ಮೈಸೂರು, ನ.24(ಎಂಕೆ)- ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿತ ‘ಟಿಪ್ಪು ನಿಜಕನಸುಗಳು’ ನಾಟಕದ ಮೂರನೇ ಪ್ರದರ್ಶನ ಪೊಲೀಸ್ ಭದ್ರತೆಯಲ್ಲಿ ನಡೆಯಿತು. ಕಿಕ್ಕಿರಿದು ತುಂಬಿದ್ದ ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ಮೊದಲ (ನ.20) ಹಾಗೂ ಎರಡನೇ(21) ಪ್ರದರ್ಶನ ದಂತೆಯೇ ಗುರುವಾರ 3ನೇ ಪ್ರದರ್ಶನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಟಿಪ್ಪು ನಿಜಕನಸುಗಳು’ ನಾಟಕ ಕೃತಿ ಮಾರಾಟಕ್ಕೆ ಮಾತ್ರ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆ ಯಾವುದೇ ಗೊಂದಲ ವಿಲ್ಲದೆ ನಾಟಕ ಪ್ರದರ್ಶನಗೊಂಡಿತು. ನಾಟಕ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸಿದ್ದ ನೂರಾರು ಮಂದಿ ರಂಗಭೂಮಿ ಅಭಿಮಾನಿಗಳು…
ನಾಲ್ವರು ಖದೀಮರ ಬಂಧನ: 20 ಲಕ್ಷ ರೂ. ಮೌಲ್ಯದ ಆಭರಣ ವಶ
November 25, 2022ಮೈಸೂರು, ನ.24(ಎಸ್‍ಬಿಡಿ)- ಮೈಸೂರಿನ ಸಿಸಿಬಿ ಪೊಲೀಸರು, ನಾಲ್ವರು ಖತರ್ನಾಕ್ ಕಳ್ಳರನ್ನು ಬಂಧಿಸಿ, 20.40 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಕ್ಕೆ ಸಿಸಿಬಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ ತಂಡ ನ.21ರಂದು ಓರ್ವ, ನ.16ರಂದು ಇಬ್ಬರು ಹಾಗೂ ಅ.25ರಂದು ಮತ್ತೋರ್ವ ಖದೀಮನನ್ನು ಬಂಧಿಸಿದ್ದು, ಈ ಮೂಲಕ ಹಲವು ಕಳ್ಳತನ ಪ್ರಕರಣಗಳನ್ನು ಬೇಧಿಸಿದೆ. ಪೊಲೀಸರು ಖಚಿತ ಮಾಹಿತಿ ಮೇರೆಗೆ ನ.21ರಂದು ಓರ್ವನನ್ನು ವಶಕ್ಕೆ ಪಡೆದು…
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಮೈಸೂರಿಂದ ಮಂಗಳೂರಿಗೆ ಸಾಕ್ಷ್ಯಗಳು ವರ್ಗಾವಣೆ
November 23, 2022ಮೈಸೂರು, ನ.22(ಆರ್‍ಕೆ)-ಮಂಗ ಳೂರಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮೈಸೂರಿನ ಲೋಕನಾಯಕನಗರದಲ್ಲಿ ಶಂಕಿತ ಉಗ್ರ ನೆಲೆಸಿದ್ದ ಕೊಠಡಿಯಲ್ಲಿ ಸಿಕ್ಕಿದ್ದ ಸಾಕ್ಷ್ಯಗಳನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆ. ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮೊಹಮದ್ ಶಾರಿಕ್ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕನಾಯಕನಗರದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದ. ಮಂಗಳೂರಲ್ಲಿ ಸ್ಫೋಟ ಸಂಭವಿ ಸಿದ ನಂತರ ಪೊಲೀಸರು ಈತನ ಕೊಠಡಿ ಪರಿಶೀಲಿಸಿದಾಗ ಕುಕ್ಕರ್ ಬಾಂಬ್ ತಯಾ ರಿಸಲು ಬಳಸುತ್ತಿದ್ದ ಕಚ್ಛಾವಸ್ತುಗಳು ಅಲ್ಲಿ…
ಪ.ಮಲ್ಲೇಶ್ ಹೇಳಿಕೆ ವಿರೋಧಿಸಿ, ಕಾನೂನು ಕ್ರಮಕ್ಕೆ ಆಗ್ರಹಿಸಿ ಮೈಸೂರಲ್ಲಿ ಬ್ರಾಹ್ಮಣ ಸಮುದಾಯದ ಬೃಹತ್ ಪ್ರತಿಭಟನಾ ರ್ಯಾಲಿ
November 22, 2022ಮೈಸೂರು, ನ.21(ಆರ್‍ಕೆಬಿ)- ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದಿಸಿ ಮಾತನಾಡಿದರೆಂದು ಆರೋಪಿಸಿ ವಿಚಾರ ವಾದಿ ಪ.ಮಲ್ಲೇಶ್ ವಿರುದ್ಧ ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯ ಸಿಡಿದೆದ್ದಿದ್ದು, ಸೋಮವಾರ ಬೃಹತ್ ರ್ಯಾಲಿ ನಡೆಸಿದರು. ಮಲ್ಲೇಶ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿಪ್ರ ಪೆÇ್ರಫೆಷನಲ್ ಫೆÇೀರಂ, ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯ, ವಿಪ್ರ ಮಹಿಳಾ ಸಂಘಗಳು, ಬ್ರಾಹ್ಮಣ ಯುವ ಸಂಘಟನೆಗಳ sಸಾವಿರಾರು ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ದ್ದರು. ಉತ್ತರಾದಿ ಮಠ ರಸ್ತೆಯಲ್ಲಿರುವ ಶಂಕರ ಸಮುದಾಯ ಭವನದ ಆವ ರಣದಿಂದ…
ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರತಿಧ್ವನಿ ಮೈಸೂರಲ್ಲಿ ಎನ್‍ಐಎ ಅಧಿಕಾರಿಗಳಿಂದ ತನಿಖೆ ತೀವ್ರ
November 22, 2022ಮೈಸೂರು, ನ. 21(ಆರ್‍ಕೆ)- ಮಂಗಳೂರಿನಲ್ಲಿ ಶನಿವಾರ ಸಂಜೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಐವರು ಸದಸ್ಯರನ್ನೊಳಗೊಂಡ ಎನ್‍ಐಎ (ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ತಂಡವು, ಮೈಸೂರಿನಲ್ಲಿ ಇಂದು ತೀವ್ರಗತಿಯಲ್ಲಿ ತನಿಖೆ ನಡೆಸಿತು. ಶಂಕಿತ ಉಗ್ರ ಮೊಹಮದ್ ಶಾರಿಕ್ ವಾಸವಿದ್ದ ಮನೆಯ ಕೊಠಡಿಯಲ್ಲೇ ರಸಾಯನಿಕ ಬಳಸಿ ಕುಕ್ಕರ್ ಬಾಂಬ್ ತಯಾರಿ ಸುತ್ತಿದ್ದ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿರುವ ಎನ್‍ಐಎ ತಂಡದ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವಿನಿಂದ ಮೇಟಗಳ್ಳಿಯ ಲೋಕನಾಯಕ ನಗರದಲ್ಲಿ ರೂಂನಿಂದ ಮಹತ್ವದ…
ಮೈಸೂರಿನ ಚೆಕ್‍ಪೋಸ್ಟ್‍ಗಳಲ್ಲಿ ವಾಹನಗಳ ತಪಾಸಣೆ ನಂಬರ್ ಪ್ಲೇಟ್ ಇಲ್ಲದ, ದೋಷಪೂರಿತ ಪ್ಲೇಟ್, ಅನುಮಾನಾಸ್ಪದ ವಾಹನಗಳ ವಶ
November 22, 2022ಮೈಸೂರು,ನ.21(ಆರ್‍ಕೆ)- ಮಂಗ ಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡ ಪ್ರಕರಣದಲ್ಲಿ ಶಂಕಿತ ಉಗ್ರ ಮೈಸೂರಿ ನಲ್ಲೇ ಬಾಂಬ್ ತಯಾರಿಸುತ್ತಿದ್ದ ಎಂಬುದು ತಿಳಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ತೀವ್ರ ಕಟ್ಟೆಚ್ಚರ ವಹಿಸುತ್ತಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದಲೇ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ರಸ್ತೆ, ಕೆಆರ್‍ಎಸ್ ರಸ್ತೆ, ಹುಣಸೂರು ರಸ್ತೆ, ಬೋಗಾದಿ ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆಯ ಚೆಕ್‍ಪೋಸ್ಟ್ ಗಳಲ್ಲಿ ದಿನದ 24 ಗಂಟೆಯೂ ಬಂದು ಹೋಗುವ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಹೊರ ಜಿಲ್ಲೆ,…
ಮೈಸೂರಿನ ಎಲೆ ತೋಟದಲ್ಲಿಸೆರೆ ಸಿಕ್ಕ ಮೊಸಳೆ
November 18, 2022ಮೈಸೂರು, ನ.17(ಎಂಟಿವೈ)- ಮೈಸೂರಿನ ರಾಮಾನುಜ ರಸ್ತೆಯ 9ನೇ ಕ್ರಾಸ್‍ನ ಪಕ್ಕದ ಎಲೆ ತೋಟದಲ್ಲಿ ಕಳೆದ ಒಂದು ತಿಂಗಳಿಂದ ಕಣ್ಣಾಮುಚ್ಚಾಲೆ ಆಡುತ್ತ, ಸುತ್ತಮುತ್ತಲ ಜನರಲ್ಲಿ ಭೀತಿ ಹುಟ್ಟಿಸಿದ್ದ ಮೊಸಳೆಯನ್ನು ಇಂದು ಸೆರೆ ಹಿಡಿಯಲಾಗಿದೆ. ಇದು ಸುಮಾರು 45 ವರ್ಷದ ಮೊಸಳೆ ಇರಬಹುದು ಎಂದು ಅಂದಾಜಿಸಿದ್ದು, ಇಲ್ಲಿ ಇನ್ನಷ್ಟು ಮೊಸಳೆ ಇರುವ ಆತಂಕ ವ್ಯಕ್ತವಾಗಿದೆ. ಕೆಲವು ದಿನಗಳಿಂದ ಪದೇ ಪದೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಮೊಸಳೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿತ್ತು. ನ.13 ರಂದು…
ಮೈಸೂರಲ್ಲಿ ಈಗ `ಗುಂಬಜ್’ ತಂಗುದಾಣದ್ದೇ ಸದ್ದು!
November 18, 2022ಮೈಸೂರು, ನ.17(ಆರ್‍ಕೆ)-ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ತಂಗುದಾಣ ನಿರ್ಮಿಸುವಾಗ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಓಊಂI)ದ ನಿರಾಕ್ಷೇಪಣಾ ಪತ್ರ (ಓಔಅ)ಪಡೆದು ನಕ್ಷೆಗೆ ಅನುಮೋದನೆ ಪಡೆಯಬೇಕೆಂಬುದು ನನ್ನ ವಾದವೇ ಹೊರತು, ಯಾರಿಗೋ ಕಿರುಕುಳ ನೀಡಬೇಕೆಂಬುದಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಬಸ್ ಶೆಲ್ಟರ್ ನಿರ್ಮಾಣ ವಿವಾದ ಸಂಬಂಧ ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ಎಸ್.ಎ.ರಾಮದಾಸ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, 29 ವರ್ಷಗಳ ಹಿಂದೆಯೇ ಶಾಸಕರಾಗಿದ್ದ ರಾಮದಾಸ್ ಅವರು, ತಾವು ಮಾಡಿದ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ…
ನಾನು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ
November 18, 2022ಮೈಸೂರು, ನ.17(ಆರ್‍ಕೆ)-ಬಸ್ ತಂಗುದಾಣ ನಿರ್ಮಿಸುವ ವಿಚಾರ ದಲ್ಲಿ ನಾನು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಆ ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್, ಇಂದು ಮಾಧ್ಯಮಗಳ ಮುಂದೆ ಗದ್ಗದಿತರಾದರು. ಮೈಸೂರು-ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರಂಪರಿಕ ಶೈಲಿಯ ಬಸ್ ತಂಗುದಾಣವನ್ನು ಶಾಸಕರ ಕ್ಷೇತ್ರಾ ಭಿವೃದ್ಧಿ ಅನುದಾನದಿಂದ ಕೆಆರ್‍ಐಡಿಎಲ್ ಮೂಲಕ ನಿರ್ಮಿಸಲಾಗಿದೆ. ಅದರ ಗೋಪುರಗಳು ಪುರಾತತ್ವ ಮತ್ತು ಪಾರಂಪರಿಕ ವಿನ್ಯಾಸದಂತೆ ಇವೆಯೇ ಹೊರತು, ಬೇರೆ ಧರ್ಮದ ಶೈಲಿಯದ್ದಲ್ಲ ಎಂದು ಅವರು…
ಉರುಳಿಗೆ ಬಲಿಯಾದ ಹುಲಿಯ ಮರಿಗಳು ಸೇಫ್
November 17, 2022ಮೈಸೂರು, ನ.16(ಎಂಟಿವೈ)- ಬೇಟೆಗಾರರ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಹುಲಿಯ ಮೂರು ಮರಿಗಳ ಚಲನ-ವಲನ ಮೂರು ದಿನದ ಹಿಂದೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಿಂಕೆಯೊಂದನ್ನು ಬೇಟೆಯಾಡಿ, ಅದರ ಮಾಂಸ ಸೇವಿಸುತ್ತಿರುವ ದೃಶ್ಯ ದಾಖಲಾಗಿದೆ. ಇದರಿಂದ ಮರಿಗಳು ಸುರಕ್ಷಿತವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವಲಯದ ಸರಹದ್ದಿನಲ್ಲಿ ನ.12 ರಂದು ಕೊಳೆತ ಸ್ಥಿತಿಯಲ್ಲಿ ದೊರೆತ ಹೆಣ್ಣು ಹುಲಿಯ ಮೂರು ಮರಿಗಳ ಬಗ್ಗೆ ಅರಣ್ಯ ಇಲಾಖೆ ಕಳವಳ ವ್ಯಕ್ತಪಡಿಸಿತ್ತು. ಸುಮಾರು 8 ತಿಂಗಳ…