ಕುಮಾರಸ್ವಾಮಿಗೆ ಇಂದು ಅಗ್ನಿ ಪರೀಕ್ಷೆ ಶುಕ್ರವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ
ಮೈಸೂರು

ಕುಮಾರಸ್ವಾಮಿಗೆ ಇಂದು ಅಗ್ನಿ ಪರೀಕ್ಷೆ ಶುಕ್ರವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ

May 25, 2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನಾಳೆ ವಿಧಾನಸಭೆಯಲ್ಲಿ ಅಗ್ನಿ ಪರೀಕ್ಷೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ನಾಯಕರಾಗಿ ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
ಸದ್ಯಕ್ಕೆ ಕುಮಾರಸ್ವಾಮಿ ಮ್ಯಾಜಿಕ್ ಸಂಖ್ಯೆ ಮುಟ್ಟಲು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ವ್ಯತ್ಯಾಸವಾದರೆ ರಾಜ್ಯದ ಜನತೆ ಮತ್ತೊಮ್ಮೆ ಚುನಾವಣೆ ಎದುರು ನೋಡಬೇಕಾಗುತ್ತದೆ.

ಈಗಾಗಲೇ ಅತೀ ಹೆಚ್ಚು ಸ್ಥಾನ ಹೊಂದಿದ್ದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ನಂತರ ವಿಧಾನಸಭೆಯಲ್ಲಿ ಬಹುಮತ ಪಡೆಯಲು ವಿಫಲವಾಗಿರು ವುದರಿಂದ ಅವರಿಗೆ ಮತ್ತೆ ಆರು ತಿಂಗಳ ವರೆಗೆ ಹಕ್ಕೊತ್ತಾಯಿಸಲು ಅವಕಾಶವಿಲ್ಲ ದಿರುವುದರಿಂದ ವಿಧಾನಸಭೆ ವಿಸರ್ಜನೆ ಅನಿವಾರ್ಯವಾಗುತ್ತದೆ. ಮೈತ್ರಿ ಕೂಟದ ನಾಯಕರಾಗಿ ಗದ್ದುಗೆ ಏರಿರುವ ಕುಮಾರ ಸ್ವಾಮಿಗೆ 15 ದಿನದೊಳಗಾಗಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಜೂಭಾಯ್ ವಾಲಾ ಕಾಲಾವಕಾಶ ನೀಡಿ ದ್ದರು. ರಾಜ್ಯಪಾಲರು ನೀಡಿರುವ ಗಡುವಿ ನಲ್ಲಿ ವಿಶ್ವಾಸಮತ ಪಡೆಯುವ ಉದ್ದೇಶದಿಂದ ನಾಳೆ ಒಂದು ದಿನದ ಮಟ್ಟಿಗೆ ವಿಧಾನ ಸಭಾ ಅಧಿವೇಶನ ನಡೆಯಲಿದೆ. ಬೆಳಿಗ್ಗೆ 12.15ಕ್ಕೆ ಕಾರ್ಯಕಲಾಪ ಆರಂಭವಾಗಲಿದ್ದು, ಸದನ ಸೇರುತ್ತಿದ್ದಂತೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾ ವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕುಮಾರಸ್ವಾಮಿಯವರು ನೂತನ ಸಭಾ ಧ್ಯಕ್ಷರನ್ನು ಪೀಠಕ್ಕೆ ಕುಳ್ಳಿರಿಸಿ, ನಂತರ ವಿಶ್ವಾಸ ಮತ ಯಾಚಿಸಲಿದ್ದಾರೆ. ವಿಶ್ವಾಸಮತಕ್ಕೂ ಮುನ್ನ ರಾಜ್ಯದ ಜನತೆಯನ್ನುದ್ದೇಶಿಸಿ ಮಾತ ನಾಡುವುದರ

ಜೊತೆಗೆ ಪ್ರತಿಪಕ್ಷಗಳು ಮಾಡಿರುವ ಟೀಕೆಗೆ ಉತ್ತರ ನೀಡಲು ಇದೇ ವೇದಿಕೆಯನ್ನು ಬಳಸಿಕೊಳ್ಳಲಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 117 ಸದಸ್ಯರನ್ನು ಹೊಂದಿದ್ದು, ಕುಮಾರ ಸ್ವಾಮಿ ಬಹುಮತ ಸಾಬೀತುಪಡಿಸಲು ಕಷ್ಟವಾಗದು ಎಂದು ಭಾವಿಸಲಾಗಿದೆ. ವಿಧಾನಸಭೆಯ ಒಟ್ಟು 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಫಲಿತಾಂಶದ ನಂತರ ಎರಡು ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ ಕುಮಾರ ಸ್ವಾಮಿ ರಾಮನಗರ ಕ್ಷೇತ್ರವನ್ನು ತೆರವು ಗೊಳಿಸಿದ್ದಾರೆ. ಇದರಿಂದ ಬಹುಮತಕ್ಕೆ 110.30 ಅಂದರೆ, 111 ಮ್ಯಾಜಿಕ್ ಸಂಖ್ಯೆ ಮುಟ್ಟಿದರೆ

ಕುಮಾರಸ್ವಾಮಿ ಸುಲಭವಾಗಿ ವಿಶ್ವಾಸಮತ ಗಳಿಸಿದಂತಾಗುತ್ತದೆ. ಕಾಂಗ್ರೆಸ್ 78, ಬಿಎಸ್‍ಪಿ ಸೇರಿ ಜೆಡಿಎಸ್ 37, ಪಕ್ಷೇತರ ಇಬ್ಬರು ಶಾಸಕರು ಸೇರಿರುವುದರಿಂದ ಕುಮಾರಸ್ವಾಮಿ ಸುಲಭವಾಗಿ ವಿಶ್ವಾಸಮತ ಪಡೆದು, ಆರು ತಿಂಗಳ ಮಟ್ಟಿಗೆ ನಿರಾಳವಾಗಿ ಆಡಳಿತ ನಡೆಸಬಹುದಾಗಿದೆ. ಉಭಯ ಪಕ್ಷಗಳ ಶಾಸಕರು, ಆಪರೇಷನ್ ಕಮಲಕ್ಕೆ ತುತ್ತಾಗಬಾರದೆಂಬ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ತಮ್ಮ ತಮ್ಮ ಶಾಸಕರನ್ನು ಹೊಟೇಲ್ ಮತ್ತು ರೆಸಾರ್ಟ್‍ನಲ್ಲಿ ಹಿಡಿದಿಡಲಾಗಿದೆ.

ಹೊಟೇಲ್‍ನಲ್ಲಿ ತಂಗಿರುವ ಶಾಸಕರನ್ನು ನಾಳೆ ನೇರವಾಗಿ ವಿಧಾನಸಭೆಗೆ ಆಯಾ ಪಕ್ಷದ ಮುಖಂಡರು ಕರೆತರಲಿದ್ದಾರೆ. ವಿಧಾನಸಭಾಧ್ಯಕ್ಷರ ಚುನಾವಣೆ, ನಂತರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಹಿಡಿದಿಟ್ಟ ಶಾಸಕರಿಗೆ ಮುಕ್ತಿ ದೊರೆಯಲಿದೆ. ಚುನಾವಣಾ ಫಲಿತಾಂಶದ ನಂತರ ತಮ್ಮ ಕುಟುಂಬ ಮತ್ತು ಕ್ಷೇತ್ರದಿಂದ ದೂರವಿರುವ ಸದಸ್ಯರು ನಾಳೆ ಸಂಜೆಯಿಂದಲೇ ತಮ್ಮ ಕ್ಷೇತ್ರಗಳಿಗೆ ತೆರಳಬಹುದಾಗಿದೆ. ವಿಧಾನಸಭೆಯಲ್ಲಿ ಅತೀ ಹೆಚ್ಚು ಅಂದರೆ 104 ಸ್ಥಾನ ಪಡೆದ ಬಿಜೆಪಿಯ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಈ ಮೊದಲು ಅವಕಾಶ ನೀಡಿದ್ದರು. ಸುಪ್ರೀಂಕೋರ್ಟ್ ಆದೇಶದಂತೆ ಕಳೆದ ಶನಿವಾರ ವಿಧಾನಸಭೆಯಲ್ಲಿ ಯಡಿಯೂರಪ್ಪ ವಿಶ್ವಾಸಮತ ಪಡೆಯಲು ಮುಂದಾದರೂ, ಅವರಿಗೆ ಪೂರ್ಣ ಬಹುಮತ ದೊರೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ರಾಜೀನಾಮೆ ಅಂಗೀಕಾರ ವಾಗುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಾಯಕ ಕುಮಾರಸ್ವಾಮಿ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೆಂಗಳೂರಿನಲ್ಲಿದ್ದಾಗ ಸಿಎಂ ಕುಮಾರಸ್ವಾಮಿ ಬೆಳಿಗ್ಗೆ 10ರಿಂದ 11ರವರೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನಗರದಲ್ಲಿ ಇರುವ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆ ಯವರೆಗೆ ಜನತಾದರ್ಶನ ನಡೆಸಲಿ ದ್ದಾರೆ. ನಗರದ ಕೇಂದ್ರ ಭಾಗದಿಂದ ಅವರ ಸ್ವಂತ ನಿವಾಸ ದೂರ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಯಾಗಬಾರದೆಂಬ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಂಡಿದ್ದಾರೆ.

ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಇಚ್ಛಿಸುವವರು ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿಯಾಗಬಹುದಾಗಿದೆ. ಕುಮಾರ ಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿ ಯಾಗಿದ್ದಾಗ ಜನತಾ ದರ್ಶನವನ್ನು ಆರಂಭಿಸಿದ್ದರು. ಈಗ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇದನ್ನು ಮುಂದುವರಿಸಿದ್ದಾರೆ.

Translate »