ಮೈಸೂರು,ಫೆ.25-2020-21ನೇ ಸಾಲಿನ ಮುಂಗಾರು (ಖಾರೀಫ್) ಋತುವಿನಲ್ಲಿ ರೈತರು ಬೆಳೆದ ಭತ್ತ ಮತ್ತು ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತ ರಿಂದ ಖರೀದಿಸಲು ಮೈಸೂರು ಜಿಲ್ಲೆಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಯನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿ ಸಿದ್ದು, ಜಿಲ್ಲೆಯಲ್ಲಿ 12 ಖರೀದಿ ಕೇಂದ್ರ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿರುವ ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ 1868 ರೂ., ಗ್ರೇಡ್ `ಎ’ ಭತ್ತಕ್ಕೆ 1888 ರೂ….
ನಾಗವಾಲ ಗ್ರಾಪಂ ವಾರ್ಡ್ ಸಭೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯ
February 26, 2021ಮೈಸೂರು, ಫೆ.25- ಮೈಸೂರು ತಾಲೂಕಿನ ಹುಯಿಲಾಳು ಗ್ರಾಮದಲ್ಲಿ ನಾಗವಾಲ ಗ್ರಾಪಂ ವತಿಯಿಂದ ಬುಧವಾರ ವಾರ್ಡ್ ಸಭೆ ನಡೆಯಿತು. ಈ ವೇಳೆ ಗ್ರಾಪಂ ಅಧ್ಯಕ್ಷ ನರೇಂದ್ರ ಮಾತನಾಡಿ, 5 ವರ್ಷದಲ್ಲಿ ಆಶ್ರಯ ಮನೆ, ಅಂಗನವಾಡಿ ದುರಸ್ತಿಗಾಗಿ ಹಣ ಮಂಜೂರು ಮಾಡಲಾಗುವುದು. ಶಾಲೆಗಳಿಗೆ ಶೌಚಾಲಯ ನಿರ್ಮಾಣ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲರ ವೇತನ ಕೊಡಿಸುವುದಾಗಿ ಭರವಸೆ ನೀಡಿದರು. ಡಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಗ್ರಾಪಂ ಸದಸ್ಯ ಹುಯಿಲಾಳು ರಾಮಸ್ವಾಮಿ ಮಾತನಾಡಿ, ನಮ್ಮ ಗ್ರಾಮ ಮೈಸೂರು ನಗರಕ್ಕೆ ಸಮೀಪವಿದ್ದು,…
ಜನರ ಸಮಸ್ಯೆಗಳಿಗೆ ಪೊಲೀಸರು ಉತ್ತಮವಾಗಿ ಸ್ಪಂದಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು
February 24, 2021ಮೈಸೂರು,ಫೆ.23(ಎಸ್‍ಪಿಎನ್)- ಸಾರ್ವ ಜನಿಕ ಸಮಸ್ಯೆಗಳಿಗೆ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸಿದರೆ, ರಾಜ್ಯ ಸರ್ಕಾ ರಕ್ಕೆ ಉತ್ತಮ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿಯೇ ಪ್ರಶಿಕ್ಷಣಾರ್ಥಿಗಳು ತಮ್ಮ ವೃತ್ತಿಜೀವನ ಆರಂಭಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಲಹೆ ನೀಡಿದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಡಿವೈಎಸ್‍ಪಿ ಹಾಗೂ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಪ್ರಶಿಕ್ಷಣಾ ರ್ಥಿಗಳ ಜೊತೆಗಿನ ಸಂವಾದದಲ್ಲಿ ಭಾಗ ವಹಿಸಿದ್ದ ಅವರು, ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ನಡುವಿನ ಸಮನ್ವಯ ಕುರಿತ ಪ್ರಶ್ನೆಗೆ ಉತ್ತರಿಸಿದರು. ಹೊಸದಾಗಿ…
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು
February 24, 2021ಮೈಸೂರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಮೈಸೂರು, ಫೆ.23(ಆರ್‍ಕೆ)-ಚಿಕ್ಕಬಳ್ಳಾಪುರ ಸ್ಫೋಟ ಸಂಬಂಧ ಸರ್ಕಾರ ಇನ್ನಾ ದರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದ ಅವರು, ಒಂದು ಕಡೆ ಅಕ್ರಮ ಗಣಿಗಾರಿಕೆ ಅಂತಾರೆ, ಮತ್ತೊಂ ದೆಡೆ ಗಣಿಗಾರಿಕೆ ನಿಲ್ಲಿಸೋಲ್ಲ ಅಂತಾರೆ, ದೊಡ್ಡ ಪ್ರಮಾಣದಲ್ಲಿ ಸ್ಫೋಟ ಆದರೆ ಸುದ್ದಿ ಆಗುತ್ತೆ ಅಷ್ಟೆ. ಬಹುತೇಕ ಗಣಿಗಾರಿಕೆಯಲ್ಲಿ ಜನಪ್ರತಿನಿಧಿಗಳ ಪಾತ್ರವಿರುತ್ತದೆ. ಹಣ ಸಂಪಾದಿಸಲು ಸ್ಫೋಟ ಮಾಡುತ್ತಾರೆ. ಅದರಿಂದ ಬಡ ಕುಟುಂಬಸ್ಥರ…
ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಹಿರಿಯ ನಟ ಜಗ್ಗೇಶ್
February 24, 2021ಮೈಸೂರು,ಫೆ.23(ಪಿಎಂ)- ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧ ಲಘುವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ದರ್ಶನ್ ಅಭಿಮಾನಿಗಳು ನಿನ್ನೆ ಮುತ್ತಿಗೆ ಹಾಕಿ, ಘೇರಾವ್ ಮಾಡಿದ ಪ್ರಕರಣದಿಂದ ಮನನೊಂದ ಹಿರಿಯ ನಟ ಜಗ್ಗೇಶ್, ತಮ್ಮ ನೋವು ಹಾಗೂ ಬೇಸರ ವ್ಯಕ್ತಪಡಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಅತ್ತಳ್ಳಿಯಲ್ಲಿ ಸೋಮವಾರ ದರ್ಶನ ಅಭಿಮಾನಿ ಗಳು ತಮ್ಮನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾಗೂ ಈ ಸಂಬಂಧ ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಬೇಸರದ ನುಡಿಗಳೊಂದಿಗೆ ಅಲ್ಲಲ್ಲಿ ಕಟು ಶಬ್ಧಗಳಲ್ಲಿ ಜಗ್ಗೇಶ್ ಕಿಡಿಕಾರಿದ್ದಾರೆ….
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಪ್ರಧಾನಿ ಮೋದಿ ತೀವ್ರ ಸಂತಾಪ
February 24, 2021ಚಿಕ್ಕಬಳ್ಳಾಪುರ, ಫೆ.23-ಕನಿಷ್ಠ ಆರು ಮಂದಿಯ ಸಾವಿಗೆ ಕಾರಣವಾದ ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣಗಳಲ್ಲಿ ಹಲವರು ಸಾವನ್ನಪ್ಪಿದ್ದು, ಘಟನೆ ಸಾಕಷ್ಟು ನೋವನ್ನು ತಂದಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಹಾಗೂ ಗಾಯಾಳುಗಳು ಶೀಘ್ರಗತಿಯಲ್ಲಿ ಗುಣ ಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಿರೇನಾಗವೇಲಿ ಗ್ರಾಮದ ಬಳಿ ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ…
ಕೇರಳ ಗಡಿ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟೆಚ್ಚರ
February 24, 2021ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ರಾಜ್ಯ ಪ್ರವೇಶಿಸುವವರ ಆರೋಗ್ಯ ತಪಾಸಣೆ; ಅಗತ್ಯ ಮುನ್ನೆಚ್ಚರಿಕೆ ಮೈಸೂರು,ಫೆ.23(ಆರ್‍ಕೆ)-ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವು ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ. ಕರ್ನಾಟಕ-ಕೇರಳ ಗಡಿ ಭಾಗದ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‍ಪೋಸ್ಟ್ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ನಿಯೋಜಿಸಿ ಕೇರಳ ದಿಂದ ಬರುವವವರ ಆರೋಗ್ಯ ತಪಾಸಣೆ ಮಾಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಸ್ಥಳದಲ್ಲಿ ತಾತ್ಕಾಲಿಕ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಕೆಎಸ್‍ಆರ್ ಟಿಸಿ…
ಮೈಸೂರು ಜಿಲ್ಲೆ; ಮಂಗಳವಾರ ಕೊರೊನಾದಿಂದ ಒಂದೂ ಸಾವಿಲ್ಲ
February 24, 2021ಮೈಸೂರು, ಫೆ.23(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 26 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 11 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 53,967 ಮಂದಿಗೆ ಸೋಂಕು ತಗುಲಿದಂತಾಗಿದೆ. 52,764 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಸಾವಿನ ವರದಿಯಾಗಿಲ್ಲ. ಇದುವರೆಗೆ 1,029 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿನ್ನೂ 174 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 49 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 30, ಖಾಸಗಿ ಆಸ್ಪತ್ರೆಗಳು-ನಿಗಾ ಕೇಂದ್ರಗಳಲ್ಲಿ 95 ಮಂದಿ…
ದಿಢೀರ್ ಸಚಿವ ಮುರುಗೇಶ್ ನಿರಾಣಿಗೆ ವರಿಷ್ಠರ ಬುಲಾವ್
February 24, 2021ಬೆಂಗಳೂರು, ಫೆ.23(ಕೆಎಂಶಿ)-ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟ ರಾಜ್ಯ ರಾಜಕೀಯ ಚಿತ್ರಣವನ್ನು ಬದಲಿಸುವಂತೆ ಕಾಣುತ್ತಿದೆ. ಈ ಹೋರಾಟವನ್ನು ಬಿಜೆಪಿ ವರಿಷ್ಠರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಕುಂದು ತರುತ್ತದೋ ಇಲ್ಲ ಅವರ ವಿರೋಧಿ ಗಳ ಮಟ್ಟ ಹಾಕುತ್ತದೋ ಕಾದು ನೋಡಬೇಕು. ಗಣಿ ಸಚಿವ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ವರಿಷ್ಠರು ಹಠಾತ್ ಆಗಿ ಇಂದು ದೆಹಲಿಗೆ ಕರೆಸಿಕೊಂಡು, ಚರ್ಚೆ ಮಾಡಿರುವುದೇ ರಾಜಕೀಯ ವಲಯದಲ್ಲಿ ಗುಸುಗುಸುಗೆ ಕಾರಣ…
ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿ.ವೈ.ವಿಜಯೇಂದ್ರ ಟಾಂಗ್
February 24, 2021ಬೆಂಗಳೂರು: ದೇಶದ್ರೋಹಿ, ಮತಾಂಧ ಉಗ್ರಗಾಮಿಗಳ ಹುಟ್ಟಡ ಗಿಸಿ, ಕಾಶ್ಮೀರ ರಕ್ಷಿಸಿ, ಭಾರತದ ಸಾರ್ವಭೌಮತೆ, ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮಥ್ರ್ಯ ಏನೆಂಬುದು ಜನತೆಗೆ ತಿಳಿದಿದೆ ಎಂದು ಬಿಜೆಪಿ ಯುವ ನಾಯಕ ಬಿ.ವೈ.ವಿಜಯೇಂದ್ರ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಕಾಂಗ್ರೆಸ್‍ನ ಅಂಗಸಂಸ್ಥೆಗಳೇ ಆಗಿರುವ ಪಿಎಎಫ್, ಐಎಎಸ್‍ಡಿಪಿಐ ಸಂಘಟನೆಗಳಿಗೆ ಮುಕ್ತಿ ಹಾಡುವ ಕಾಲ ಶೀಘ್ರದಲ್ಲೇ ಬರಲಿದೆ, ನೋಡುತ್ತೀರಿ ಎಂದೂ ಟ್ವೀಟ್ ಮಾಡಿದ್ದಾರೆ. ಸಂಘಟನೆ ಗಳ ಪೆÇೀಷಣೆ ಕಾಂಗ್ರೆಸ್‍ನ ಹೊಣೆ’ ಎಂಬಂತೆ ಅವುಗಳ ಮೇಲಿದ್ದ ಕ್ರಿಮಿನಲ್ ಕೇಸ್‍ಗಳನ್ನು ನಿಮ್ಮ ಅಧಿಕಾರವಧಿಯಲ್ಲಿ…










