ತಿ.ನರಸೀಪುರ, ಮಾ.17(ಎಸ್‍ಕೆ)-ಪಟ್ಟಣದಲ್ಲಿ ಮಾ.29ರಂದು ಜರುಗಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಿ.ನಾಗೇಶ್ ಅಧ್ಯಕ್ಷತೆ ಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಗತ್ಯ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇಗುಲ ಆವರಣದಲ್ಲ್ಲಿ ಕರೆದಿದ್ದ ಸಭೆಯಲ್ಲಿ ರಥೋತ್ಸವದ ಅಂಗವಾಗಿ ಮಾ.22ರಿಂದ ಏ.2ರವರೆಗೆ ನಡೆಯ ಲಿರುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹಾಜರಿದ್ದ ವಿವಿಧ ಗ್ರಾಮಗಳ ಯಜಮಾನರು, ಗ್ರಾಮಸ್ಥರಿಂದ ಸಲಹೆ-ಅಭಿಪ್ರಾಯ ಪಡೆಯಲಾಯಿತು. ಶ್ರೀ ಗುಂಜಾ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಯಶಸ್ವಿ ಯಾಗಿ ಜರುಗಲು ಅಗತ್ಯ ಕಾಮಗಾರಿ ಹಾಗೂ ಮೂಲ ಸೌಕರ್ಯ…
ಇಂದಿನಿಂದ ಉಚಿತ ಮಾನಸಿಕ ಆರೋಗ್ಯ ತಪಾಸಣೆ, ಸಮಾಲೋಚನಾ ಶಿಬಿರ
March 17, 2021ಮೈಸೂರು, ಮಾ.16-ಮೈಸೂರಿನ ನಜರ್‍ಬಾದ್‍ನಲ್ಲಿರುವ ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯಲ್ಲಿ ಮಾ.17 ರಿಂದ 24ರವರೆಗೆ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಸಮಾ ಲೋಚನಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು, ಮಾನಸಿಕ ಸಮಸ್ಯೆಗಳಾದ ಆತಂಕ (ಗಾಬರಿ), ಭಯ, ನಿದ್ರಾಹೀನತೆ ಹೊಂದಾಣಿಕೆ ಸಮಸ್ಯೆಗಳು, ಖಿನ್ನತೆ, ವ್ಯಕ್ತಿಗತ ಸಮಸ್ಯೆಗಳು, ಟಿವಿ, ಮೊಬೈಲ್ ವ್ಯಸನ, ಮೊಬೈಲ್ ಆಟದ ಗೀಳು, ವ್ಯಕ್ತಿತ್ವ ಸಮಸ್ಯೆ, ಮಾನಸಿಕ ಒತ್ತಡ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕುಂಠಿತ, ಆಕ್ರಮಣಕಾರಿ ಮನಸ್ಥಿತಿ, ಉದ್ವೇಗ,…
ಗಣಿತವೆಂಬುದು ಕಬ್ಬಿಣದ ಕಡಲೆಯಲ್ಲ ಕಲ್ಲುಸಕ್ಕರೆ
March 17, 2021ಮೈಸೂರು,ಮಾ.16-ಗಣಿತವೆಂದರೆ ಬಹಳ ಕಷ್ಟ. ಅದು ಕಬ್ಬಿಣದ ಕಡಲೆ ಇದ್ದಂತೆ ಎಂಬ ಭಾವನೆಯನ್ನು ವಿದ್ಯಾರ್ಥಿ ಗಳು ಮನಸ್ಸಿನಿಂದ ತೆಗೆದು ಹಾಕಿ. ಗಣಿತ ಕಷ್ಟವಲ್ಲ, ಅದು ಸವಿಯಾದ ಹುರಿಗಡಲೆ ಇದ್ದಂತೆ ಎಂಬ ಭಾವನೆಯನ್ನು ಬೆಳೆಸಿಕೊಂಡು ಗಣಿತವನ್ನು ಇಷ್ಟಪಟ್ಟು ಪ್ರೀತಿಯಿಂದ ಕಲಿತರೆ ಅದು ಕಲ್ಲುಸಕ್ಕರೆಯಂತೆ ವಿದ್ಯಾರ್ಥಿಗಳ ಜೀವನದಲ್ಲಿ ಸಿಹಿ ತರುತ್ತದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ನಗರದ ವಿದ್ಯಾರಣ್ಯಪುರಂನ ವಾಣಿ ವಿದ್ಯಾಮಂದಿರ ದಲ್ಲಿ ಪ್ರತಿಷ್ಠಿತ ಶೈಕ್ಷಣಿಕ ಸೇವಾ ಸಂಸ್ಥೆಗಳಲ್ಲೊಂದಾದ ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಅಂತಾ ರಾಷ್ಟ್ರೀಯ ‘ಪೈ’ ದಿನಾಚರಣೆಯಲ್ಲಿ ಗಣಿತದಲ್ಲಿ…
ಎರಡು ದಿನಗಳ ಬ್ಯಾಂಕ್ ಮುಷ್ಕರ ಅಂತ್ಯ
March 17, 2021ಮೈಸೂರು,ಮಾ.16(ಆರ್‍ಕೆ)- ಖಾಸಗೀ ಕರಣ ವಿರೋಧಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರು ನಡೆಸಿದ ಎರಡು ದಿನಗಳ ಮುಷ್ಕರಕ್ಕೆ ಮಂಗಳವಾರ ತೆರೆಬಿತ್ತು. ಎರಡನೇ ದಿನವಾದ ಇಂದು ಮೈಸೂ ರಿನ ನಜರ್‍ಬಾದ್‍ನಲ್ಲಿರುವ ಕೆನರಾ ಬ್ಯಾಂಕ್ ವಲಯ ಕಚೇರಿ ಬಳಿ ನೂರಾರು ಮಂದಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವು ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾಪವನ್ನು ಕೈಬಿಡ ಬೇಕೆಂದು ಒತ್ತಾಯಿಸಿದರು. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‍ಬಿಯು) ಕರೆ ನೀಡಿದ್ದ 2 ದಿನಗಳ ಬ್ಯಾಂಕ್ ನೌಕರರ ಮುಷ್ಕರದಲ್ಲಿ ಕೆಲ ಹೊಸ ಖಾಸಗಿ ಬ್ಯಾಂಕ್…
ಹಳ್ಳಿ ಜನರಲ್ಲಿ ಆರೋಗ್ಯ, ಶಿಕ್ಷಣ, ಸ್ವಚ್ಛತೆ ಜಾಗೃತಿಗೆ ಎನ್‍ಎಸ್‍ಎಸ್ ಶ್ರಮಿಸಲಿ
March 17, 2021ಮೈಸೂರು, ಮಾ.16(ಎಸ್‍ಪಿಎನ್)- ಮೈಸೂರು ವಿವಿ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‍ಎಸ್‍ಎಸ್) ಘಟಕಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ, ಸಾಮಾಜಿಕ ವ್ಯವಸ್ಥೆ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ ನೀಡಿದರು. ಮೈವಿವಿ ಎನ್‍ಎಸ್‍ಎಸ್-ಎಂ ಪ್ಯಾನಲ್ಡ್ ಟ್ರೈನಿಂಗ್ ಇನ್‍ಸ್ಟಿಟ್ಯೂಷನ್(ಇಟಿಐ) ಎನ್‍ಎಸ್‍ಎಸ್ ಸಂಯೋಜ ನಾಧಿಕಾರಿಗಳ 4 ಮತ್ತು 5ನೇ ತಂಡದ ತರಬೇತಿ ಕಾರ್ಯ ಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮೈವಿವಿ ವ್ಯಾಪ್ತಿ ಕಾಲೇಜುಗಳ ಎನ್‍ಎಸ್‍ಎಸ್ ವಿದ್ಯಾರ್ಥಿ ಗಳು ಸೇವಾ…
‘ಲಲಿತಾ ಜ್ಯುವೆಲರಿ’ಯ 32ನೇ ಶೋ ರೂಂ ಮೈಸೂರಲ್ಲಿ ನಾಳೆ ಉದ್ಘಾಟನೆ
March 17, 2021ಮೈಸೂರು,ಮಾ.16(ಪಿಎಂ)- `ಲಲಿತಾ ಜ್ಯುವೆಲರಿ’ 37 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಆಭರಣ ರೀಟಲರ್ಸ್ ಆಗಿ ಪ್ರಮುಖ ಹೆಸರು ಗಳಿಸಿದೆ. ಇದೀಗ ಮೈಸೂರಿ ನಲ್ಲೂ ತನ್ನ ನೂತನ ಶೋ ರೂಂ ಆರಂಭಿಸುತ್ತಿದೆ. 32ನೇ ಶೋ ರೂಂ ಮೈಸೂರಿನಲ್ಲಿ ಮಾ.18ರಂದು ಉದ್ಘಾಟನೆಗೊಳ್ಳಲಿದೆ. ಇದೇ ವೇಳೆ ಹೊಸ ಆಭರಣಗಳ ಪ್ರದರ್ಶನವನ್ನೂ ಆಯೋ ಜಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಶೋ ರೂಂ ವಿಸ್ತರಿಸಲು ಲಲಿತಾ ಜ್ಯುವೆಲರಿ ಉದ್ದೇಶಿಸಿದೆ. ಬೆಂಗಳೂರಿನ ಲಲಿತಾ ಜ್ಯುವೆಲರಿ ಶೋ ರೂಂಗಳಲ್ಲಿ ಗ್ರಾಹಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ…
ಕೇಂದ್ರೀಯ ಶಿಯಾ ವಕ್ಫ್ ಬೋರ್ಡ್‍ನ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ನಡೆ ಖಂಡಿಸಿ ಪ್ರತಿಭಟನೆ
March 16, 2021ಮೈಸೂರು,ಮಾ.15(ಪಿಎಂ)- ಹಿಂಸೆ ಉತ್ತೇಜಿಸುತ್ತದೆ ಎಂದು ಕುರಾನ್‍ನ ಕೆಲ ಅಂಶಗಳನ್ನು ತೆಗೆದು ಹಾಕಲು ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಿರುವ ಉತ್ತರ ಪ್ರದೇಶದ ಕೇಂದ್ರೀಯ ಶಿಯಾ ವಕ್ಫ್ ಬೋರ್ಡ್‍ನ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ನಡೆ ಖಂಡಿಸಿ ಮಜ್ಲಿಸ್ ಉಲ್ಮಾ ಎ ಅಹ್ಲೆ ಸುನ್ನತ್ ಮೈಸೂರು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ವಾಸಿಮ್ ರಿಜ್ವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಾಸಿಮ್ ರಿಜ್ವಿ ಕುರಾನ್‍ಗೆ ಅಪ ಮಾನ ಮಾಡುವಂತೆ…
ಮೂರು ಕೃಷಿ ಕಾಯ್ದೆ, ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
March 16, 2021ಮೈಸೂರು,ಮಾ.15(ಪಿಎಂ)- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಸಂಬಂಧಿತ ಕಾಯ್ದೆಗಳು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಐಕ್ಯ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ರೈಲ್ವೆ ನಿಲ್ದಾಣದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸದರಿ ಕಾಯ್ದೆಗಳನ್ನು ಹಿಂಪಡೆಯದೇ…
ಸತತ ಅಧ್ಯಯನವೇ ಉತ್ತಮ ಸಂಶೋಧನೆ, ವಿಚಾರಕ್ಕೆ ನಾಂದಿ
March 16, 2021ಮೈಸೂರು,ಮಾ.15-ಸಂಶೋಧನೆಯಲ್ಲಿ ಓದು ಅತಿ ಮುಖ್ಯವಾದುದು. ಕನಿಷ್ಠ ನೂರು ಸಂಶೋಧನಾ ಪ್ರಬಂಧಗಳನ್ನು ಓದಿದಾಗ ಮಾತ್ರವೇ ಸಂಶೋಧನೆಯ ಬರಹ ಮತ್ತು ವಿಧಾನ ಗ್ರಹಿಸಲು ಸಾಧ್ಯ. ಸತತ ಅಧ್ಯಯನವೇ ಉತ್ತಮ ಸಂಶೋ ಧನೆಯ ದಾರಿ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಸಂಶೋ ಧನಾ ಕೇಂದ್ರದ ವತಿಯಿಂದ ಸಂಶೋ ಧಕರು ಮತ್ತು ಮಾರ್ಗದರ್ಶಕರಿಗಾಗಿ ನಡೆದ ‘ಸಂಶೋಧನಾ ವಿಧಾನ’ ವಿಷಯ ಕುರಿತ ರಾಜ್ಯಮಟ್ಟದ…
ಕೃಷಿ ಚಟುವಟಿಕೆ, ಗ್ರಾಮೀಣ ಬದುಕಿನ ಬಗ್ಗೆ ಮಾಹಿತಿ ನೀಡಲು ‘ಅಗ್ರಿ ಟೂರಿಸಂ’ಗೆ ಚಿಂತನೆ
March 16, 2021ಮೈಸೂರು, ಮಾ.15- ಕೃಷಿ ಪ್ರಧಾನ ರಾಷ್ಟ್ರ ಭಾರತ ಕೃಷಿ ಚಟುವಟಿಕೆಯನ್ನು ವಿದೇಶಿಗರೂ ಸೇರಿದಂತೆ ಪ್ರವಾಸಿಗರಿಗೆ ಮನದಟ್ಟು ಮಾಡಿಕೊಡುವುದರೊಂದಿಗೆ ಪ್ರವಾಸೋದ್ಯಮದಲ್ಲಿ ಕೃಷಿ ಕ್ಷೇತ್ರದ ಮಹತ್ವ ಹಾಗೂ ಗ್ರಾಮೀಣ ಬದುಕಿನ ಅನಾ ವರಣಗೊಳಿಸುವ ನಿಟ್ಟಿನಲ್ಲಿ ಮೈಸೂ ರಲ್ಲಿ `ಅಗ್ರಿ ಟೂರಿಸಂ’ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಚಿಂತನೆ ನಡೆಸಿದೆ. ಮೈಸೂರು ಪ್ರವಾಸೋದ್ಯಮವನ್ನು ಕೇಂದ್ರೀಕರಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆ ವಿವಿಧ ಕಾರ್ಯಕ್ರಮ ಜಾರಿ ಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಕೆಎಸ್‍ಟಿಡಿಸಿ `ಅಗ್ರಿ ಟೂರಿಸಂ’ ಸ್ಥಾಪನೆಗೆ ಮುಂದಾಗಿದೆ. ಆ ಮೂಲಕ ಪ್ರವಾ…










