ನಿಫಾ ವೈರಸ್; ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ, ಆತಂಕ ಬೇಡ
ಮೈಸೂರು

ನಿಫಾ ವೈರಸ್; ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ, ಆತಂಕ ಬೇಡ

May 26, 2018

ಮೈಸೂರು: ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾ ವೈರಸ್ ಬಗ್ಗೆ ಮೈಸೂರು ನಗರದ ಜನತೆ ಆತಂಕಪಡುವ ಅಗತ್ಯವಿಲ್ಲ. ಇದುವರೆಗೆ ನಿಫಾ ವೈರಸ್‍ನ ಯಾವೊಂದು ಪ್ರಕರಣವೂ ಕಂಡು ಬಂದಿಲ್ಲ. ಆದರೂ ಈ ಬಗ್ಗೆ ಮೈಸೂರು ನಗರಪಾಲಿಕೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಗುರುವಾರ ಸಂಜೆ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅಧ್ಯಕ್ಷತೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು, ಪಶುವೈದ್ಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು.

ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಫಾ ವೈರಸ್ ಮೈಸೂರು ನಗರದಲ್ಲಿ ಹರಡದಂತೆ ಕೈಗೊಳ್ಳಬಹುದಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೋಗಿಗಳಲ್ಲಿ ನಿಫಾ ಇರುವ ಬಗ್ಗೆ ಸಂಶಯ ವ್ಯಕ್ತವಾದರೆ ತಕ್ಷಣ ಅವರ ರಕ್ತವನ್ನು ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಈ ಬಗ್ಗೆ ಆರೋಗ್ಯ ಮತ್ತು ಪಶುವೈದ್ಯ ಅಧಿಕಾರಿಗಳು ಜನಜಾಗೃತಿ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ತಿಳಿಸಲಾಯಿತು ಎಂದು ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ತಿಳಿಸಿದ್ದಾರೆ.

ಸಭೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳಾದ ಡಾ.ನಾಗರಾಜು, ಡಾ.ತಬಸ್ಸಂ, ಪಶುವೈದ್ಯಾಧಿಕಾರಿ ಡಾ.ಸುರೇಶ್ ಸೇರಿದಂತೆ ಪರಿಸರ ಅಧಿಕಾರಿಗಳು ಇನ್ನಿತರರು ಭಾಗವಹಿಸಿದ್ದರು.

Translate »