ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 76ನೇ ಜನ್ಮದಿನ
ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 76ನೇ ಜನ್ಮದಿನ

May 27, 2018

ಪ್ರತ್ಯಕ್ಷ ಪಾದಪೂಜೆ, ಶ್ರೀಗಳ ಆಧ್ಯಾತ್ಮಿಕ ಚಿಂತನೆ, ಸಂಗೀತ, ಸೇವಾ ಕಾರ್ಯಗಳ ಗುಣಗಾನ ಮೈಸೂರು:  ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 76ನೇ ಜನ್ಮದಿನದ ಅಂಗವಾಗಿ ಶನಿವಾರ ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪಾದಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಅಪಾರ ಭಕ್ತ ಸಮೂಹದ ನಡುವೆ ವೈಭವದಿಂದ ನೆರವೇರಿತು. ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಸ್ವಾಮೀಜಿಯವರಿಗೆ ಆಶ್ರಮದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು. ಭಕ್ತ ಸಮೂಹದ…

ನಿಫಾ ಮಹಾ ಮಾರಿ ಭೀತಿ ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಮೈಸೂರು

ನಿಫಾ ಮಹಾ ಮಾರಿ ಭೀತಿ ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ

May 27, 2018

* ಪ್ರವೇಶ ದ್ವಾರ, ಮರಗಳಿಗೆ ಔಷಧಿ ಸಿಂಪಡಣೆ * ಮರಗಳಲ್ಲಿದ್ದ ಹಣ್ಣುಗಳ ತೆರವು ಮೈಸೂರು:  ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ರೋಗ ನಿಫಾ ವೈರಾಣು ಬರದಂತೆ ಮೈಸೂರು ಮೃಗಾಲಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮೃಗಾಲಯದ ಪ್ರವೇಶ ದ್ವಾರದಲ್ಲಿ ವೈರಾಣು ನಾಶ ಮಾಡುವ ಔಷಧಿ ಸಿಂಪಡಿಸಿರುವ ನೆಲಹಾಸು ಹಾಸಿರುವುದಲ್ಲದೆ, ಬಾವಲಿಗಳಿರುವ ಮರದ ಸುತ್ತಲೂ ಮುನ್ನೆಚ್ಚರಿಕಾ ಕ್ರಮವಾಗಿ ಔಷಧಿ ಸಿಂಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಲೇಷಿಯಾ ಹಾಗೂ ಕೇರಳದಲ್ಲಿ ಕಾಡುತ್ತಿರುವ ನಿಫಾ ಅಥವಾ ಬಾವಲಿ ಜ್ವರ ಹಲವಾರು ಅಮಾಯಕರನ್ನು ಬಲಿ…

ಸ್ನೇಹಿತನ ಬೆಂಕಿ ಹಚ್ಚಿ ಕೊಂದ ಹಂತಕನಿಗೆ ಜೀವಾವಧಿ ಶಿಕ್ಷೆ
ಮೈಸೂರು

ಸ್ನೇಹಿತನ ಬೆಂಕಿ ಹಚ್ಚಿ ಕೊಂದ ಹಂತಕನಿಗೆ ಜೀವಾವಧಿ ಶಿಕ್ಷೆ

May 27, 2018

ಮೈಸೂರು: ಕೊಠಡಿಯಲ್ಲಿ ಮಲಗಿದ್ದ ಸ್ನೇಹಿತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಹಂತಕನಿಗೆ ಮೈಸೂರಿನ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ.ಆನಂದಶೆಟ್ಟಿ ಅವರು ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ. ಹಂತಕ ಶಿವಕುಮಾರ್ ಶಿಕ್ಷೆಗೊಳಗಾದವನಾಗಿದ್ದು, ಈತ ತನ್ನ 6 ಸ್ನೇಹಿತರು ಮಲಗಿದ್ದ ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅವರಲ್ಲಿ ಓರ್ವ ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು. ವಿವರ: ಮೈಸೂರಿನ ಎಸ್.ಆರ್.ರಸ್ತೆಯಲ್ಲಿರುವ ಹೋಟೆಲ್‍ವೊಂದರಲ್ಲಿ ನೇಪಾಳದ ಶಿಲ್ಲಾಂಗ್‍ನ…

ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ
ಮೈಸೂರು

ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ

May 27, 2018

ಮೈಸೂರು:  ಇಬ್ಬರು ಹಲ್ಲೆಕೋರ ಸಹೋದರರಿಗೆ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಒಂದನೇ ಅಪರ ಜಿಲ್ಲಾ ಮತ್ತ ಸತ್ರ ನ್ಯಾಯಾಧೀಶರಾದ ಎಸ್.ಸುಧೀಂದ್ರನಾಥ್ ಅವರು ತೀರ್ಪು ನೀಡಿದ್ದಾರೆ. ನಂಜನಗೂಡು ತಾಲೂಕು ಕೆಂಪಿಸಿದ್ದನಹುಂಡಿ ಗ್ರಾಮದವರಾದ ಕೆ.ಜೆ.ಉಮೇಶ್ (19) ಮತ್ತು ಕೆ.ಜೆ.ನಾಗೇಶ್ (24) ಶಿಕ್ಷೆಗೆ ಗುರಿಯಾದವರಾಗಿದ್ದು, ಉಮೇಶ್‍ಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ಮತ್ತು ನಾಗೇಶ್‍ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ವಿವರ: ಶಿಕ್ಷೆಗೊಳಗಾದ ಸಹೋದರರು…

ಮಹಿಳಾ ಉದ್ಯಮ ಶೀಲತೆ ಜಾಗೃತಿ ಕಾರ್ಯಾಗಾರ
ಮೈಸೂರು

ಮಹಿಳಾ ಉದ್ಯಮ ಶೀಲತೆ ಜಾಗೃತಿ ಕಾರ್ಯಾಗಾರ

May 27, 2018

ಮೈಸೂರು: ಮಹಿಳಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಬಲೀಕರಣ (ವೈಬ್) ಸಂಘಟನೆ ವತಿಯಿಂದ ಮೇ 30ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಿಟಿಐ ಕಟ್ಟಡದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ `ಮಹಿಳಾ ಉದ್ಯಮಶೀಲತೆ’ ಜಾಗೃತಿ ಕಾರ್ಯಾಗಾರ ಆಯೋಜಿಸಲಾ ಗಿದ್ದು, ಮಹಿಳಾ ಉದ್ಯಮಿ ಗಳು ಪಾಲ್ಗೊಳ್ಳಬಹುದಾಗಿದೆ. ಆಸಕ್ತರು ಸುಧಾಮಣ (9448253129) ಅಥವಾ ಅನುಪಮಾ(984549338) ಅವರಿಗೆ ಕರೆ ಮಾಡಿ ನೋಂದಾವಣ ಮಾಡಿ ಕೊಳ್ಳುವಂತೆ ವೈಬ್ ಸಂಘಟನೆ ಅಧ್ಯಕ್ಷೆ ಗಾಯತ್ರಿ ಕೇಶವರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ವಿದ್ಯುತ್ ವ್ಯತ್ಯಯ

May 27, 2018

ಮೈಸೂರು: ನಿರ್ವಹಣಾ ಕಾರ್ಯ ನಿಮಿತ್ತ ಮೇ 28ರಂದು ದೇವೀರಮ್ಮನಹಳ್ಳಿ, ದೇವರಸನಹಳ್ಳಿ, ಕಳಲೆ, ನವಿಲೂರು, ಸಿಂಧುವಳ್ಳಿ, ಕೂಡ್ಲಾಪುರ, ಕಸುವಿನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ, ಮೇ 29ರಂದು ಹುರಾ, ಹಾಡ್ಯ, ಹಲ್ಲರೆ, ದೇವರಾಯಶೆಟ್ಟಿಪುರ, ಯಡಿಯಾಲ, ತುಂನೇರಳೆ, ಹೊಸಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ಕುಮಾರಸ್ವಾಮಿಗೆ ವಿಶ್ವಾಸ ಮತ
ಮೈಸೂರು

ಕುಮಾರಸ್ವಾಮಿಗೆ ವಿಶ್ವಾಸ ಮತ

May 26, 2018

ಬೆಂಗಳೂರು:  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿದರು. ಆರು ತಿಂಗಳ ಮಟ್ಟಿಗೆ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ರಾಜ್ಯಪಾಲರು, ಕುಮಾರಸ್ವಾಮಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ಮುಖ್ಯಮಂತ್ರಿಯವರ ವಿಶ್ವಾಸ ಮತ ಮಂಡನೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ತಮ್ಮ ಪಕ್ಷದ ಸದಸ್ಯರೊಟ್ಟಿಗೆ…

ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧ ಆಯ್ಕೆ
ಮೈಸೂರು

ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧ ಆಯ್ಕೆ

May 26, 2018

ಬೆಂಗಳೂರು: ಕಾಂಗ್ರೆಸ್‍ನ ರಮೇಶ್ ಕುಮಾರ್ ವಿಧಾನಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುರೇಶ್‍ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೇ ಕೈಬಿಟ್ಟಿದ್ದರಿಂದ ರಮೇಶ್‍ಕುಮಾರ್ ಎರಡನೇ ಬಾರಿಗೆ ವಿಧಾನಸಭಾಧ್ಯಕ್ಷರಾದರು. ವಿಧಾನಸಭೆ ಆರಂಭಗೊಳ್ಳುತ್ತಿದ್ದಂತೆ ಹಂಗಾಮಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಕೈಗೆತ್ತಿಕೊಳ್ಳುತ್ತಿದ್ದಂತೆ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದರು. ಸುನೀಲ್ ಕುಮಾರ್ ಅವರು, ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಸಮ್ಮತಿ ಇರುವುದಾಗಿ ಸುರೇಶ್ ಕುಮಾರ್ ಹಂಗಾಮಿ ಸ್ಪೀಕರ್…

ಡಿ.ಕೆ.ಶಿವಕುಮಾರ್ ಅವರೇ ದ್ರೋಹ ಮಾಡಿದ ವ್ಯಕ್ತಿ ಸಿಎಂ ಆಗಲು ಸಹಕಾರ ನೀಡಿ ಅಪರಾಧ ಮಾಡಿದ್ದೀರಿ…
ಮೈಸೂರು

ಡಿ.ಕೆ.ಶಿವಕುಮಾರ್ ಅವರೇ ದ್ರೋಹ ಮಾಡಿದ ವ್ಯಕ್ತಿ ಸಿಎಂ ಆಗಲು ಸಹಕಾರ ನೀಡಿ ಅಪರಾಧ ಮಾಡಿದ್ದೀರಿ…

May 26, 2018

ಖಳನಾಯಕ ನೀವೆ ಶಿವಕುಮಾರ್ ಅವರೇ… ಅಪ್ಪ-ಮಕ್ಕಳ ವಿರುದ್ಧವೇ ಇನ್ನು ಹೋರಾಟ ದುರ್ಯೋಧನ ಕುಮಾರಸ್ವಾಮಿ ಮನೆ ದೇವರು  ವಿನಾಶಕಾರನ ಬಾಯಲ್ಲಿ ವಿಕಾಸದ ಮಾತು ಕೊಳ್ಳಿದೆವ್ವ ಭಗವದ್ಗೀತೆ ಹೇಳಿದಂತೆ ಇದು ದಿನಗೂಲಿ ಸರ್ಕಾರ ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರೇ ನೀವು ಯಾರೂ ಮಾಡದ ಅಪರಾಧ ಮಾಡಿದ್ದೀರಿ. ದ್ರೋಹ ಮಾಡಿದ ವ್ಯಕ್ತಿ ಸಿಎಂ ಆಗಲು ನೀವು ಸಹಕಾರ ಮಾಡಿದ್ದೀರಿ. ಸಹಕಾರ ನೀಡಿ ಎಂದು ಆ ಕಡೆ ನನ್ನ ಸ್ನೇಹಿತರನ್ನು ಮನವಿ ಮಾಡಿದ್ದು ನಿಜ. ಆದರೆ ಕುಮಾರಸ್ವಾಮಿಯವರ ಮುಳುಗುವ ದೋಣಿ ಯಲ್ಲಿ ನೀವು ಮುಳುಗುವುದಕ್ಕೆ ಅಭ್ಯಂತರವಿಲ್ಲ…

ಜಮೀರ್ಗೆ ಕೈ ಕೊಟ್ರಿ, ಬಾಲಕೃಷ್ಣ, ಚಲುವರಾಯಸ್ವಾಮಿಗೆ ಕೈ ಕೊಟ್ರಿ…
ಮೈಸೂರು

ಜಮೀರ್ಗೆ ಕೈ ಕೊಟ್ರಿ, ಬಾಲಕೃಷ್ಣ, ಚಲುವರಾಯಸ್ವಾಮಿಗೆ ಕೈ ಕೊಟ್ರಿ…

May 26, 2018

ಬೆಂಗಳೂರು: ಗೌಡರ ಕುಟುಂಬದ ವಿರುದ್ಧ ಇದ್ದ ತಮ್ಮ ಕೋಪವನ್ನು ಯಡಿಯೂರಪ್ಪ ಮುಂದುವರಿಸಿ, “ಜಮೀರ್ಗೆ ಕೈ ಕೊಟ್ರಿ, ಬಾಲಕೃಷ್ಣ ಚಲುವರಾಯಸ್ವಾಮಿಗೆ ಕೈ ಕೊಟ್ರಿ. ಅಧಿಕಾರಕ್ಕೆ ನೀವು ಏನು ಬೇಕಾದ್ರೂ ಮಾಡುತ್ತೀರಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಡಿ.ಕೆ. ಶಿವಕುಮಾರ್ ಉದ್ದೇಶಿಸಿ ನೀವು ತುಂಬಾ ತಪ್ಪು ಮಾಡಿದ್ದೀರಿ, ನೀವು ಅನರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ನೀವು ಮುಂದೆ ಪಶ್ಚಾತ್ತಾಪ ಪಡುತ್ತೀರಿ ಎಂದರು. 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಸಮಯ ಬಂದಾಗ ನಿಮ್ಮ ಆಡಳಿತಾವಧಿಯಲ್ಲಿ…

1 1,587 1,588 1,589 1,590 1,591 1,611
Translate »