ಮೈಸೂರು,ಮಾ.18-ಕೆ.ಆರ್. ಆಸ್ಪತ್ರೆಯ ಆವರಣದಲ್ಲಿರುವ ನೆಪ್ರೋ-ಯುರಾಲಜಿ ಸಂಸ್ಥೆಯ ವತಿಯಿಂದ ವಿಶ್ವ ಕಿಡ್ನಿ ದಿನಾಚರಣೆ ಆಚರಿಸಲಾಯಿತು. ಕೆ.ಆರ್.ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕ ಡಾ. ನಂಜುಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಧ್ಯಾಪಕಿ ಡಾ.ಹಿಮಮಣಿ ಮಾತ ನಾಡಿ, ಕಿಡ್ನಿ ಕಾಯಿಲೆ ಇರುವವರು ಹೇಗೆ ಉತ್ತಮ ಜೀವನ ನಡೆಸಬಹುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರ್ಥವಾಗುವಂತೆ ಪವರ್ ಪಾಯಿಂಟ್ ಮೂಲಕ ತಿಳಿಸಿದರು. ಮನೋವೈದ್ಯ ಡಾ.ಶಿವಾನಂದ ಮನೋ ಹರ್ ಮಾತನಾಡಿ, ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿರುವ ರೋಗಿಗಳು ಮಾನಸಿಕ ಸ್ಥೈರ್ಯವನ್ನು ಹೇಗೆ ಜೀವನದಲ್ಲಿ ಅಳ ವಡಿಸಿಕೊಂಡು ದೀರ್ಘಕಾಲ ಬದುಕ…
ಮೈಸೂರಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ
March 20, 2021ಮೈಸೂರು, ಮಾ.18(ಆರ್‍ಕೆಬಿ)- ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಇಂಡಿ ಯನ್ ರಬ್ಬರ್ ಇನ್ಸ್‍ಟಿಟ್ಯೂಟ್ (ಐಆರ್‍ಐ) ಸಹಯೋಗದಲ್ಲಿ ಮೈಸೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ (ರಬ್ಬರ್ ತಂತ್ರಜ್ಞಾನ ಉತ್ಕøಷ್ಠತೆಯ ಕೇಂದ್ರ) ಸ್ಥಾಪನೆಗೆ ಮುಂದಾಗಿದೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಸುತ್ತೂರು ಮಠದಲ್ಲಿ ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ದಲ್ಲಿ ಐಆರ್‍ಐ ಆಡಳಿತ ಸಮಿತಿ ಅಧ್ಯಕ್ಷ ಡಾ.ಆರ್.ಮುಖ್ಯೋಪಾಧ್ಯಾಯ ಮತ್ತು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್‍ಮಠ ಒಡಂ ಬಡಿಕೆಗೆ ಸಹಿ ಹಾಕಿ,…
ಒಂದು ದಿನದ ಮುಷ್ಕರ: ಮೈಸೂರಲ್ಲಿ ಯಶಸ್ವಿ
March 20, 2021ಮೈಸೂರು,ಮಾ.18(ಪಿಎಂ)-ಭಾರತೀಯ ಜೀವ ವಿಮಾ ನಿಗಮವನ್ನು (ಎಲ್‍ಐಸಿ) ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದು, ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿ ಹೆಚ್ಚಿಸುವುದು ಹಾಗೂ ಖಾಸಗೀಕರಣದ ಪ್ರಸ್ತಾಪಗಳನ್ನು ಕೇಂದ್ರ ಸರ್ಕಾರ ಕೈಬಿಡ ಬೇಕೆಂದು ಒತ್ತಾಯಿಸಿ ದೇಶಾದ್ಯಂತ ಎಲ್‍ಐಸಿ ಅಧಿಕಾರಿ ಹಾಗೂ ನೌಕರ ವರ್ಗ ಗುರುವಾರ 1 ದಿನದ ಮುಷ್ಕರ ನಡೆಸಿತು. ಅಂತೆಯೇ ಮೈಸೂರು ವಿಭಾಗದ ವ್ಯಾಪ್ತಿ ಯಲ್ಲೂ ಅಧಿಕಾರಿ ಮತ್ತು ನೌಕರ ವರ್ಗ ಗುರುವಾರ ಕೆಲಸ ಸ್ಥಗಿತಗೊಳಿಸಿ, ಒಂದು ದಿನದ ಮುಷ್ಕರ ಯಶಸ್ವಿಗೊಳಿಸಿದೆ. ಅಲ್ಲದೆ, ಮುಷ್ಕರದ ಅಂಗವಾಗಿ ಮೈಸೂರಿನ ಬನ್ನಿ…
ಕೇರಳದಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯ
March 19, 2021ಮೈಸೂರು, ಮಾ.18-ಕೋವಿಡ್-19 2ನೇ ಅಲೆ ಭೀತಿ ಹಿನ್ನೆಲೆ ಯಲ್ಲಿ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದೆ ಎಂದು ಮೈಸೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಸ್.ಪಿ ರಿಷ್ಯಂತ್, ಗಡಿಭಾಗದ ಚೆಕ್ ಪೆÇೀಸ್ಟ್‍ಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗು ತ್ತಿದೆ. ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದ್ದು, ಒಂದು ವೇಳೆ ಟೆಸ್ಟ್ ಮಾಡಿಸದೆ ಬಂದ ಪ್ರಯಾಣಿಕರಿಗೆ, ಸ್ಥಳದಲ್ಲೇ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತದೆ. ಕೊರೊನಾ…
ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿಢೀರ್ ಹೆಚ್ಚಳ ರಾಜಧಾನಿಯಲ್ಲಿ ಗುರುವಾರ 925 ಮಂದಿಗೆ ಕೋವಿಡ್-19 ಸೋಂಕು ದೃಢ
March 19, 2021ಮೈಸೂರು, ಮಾ.18(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗುರುವಾರ ಬೆಂಗಳೂರಿನ 925 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 1,488 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿಗೆ ಒಳಗಾಗಿದ್ದವರಲ್ಲಿ 341 ಮಂದಿ ಗುಣಮುಖರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗುರುವಾರ 49 ಮಂದಿಗೆ ಸೋಂಕು ತಗುಲಿದ್ದರೆ, 30 ಮಂದಿ ಗುಣ ಕಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 54,663 ಮಂದಿಗೆ ಸೋಂಕು ತಗುಲಿದಂತಾಗಿದೆ. 53,325 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಬಗ್ಗೆ ವರದಿಯಾಗಿಲ್ಲ….
ಮೈಸೂರಿಗರಿಗೆ ಪುರುಸೊತ್ತಿದೆ ಎಂದು ಸುದೀರ್ಘ ನಾಟಕ ಪ್ರದರ್ಶಿಸಬೇಕಿತ್ತೇ?
March 19, 2021ಮೈಸೂರು, ಮಾ.18(ವೈಡಿಎಸ್)- ಖ್ಯಾತ ಕಾದಂಬರಿ ಕಾರ ಎಸ್.ಎಲ್.ಭೈರಪ್ಪ ಅವರ ಮೇರುಕೃತಿ ‘ಪರ್ವ’ ಅದಾಗಲೇ ನಾಟಕ ರೂಪ ತಳೆದು ಮೈಸೂರಿನ ರಂಗಾ ಯಣದಲ್ಲಿ ಪ್ರದರ್ಶನವನ್ನೂ ಕಂಡಿದೆ. ಪರ್ವ ನಾಟಕಕ್ಕೆ ಸಂಬಂಧಿಸಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ರಂಗ ನಿರ್ದೇಶಕ ಎಂ.ಎಸ್.ಸತ್ಯು ಅವರು ಪರಸ್ಪರ ಟೀಕೆ, ವಿಮರ್ಶೆಗೆ ಕಲಾಮಂದಿರದ ಕಿರುರಂಗ ಮಂದಿರ ವೇದಿಕೆಯಾಗಿತ್ತು. `ಅಭಿಯಂತರರು-ಮೈಸೂರು’ ಸಂಸ್ಥೆ ಗುರುವಾರ ರಂಗಾ ಯಣದಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ರಂಗೋತ್ಸವ’ವನ್ನು ಉದ್ಘಾಟಿಸಿದ ಚಿತ್ರ ನಿರ್ದೇಶಕ ಸತ್ಯು ಮಾತನಾಡಿ, `8 ಗಂಟೆಗಳಷ್ಟು ದೀರ್ಘ ಕಾಲ ಒಂದೆಡೆ…
ಹಿರಿಯ ಸಾಹಿತಿ, ಹೋರಾಟಗಾರ ಡಾ.ಮಳಲಿ ವಸಂತಕುಮಾರ್ ನಿಧನ
March 19, 2021ಮೈಸೂರು, ಮಾ.18- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಬುಧವಾರ ಸಂಜೆ ಬೆಂಗಳೂರಿನ ಅವರ ಮಗನ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲವು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ಮಳಲಿ ವಸಂತಕುಮಾರ್ ಪತ್ನಿ ಶಾಂತಾ ಮಳಲಿ, ಪುತ್ರಿ ರೂಪ ಹಾಗೂ ಪುತ್ರ ಸೇರಿದಂತೆ ಬಂಧು ಮಿತ್ರರು, ಶಿಷ್ಯ ವರ್ಗ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಡಾ.ಮಳಲಿ ವಸಂತ ಕುಮಾರ್ ಮೈಸೂರಿನ ಮಹಾರಾಜ ಹಾಗೂ ಯುವ ರಾಜ…
ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ
March 19, 2021ಮೈಸೂರು, ಮಾ.18(ಆರ್‍ಕೆ)-ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿರುವ ಹಿರಿಯರನ್ನು ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಅವರನ್ನು ಮತ್ತೆ ಅವರ ಸ್ಥಾನಕ್ಕೆ ಬಿಡಲು ಸರ್ಕಾರಿ ಇಲಾಖೆಗಳ ವಾಹನಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದೇ ರೀತಿ ರೋಟರಿ, ಲಯನ್ಸ್‍ನಂತಹ ಸಂಸ್ಥೆಗಳ ಸದಸ್ಯರ ಕುಟುಂಬದ ಹಿರಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಶಿಬಿರ ಏರ್ಪಡಿಸಿ ಕೊರೊನಾ ಲಸಿಕೆ ನೀಡುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೋವಿಡ್ ಲಸಿಕೆ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ…
ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣಾ ಪರಿಕರ ಕಿಟ್ ವಿತರಣೆ
March 18, 2021ಮೈಸೂರು, ಮಾ.17(ಎಸ್‍ಪಿಎನ್)- ಮೈಸೂರು ಜಿಲ್ಲೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣಾ ಪರಿಕರಗಳನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕಚೇರಿ ಆವರಣದಲ್ಲಿ ಬುಧವಾರ ವಿತರಣೆ ಮಾಡಿದರು. `ಸಮರ್ಥನಂ’ ವಿಶೇಷಚೇತನರ ಸಂಸ್ಥೆ ಮತ್ತು ಓರಾಕಲ್ ಕಂಪನಿ ಜತೆಗೂಡಿ ನೀಡಿದ ಆರೋಗ್ಯ ರಕ್ಷಣೆ ಪರಿಕರಗಳ ಕಿಟ್‍ಗಳನ್ನು ರಾಜ್ಯಾದ್ಯಂತ 36 ಸಾವಿರ ಆಶಾ ಕಾರ್ಯಕರ್ತೆಯರಿಗೆ ವಿತರಿಸುವ ಬೃಹತ್ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದು, ಮೈಸೂರು ಜಿಲ್ಲೆಯಲ್ಲಿ 1822, ಮಂಡ್ಯ 1367, ಕೊಡಗು 476…
ಕಗ್ಗವನ್ನು ವಾಚಿಸುವುದರಿಂದ ನೈತಿಕ ಮೌಲ್ಯ, ಅಂತಃಸತ್ವ, ನೆನಪಿನ ಶಕ್ತಿ ಹೆಚ್ಚುತ್ತೆ ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ವಿಶ್ವಾಸ
March 18, 2021ಮೈಸೂರು,ಮಾ.17-ರಾಮಕೃಷ್ಣನಗರದ ಐ ಬ್ಲಾಕ್‍ನ ಹಿತರಕ್ಷಣಾ ವೇದಿಕೆಯಿಂದ ರಾಮಕೃಷ್ಣನಗರದ ಐ ಬ್ಲಾಕ್‍ನಲ್ಲಿರುವ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡ ನೆಡುವ ಮೂಲಕ ಕವಿ, ಸಾಹಿತಿ ಡಾ.ಡಿ.ವಿ.ಗುಂಡಪ್ಪ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಡಿ.ವಿ.ಜಿ. ಅವರು ತಮ್ಮ ಜೀವನದ ಅನುಭವಗಳನ್ನು ಕಗ್ಗದ ಮೂಲಕ ತಿಳಿಸಿದ್ದಾರೆ. ಕಗ್ಗವನ್ನು ವಾಚಿಸುವುದರಿಂದ ನೈತಿಕ ಮೌಲ್ಯ, ಅಂತಃಸತ್ವ, ನೆನಪಿನ ಶಕ್ತಿ ಹೆಚ್ಚುತ್ತದೆ. ದುಃಖದಲ್ಲಿರುವವರ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಮಕ್ಕಳು ಕಗ್ಗವನ್ನು ವಾಚಿಸುವುದರಿಂದ ಅವರಲ್ಲಿ ನೈತಿಕ ಮೌಲ್ಯ ವೃದ್ಧಿಯಾಗುತ್ತದೆ ಎಂದು…










