ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು  ಬಂದ ಪರಮೇಶ್ವರ್ ಗೆ  ಸಭಾಪತಿ ಶಾಕ್!
ಮೈಸೂರು

ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು  ಬಂದ ಪರಮೇಶ್ವರ್ ಗೆ ಸಭಾಪತಿ ಶಾಕ್!

May 25, 2018

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಹೋದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಗೆ ಸಭಾ ಪತಿ ಡಿ.ಹೆಚ್.ಶಂಕರಮೂರ್ತಿ ಶಾಕ್ ನೀಡಿದ್ದಾರೆ. ನಿಮ್ಮ ರಾಜೀನಾಮೆಯನ್ನು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಕಳುಹಿಸಿದ್ದಾರೆ. ಹೌದು, ವಿಧಾನಸೌಧದಲ್ಲಿ ರುವ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರ ಮೇಶ್ವರ್ ಭೇಟಿ ನೀಡಿದರು. ಕೊರಟ ಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಯಾದ ಹಿನ್ನೆಲೆ ವಿಧಾನ ಪರಿ ಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಆದರೆ ಪರಮೇಶ್ವರ್ ನೀಡಿದ ರಾಜೀನಾಮೆಯನ್ನು ಅಂಗೀಕಾರ ಮಾಡಲು ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸ್ಪಷ್ಟವಾಗಿ ನಿರಾಕರಿಸಿದರು. ನಿಮ್ಮ ರಾಜೀನಾಮೆ ಅಂಗೀ ಕಾರ ಸಾಧ್ಯವಿಲ್ಲ. ರಾಜೀನಾಮೆ ಪಡೆಯಲು ಬರುವುದಿಲ್ಲ ಎಂದು ಪರಮೇಶ್ವರ್ ಗೆ ಶಾಕ್ ನೀಡಿದರು. ಸಭಾಪತಿಗಳ ಶಾಕ್‍ಗೆ ಪರಮೇಶ್ವರ್ ಬೆಚ್ಚುತ್ತಿದ್ದಂತೆ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿ ಗೆಜೆಟ್ ನೋಟಿಫಿಕೇಶನ್ ಆದ ತಕ್ಷಣ ವಿಧಾನ ಪರಿಷತ್ ಸದಸ್ಯತ್ವ ತಾನಾಗಿಯೇ ಹೋಗುತ್ತದೆ. ಅವರು ಸದಸ್ಯರಾಗಿ ಉಳಿಯುವುದಿಲ್ಲ. ಹೀಗಾಗಿ ಸದಸ್ಯರಲ್ಲದವರ ರಾಜೀನಾಮೆ ಸ್ವೀಕರಿಸಲು ಬರುವುದಿಲ್ಲ ಎಂದು ಶಂಕರಮೂರ್ತಿ ಸಮಜಾಯಿಷಿ ನೀಡಿ ನೀವು ರಾಜೀನಾಮೆ ನೀಡುವ ಅಗತ್ಯವಿಲ್ಲ. ನಿಮ್ಮ ಪರಿಷತ್ ಸ್ಥಾನ ಈಗಾಗಲೇ ತೆರವಾಗಿದೆ ಎಂದು ಕಳುಹಿಸಿದರು.

Translate »