ಡಾ.ಯತೀಂದ್ರಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಒತ್ತಾಯ
ಮೈಸೂರು

ಡಾ.ಯತೀಂದ್ರಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಒತ್ತಾಯ

May 26, 2018

ಮೈಸೂರು:  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿದವರಲ್ಲಿ ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರಿಗೆ ನೂತನ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ನೀಡಬೇಕೆಂದು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ಮನವಿ ಮಾಡಿದರು.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಡಾ. ಯತೀಂದ್ರ ಅವರು ಸ್ವತಃ ವೈದ್ಯರೂ ಆಗಿರುವುದರ ಜೊತೆಗೆ, ಜನಪರ ಕಾಳಜಿಯ ಕೆಲಸಗಳಲ್ಲಿ ತೊಡಗಿರುವವರೂ ಆಗಿರುವುದರಿಂದಾಗಿ, ಅವರಿಗೆ ಆ ಖಾತೆ ನೀಡಿದರೆ ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸಂಪುಟ ದಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಟಿ.ಕೆ.ಮಾಲೇಗೌಡ, ಪಿ. ನಂದ ಕುಮಾರ್. ಪಿ.ಗಿರೀಶ್, ಪ್ರಭುಸ್ವಾಮಿ, ದಾಸನೂರು ನಾಗೇಶ್, ಇತರರು ಇದ್ದರು.

Translate »