ಮೈಸೂರು

ಮೈಸೂರಲ್ಲಿ ಮತ್ತೆ ಅಕ್ರಮ ನಿರ್ಮಾಣದ ಸದ್ದು
ಮೈಸೂರು

ಮೈಸೂರಲ್ಲಿ ಮತ್ತೆ ಅಕ್ರಮ ನಿರ್ಮಾಣದ ಸದ್ದು

November 16, 2022

ಮೈಸೂರು,ನ.15(ಪಿಎಂ)- ನೆರೆಮನೆ ಮಾಲೀಕರ ಅನಧಿಕೃತ ನಿರ್ಮಾಣ ಪ್ರಶ್ನಿ ಸಿದ ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಅಕ್ರಮ ನಿರ್ಮಾಣದ ಆರೋಪ ಕೇಳಿ ಬರುವ ಮೂಲಕ ಮೈಸೂರು ಮಹಾನಗರ ಪಾಲಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೈಸೂರಿನ ಸರಸ್ವತಿಪುರಂನ 1ನೇ ಮುಖ್ಯ ರಸ್ತೆಯ ವಸತಿ ನಿವೇಶನದಲ್ಲಿ (ವಸತಿ ಬಡಾವಣೆ) ವಾಣಿಜ್ಯ ಕಟ್ಟಡ ನಿರ್ಮಿಸು ತ್ತಿದ್ದು, ಈ ಸಂಬಂಧ ಪಾಲಿಕೆ ಅಧಿಕಾರಿ ಗಳು ಯಾವುದೇ ದಾಖಲೆಗಳನ್ನು ಕೋರ್ಟ್‍ಗೆ ಸಲ್ಲಿಸದೇ ನಿರ್ಲಕ್ಷ್ಯ ತಾಳಿದ್ದಾರೆ ಎಂದು…

ಹತ್ಯೆಗೀಡಾದ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಮನೆ ಪಕ್ಕದ ಅನಧಿಕೃತ ನಿರ್ಮಾಣ ತೆರವಿಗೆ ಕೋರ್ಟ್ ತಡೆ
ಮೈಸೂರು

ಹತ್ಯೆಗೀಡಾದ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಮನೆ ಪಕ್ಕದ ಅನಧಿಕೃತ ನಿರ್ಮಾಣ ತೆರವಿಗೆ ಕೋರ್ಟ್ ತಡೆ

November 16, 2022

ಮೈಸೂರು, ನ.15(ಎಸ್‍ಬಿಡಿ)- ಹತ್ಯೆಗೀಡಾದ ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರ ಪಕ್ಕದ ಮನೆಯ ಅನಧಿಕೃತ ನಿರ್ಮಾಣ ಭಾಗದ ತೆರವು ಕಾರ್ಯಾ ಚರಣೆ ಆರಂಭಿಸಿದ್ದ ಮೈಸೂರು ನಗರಪಾಲಿಕೆ ಅಧಿಕಾರಿಗಳು, ಇದಕ್ಕೆ ನ್ಯಾಯಾಲಯ ನೀಡಿರುವ ತಾತ್ಕಾಲಿಕ ತಡೆಯಾಜ್ಞೆ ಪ್ರತಿ ಕೈಸೇರಿದ ಬಳಿಕ ಕಾರ್ಯಾ ಚರಣೆ ಕೈಬಿಟ್ಟು ವಾಪಸ್ಸಾದರು. ಕುಲಕರ್ಣಿ ಅವರ ಮನೆ ಪಕ್ಕದಲ್ಲಿ ಮಾದಪ್ಪ ಸೆಟ್‍ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸಿದ್ದು, ಈ ಅನಧಿಕೃತ ನಿರ್ಮಾಣ ಭಾಗವನ್ನು ತೆರವುಗೊಳಿ ಸುವ ಸಂಬಂಧ ನಿನ್ನೆ(ನ.14) 24 ಗಂಟೆಗಳ ನೋಟೀಸ್ ಜಾರಿ ಮಾಡಲಾಗಿತ್ತು….

ಮೈಸೂರು ಮೃಗಾಲಯದ ಹೆಚ್ಚುವರಿ ಜಿಂಕೆ,ಸಾರಂಗ ದಾಂಡೇಲಿ ಅಭಯಾರಣ್ಯಕ್ಕೆ ಸಾಗಾಣೆ
ಮೈಸೂರು

ಮೈಸೂರು ಮೃಗಾಲಯದ ಹೆಚ್ಚುವರಿ ಜಿಂಕೆ,ಸಾರಂಗ ದಾಂಡೇಲಿ ಅಭಯಾರಣ್ಯಕ್ಕೆ ಸಾಗಾಣೆ

November 16, 2022

ಮೈಸೂರು, ನ,.15(ಎಂಟಿವೈ)- ಮೈಸೂರು ಮೃಗಾಲಯದಲ್ಲಿ ಜಿಂಕೆ ಹಾಗೂ ಸಾಂಬರ್(ಸಾರಂಗ) ಸಂತತಿ ಯಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚಳವಾ ಗಿದ್ದು, ಇವುಗಳನ್ನು ದಾಂಡೇಲಿ ಅಭ ಯಾರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದೆ. ರಾಜ್ಯದ ಮೃಗಾಲಯಗಳಲ್ಲಿ ಜಿಂಕೆಗಳ ಸಂತತಿ ಹೆಚ್ಚಳ ಸಾಮಾನ್ಯ ಸಂಗತಿಯಾ ಗಿದ್ದು, ಅಧಿಕವಾಗಿರುವ ಜಿಂಕೆಗಳಿಗೆ ವಿವಿಧ ವನ್ಯಧಾಮದಲ್ಲಿ ಪುನರ್ವಸತಿ ಕಲ್ಪಿಸು ವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಿಂದ 2019ರಲ್ಲಿ 100ಕ್ಕೂ ಹೆಚ್ಚು ಜಿಂಕೆಗಳನ್ನು ಹುಣಸೂರು ಸಮೀಪದ ಅರಬ್ಬೀತಿಟ್ಟು ವನ್ಯಧಾಮದಲ್ಲಿ ಬಿಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಸಾರಂಗ ಹಾಗೂ 50ಕ್ಕೂ ಅಧಿಕ…

ಹಾಡಹಗಲೇ ಆಸ್ಪತ್ರೆಗೆ ನುಗ್ಗಿ ನರ್ಸ್ ಕುತ್ತಿಗೆ ಕೊಯ್ದ ಪಾಗಲ್ ಪ್ರೇಮಿ
ಮೈಸೂರು

ಹಾಡಹಗಲೇ ಆಸ್ಪತ್ರೆಗೆ ನುಗ್ಗಿ ನರ್ಸ್ ಕುತ್ತಿಗೆ ಕೊಯ್ದ ಪಾಗಲ್ ಪ್ರೇಮಿ

November 16, 2022

ಮೈಸೂರು, ನ. 15(ಆರ್‍ಕೆ)- ಹಾಡಹಗಲೇ ಪಾಗಲ್ ಪ್ರೇಮಿಯೊಬ್ಬ ಆಸ್ಪತ್ರೆಗೆ ನುಗ್ಗಿ ಚಾಕುವಿ ನಿಂದ ಕತ್ತು ಕೊಯ್ದು ನರ್ಸ್ ಕೊಲೆಗೆ ಯತ್ನಿ ಸಿದ್ದಾನೆ. ಈ ಘಟನೆ ಮೈಸೂರಿನ ಹೆಬ್ಬಾಳು ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಾಮರಾಜನಗರ ಜಿಲ್ಲೆಯವನೆಂದು ಹೇಳಲಾದ ನಂಜುಂಡಸ್ವಾಮಿ(29), ಮಹಿಳಾ ಸ್ಟಾಫ್ ನರ್ಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆಕೆಯನ್ನು ರಕ್ಷಿಸಲು ಬಂದ ಸಹೋ ದ್ಯೋಗಿಗೂ ಇರಿದು ಗಾಯಗೊಳಿಸಿದ್ದಾನೆ. ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಇನ್ಸ್‍ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ…

ಹಲವು ಕಡೆ ಆಹ್ವಾನವೇನೋ ಬಂದಿದೆ: ಆದರೆ ನನ್ನ ಸ್ಪರ್ಧೆ ನಿರ್ಧರಿಸುವುದು `ಹೈಕಮಾಂಡ್’
ಮೈಸೂರು

ಹಲವು ಕಡೆ ಆಹ್ವಾನವೇನೋ ಬಂದಿದೆ: ಆದರೆ ನನ್ನ ಸ್ಪರ್ಧೆ ನಿರ್ಧರಿಸುವುದು `ಹೈಕಮಾಂಡ್’

November 15, 2022

ಮೈಸೂರು, ನ.14(ಎಂಟಿವೈ)- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬು ದನ್ನು ನಿರ್ಧರಿಸುವುದಕ್ಕೆ ಹೈಕಮಾಂಡ್‍ಗೆ ಬಿಟ್ಟಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ಅಲ್ಲಿನ ಜನರು ಹಾಗೂ ಮುಖಂಡರು ಒತ್ತಾಯಿಸುತ್ತಿದ್ದಾರೆ. ಶನಿವಾರ ಕೋಲಾರಕ್ಕೆ ತೆರಳಿದ್ದಾಗ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೊಟ್ಟ ಯೋಜನೆಗಳಿಂದ ಕೋಲಾರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಅದರಲ್ಲೂ ರೈತರು…

ಅನಧಿಕೃತವಾಗಿ ವಾಸವಿರುವವರ ಹೊರ ಹಾಕಿ ಅರ್ಹರಿಗೆ ಆಶ್ರಯ ನೀಡಿ
ಮೈಸೂರು

ಅನಧಿಕೃತವಾಗಿ ವಾಸವಿರುವವರ ಹೊರ ಹಾಕಿ ಅರ್ಹರಿಗೆ ಆಶ್ರಯ ನೀಡಿ

November 15, 2022

ಮೈಸೂರು, ನ. 14 (ಆರ್‍ಕೆ)- ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳಲ್ಲಿ ಅನಧಿಕೃತ ವಾಗಿ ವಾಸಿಸುತ್ತಿರುವವರನ್ನು ಹೊರ ಹಾಕಿ ಅರ್ಹ ಬಡ ಕುಟುಂಬದವರಿಗೆ ಆಶ್ರಯ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡಳಿಯಿಂದ ನಿರ್ಮಿ ಸಿರುವ…

ಮಳೆ ನಡುವೆಯೂ ಕನಕದಾಸರ ಪ್ರತಿಮೆಯ ಭವ್ಯ ಮೆರವಣಿಗೆ
ಮೈಸೂರು

ಮಳೆ ನಡುವೆಯೂ ಕನಕದಾಸರ ಪ್ರತಿಮೆಯ ಭವ್ಯ ಮೆರವಣಿಗೆ

November 12, 2022

ಮೈಸೂರು, ನ.11(ಎಂಟಿವೈ)- ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನಕದಾಸರ ಜಯಂತ್ಯೋತ್ಸವ ಸಮಿತಿ, ಶುಕ್ರವಾರ ಆಯೋಜಿಸಿದ್ದ ಕನಕದಾಸರ ಪ್ರತಿಮೆಯ ಭವ್ಯ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಕುರುಬ ಸಮುದಾಯದ ಮಹನೀಯರ ಜೀವನ ಚರಿತ್ರೆ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು. ಅರಮನೆಯ ಉತ್ತರ ದ್ವಾರದ ಬಳಿ ಇರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂದೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಜಯಂತ್ಯೋತ್ಸವ…

ಇಂದು ಕನಕದಾಸರಜಯಂತಿ
ಮೈಸೂರು

ಇಂದು ಕನಕದಾಸರಜಯಂತಿ

November 11, 2022

ಮೈಸೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಶ್ರೀ ಕನಕದಾಸ ಜಯಂತೋ ತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಾಳೆ (ನ.11) ಬೆಳಗ್ಗೆ 9.30ಕ್ಕೆ ಮೈಸೂರಿನ ಶ್ರೀ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಮುಂಭಾಗದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12:30 ಗಂಟೆಗೆ ಕರ್ನಾಟಕದ ಕಲಾಮಂದಿರ ದಲ್ಲಿ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣ ಕಾರರಾಗಿ ಸಾಹಿತಿಗಳು ಹಾಗೂ…

ಶೀಘ್ರದಲ್ಲೇ ಮೈಸೂರಿನ ಅರಸು, ಸಯ್ಯಾಜಿರಾವ್, ಅಶೋಕ, ಶಿವರಾಂಪೇಟೆ, ಧನ್ವಂತರಿ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ
ಮೈಸೂರು

ಶೀಘ್ರದಲ್ಲೇ ಮೈಸೂರಿನ ಅರಸು, ಸಯ್ಯಾಜಿರಾವ್, ಅಶೋಕ, ಶಿವರಾಂಪೇಟೆ, ಧನ್ವಂತರಿ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿ

November 11, 2022

ಮೈಸೂರು, ನ.10(ಜಿಎ)-ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರ ಸ್ಥಳಗಳಾದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಶಿವರಾಂಪೇಟೆ ರಸ್ತೆ ಹಾಗೂ ಧನ್ವಂತರಿ ರಸ್ತೆಗಳಲ್ಲಿ ಶೀಘ್ರದಲ್ಲೇ ಪೇ ಅಂಡ್ ಪಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲಾಗು ವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದಾರೆ. ಮೈಸೂರಿನ ಡಿ.ದೇವರಾಜ ಅರಸ್ ರಸ್ತೆಯಲ್ಲಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಚೇರಿ ಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಈ ಭರವಸೆ ನೀಡಿದರು. ಮೈಸೂರಿನ ಪಾರಂಪರಿಕ ಕಟ್ಟಡಗಳ ಸುರಕ್ಷತೆ, ರಸ್ತೆ ಗುಂಡಿಗಳ ಕುರಿತು,…

ಮುಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ 14 ಕೋಟಿ ಸಾಲ ಪಡೆದ ಭೂಗಳ್ಳರು!
ಮೈಸೂರು

ಮುಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ 14 ಕೋಟಿ ಸಾಲ ಪಡೆದ ಭೂಗಳ್ಳರು!

November 10, 2022

ಮೈಸೂರು, ನ. 9- ನಕಲಿ ದಾಖಲೆ ಸೃಷ್ಟಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) 5,700 ಚದರಡಿ (285×200 ಅಡಿ) ವಿಸ್ತೀರ್ಣದ ಕೈಗಾ ರಿಕಾ ನಿವೇಶನ ಅಡವಿಟ್ಟು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಬರೋಬ್ಬರಿ 14 ಕೋಟಿ ಸಾಲ ಪಡೆದಿರುವುದಲ್ಲದೇ ಸದರಿ ಸ್ವತ್ತನ್ನು ಬೇರೆ ವ್ಯಕ್ತಿಗೆ ದಾನಪತ್ರದ ಮೂಲಕ ಪರಭಾರೆ ಮಾಡಿರುವ ಭಾರೀ ಅಕ್ರಮ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಆರ್‍ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ಸೂಕ್ತ ದಾಖಲೆಗಳೊಂದಿಗೆ ಹಗರಣವನ್ನು ಬಯಲಿಗೆ ತಂದ ಹಿನ್ನೆಲೆ ಯಲ್ಲಿ ಎಚ್ಚೆತ್ತ ಮುಡಾ ಆಯುಕ್ತ ಜಿ.ಟಿ….

1 20 21 22 23 24 1,611
Translate »