ಜಮೀರ್ಗೆ ಕೈ ಕೊಟ್ರಿ, ಬಾಲಕೃಷ್ಣ, ಚಲುವರಾಯಸ್ವಾಮಿಗೆ ಕೈ ಕೊಟ್ರಿ…
ಮೈಸೂರು

ಜಮೀರ್ಗೆ ಕೈ ಕೊಟ್ರಿ, ಬಾಲಕೃಷ್ಣ, ಚಲುವರಾಯಸ್ವಾಮಿಗೆ ಕೈ ಕೊಟ್ರಿ…

May 26, 2018

ಬೆಂಗಳೂರು: ಗೌಡರ ಕುಟುಂಬದ ವಿರುದ್ಧ ಇದ್ದ ತಮ್ಮ ಕೋಪವನ್ನು ಯಡಿಯೂರಪ್ಪ ಮುಂದುವರಿಸಿ, “ಜಮೀರ್ಗೆ ಕೈ ಕೊಟ್ರಿ, ಬಾಲಕೃಷ್ಣ ಚಲುವರಾಯಸ್ವಾಮಿಗೆ ಕೈ ಕೊಟ್ರಿ. ಅಧಿಕಾರಕ್ಕೆ ನೀವು ಏನು ಬೇಕಾದ್ರೂ ಮಾಡುತ್ತೀರಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಡಿ.ಕೆ. ಶಿವಕುಮಾರ್ ಉದ್ದೇಶಿಸಿ ನೀವು ತುಂಬಾ ತಪ್ಪು ಮಾಡಿದ್ದೀರಿ, ನೀವು ಅನರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ನೀವು ಮುಂದೆ ಪಶ್ಚಾತ್ತಾಪ ಪಡುತ್ತೀರಿ ಎಂದರು.

53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಸಮಯ ಬಂದಾಗ ನಿಮ್ಮ ಆಡಳಿತಾವಧಿಯಲ್ಲಿ ಹೇಗೆ ಲೂಟಿ ಆಯಿತು ಎನ್ನುವುದನ್ನು ಹೇಳುತ್ತೇನೆ. ನನ್ನ ಆರೋಪದ ಮೇಲೆ ಸತ್ಯವಿಲ್ಲದಿದ್ದರೆ ಅದನ್ನು ದಾಖಲೆಯಿಂದ ತೆಗೆಯಿಸಿ ಎಂದು ತಮ್ಮ ಆರೋಪಗಳನ್ನು ಯಡಿಯೂರಪ್ಪ ಸಮರ್ಥಿಸಿಕೊಂಡರು.

ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ಸಂಜೆಯೊಳಗೆ ನಿಮ್ಮ ಪ್ರಣಾಳಿಕೆಯಂತೆ ಸಾಲಾ ಮನ್ನಾ ಘೋಷಣೆ ಮಾಡದೇ ಇದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಸದನದಲ್ಲೇ ಘೋಷಿಸಿ ಯಡಿಯೂರಪ್ಪ ವಾಕ್ ಔಟ್ ಮಾಡಿದರು. ಬಿಜೆಪಿ ಸದಸ್ಯರು ಸಹ ಯಡಿಯೂರಪ್ಪ ಅವರನ್ನು ಹಿಂಬಾಲಿಸಿ, ಸಭಾತ್ಯಾಗ ಮಾಡಿದರು.

Translate »