ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ
ಮೈಸೂರು

ಮಾಲ್‍ಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ

May 25, 2018

ಶುಲ್ಕ ವಸೂಲಿ ನಿಷೇಧಿಸಿದ್ದ ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಮೈಸೂರು: ಮಾಲ್‍ಗಳು ಮತ್ತು ವಾಣ ಜ್ಯ ಕಾಂಪ್ಲೆಕ್ಸ್ ಗಳಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವಂತಿಲ್ಲ ಎಂಬ ಮೈಸೂರು ಮಹಾ ನಗರ ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪರಿಣಾಮ ಮೈಸೂರಿನ ಬಹುತೇಕ ಮಾಲ್‍ಗಳು, ವಾಣ ಜ್ಯ ಸಂಕೀರ್ಣಗಳಲ್ಲಿ ಗ್ರಾಹಕರ ವಾಹನ ನಿಲುಗಡೆಗೆ ಶುಲ್ಕ ವಸೂಲಿ ಮಾಡುತ್ತಿದ್ದು, ತಾನು ನೀಡಿದ್ದ ಆದೇಶ ಅನುಷ್ಠಾನಗೊಳಿಸುವಲ್ಲಿ ಪಾಲಿಕೆಯು ವಿಫಲವಾಗಿದೆ ಎಂಬ ಆರೋಪ ಸಾರ್ವ ಜನಿಕರಿಂದ ಕೇಳಿಬರುತ್ತಿದೆ. 2017ರ ನವೆಂಬರ್ 27ರಂದು ಪಾಲಿಕೆಯು ಆದೇಶ ಹೊರಡಿಸಿದ್ದು, ವಾಣ ಜ್ಯ ಸಂಕೀರ್ಣಗಳು, ಮಾಲ್‍ಗಳು ತಮ್ಮ ಗ್ರಾಹಕರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಹಾಗೂ ಶುಲ್ಕ ವಸೂಲಿ ಮಾಡಬಾರ ದೆಂದು ತಿಳಿಸಿತ್ತು. ಆದರೆ ಇದೀಗ ವಾಹನ ಸವಾರರಿಂದ ನಿಲುಗಡೆ ಶುಲ್ಕ ಸಂಗ್ರಹಿಸ ಲಾಗುತ್ತಿದೆ. ಪಾಲಿಕೆ ಆದೇಶಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ ನೀಡಿರುವುದರಿಂದ ತಾವು ಪಾರ್ಕಿಂಗ್ ಫೀ ವಸೂಲಿ ಮಾಡುತ್ತಿ ದ್ದೇವೆ ಎಂದು ಹಲವು ಮಾಲ್‍ಗಳ ವ್ಯವಸ್ಥಾಪಕರು

ಹೇಳುತ್ತಿದ್ದಾರೆ. ಅಲ್ಲದೆ ಮಾಲ್‍ಗಳ ಅಂಡರ್ ಗ್ರೌಂಡ್ ಪಾರ್ಕಿಂಗ್ ಸ್ಥಳದಲ್ಲಿ ಕೋರ್ಟ್ ತಡೆಯಾಜ್ಞೆ ಇರುವ ಕಾರಣ ವಾಹನಗಳ ನಿಲುಗಡೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ನೋಟೀಸ್ ಬೋರ್ಡ್‍ನಲ್ಲಿ ಹಾಕಲಾಗಿದ್ದು, ಪಾರ್ಕಿಂಗ್ ಶುಲ್ಕದ ದರವನ್ನು ಸಹ ಬರೆಯಲಾಗಿದೆ. ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳಬಾರದೆಂದು ಪಾಲಿಕೆ ಆದೇಶಿ ಸಿದ ನಂತರವೂ ಕೆಲವರು ಸಂಗ್ರಹಿಸುವುದನ್ನು ಮುಂದು ವರಿಸಿದ್ದರಿಂದ ಪಾಲಿಕೆಯು ಅವರಿಗೆ ನೋಟೀಸ್ ನೀಡಿ ಕಾನೂನು ಕ್ರಮ ವಹಿಸುವ ಎಚ್ಚರಿಕೆಯನ್ನು ನೀಡಿತ್ತು. ಬಿಎಂ ಹ್ಯಾಬಿಟೈಟ್ ಮಾಲ್ ಮತ್ತು ಮಾಲ್ ಆಫ್ ಮೈಸೂರ್‍ಗಳಲ್ಲಿ ಕಾರುಗಳಿಗೆ 1 ಗಂಟೆಗೆ 40 ರೂ., ದ್ವಿಚಕ್ರ ವಾಹನಗಳಿಗೆ 20 ರೂ. ಮತ್ತು ಹೆಚ್ಚುವರಿ ಪ್ರತಿ 1 ಗಂಟೆ ಅವಧಿಗೆ 10 ರೂ.ಗಳಂತೆ ವಾಹನ ನಿಲುಗಡೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಹಲವು ಗ್ರಾಹಕರು ‘ಮೈಸೂರು ಮಿತ್ರ’ನಿಗೆ ದೂರವಾಣ ಮೂಲಕ ತಿಳಿಸಿದ್ದಾರೆ.

ಮಾಲ್‍ಗಳಲ್ಲದೆ ಕೆಲ ಚಿತ್ರಮಂದಿರಗಳು, ಆಸ್ಪತ್ರೆಗಳಲ್ಲೂ ವಾಹನ ನಿಲುಗಡೆ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರಗಳೂ ಕೇಳಿಬರುತ್ತಿವೆ. ಫೋರಂ ಆಫ್ ಸಿಟಿ ಸೆಂಟ್ರಲ್ ಮಾಲ್‍ನಲ್ಲಿ ಮೊದಲ 1 ಗಂಟೆಗೆ ಉಚಿತ ಪಾರ್ಕಿಂಗ್ ನೀಡಿ, ನಂತರ ಪ್ರತೀ ಒಂದು ಗಂಟೆಗೆ ಕಾರುಗಳಿಗೆ 20 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 10 ರೂ. ಪಾರ್ಕಿಂಗ್ ಶುಲ್ಕ ಪಡೆಯ ಲಾಗುತ್ತಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಬಿಎಂ ಹ್ಯಾಬಿಟೈಟ್ ಮಾಲ್‍ನ ವ್ಯವಸ್ಥಾಪಕ ವಿನಯ್, ತಾವು ಪಾಲಿಕೆ ಆದೇಶಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದೇವೆ. ಆದ್ದರಿಂದ ಪಾರ್ಕಿಂಗ್ ಶುಲ್ಕ ಪಡೆಯುತ್ತಿದ್ದೇವೆ. ತಡೆಯಾಜ್ಞೆ ಪ್ರತಿಯನ್ನು ಪಾಲಿಕೆ ವಲಯ ಕಚೇರಿಗೆ ತಲುಪಿಸಿದ್ದೇವೆ ಎಂದಿದ್ದಾರೆ. ಮೈಸೂರು ನಗರದಲ್ಲಿರುವ ವಾಣ ಜ್ಯ ಸಂಕೀರ್ಣ, ಮಾಲ್‍ಗಳು ಸೇರಿದಂತೆ ವಾಣ ಜ್ಯ ಚಟುವಟಿಕೆ ನಡೆಸುವ ಪ್ರತಿಯೊಬ್ಬರೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬಾರದೆಂದು ಅದೇಶಿಸಲಾಗಿದೆ.

Translate »