ಶ್ವಾನ ಸಂತತಿ ಉಳಿಸಲು ಬಿ.ವಿ.ಮಂಜುನಾಥ್ ಮನವಿ ಮೈಸೂರು,ಸೆ.16(ಆರ್‍ಕೆಬಿ)-ಕೊರೊನಾ ಮಹಾಮಾರಿಯ ಹಾವಳಿಯಿಂದ ಶ್ವಾನ ಗಳಿಗೆ ಸರಿಯಾದ ಪ್ರಮಾಣದಲ್ಲಿ ಲಸಿಕೆಗಳ ಪೂರೈಕೆಯಾಗದೇ ಇರು ವುದನ್ನು ಮನಗಂಡು ಮೈಸೂರು ಬ್ರೀಡರ್ಸ್ ವೆಲ್‍ಫೇರ್ ಅಸೋಸಿ ಯೇಷನ್ ವತಿಯಿಂದ ಸೆ.19ರ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಚಾಮುಂಡಿ ಪುರಂ ಪಶು ಆಸ್ಪತ್ರೆ ಆವರಣದಲ್ಲಿ ಶ್ವಾನಗಳಿಗೆ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಸೋಸಿಯೇಷನ್‍ನ ಗೌರವಾಧ್ಯಕ್ಷ ಬಿ.ಪಿ.ಮಂಜುನಾಥ್ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಮಾಣಿಕತೆ, ಪ್ರೀತಿ, ಶಿಸ್ತಿಗೆ ಹೆಸರಾದ ಶ್ವಾನಗಳು ಕುಟುಂಬ…
ಮೈಸೂರು ವಿವಿಯಲ್ಲಿ ನ್ಯಾಕ್ ತಂಡದ ಮೌಲ್ಯಮಾಪನ ಆರಂಭ
September 17, 2021ಮೈಸೂರು,ಸೆ.16(ಆರ್‍ಕೆ)-ನ್ಯಾಷನಲ್ ಅಕ್ರೆಡೇಷನ್ ಅಂಡ್ ಅಸೆಸ್‍ಮೆಂಟ್ ಕಮಿಟಿ (ಓಂಂಅ) ತಂಡದ ಅಧಿಕಾರಿಗಳು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ಕುರಿತಂತೆ ಅಸೆಸ್‍ಮೆಂಟ್ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಬುಧವಾರ ಮೈಸೂರಿಗೆ ಆಗಮಿಸಿರುವ 7 ಮಂದಿಯ ತಂಡ, ಬುಧವಾರ ಕ್ರಾಫರ್ಡ್ ಹಾಲ್‍ನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಮ್ಮಿಕೊಂಡಿ ರುವ ಪದವಿ, ಸ್ನಾತಕೋ ತ್ತರ ಪದವಿ ಪ್ರವೇಶ ಪ್ರಕ್ರಿಯೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಒದಗಿಸಿ ರುವ ಸೌಲಭ್ಯಗಳು, ಲ್ಯಾಬೊರೇಟರಿ, ಗ್ರಂಥಾ ಲಯ, ಡಿಜಿಟಲ್ ಲೈಬ್ರರಿ ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಎಲ್ಲಾ ವಿಭಾಗದ ಮುಖ್ಯಸ್ಥರು…
ಇಂದು ಬೃಹತ್ ಕೊರೊನಾ ಲಸಿಕಾ ಅಭಿಯಾನ
September 17, 2021ಮೈಸೂರು, ಸೆ.16(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ನಾಳೆ(ಸೆ.17) ನಡೆಯಲಿರುವ ಬೃಹತ್ ಕೊರೊನಾ ಲಸಿಕಾ ಅಭಿಯಾನ ವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ನಡೆಯಲಿರುವ ವಿಶೇಷ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿ, ಹೆಚ್ಚು ಮಂದಿಗೆ ಲಸಿಕೆ ನೀಡಬೇಕೆಂದು ಸಚಿವರು ತಿಳಿಸಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಶೇ.100 ರಷ್ಟು ಲಸಿಕೆ ನೀಡುವ ಗುರಿ ಹೊಂದಿದ್ದು, ಮೈಸೂರು ಜಿಲ್ಲೆಯಲ್ಲಿ…
ಕೆ.ಆರ್.ಆಸ್ಪತ್ರೆ ಕಾಂಪೌಂಡ್ ಎತ್ತರಿಸುವ ಕಾಮಗಾರಿ ಆರಂಭ
September 16, 2021ಮೈಸೂರು,ಸೆ.15(ಆರ್‍ಕೆ)-ರೋಗಿಗಳು, ಸಾರ್ವ ಜನಿಕರು, ವೈದ್ಯರು ಹಾಗೂ ಸಿಬ್ಬಂದಿಯ ಸುರಕ್ಷತೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆ ಕಾಂಪೌಂಡ್ ಎತ್ತರಿಸಲಾಗು ತ್ತಿದ್ದು, ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಗ್ರಿಲ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಪ್ರಸ್ತುತ ಕಾಂಪೌಂಡ್ ಗ್ರಿಲ್ 3 ಅಡಿ ಮಾತ್ರ ಇದ್ದು, ಖದೀಮರು ಅಲ್ಲಲ್ಲಿ ಗ್ರಿಲ್ ಕತ್ತರಿಸಿ ಹೊತ್ತೊಯ್ದಿರು ವುದರಿಂದ ಯಾರು ಬೇಕಾದರೂ ಎಲ್ಲೆಂದರಲ್ಲಿ ನುಸು ಳಲು ಅವಕಾಶವಾಗಿತ್ತು. ಅದರಿಂದ ಕಳ್ಳತನಗಳಾಗು ತ್ತಿದ್ದವು. ಹಾಗಾಗಿ ಆಸ್ಪತ್ರೆ ಭದ್ರತೆ ದೃಷ್ಟಿಯಿಂದ ಕಾಂಪೌಂಡ್ ಎತ್ತರಿಸಬೇಕೆಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು…
ಎನ್‍ಟಿಎಂ ಶಾಲೆ, ಶ್ರೀ ನಿರಂಜನ ಮಠ ಸಂರಕ್ಷಣೆಗೆ ಆಗ್ರಹಿಸಿ ಮೈಸೂರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
September 16, 2021ಮೈಸೂರು,ಸೆ.15(ಪಿಎಂ)-ಎನ್‍ಟಿಎಂ ಶಾಲೆ ಮತ್ತು ನಿರಂಜನ ಮಠ ಸಂರಕ್ಷಿಸಿ, ಅವುಗಳ ಅಸ್ಮಿತೆ ಉಳಿಸಬೇಕೆಂದು ಆಗ್ರ ಹಿಸಿ ಬುಧವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಹಾರಾಣಿ ಎನ್‍ಟಿಎಂ ಶಾಲೆ ಹೋರಾಟ ಒಕ್ಕೂಟ, ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಪ್ರತಿ ಭಟನಾ ಮೆರವಣಿಗೆಯಲ್ಲಿ ವಿವಿಧ ಸಂಘ ಟನೆಗಳು ಪಾಲ್ಗೊಂಡು ಬೆಂಬಲ ಸೂಚಿಸಿದವು. ಸ್ವಾಮಿ ವಿವೇಕಾನಂದರ ಮನವಿ ಮೇರೆಗೆ ಅಂದಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಯವರು 1881ರಲ್ಲೇ ಹೆಣ್ಣು ಮಕ್ಕಳ ಶಿಕ್ಷಣ ಕ್ಕಾಗಿ ಎನ್‍ಟಿಎಂ ಶಾಲೆ ಪ್ರಾರಂಭಿಸಿದರು….
ನಾಳೆ 1.25 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ
September 16, 2021ಮೈಸೂರು,ಸೆ.15-ಇದೇ ಸೆ.17ರಂದು ದೇಶಾ ದ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಈ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿ ಸಲು ಎಲ್ಲಾ ಅಧಿಕಾರಿಗಳು ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು. ಬಹಳ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಸಭೆ ನಡೆಸಿ, ಈ ಸೂಚನೆ ನೀಡಿದರು. ಸೆ.17ರಂದು ಮೈಸೂರು ಜಿಲ್ಲೆಗೆ 1.25 ಲಕ್ಷ ಲಸಿಕೆ ಹಾಕುವ ಗುರಿ ನೀಡಲಾಗಿದೆ….
ಪಂಚಮಸಾಲಿ ಹಾಗೂ ಇತರೆ ಪಂಗಡಕ್ಕೆ 2ಎ ಮೀಸಲಾತಿಗೆ ಮತ್ತೆ ಡಿಸಿಗೆ ಮನವಿ
September 16, 2021ಮೈಸೂರು, ಸೆ.15(ಎಸ್‍ಪಿಎನ್)- ಲಿಂಗಾಯತ ಪಂಚಮ ಸಾಲಿ ಹಾಗೂ ದೀಕ್ಷಾ ಪಂಚಮಸಾಲಿ, ಲಿಂಗಾಯತ ಗೌಡ, ಮಲೆಗೌಡ ಪಂಗಡಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಲಿಂಗಾ ಯತ ಗೌಡ ಮಹಾಸಭಾ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗ ಳೂರಿನವರೆಗೆ 23 ದಿನಗಳು ಬೃಹತ್ ರ್ಯಾಲಿ ಹಮ್ಮಿ ಕೊಂಡು 2ಎ ಮೀಸಲಾತಿಗೆ ಒತ್ತಾಯಿಸಲಾಗಿತ್ತು. ನಂತರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸದನದ ಒಳಗೂ ಈ…
ದೇವಾಲಯಗಳ ರಕ್ಷಣೆಗೆ ಮುಡಾ `ಶಾಶ್ವತ ಪರಿಹಾರ’
September 16, 2021ಮೈಸೂರು,ಸೆ.15(ಆರ್‍ಕೆ)-ದೇವಾಲಯಗಳನ್ನು ರಕ್ಷಿಸಿ ಕೊಳ್ಳಲು ಪರ್ಯಾಯ ಸೂತ್ರ ಕಂಡುಕೊಂಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಶಾಶ್ವತ ಪರಿಹಾರಕ್ಕೆ ಮುಂದಾಗಿದೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾ ಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರಿ ಜಾಗದಲ್ಲಿರುವ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮಗೊಳಿಸಲು ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ. ಸಕ್ರಮಗೊಳಿಸಲು ಸಾಧ್ಯವಾಗದಿದ್ದಲ್ಲಿ ದೇವಾಲಯ ಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿ, ಅದೂ ಅಸಾಧ್ಯ ವಾದರೆ ತೆರವುಗೊಳಿಸಿ ಎಂದು ನ್ಯಾಯಾಲಯವು ಸ್ಪಷ್ಟ ವಾಗಿ ನಿರ್ದೇಶನ ನೀಡಿದೆ. ಈ ದಿಸೆಯಲ್ಲಿ ಮುಡಾ…
ಧಾರ್ಮಿಕ ಕಟ್ಟಡಗಳ ತೆರವು; ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ
September 16, 2021ಮೈಸೂರು,ಸೆ.15(ಪಿಎಂ)- ಧಾರ್ಮಿಕ ಕಟ್ಟಡಗಳ ತೆರವು ಸಂಬಂಧ ಬಿಜೆಪಿ ಸರ್ಕಾರ ನಾಟಕವಾಡುತ್ತಿದೆ ಎಂದು ಆರೋಪಿಸಿ ಹಾಗೂ ಯಾವುದೇ ಧರ್ಮೀಯರ ಧಾರ್ಮಿಕ ನಿರ್ಮಾಣಗಳನ್ನು ತೆರವು ಗೊಳಿಸಬಾರದು ಎಂದು ಒತ್ತಾಯಿಸಿ ಕಾಂಗ್ರೆಸ್‍ನ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಬಿಜೆಪಿ ಸರ್ಕಾರ ಒಂದು ಕಡೆ ಧ್ವಂಸÀಕ್ಕೆ ಆದೇಶ ನೀಡಿ ಮತ್ತೊಂದೆಡೆ ತಡೆ ನೀಡುವ ಮೂಲಕ ಧರ್ಮ, ದೇವರ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡು ತ್ತಿದೆ ಎಂದು…
ಮಹಿಷಾ ದಸರಾ ವಿರೋಧಿಸಲು ಇವರ್ಯಾರು?
September 16, 2021ಮೈಸೂರು,ಸೆ.15(ಪಿಎಂ)-ಮಹಿಷಾ ದಸರಾ ಆಚರಣೆಗೆ ತಡೆ ಕೋರಿ ಬಿಜೆಪಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿ ಸಿದ ಹೋರಾಟಗಾರ ಪ.ಮಲ್ಲೇಶ್, ಹೀಗೆ ವಿರೋಧ ಮಾಡು ವುದು ಏಕೆ? ಮೈಸೂರು ಇವರ ಆಸ್ತಿಯೇ? ಎಂದು ಕಿಡಿಕಾರಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ದೇಶದ ಪ್ರತಿ ಪ್ರಜೆಗೆ ಒಂದು ಸಿದ್ಧಾಂತಕ್ಕೆ ಬದ್ಧವಾಗಿರುವ ಹಕ್ಕು ಇದ್ದೇ ಇರುತ್ತದೆ. ಮತ್ತೊಬ್ಬರು ಆ ಸಿದ್ಧಾಂತ ಒಪ್ಪದೇ ಇರಬಹುದು. ಅಹಿಂಸಾತ್ಮಕವಾಗಿ ಯಾರಿಗೂ ತೊಂದರೆ ಕೊಡದೇ ಆಚರಿಸಿದರೆ ಅದಕ್ಕೆ ವಿರೋಧ…










