ಮೈಸೂರು,ಮಾ.17-ವೇದ ಜ್ಯೋತಿಷ್ಯದ ಜ್ಞಾನವನ್ನು ಉತ್ತೇಜಿಸಲು ಮತ್ತು ಉಪನ್ಯಾಸಗಳು, ವಿಶೇಷ ಕೋರ್ಸ್ ಮೂಲಕ ಪ್ರಾಚೀನ ವಿಜ್ಞಾನದ ಅರಿವನ್ನು ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 17 ಮತ್ತು 18ರಂದು ಮೈಸೂರಿನಲ್ಲಿ ರಾಷ್ಟ್ರಮಟ್ಟದ ವೇದ ಜ್ಯೋತಿಷ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಶ್ರೀ ಮಾಯಕರ ಗುರುಕುಲ ಸಂಸ್ಥಾಪಕ ಡಾ. ಮೂಗೂರು ಮಧು ದೀಕ್ಷಿತ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಶ್ರೀ ಮಾಯಕರ ಗುರುಕುಲವು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಜ್ಯೋತಿಷ್ಯ ಮತ್ತು ಜ್ಯೋತಿಷ್ಯ ಬೋಧನಾ ಒಕ್ಕೂಟದ ಸಹಯೋಗದೊಂದಿಗೆ ರಾಷ್ಟ್ರೀಯ ಸಮ್ಮೇಳನದ…
ಮೈಸೂರಿನ ಭಾರತೀಯ ವಿದ್ಯಾಭವನದಲ್ಲಿ ಆಲ್ಬರ್ಟ್ ಐನ್‍ಸ್ಟೈನ್‍ರ ಜನ್ಮದಿನಾಚರಣೆ
March 18, 2021ಮೈಸೂರು, ಮಾ.17- ಮೈಸೂರಿನ ಭಾರತೀಯ ವಿದ್ಯಾ ಭವನದಲ್ಲಿ ಮಹಾನ್ ಭೌತವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್‍ರ ಜನ್ಮ ದಿನಾಚರಣೆಯನ್ನು ಆಚರಿಸಿದರು. ಈ ದಿನವನ್ನು ಅಂತರರಾಷ್ಟ್ರೀಯ “ಪೈ” ದಿನ ವಾಗಿಯೂ (3/14 ) ಆಚರಿಸಲಾಗುತ್ತದೆ. ಹೆಸರಾಂತ ಅಂತರರಾಷ್ಟ್ರೀಯ ಭಾಷಣಕಾರರಾದ ಹರೀಶ್ ಕೆ.ಮಾಚಯ್ಯ ಅವರ ಉಪನ್ಯಾಸ ಅತ್ಯುತ್ತಮ ವೀಡಿಯೊ ಗಳು, ರಸಪ್ರಶ್ನೆಗಳು ಮತ್ತು ಆಟಗಳೊಂದಿಗೆ ಸಂಯೋಜಿಸ ಲಾಗಿತ್ತು. ಕಲಿಕೆಯ ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಪರಿಣಾಮ ಗಳಿಗೆ ಕಾರಣವಾಗುವ ಇನ್-ಕ್ಲಾಸ್ ಚಟುವಟಿಕೆಗಳ “ಗ್ಯಾಮಿಫಿಕೇಶನ್”ನ್ನು ಸ್ಪೀಕರ್ ಪ್ರದರ್ಶಿಸಿದರು. ಹರೀಶ್ ಕೆ.ಮಾಚಯ್ಯ ಅವರು ಮುಂದಿನ ಶತಮಾನದ ಶಿಕ್ಷಣ ಮತ್ತು…
ನಾಡಿನ 34 ಸಾಹಿತಿಗಳ ದಾಖಲೆ-ಪತ್ರಗಳನ್ನು ಸಂಗ್ರಹಿಸಿ-ಸಂರಕ್ಷಣೆ: ಮೈವಿವಿ ಚಿಂತನೆ
March 18, 2021ಮೈಸೂರು,ಮಾ.17(ಎಂಟಿವೈ)-ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜ್ಯದ 34 ಸಾಹಿತಿಗಳಿಗೆ ಸಂಬಂಧಿಸಿದ ದಾಖಲೆ-ಪತ್ರಗಳನ್ನು ಸಂಗ್ರಹಿಸಿ-ಸಂರಕ್ಷಿಸಲು ಉದ್ದೇಶಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಡಿವಿಜಿ ಬಳಗ ಪ್ರತಿಷ್ಠಾನ ಸಂಯುಕ್ತಾಶ್ರಯ ದಲ್ಲಿ ಬುಧವಾರ ಬಿಎಂಶ್ರೀ ಸಭಾಂಗಣದಲ್ಲಿ ಆಯೋ ಜಿಸಿದ್ದ `ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ’ ಗ್ಯಾಲರಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ, `ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಗ್ಯಾಲರಿ ಮಾದರಿ ಯಲ್ಲೇ 34 ಸಾಹಿತಿಗಳ…
ಮೈಸೂರು ಪಾಲಿಕೆಯ ಕಟ್ಟಡ ಪರವಾನಗಿ ಆನ್‍ಲೈನ್ ಸೇವೆ ಈಗ ಆಫ್‍ಲೈನ್!
March 18, 2021ಮೈಸೂರು, ಮಾ.17- ಮೈಸೂರು ಮಹಾ ನಗರ ಪಾಲಿಕೆಯು ಭಾರೀ ಉತ್ಸಾಹದಿಂದ ಆರಂಭಿ ಸಿದ `ಕಟ್ಟಡ ಪರವಾನಗಿ’ ಆನ್‍ಲೈನ್ ಸೇವೆ ಈಗ `ಆಫ್‍ಲೈನ್’ ಆಗಿದೆ. ತಿಂಗಳ ಹಿಂದಷ್ಟೇ ಆರಂಭಿಸಿದ ಆನ್‍ಲೈನ್ ಸೇವೆ ಈಗ ಸ್ಥಗಿತ ವಾಗಿದೆ. ಕಟ್ಟಡ ನಿರ್ಮಾಣಕ್ಕೆ ಅತ್ಯಗತ್ಯವಾದ ಪರವಾನಗಿಯು ಆನ್‍ಲೈನ್ ಮೂಲಕವೇ ಸುಲಭ ವಾಗಿ ಸಿಗಲಿದೆ ಎಂಬ ವಿಶ್ವಾಸದಲ್ಲಿ ಅರ್ಜಿ ಸಲ್ಲಿಸಿದ್ದ ಜನರು ಈಗ ಪರದಾಡುವಂತಾಗಿದೆ. ಅಧಿಕಾರಿಗಳೂ ಸಹ ಆನ್‍ಲೈನ್-ಆಫ್‍ಲೈನ್ ಸೇವೆಗಳ ನಡುವೆ ಗೊಂದಲಕ್ಕೊಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ತಾಂತ್ರಿಕ ಸಮಸ್ಯೆಯಿಂದಾಗಿ ಆನ್‍ಲೈನ್ ಅರ್ಜಿಗಳನ್ನು ವಿಲೇವಾರಿ…
ಮೈಸೂರಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 61 ಮಂದಿ ಡಿಎಲ್ ಅಮಾನತು
March 18, 2021ಮೈಸೂರು,ಮಾ.17-ನಗರದಲ್ಲಿ ಸಂಚಾರ ನಿಯಮ ಉಲ್ಲಂ ಘನೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಇದನ್ನು ತಡೆ ಯುವುದಕ್ಕಾಗಿ ಚಾಲನಾ ಪರವಾನಗಿ (ಡಿಎಲ್) ಅಮಾ ನತು ಕಾರ್ಯ ಚುರುಕು ಗೊಂಡಿದೆ. ನಿಯಮ ಉಲ್ಲಂ ಘಿಸಿ ವಾಹನ ಚಾಲನೆ ಮಾಡು ವುದರಿಂದ ನಿತ್ಯ ಸಾವು-ನೋವು ಸಂಭವಿಸುತ್ತಿವೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಬಲಿಯಾಗಬೇಕಾದ ದುಸ್ಥಿತಿ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೆÇಲೀಸರು ನಗರದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಹದಿಹರೆಯದ ಯುವಕರಿಂದ ಹಿಡಿದು ಮಧ್ಯವಯಸ್ಕ ರವರೆಗೂ ವಾಹನ ಚಲಾಯಿಸುವಾಗ ಮೊಬೈಲ್ ಬಳಸುತ್ತಿರುವ ಪ್ರಕರಣಗಳು…
ಸಂವಿಧಾನದಲ್ಲಿ ಮೀಸಲಾತಿ ಮಿತಿ ನಮೂದಾಗಿಲ್ಲ
March 18, 2021ಮೈಸೂರು, ಮಾ.17(ಎಂಟಿವೈ)- ಸಂವಿಧಾನದಲ್ಲಿ ಮೀಸಲಾತಿ ಶೇ.50ಕ್ಕಿಂತ ಹೆಚ್ಚು ಇರಬಾರದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಒಂದು ಸಮುದಾಯದವರ ಸಂಚಿನಿಂದಾಗಿ ಮೀಸಲಾತಿ ಪ್ರಮಾಣ ನಿರ್ದಿಷ್ಟ ಗೊಳಿಸುವ ವ್ಯವಸ್ಥಿತ ಸಂಚು ನಡೆಸಲಾಗಿದೆ ಎಂದು ಸಾಹಿತಿ ಕೆ.ಎಸ್.ಭಗವಾನ್ ಆರೋಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗಣ ದಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತ ವೇದಿಕೆ, ಜಿಲ್ಲಾ ಕುಂಬಾರರ ಸಂಘ, ಸವಿತಾ ಸಮಾಜ, ಭಗೀರಥ ಉಪ್ಪಾರರ ಸಂಘ, ಜಿಲ್ಲಾ ವಿಶ್ವಕರ್ಮ ಮಹಾಮಂಡಲ, ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಜ್ಯೋತಪಣ ಯುವಜನ…
ದೊಡ್ಡ ಜಾತ್ರೆ ಅನುಮತಿಗೆ ಒತ್ತಾಯಿಸಿ ಪ್ರತಿಭಟನೆ
March 18, 2021ನಂಜನಗೂಡು, ಮಾ.17-ನಗರದ ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವ ಪೂರ್ವನಿಗದಿಯಂತೆ ಮಾ.26ರಂದು ನಡೆಸಲು ಜಿಲ್ಲಾಡಳಿತ ಅನುಮತಿಸುವಂತೆ ಒತ್ತಾಯಿಸಿ ಬುಧವಾರ ನಗರದ ಶ್ರೀಕಂಠೇಶ್ವರ ಭಕ್ತ ಮಂಡಳಿ ಸದಸ್ಯರು ದೇವಾಲಯ ಆವರಣದಲ್ಲಿ ಪ್ರತಿಭಟಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಪುರಸಭೆ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಮಲೆಮಹದೇಶ್ವರಬೆಟ್ಟ, ಶಿರಸಿ ಮಾರಿಕಾಂಬೆ ದೇವಾಲಯಗಳಲ್ಲಿ ಸಂಪ್ರದಾಯದಂತೆ ಜಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ನಂಜನಗೂಡಿನಲ್ಲಿ ಮಾತ್ರ ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರೆ ಸತತ ಎರಡು ವರ್ಷದಿಂದ ರದ್ದಾಗುತ್ತಿದೆ. ಸರ್ಕಾರದ ಕೋವಿಡ್ ಮಾರ್ಗ ಸೂಚಿಯಂತೆಯೇ ನಿಯಮ ಪಾಲಿಸಿ ಜಾತ್ರೆ ನಡೆಸುತ್ತೇವೆ. ಹಾಗಾಗಿ…
ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ
March 18, 2021ಹೆಚ್.ಡಿ.ಕೋಟೆ, ಮಾ. 17(ಮಂಜು)-ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಜಿಪಂ ಅಧ್ಯಕ್ಷೆ ಪರಿ ಮಳಾ ಶ್ಯಾಂ ತಿಳಿಸಿದರು. ತಾಲೂಕಿನ ಹ್ಯಾಂಡ್ ಪೆÇೀಸ್ಟ್ ಸರ್ಕಲ್ ನಲ್ಲಿ ಕೋವಿಡ್ ಲಸಿಕೆ ಅಭಿಯಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಲಸಿಕೆ ಪಡೆಯಲು ಯಾರೂ ಹಿಂಜರಿಯಬಾರದು. ಲಸಿಕೆ ಪಡೆದ ನಂತರವೂ…
ಭಗವಾನ್ ಬಿರ್ಸಾಮುಂಡಾ ಭವನ ಲೋಕಾರ್ಪಣೆ
March 18, 2021ಹೆಚ್.ಡಿ.ಕೋಟೆ, ಮಾ.17(ಮಂಜು)-ವನವಾಸಿಗಳು ಅತ್ಯಂತ ಸ್ವಾವಲಂಬಿ ಹಾಗೂ ಸರಳ ಜೀವಿಗಳು ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಅಭಿಪ್ರಾಯಪಟ್ಟರು. ಪಟ್ಟಣದ ಸ್ಟೇಡಿಯಂ ಬಡಾ ವಣೆಯಲ್ಲಿ ವನವಾಸಿ ಕಲ್ಯಾಣ ಕರ್ನಾಟಕದಿಂದ ನೂತನವಾಗಿ ನಿರ್ಮಾಣವಾಗಿರುವ ಭಗವಾನ್ ಬಿರ್ಸಾಮುಂಡಾ ಭವನ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆದಿವಾಸಿಗಳಿಗೆ ಇನ್ನೂ ಸರಿಯಾದ ನೆಲೆ ಇಲ್ಲ. ಜೀವನ ನಿರ್ವಹಣೆಗೆ ಜಮೀನು ಇಲ್ಲದೆ ನಿಕೃಷ್ಟವಾಗಿ ಬದುಕುತ್ತಿದ್ದಾರೆ. ಇವರ ಬದುಕು ಹಸನು ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ…
ವೀರನಹೊಸಳ್ಳಿ ಆಶ್ರಮ ಶಾಲೆಯಲ್ಲಿ ಪೋಷಣ್ ಅಭಿಯಾನ
March 18, 2021ಹನಗೋಡು, ಮಾ.17(ಮಹೇಶ)-ದೇಶದಲ್ಲಿ ಆಹಾರೋತ್ಪಾದನೆ ಜನ ಸಂಖ್ಯೆಯ ಆಧಾರದಲ್ಲಿ ದುಪ್ಪಟ್ಟಾಗಿದ್ದರೂ, ಆಹಾರ ವ್ಯರ್ಥ ಮಾಡುವ ಹಾಗೂ ಆಹಾರಕ್ಕಾಗಿ ಪರದಾಡುವ ಜನರನ್ನು ಕಾಣುತ್ತಿದ್ದೇವೆ. ಈ ಅಸಮಾನತೆ ತೊಲಗ ಬೇಕಿದೆ ಎಂದು ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಅಭಿಪ್ರಾಯಪಟ್ಟರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಾಲೂಕಿನ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಆಶ್ರಮಶಾಲೆಯಲ್ಲಿ ಪೋಷಣ್ ಅಭಿಯಾನ ಯೋಜನೆ ಯಡಿ ಆಯೋಜಿಸಿದ್ದ ಪೋಷಣ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ರಕ್ಷಣೆ ಕುರಿತಂತೆ ಮನೆ ಗಳಲ್ಲಿ ಅಮ್ಮ, ಅಜ್ಜಿಯರು ನೀಡುತ್ತಿದ್ದ…










