ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಸಂಪನ್ನ ಕಾವೇರಿ ಸನ್ನಿಧಿಯಲ್ಲಿ ಮತ್ತೊಂದು ಸುಬ್ರಮಣ್ಯ ಗುಡಿ ನಿರ್ಮಾಣಕ್ಕೆ ಸೂಚನೆ
ಕೊಡಗು

ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಸಂಪನ್ನ ಕಾವೇರಿ ಸನ್ನಿಧಿಯಲ್ಲಿ ಮತ್ತೊಂದು ಸುಬ್ರಮಣ್ಯ ಗುಡಿ ನಿರ್ಮಾಣಕ್ಕೆ ಸೂಚನೆ

May 26, 2018

ಮಡಿಕೇರಿ: ತಲಕಾವೇರಿ ಸನ್ನಿಧಿಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಅಷ್ಟಮಂಗಲ ಪ್ರಶ್ನೋತ್ತರ ವಿಧಿವಿಧಾನಗಳು ಸಂಪನ್ನಗೊಂಡಿದೆ.

ಐದನೇ ದಿನ ನಡೆದ ಅಷ್ಟಮಂಗಲ ಪ್ರಶ್ನೋತ್ತರದಲ್ಲಿ ಕನ್ನಿಕೆ ಹೊಳೆ ಮತ್ತು ಕೆರೆಯನ್ನು ಸಂಪೂರ್ಣವಾಗಿ ಶುದ್ಧಿಕರಿಸ ಬೇಕೆಂಬುದು ಕಂಡುಬಂತು. ಮಾತ್ರವ ಲ್ಲದೇ ತಲಕಾವೇರಿ ಸನ್ನಿಧಿಯ ನಾಲ್ಕು ದಿಕ್ಕುಗಳಲ್ಲಿ ಹಲವು ದೇವನೆಲೆಗಳಿದ್ದು, ಅವುಗಳನ್ನು ಶೋಧಿಸಬೇಕೆಂಬುದು ಪ್ರಶ್ನೆ ಯಲ್ಲಿ ಗೋಚರವಾಗಿದೆ. ಕಾವೇರಿ ಸನ್ನಿಧಿ ಯಲ್ಲಿ ಮತ್ತೊಂದು ಸುಬ್ರಹ್ಮಣ್ಯ ಗುಡಿ ಯನ್ನು ನಿರ್ಮಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ತಲಕಾವೇರಿ ಯಲ್ಲಿ ಮತ್ತೊಂದು ದೇವಿಯ ಸನ್ನಿಧಿಯು ಇದ್ದು, ಆ ಸ್ಥಾನ ಕೂಡ ಪತ್ತೆಯಾಗ ಬೇಕೆಂದು ದೈವಜ್ಞರು ಅಷ್ಟಮಂಗಲ ಪ್ರಶ್ನೆ ಯಲ್ಲಿ ಉಲ್ಲೇಖಿಸಿದ್ದಾರೆ.

ಬ್ರಹ್ಮಗಿರಿ ಶಿಖರ ಏರುವುದನ್ನು ನಿರ್ಬಂಧಿ ಸದಿದ್ದಲ್ಲಿ ಪುಣ್ಯಫಲಗಳು ದೂರಾಗಲಿವೆ ಎಂಬ ಎಚ್ಚರಿಕೆಯು ಪ್ರಶ್ನೆಯಲ್ಲಿ ಗೋಚ ರಿಸಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಸಪ್ತ ಋಷಿ ಗಳು ತಪಸ್ಸು ಮಾಡಿದ ಸ್ಥಳದಲ್ಲಿ ಒಟ್ಟು ಏಳು ಕುಂಡಿಕೆಗಳಿದ್ದವು ಆದರೆ ಈಗ ಕೇವಲ ಒಂದು ಕುಂಡಿಕೆ ಮಾತ್ರವೇ ಇದೆ, ಹೀಗಾಗಿ ಅವುಗಳನ್ನು ಕೂಡಾ ಶೋಧಿಸಿ ಸಂರಕ್ಷಿಸ ಬೇಕೆಂಬ ಅಂಶಗಳು ಅಷ್ಟಮಂಗಲ ಪ್ರಶ್ನೆ ಯಲ್ಲಿ ಗೋಚರಿಸಿದೆ. ಅಷ್ಟಮಂಗಲದಲ್ಲಿ ಕಂಡುಬಂದದ್ದು.

ಕಾವೇರಿಯ ಉಗಮ ಸ್ಥಳ ತಲಕಾವೇರಿ -ಭಾಗಮಂಡಲ ಕ್ಷೇತ್ರಗಳನ್ನು ತೀರ್ಥ ಕ್ಷೇತ್ರಗಳ ಪಾವಿತ್ರ್ಯದಿಂದಲೇ ಉಳಿಸಿಕೊಳ್ಳ ಬೇಕಿದ್ದು, ಯಾವುದೇ ರೀತಿಯಲ್ಲಿ ಪ್ರವಾಸಿ ತಾಣವೆಂದು ಪರಿಗಣ ಸದಂತೆ, ದೈವಜ್ಞರು ಅಷ್ಟಮಂಗಲ ಪ್ರಶ್ನೆ ವೇಳೆ ಸ್ಪಷ್ಟವಾಗಿ ಹೇಳಿ ದ್ದಾರೆ. ಕ್ಷೇತ್ರದ ಅಭಿವೃದ್ಧಿ ಸಂದರ್ಭ ನಾಗನೆಲೆಯ ಸ್ಥಾನಪಲ್ಲಟದೊಂದಿಗೆ ಹುತ್ತ ನಾಶಗೊಂಡಿದ್ದು, ಮುಖ್ಯವಾಗಿ ಸನ್ನಿಧಿಯ ಪಾವಿತ್ರ್ಯ ನೆಲೆಯಾಗಿದ್ದ ಸ್ಥಳದಿಂದ ಐದು ವೃಕ್ಷಗಳನ್ನು ನಾಶಗೊಳಿಸಲಾಗಿದೆ ಎಂಬ ದೋಷಫಲ ಗೋಚರಿಸಿದೆ. ಪರಿಣಾಮ ಸಂಘರ್ಷ, ಕಲಹ ಇತ್ಯಾದಿ ನಿತ್ಯ ನಿರಂತರ ಸಂಭವಿಸುತ್ತಿದೆ ಎಂದು ದೈವಜ್ಞರು ಅಭಿ ಪ್ರಾಯಪಟ್ಟಿದ್ದಾರೆ.

ಹಿಂದೆ ಮಹಿಳೆಯೊಬ್ಬಳು ಪತಿಯನ್ನು ಕಟ್ಟಿಹಾಕಿ ಕೊಲೆಗೈಯ್ಯಲು ಪ್ರಚೋದಿಸಿರು ವುದು ಪ್ರಶ್ನೋತ್ತರದಲ್ಲಿ ಗೋಚರಿಸಿದೆ. ಪ್ರವಾಸಿಗರು ಅಸಭ್ಯರಾಗಿ, ಅಶ್ಲೀಲ ಉಡುಗೆ ಗಳಿಂದ ಬರುತ್ತಿರುವ ಹಿನ್ನೆಲೆ ನೈಜ ಭಕ್ತ ಭಾವನೆಗೂ ಧಕ್ಕೆ ಉಂಟಾಗುತ್ತಿದ್ದು, ಕ್ಷೇತ್ರದ ಪಾವಿತ್ರ್ಯ ಕಾಪಾಡಲು ಆಡಳಿತ ವ್ಯವಸ್ಥೆ ಅಗತ್ಯ ಗಮನಹರಿಸಬೇಕೆಂದು ಪ್ರಶ್ನೆಯಲ್ಲಿ ಗೋಚರಿಸಿದೆ.

ಬ್ರಹ್ಮಗಿರಿ ಬೆಟ್ಟದ ಪಾವಿತ್ರ್ಯ ಲೆಕ್ಕಿಸದೆ ಪ್ರವಾಸಿ ತಾಣದ ಭಾವನೆಯಿಂದ ಮೋಜು, ಮಸ್ತಿ ಗಾಗಿ ತೆರಳುವುದನ್ನು ಕಡ್ಡಾಯವಾಗಿ ನಿರ್ಬಂಧಿ ಸುವದರೊಂದಿಗೆ, ಸಾಧು ಸಂತರು, ಸಾಧ ಕರು, ಸದ್ಭಕ್ತ ಪುರುಷರು ಮಾತ್ರ ತೀರ್ಥ ಸ್ನಾನ ಮಾಡಿ ಕೇವಲ ತುಲಾ ಮಾಸದಲ್ಲಿ ತೆರಳಲು ಅವಕಾಶ ಮಾಡಿಕೊಡುವಂತೆ ದೈವಜ್ಞರು ನಿರ್ದೇಶಿಸಿದರು. ಈ ಸಂಬಂಧ ಸ್ಥಳೀಯರಲ್ಲಿ ಪರ-ವಿರೋಧದ ಬಗ್ಗೆ ದೇವಾಲಯ ಸಮಿತಿ ಸೂಕ್ತ ತಿಳುವಳಿಕೆ, ಸೂಚನಾ ಫಲಕಗಳನ್ನು ಅಳವಡಿಸುವಂತೆ ಅಭಿಪ್ರಾಯ ವ್ಯಕ್ತಗೊಂಡಿದೆ.

ಸರಕಾರದಿಂದ ಕ್ಷೇತ್ರದ ಅಭಿವೃದ್ಧಿ ಸಂದರ್ಭ ಜಲಮೂಲಕ್ಕೆ ಪೋಷಣೆ ನೀಡುತ್ತಿದ್ದ ಮರಗಳನ್ನು ತೆರವುಗೊಳಿಸಿ, ತೀರ್ಥ ಕುಂಡಿಕೆ ಬಳಿ ತಡೆಗೋಡೆ ನಿರ್ಮಾಣದಿಂದ ಜಲಮೂಲ ಸೆಲೆಗಳಲ್ಲಿ ವ್ಯತ್ಯಾಸವಾಗಿದೆ ಎಂಬ ಅಂಶವೂ ಪ್ರಶ್ನೆ ಯಿಂದ ಗೋಚರಿಸಿದೆ. ಕ್ಷೇತ್ರಕ್ಕೆ ಇತರ ದೈವ ನೆಲೆಗಳ ಸಂಬಂಧ, ಮಂಡೀರ, ಪಟ್ಟಮಾಡ ಹಾಗೂ ಮಣವಟ್ಟಿರ ಜೊತೆಗೆ ಈಗ ಇರುವ ಕೋಡಿ ಹಾಗೂ ಬಳ್ಳಡ್ಕ ಕುಟುಂಬಗಳ ಮುಂದಾಳತ್ವ ಅಷ್ಟಮಂಗಲದಲ್ಲಿ ಗೋಚರಿ ಸಿದೆ. ಪ್ರವಾಸಿಗರಿಂದ ಎದುರಾಗಿರುವ ಖಾಸಗಿ ವ್ಯವಹಾರಗಳು ಸುಂದರ ಪ್ರಾಕೃತಿಕ ತಾಣದ ಹಸಿರು ಬಿಸಿಲಿನಿಂದ ಒಣಗುವಂತಹ ಸ್ಥಿತಿ, ಸೂಕ್ತ ದೈವ ಪರಿಹಾರಗಳನ್ನು ವಿಧಿ ವಿಧಾನಗಳಿಂದ ನೆರವೇರಿಸದಿದ್ದರೆ ಜೀವ ನದಿ ಕಾವೇರಿಯು ಭವಿಷ್ಯದಲ್ಲಿ ಬರಡಾ ಗುವ ಸನ್ನಿವೇಶ ಎದುರಾಗುವ ಆತಂಕ ಪ್ರಶ್ನೆಯಿಂದ ಕಂಡು ಬಂತು.

ಕೊಡಗು ಸೇರಿದಂತೆ ದೇಶಕ್ಕೆ ಗಂಡಾಂ ತರ ತಪ್ಪಿಸಲು ಕ್ಷೇತ್ರ ತಂತ್ರಿಗಳ ಮಾರ್ಗದ ರ್ಶನದಂತೆ ಸೂಕ್ತ ದೇವತಾ ಕೈಂಕರ್ಯ ಗಳನ್ನು ಕೈಗೊಂಡು, ಜೀವನದಿ ಕಾವೇರಿ, ತೀರ್ಥ ಕ್ಷೇತ್ರ ಮತ್ತು ದೇವನೆಲೆಗಳ ಸುರ ಕ್ಷತಾ ಕ್ರಮಕ್ಕೆ ಮುಂದಾಗುವಂತೆಯೂ ದೈವಜ್ಞರಿಂದ ನಿರ್ದೇಶನ ಲಭಿಸಿದೆ.

ದೈವಜ್ಞರಾದ ನಾರಾಯಣ ಪೊದುವಾಳ್, ಚೋದ್ಯರಾದ ಉಪನ್ಯಾಸಕ ಶ್ಯಾಂ ಸುಂದರ್ ಶಾಸ್ತ್ರಿ ಸೇರಿದಂತೆ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಪಪ್ಪು ತಿಮ್ಮಯ್ಯ, ಎಸ್.ಎಸ್. ಸಂಪತ್ ಕುಮಾರ್, ಸೋಮಣ್ಣ, ಕೆ.ಪೊನ್ನಪ್ಪ, ಉಮೇಶ್ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದೇವಾಲಯ ಸಮಿತಿ ಪ್ರಮುಖರು, ಅರ್ಚಕ ಕುಟುಂಬ ಸೇರಿ ದಂತೆ ಜಿಲ್ಲೆಯ ವಿವಿದೆಢೆಗಳ ಭಕ್ತವೃಂದ ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Translate »