ಮೈಸೂರು ವಿವಿ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ವಿವಿ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ಸ್ವೀಕಾರ

May 26, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಟಿ.ಕೆ.ಉಮೇಶ್, ಇಂದು ಸಂಜೆ ಅಧಿಕಾರ ವಹಿಸಿಕೊಂಡರು.

ರಾಜ್ಯಪಾಲರ ಕಚೇರಿಯಿಂದ ಪ್ರೊ. ಉಮೇಶ್ ಅವರ ನೇಮಕಾತಿ ಆದೇಶ ಇಂದು ಸಂಜೆ ಬಂದ ಹಿನ್ನೆಲೆಯಲ್ಲಿ 4ನೇ ಹಂಗಾಮಿ ಕುಲಪತಿಯಾಗಿದ್ದ ಪ್ರೊ. ನಿಂಗಮ್ಮ ಸಿ.ಬೆಟ್ಸೂರ್ ಅವರಿಂದ 5ನೇ ಹಂಗಾಮಿ ಕುಲಪತಿಯಾಗಿ ಪ್ರೊ. ಉಮೇಶ್ ಅಧಿಕಾರ ವಹಿಸಿಕೊಂಡರು.

ಮೈಸೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಡೀನ್ ಆಗಿರುವ ಪ್ರೊ. ಉಮೇಶ್ ಅಧಿಕಾರಾವಧಿ ಸೆಪ್ಟೆಂಬರ್ 21ಕ್ಕೆ ಮುಗಿಯಲಿದ್ದು, ಅಷ್ಟರೊಳಗಾಗಿ ಖಾಯಂ ಕುಲಪತಿಗಳ ನೇಮಕವಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ.

ಹಂಗಾಮಿ ಕುಲಪತಿಗಳ ಹುದ್ದೆಗೆ ಪ್ರೊ. ಉಮೇಶ್ ಜೊತೆಗೆ ವಾಣ ಜ್ಯ ವಿಭಾಗದ ಪ್ರೊ. ಆಯಿಷಾ, ಕಾನೂನು ವಿಭಾಗದ ಪ್ರೊ. ಸಿ.ಬಸವರಾಜು, ಕಲಾ ನಿಕಾಯದ ಪ್ರೊ. ಮಹದೇವ್ ಹಾಗೂ ಶಿಕ್ಷಣ ನಿಕಾಯದ ಪ್ರೊ. ಮತ್ತಿ ಅಳಗನ್ ಹೆಸರನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು.

ಐವರು ಡೀನ್‍ಗಳ ಪೈಕಿ ಪ್ರೊ. ಉಮೇಶ್, ಅತ್ಯಂತ ಹಿರಿಯರಾದ ಕಾರಣ ಹಂಗಾಮಿ ಕುಲಪತಿಯಾಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಯೂನಿವರ್ಸಿಟಿಯ ಘನತೆ, ಗೌರವ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ಕಾನೂನಿನಡಿ, ನಿಯಮ ಉಲ್ಲಂಘನೆಯಾಗದಂತೆ ಕೆಲಸ ಮಾಡುತ್ತೇನೆ ಎಂದರು.

ಶೈಕ್ಷಣ ಕ, ಸಂಶೋಧನಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬೋಧನಾ ಹಾಗೂ ಬೋಧನೇತರ ಅಧಿಕಾರಿಗಳು, ಸಿಬ್ಬಂದಿಯ ಸಹಕಾರದೊಂದಿಗೆ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ತಾವು ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆಂದು ಪ್ರೊ. ಉಮೇಶ್ ಪ್ರತಿಕ್ರಿಯಿಸಿದರು.

Translate »