ್ಯೆ

April 19, 2018

ಹುಣಸೂರು: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಶಿವಪುರ ಗ್ರಾಮದ ಲೇ. ಸ್ವಾಮಿಗೌಡರ ಪುತ್ರ ಸಾಗರ್ (19) ಆತ್ಮಹತ್ಯೆ ಮಾಡಿಕೊಂಡವನು. ಈತ ಗ್ರಾಮದಿಂದ ಹುಣಸೂರಿಗೆ ಬರುವ ಮಾರ್ಗ ಮಧ್ಯೆ ದಾಸನಪುರದ ಬಳಿ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದನು. ಇದನ್ನು ಕಂಡ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

1 1,589 1,590 1,591 1,592
Translate »