ಮೈಸೂರು, ನ.30(ಆರ್‍ಕೆಬಿ)- ಹಿಂದೆ ಕುರುಬ ಎಂದು ಹೇಳಿಕೊಳ್ಳಲು ಭಯ ಮತ್ತು ನಾಚಿಕೆ ಪಡುವ ಕಾಲವಿತ್ತು. ಆದರೆ ಇಂದು ನಾನು ಕುರುಬ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಮಟ್ಟಕ್ಕೆ ಕುರುಬ ಸಮಾಜದಲ್ಲಿ ಜಾಗೃತಿ ಮೂಡಿದೆ. ಅದಕ್ಕೆ ಕಾರಣ ನನ್ನ ಹೋರಾಟ ಮತ್ತು ಸಂಘಟನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಕರ್ನಾ ಟಕ ರಾಜ್ಯ ಕುರುಬರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳು ಆಯೋಜಿ ಸಿದ್ದ 535ನೇ ಕನಕದಾಸರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 1988ರಲ್ಲಿ…
ಮೈಲ್ಯಾಕ್ ಉತ್ತೇಜನಕ್ಕೆ ಸರ್ಕಾರ ಬದ್ಧ
November 29, 2022ಮೈಸೂರು, ನ.28(ಎಸ್‍ಬಿಡಿ)- ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ಉತ್ತೇಜನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿ ದರು. ಮೈಸೂರಿನ ಕಲಾಮಂದಿರದಲ್ಲಿ ಸೋಮ ವಾರ ಆಯೋಜಿಸಲಾಗಿದ್ದ ಮೈಲ್ಯಾಕ್ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಮೂಲಕ ಮೈಸೂರು ರಾಜ ಸಂಸ್ಥಾನದ ಅಭಿವೃದ್ಧಿ ಕಾರ್ಯ ಗಳು ಹಾಗೂ ದಶಕಗಳ ಹಿಂದಿನ ಜನಜೀವನ ಸಂಬಂಧ ನೆನಪಿನ ಪುಟ ತಿರುವಿದಂತಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಅಂಡ್ ಡಿಟರ್ಜೆಂಟ್ ಸಂಸ್ಥೆಯಂತೆ ಪ್ರತಿಷ್ಠಿತ ಮೈಲ್ಯಾಕ್…
ಮೈಸೂರು ಮೆಡಿಕಲ್ ಕಾಲೇಜಲ್ಲಿ ಅಭಿವೃದ್ಧಿ ಪರ್ವ ಆರಂಭ: ಸಿಎಂ
November 29, 2022ಮೈಸೂರು, ನ.28(ಎಂಕೆ)- ಶತಮಾನದ ಅಂಚಿನಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಎಂಎಂಸಿಆರ್‍ಐ) ಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು, ‘ಆರ್ ಅಂಡ್ ಡಿ’(ಸಂಶೋಧನೆ ಮತ್ತು ಅಭಿವೃದ್ಧಿ)ಕೇಂದ್ರ ಸ್ಥಾಪನೆಗೆ ಅನುದಾನ ನೀಡ ಲಾಗುವುದು ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹೇಳಿದರು. ನಗರದ ಜೆ.ಕೆ.ಮೈದಾನದಲ್ಲಿರುವ ಎಂಎಂ ಸಿಆರ್‍ಐನ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ವಿವಿಧ ಕಾಮಗಾರಿಗಳು ಹಾಗೂ 10…
ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ದಿನೇಶ್‍ಕುಮಾರ್ ನಿಗೂಢ ಸಾವು
November 29, 2022ಮೈಸೂರು, ನ. 28(ಆರ್‍ಕೆ)-ಸೋಲಾರ್ ಎನರ್ಜಿ ಇಲಾಖೆ ಇಂಜಿನಿಯರ್ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿ ನಲ್ಲಿ ಸಂಭವಿಸಿದೆ. ಮೈಸೂರಿನ ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರ ಬಳಿ ನಿವಾಸಿ ಡಿ.ಕೆ. ದಿನೇಶ್ ಕುಮಾರ್(50) ಸಾವನ್ನಪ್ಪಿದವರು. ತೀವ್ರವಾಗಿ ಅಸ್ವಸ್ಥಗೊಂಡಿರುವ ಪತ್ನಿ ಶ್ರೀಮತಿ ಆಶಾ ಮತ್ತು 12 ವರ್ಷದ ಪುತ್ರನನ್ನು ಸುಯೋಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ಶ್ರೀರಂಗಪಟ್ಟಣ ತಾಲೂಕು, ದೊಡ್ಡಪಾಳ್ಯ ಗ್ರಾಮದವರಾದ ದಿನೇಶ್ ಕುಮಾರ್, ಬೆಂಗಳೂರಿನ ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಏಖಇಆಐ) ದಲ್ಲಿ ಯೋಜನಾ ನಿರ್ದೇಶಕರಾಗಿ ಸೇವೆ…
`ಆಧಾರ್’ ಆಧಾರವಾಗಬೇಕಿದ್ದರೆ ಕಾಲ ಕಾಲಕ್ಕೆ ನವೀಕರಿಸಿಕೊಳ್ಳಿ…
November 27, 2022ಸರ್ಕಾರದ ಹೊಸ ಹೊಸ ಯೋಜನೆಗಳ ಪ್ರಯೋಜನ ಪಡೆಯಲು ಇದು ಅನಿವಾರ್ಯ ಕನಿಷ್ಠ ೧೦ ವರ್ಷಕ್ಕೊಮ್ಮೆ ಸಮರ್ಪಕ ಮಾಹಿತಿಯೊಂದಿಗೆ ನವೀಕರಿಸಿಕೊಳ್ಳುವುದು ಅವಶ್ಯ ಬಿಟ್ಟು ಹೋದ ಇಲ್ಲವೇ ಹೊಸ ಮಾಹಿತಿ ಸೇರ್ಪಡೆಗೂ ಅವಕಾಶವಿದೆ ಮೈಸೂರು,ನ.೨೬(ಎಂಟಿವೈ)- ಹತ್ತು ವರ್ಷದ ಹಿಂದೆ ಪಡೆದ ಆಧಾರ್ ಕಾರ್ಡ್ ಪ್ರಸ್ತುತವಲ್ಲ. ಸರ್ಕಾರಗಳ ಆಯಾ ಕಾಲದ ಪ್ರಯೋ ಜನ ಪಡೆಯಬೇಕಿದ್ದರೆ ಹೊಂದಿರುವ ಅಗತ್ಯ ದಾಖಲೆ ನೀಡಿ, ಆಧಾರ್ ಕಾರ್ಡ್ ನವೀಕರಿಸಿಕೊಳ್ಳುವುದು ಅವಶ್ಯ. ಇದರ ಬಗ್ಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಸಲಹೆ ನೀಡಿದೆ. ಕೇಂದ್ರ ಹಾಗೂ…
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಿನ್ನೆಲೆ ಮೈಸೂರಲ್ಲಿ ಬಾಡಿಗೆದಾರರ ಮೇಲೆ ಪೊಲೀಸರ`ಸುರಕ್ಷಾ’ ಕಣ್ಣು
November 27, 2022ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ನಕಲಿ `ಆಧಾರ್’ ನೀಡಿ ಬಾಡಿಗೆ ಮನೆ ಪಡೆದ ಪರಿಣಾಮ ಇನ್ನು ಮುಂದೆ ಮನೆ ಬಾಡಿಗೆಗೆ ನೀಡುವವರು ಸಂಬAಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಲೇಬೇಕು ಸುರಕ್ಷಾ ನಮೂನೆ ಭರ್ತಿ ಮಾಡಿ ಆಧಾರ್, ಪಾನ್ ಕಾರ್ಡ್, ಡಿಎಲ್ ಇತರೆ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕು ಮೈಸೂರು, ನ.೨೬(ಎಸ್‌ಬಿಡಿ)- ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರಿಕ್ ನಕಲಿ ಆಧಾರ್ ಕಾರ್ಡ್ ನೀಡಿ ಮೈಸೂರಿನಲ್ಲಿ ನೆಲೆಸಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸರು ಬಾಡಿಗೆ ಮನೆಯಲ್ಲಿ ವಾಸವಿರುವವರ ಮಾಹಿತಿ ಪರಿಶೀಲನೆಗೆ…
`ಕೊಡವ ಲ್ಯಾಂಡ್’ ಬೇಡಿಕೆಗೆ ಕೋರ್ಟ್ ಮೊರೆ
November 27, 2022`ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣ ಯನ್ ಸ್ವಾಮಿ ಅಭಯ ಸ್ವಾಯತ್ತ ನಾಡು ಕೇಳಲು ಕೊಡವರಿಗೆ ಹಕ್ಕಿದೆ ಕೊಡವರ ಬೇಡಿಕೆ ಬಗ್ಗೆ ನಾನೇ ವಾದ ಮಂಡಿಸುವೆ ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಭಾರತೀಯರು ಕೊಡವರ ಪರ ಇದ್ದಾರೆ ಮಡಿಕೇರಿ, ನ.೨೬- ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುವು ದಾಗಿ ಘೋಷಿಸಿರುವ ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣ ಯನ್‌ಸ್ವಾಮಿ, ಕೊಡವರ…
ಚಿರತೆ ಬಂತು ಚಿರತೆ… ನೀರಾವರಿ, ಅರಣ್ಯ ಇಲಾಖೆ ಅಧಿಕಾರಿಗಳ ಚಿಂತೆ… ತಿಂಗಳಿAದ ಕೆಆರ್‌ಎಸ್ ಬೃಂದಾವನ ಬಂದ್
November 27, 2022ಸರ್ಕಾರದ ಬೊಕ್ಕಸಕ್ಕೆ ಕೋಟಿ ನಷ್ಟ, ವ್ಯಾಪಾರಿಗಳ ಬದುಕಿಗೆ ಕಲ್ಲು ಬಿತ್ತು ಬೋನಿಟ್ಟು ಚಿರತೆ ಬರಮಾಡಿಕೊಳ್ಳಲು ಕಾದಿರುವ ಅಧಿಕಾರಿ ವರ್ಗ ಚಿರತೆ ಹಿಡಿಯುವ ಬದಲು ಕಂಡ ಕಂಡ ಬೀದಿ ನಾಯಿ ಹಿಡಿಯುತ್ತಿರುವ ಅರಣ್ಯ ಅಧಿಕಾರಿಗಳು; ಸಾರ್ವಜನಿಕರ ಆಕ್ರೋಶ ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಅಧಿಕಾರಿಗಳ ವಿಫಲ ಶ್ರೀರಂಗಪಟ್ಟಣ, ನ. ೨೬ (ವಿನಯ್ ಕಾರೇಕುರ)- ಅರಮನೆ ನಗರಿ ಮೈಸೂರಿಗೆ ಭೇಟಿ ನೀಡುವ ದೇಶ-ವಿದೇಶದ ಪ್ರವಾಸಿಗರು ಶ್ರೀರಂಗಪಟ್ಟಣ ತಾಲೂಕಿ ನಲ್ಲಿರುವ ಕೆಆರ್‌ಎಸ್ ಬೃಂದಾವನಕ್ಕೆ ಭೇಟಿ ನೀಡು…
`ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ’ ವಿಶೇಷ ಕಾರ್ಯಕ್ರಮ
November 25, 2022ಮೈಸೂರು,ನ.24(ಪಿಎಂ)- ಜಿಲ್ಲೆಯ 85 ಸಾವಿರ ಯುವ ಮತದಾರರ ಪೈಕಿ ಕೇವಲ 17 ಸಾವಿರ ಮಂದಿ ಮಾತ್ರವೇ ಕರಡು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ಹಾಗಾಗಿ ಎಲ್ಲಾ ಅರ್ಹ ಯುವ ಮತದಾರರನ್ನು ನೋಂದಣಿ ಮಾಡಿಸುವ ಸಲುವಾಗಿ ಗುರುವಾರ ಜಿಲ್ಲೆಯಾದ್ಯಂತ ಎಲ್ಲಾ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ `ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ’ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ಆ ಮೂಲಕ ಆನ್‍ಲೈನ್‍ನಲ್ಲಿ ನೋಂದಣಿ ಪ್ರಕ್ರಿಯೆ ನಡೆಯಿತು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಈ ವಿಶೇಷ ಕಾರ್ಯಕ್ರಮಕ್ಕೆ…
ಮೈಸೂರಲ್ಲಿ ಇನ್ನು ಮುಂದೆ ವಾರಕ್ಕೆ ಮೂರು ದಿನ `ಡ್ರಂಕ್ ಅಂಡ್ ಡ್ರೈವ್’ ಕಾರ್ಯಾಚರಣೆ
November 25, 2022ಮೈಸೂರು, ನ.24(ಎಂಟಿವೈ)- ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಮೈಸೂರು ಸಂಚಾರ ಪೊಲೀಸರು, ಇನ್ನು ಮುಂದೆ ವಾರಕ್ಕೆ ಮೂರು ದಿನ `ಡ್ರಂಕ್ ಅಂಡ್ ಡ್ರೈವ್’ ತಪಾಸಣೆ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದಾರೆ. ಕೊರೊನಾ ಹಿನ್ನೆಲೆ ಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕುಡಿದು ವಾಹನ ಚಲಾ ಯಿಸುವವರಿಗೆ ಕಡಿವಾಣ ಹಾಕಲು ಕಾರ್ಯಾಚರಣೆ ನಡೆಸುತ್ತಿರ ಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಕೆಲವರು ಸಂಜೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು. ಇದರಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು….