ಮೈಸೂರು

ವ್ಯಕ್ತಿ ಹತ್ಯೆ ಯತ್ನ: ಆರೋಪಿಗೆ 4 ವರ್ಷ ಜೈಲು ಶಿಕ್ಷೆ
ಮೈಸೂರು

ವ್ಯಕ್ತಿ ಹತ್ಯೆ ಯತ್ನ: ಆರೋಪಿಗೆ 4 ವರ್ಷ ಜೈಲು ಶಿಕ್ಷೆ

May 26, 2018

ಮೈಸೂರು:  ಹಳೇ ವೈಷ್ಯಮ್ಯದಿಂದ ವ್ಯಕ್ತಿಯನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗೆ, ಮೈಸೂರಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಎಸ್. ಸುಧೀಂದ್ರನಾಥ್ ಅವರು, 4 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಕೆ.ಆರ್.ನಗರ ತಾಲೂಕಿನ ಬಸವಪುರ ಗ್ರಾಮದ ಹೇಮಚಂದ್ರ ಅಲಿಯಾಸ್ ಬಿ.ಎಲ್.ಚಂದ್ರು(47)ಗೆ ಶಿಕ್ಷೆ ವಿಧಿಸಲಾಗಿದೆ. ಈತ ನಾಲ್ಕು ವರ್ಷಗಳ ಹಿಂದೆ ವಿರೂ ಪಾಕ್ಷ ಅವರ ಮೇಲೆ ಹಲ್ಲೆ ಮಾಡಿ, ಹತ್ಯೆಗೆ ಯತ್ನಿಸಿದ್ದ. ಆರೋಪಿ ಹೇಮಚಂದ್ರ ಹಾಗೂ ವಿರೂಪಾಕ್ಷ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಇದನ್ನೇ…

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 4 ಬೈಕ್ ವಶ
ಮೈಸೂರು

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 4 ಬೈಕ್ ವಶ

May 26, 2018

ಮೈಸೂರು:  ಮೈಸೂರಿನ ದೇವರಾಜ ಠಾಣೆ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳ ರನ್ನು ಬಂಧಿಸಿ, ಸುಮಾರು 3.50 ಲಕ್ಷ ಮೌಲ್ಯದ 4 ಬೈಕ್ ಗಳನ್ನು ವಶಪಡಿಸಿಕೊಂಡಿ ದ್ದಾರೆ. ರಾಜೀವ್‍ನಗರ 1ನೇ ಹಂತದ ತನ್ವೀರ್‍ಸೇಠ್ ಬ್ಲಾಕ್ ನಿವಾಸಿ ಮಹಮದ್ ಸಲ್ಮಾನ್ ರಾಜಾ (23) ಹಾಗೂ ಶಾಂತಿನಗರದ ನಿವಾಸಿ ಜಮೀರ್ ಪಾಷಾ(38) ಬಂಧಿತ ಆರೋಪಿಗಳು. ಮಹಮದ್ ಸಲ್ಮಾನ್ ಹಾಗೂ ಜಮೀರ್ ಪಾಷಾ, ಕಳವು ಮಾಡಿದ್ದ ರಾಯಲ್ ಎನ್‍ಫೀಲ್ಡ್ ಬುಲೆಟ್‍ನಲ್ಲಿ ಇಂದು ಬಿಎನ್ ಸ್ಟ್ರೀಟ್‍ನಲ್ಲಿ ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದರು. ಈ ಸಂದರ್ಭದಲ್ಲಿ…

ಮೈಸೂರು ವಿವಿ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ವಿವಿ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ಸ್ವೀಕಾರ

May 26, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಟಿ.ಕೆ.ಉಮೇಶ್, ಇಂದು ಸಂಜೆ ಅಧಿಕಾರ ವಹಿಸಿಕೊಂಡರು. ರಾಜ್ಯಪಾಲರ ಕಚೇರಿಯಿಂದ ಪ್ರೊ. ಉಮೇಶ್ ಅವರ ನೇಮಕಾತಿ ಆದೇಶ ಇಂದು ಸಂಜೆ ಬಂದ ಹಿನ್ನೆಲೆಯಲ್ಲಿ 4ನೇ ಹಂಗಾಮಿ ಕುಲಪತಿಯಾಗಿದ್ದ ಪ್ರೊ. ನಿಂಗಮ್ಮ ಸಿ.ಬೆಟ್ಸೂರ್ ಅವರಿಂದ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ವಹಿಸಿಕೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಡೀನ್ ಆಗಿರುವ ಪ್ರೊ. ಉಮೇಶ್ ಅಧಿಕಾರಾವಧಿ ಸೆಪ್ಟೆಂಬರ್ 21ಕ್ಕೆ ಮುಗಿಯಲಿದ್ದು, ಅಷ್ಟರೊಳಗಾಗಿ ಖಾಯಂ ಕುಲಪತಿಗಳ ನೇಮಕವಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ….

ಕುಮಾರಸ್ವಾಮಿಗೆ ಇಂದು ಅಗ್ನಿ ಪರೀಕ್ಷೆ ಶುಕ್ರವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ
ಮೈಸೂರು

ಕುಮಾರಸ್ವಾಮಿಗೆ ಇಂದು ಅಗ್ನಿ ಪರೀಕ್ಷೆ ಶುಕ್ರವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ

May 25, 2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನಾಳೆ ವಿಧಾನಸಭೆಯಲ್ಲಿ ಅಗ್ನಿ ಪರೀಕ್ಷೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ನಾಯಕರಾಗಿ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಸದ್ಯಕ್ಕೆ ಕುಮಾರಸ್ವಾಮಿ ಮ್ಯಾಜಿಕ್ ಸಂಖ್ಯೆ ಮುಟ್ಟಲು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ವ್ಯತ್ಯಾಸವಾದರೆ ರಾಜ್ಯದ ಜನತೆ ಮತ್ತೊಮ್ಮೆ ಚುನಾವಣೆ ಎದುರು ನೋಡಬೇಕಾಗುತ್ತದೆ. ಈಗಾಗಲೇ ಅತೀ ಹೆಚ್ಚು ಸ್ಥಾನ ಹೊಂದಿದ್ದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ನಂತರ ವಿಧಾನಸಭೆಯಲ್ಲಿ ಬಹುಮತ ಪಡೆಯಲು ವಿಫಲವಾಗಿರು ವುದರಿಂದ ಅವರಿಗೆ ಮತ್ತೆ…

ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ
ಮೈಸೂರು

ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ

May 25, 2018

ಶುಲ್ಕ ವಸೂಲಿ ನಿಷೇಧಿಸಿದ್ದ ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಮೈಸೂರು: ಮಾಲ್‍ಗಳು ಮತ್ತು ವಾಣ ಜ್ಯ ಕಾಂಪ್ಲೆಕ್ಸ್ ಗಳಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವಂತಿಲ್ಲ ಎಂಬ ಮೈಸೂರು ಮಹಾ ನಗರ ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪರಿಣಾಮ ಮೈಸೂರಿನ ಬಹುತೇಕ ಮಾಲ್‍ಗಳು, ವಾಣ ಜ್ಯ ಸಂಕೀರ್ಣಗಳಲ್ಲಿ ಗ್ರಾಹಕರ ವಾಹನ ನಿಲುಗಡೆಗೆ ಶುಲ್ಕ ವಸೂಲಿ ಮಾಡುತ್ತಿದ್ದು, ತಾನು ನೀಡಿದ್ದ ಆದೇಶ ಅನುಷ್ಠಾನಗೊಳಿಸುವಲ್ಲಿ ಪಾಲಿಕೆಯು ವಿಫಲವಾಗಿದೆ ಎಂಬ ಆರೋಪ ಸಾರ್ವ ಜನಿಕರಿಂದ ಕೇಳಿಬರುತ್ತಿದೆ. 2017ರ ನವೆಂಬರ್ 27ರಂದು…

ಬೆಂಗಳೂರು  ಆರ್ ಆರ್ ನಗರ ಅಭ್ಯರ್ಥಿ ಆಯ್ಕೆ ಮೈತ್ರಿ ಮಾತುಕತೆ ವಿಫಲ
ಮೈಸೂರು

ಬೆಂಗಳೂರು ಆರ್ ಆರ್ ನಗರ ಅಭ್ಯರ್ಥಿ ಆಯ್ಕೆ ಮೈತ್ರಿ ಮಾತುಕತೆ ವಿಫಲ

May 25, 2018

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ( ಆರ್ ಆರ್ ನಗರ) ನಗರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ವಿಫಲವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಮಾಜಿ ಸಚಿವ ಡಿ.ಕೆ. ಶಿವ ಕುಮಾರ್ ಮತ್ತು ಉಭಯ ಪಕ್ಷಗಳ ಅಭ್ಯರ್ಥಿಗಳ ಸಭೆ ಇಂದು ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ನಡೆದಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಹಾಲಿ ಶಾಸಕರಾಗಿದ್ದ ಮುನಿರತ್ನ ಮತ್ತು ಜೆಡಿಎಸ್ ಅಭ್ಯರ್ಥಿ ನಟಿ ಅಮೂಲ್ಯ ಮಾವ ರಾಮಚಂದ್ರಪ್ಪ ಸ್ಪರ್ಧಿಸುತ್ತಿದ್ದಾರೆ. ಮೇ 28ರಂದು ಚುನಾವಣೆ…

ಕಾಂಗ್ರೆಸ್‍ನಿಂದ ರಮೇಶ್ ಕುಮಾರ್, ಬಿಜೆಪಿಯಿಂದ ಸುರೇಶ್‍ಕುಮಾರ್ ಸ್ಪರ್ಧೆ
ಮೈಸೂರು

ಕಾಂಗ್ರೆಸ್‍ನಿಂದ ರಮೇಶ್ ಕುಮಾರ್, ಬಿಜೆಪಿಯಿಂದ ಸುರೇಶ್‍ಕುಮಾರ್ ಸ್ಪರ್ಧೆ

May 25, 2018

ಬೆಂಗಳೂರು: ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಮಾಜಿ ಸಚಿವ ರಮೇಶ್‍ಕುಮಾರ್, ಬಿಜೆಪಿಯ ಹಿರಿಯ ಸದಸ್ಯ ಸುರೇಶ್ ಕುಮಾರ್ ಪೈಪೋಟಿ ನಡೆಸಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕಡೇ ದಿನವಾದ ಇಂದು ಕಾಂಗ್ರೆಸ್, ಬಿಜೆಪಿಯ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡು ವುದಕ್ಕೂ ಮುನ್ನವೇ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ರಮೇಶ್‍ಕುಮಾರ್ ಕಣಕ್ಕಿಳಿದಿರುವುದರಿಂದ ಅವರ ಆಯ್ಕೆ ಬಹುತೇಕ ಖಚಿತ. ವಿಧಾನಸಭೆಯಲ್ಲಿ…

ನಿಫಾ ಭೀತಿ: ಉತ್ತರ ಕೇರಳದತ್ತ ಸುಳಿಯದಂತೆ ರಾಜ್ಯ ಪ್ರವಾಸಿಗರಿಗೆ ಎಚ್ಚರಿಕೆ
ಮೈಸೂರು

ನಿಫಾ ಭೀತಿ: ಉತ್ತರ ಕೇರಳದತ್ತ ಸುಳಿಯದಂತೆ ರಾಜ್ಯ ಪ್ರವಾಸಿಗರಿಗೆ ಎಚ್ಚರಿಕೆ

May 25, 2018

ಬೆಂಗಳೂರು: ಉತ್ತರ ಕೇರಳದಲ್ಲಿ ನಿಫಾ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆ ಭಾಗಕ್ಕೆ ಪ್ರವಾಸಿಗರು ತೆರಳದಂತೆ ಸರ್ಕಾರ ಎಚ್ಚರಿಸಿದೆ. ಕೇರಳದ ಕಣ್ಣೂರು, ವಯನಾಡು, ಕೋಳಿಕ್ಕೋಡ್, ಮಲಪ್ಪುರಂನಲ್ಲಿ ನಿಫಾ ವೈರಸ್ ಹರಡಿರುವ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ಸೂಚನೆ ನೀಡಿದೆ. ನಿಫಾ ವೈರಸ್‍ಗೆ ಸಂಬಂಧಿಸಿದಂತೆ ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ. ನಿಫಾ ಪತ್ತೆಗಾಗಿ ರಾಜ್ಯ ಆರೋಗ್ಯ ಇಲಾಖೆ ರಚಿಸಿದ್ದ ಕ್ಷಿಪ್ರ ಪರಿಶೀಲನಾ…

ವಿಧಾನಸಭೆ ವಿಪಕ್ಷ ನಾಯಕ ಯಡಿಯೂರಪ್ಪ
ಮೈಸೂರು

ವಿಧಾನಸಭೆ ವಿಪಕ್ಷ ನಾಯಕ ಯಡಿಯೂರಪ್ಪ

May 25, 2018

ಬೆಂಗಳೂರು: ವಿಧಾನ ಸಭೆ ವಿಪಕ್ಷ ನಾಯಕ ರಾಗಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬಿ.ಎಸ್.ಯಡಿ ಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಶಾಸ ಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ವಿಪಕ್ಷದ ಮುಖ್ಯ ಸಚೇತಕರಾಗಿ ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೇ ನಾಳೆ (ಮೇ 25) ನಡೆಯಲಿರುವ ವಿಶ್ವಾಸ ಮತದ ಯಾಚನೆ ವೇಳೆ ವಿಶ್ವಾಸಮತದ ವಿರುದ್ಧ…

ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು  ಬಂದ ಪರಮೇಶ್ವರ್ ಗೆ  ಸಭಾಪತಿ ಶಾಕ್!
ಮೈಸೂರು

ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು  ಬಂದ ಪರಮೇಶ್ವರ್ ಗೆ ಸಭಾಪತಿ ಶಾಕ್!

May 25, 2018

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹೋದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಗೆ ಸಭಾ ಪತಿ ಡಿ.ಹೆಚ್.ಶಂಕರಮೂರ್ತಿ ಶಾಕ್ ನೀಡಿದ್ದಾರೆ. ನಿಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಕಳುಹಿಸಿದ್ದಾರೆ. ಹೌದು, ವಿಧಾನಸೌಧದಲ್ಲಿ ರುವ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರ ಮೇಶ್ವರ್ ಭೇಟಿ ನೀಡಿದರು. ಕೊರಟ ಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಯಾದ ಹಿನ್ನೆಲೆ ವಿಧಾನ ಪರಿ ಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ…

1 1,590 1,591 1,592 1,593 1,594 1,611
Translate »