ನವದೆಹಲಿ, ಫೆ.23- “ನಾನು ಕರ್ನಾ ಟಕಕ್ಕೆ ಹಿಂದಿರುಗಿದ ನಂತರ ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ” ಎಂದು ಹೇಳುವ ಮೂಲಕ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾವು ಕಾಂಗ್ರೆಸ್‍ನ ಬಿ ಟೀಂ ಎಂದ ಸಚಿವ ಮುರುಗೇಶ್.ಆರ್ ನಿರಾಣಿ ಅವರಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‍ನ ಬಿ ಟೀಮ್‍ನಂತೆ ಕೆಲಸ ಮಾಡು ತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್‍ಗೆ ತಾಕತ್ತಿದ್ದರೆ, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರ ಶಾಸಕನಾಗಿ ಗೆದ್ದು ಬರಲಿ ಎಂದು ಮುರುಗೇಶ್ ನಿರಾಣಿ ಬಹಿರಂಗ ಸವಾಲು…
`ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಆರೋಪ ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘ ಪ್ರತಿಭಟನೆ
February 24, 2021ಮೈಸೂರು, ಫೆ.23(ಪಿಎಂ)- ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ `ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವ ಹೇಳನ ಮಾಡಿರುವ ದೃಶ್ಯಗಳಿವೆ ಎಂದು ಆರೋಪಿಸಿ ಹಾಗೂ ಆ ದೃಶ್ಯಗಳನ್ನು ತೆಗೆಯುವವರೆಗೆ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬ್ರಾಹ್ಮಣ ಸಮುದಾಯದ ಭಾವನೆಗೆ ಧಕ್ಕೆ ತರುವಂತೆ ಪುರೋಹಿತರ ಮೇಲಿನ ಅವ ಹೇಳನ ದೃಶ್ಯ ಹಾಗೂ ಸಂಭಾಷಣೆಗಳು `ಪೊಗರು’…
ವಿದ್ಯುತ್ ಉಳಿತಾಯ, ಜಲ ಸಂರಕ್ಷಣೆ ಕುರಿತು ಕಾರ್ಯಾಗಾರ
February 24, 2021ಮೈಸೂರು,ಫೆ.23-ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯ ಮಿತವು, ಕೃಷಿ ವಿಜ್ಞಾನ ಕೇಂದ್ರ ಹರದನಹಳ್ಳಿ, ಚಾಮರಾಜನಗರ ಜಿಲ್ಲೆ ಸಹಯೋಗ ದೊಂದಿಗೆ ರೈತರಿಗೆ ಪಂಪ್‍ಸೆಟ್‍ಗಳಲ್ಲಿ ವಿದ್ಯುತ್ ಉಳಿತಾಯ ಹಾಗೂ ಜಲಸಂರಕ್ಷಣೆ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಏರ್ಪಡಿಸಿದ್ದರು. ಕಾರ್ಯಾಗಾರವನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಯೋಜನಾ ಅಭಿಯಂತರ ಡಿ.ಕೆ.ದಿನೇಶ್‍ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಪಂಪಸೆಟ್‍ಗಳಲ್ಲಿ ವಿದ್ಯುತ್ ಉಳಿತಾಯ ಹಾಗೂ ಜಲಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ರೈತರು ಮನೆಗಳಲ್ಲಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ನೀಡಲ್ಪಡುವ…
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
February 24, 2021ಮೈಸೂರು,ಫೆ.23(ಪಿಎಂ)- ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ಮೈಸೂರು ಹೃದಯವಂತ ಕನ್ನಡಿಗರ ಬಳಗದ ವತಿ ಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಸ್ಕೂಟರ್ ವೊಂದನ್ನು ಮಲಗಿಸಿ ಬಿಳಿ ಬಟ್ಟೆ ಹೊದಿ ಸುವ ಮೂಲಕ ಅಣಕು ಶವ ಪ್ರದರ್ಶಿಸಿ, ಪೆಟ್ರೋಲ್ ದರ ಏರಿಕೆ ವಿರುದ್ಧ ಕಿಡಿಕಾರಿ ದರಲ್ಲದೆ, ಅಡುಗೆ ಅನಿಲದ ಬೆಲೆ ಏರಿಕೆ ಯಿಂದ ಇನ್ನು ಮುಂದೆ ಸೌದೆ ಒಲೆಯಲ್ಲೇ ಅಡುಗೆ ಮಾಡಬೇಕಾಗುತ್ತದೆ ಎಂದು ಸೌದೆ…
ನಿರ್ಮಲ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ
February 24, 2021ಮೈಸೂರು, ಫೆ. 23- ನಿರ್ಮಲ ಭಕ್ತಿಯಿಂದ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವೆಂದು ದಾಸರು ಮತ್ತು ಶರಣರು ಪ್ರತಿಪಾದಿಸಿದ್ದಾರೆ ಎಂದು ಖ್ಯಾತ ಸಂಗೀತ ಕಲಾವಿದರಾದ ವಿದುಷಿ ಕಲಾವತಿ ಅವಧೂತ್ ಹೇಳಿದರು. ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-12’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯ ಕ್ರಮದಲ್ಲಿ ‘ತ್ಯಾಗರಾಜ ಮತ್ತು ಪುರಂದರರ ರಚನೆಗಳು’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಪುರಂದರದಾಸರು ಮತ್ತು ತ್ಯಾಗರಾಜರ ರಚನೆಗಳು…
ಕೋವಿಡ್ ಸುರಕ್ಷತಾ ಕ್ರಮವಾಗಿ ಮದುವೆಗಳಲ್ಲಿ ಮಾರ್ಷಲ್ ನೇಮಕ
February 23, 2021ಬೆಂಗಳೂರು, ಫೆ.22 (ಕೆಎಂಶಿ)-ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋ ಜಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು. ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಾ ರಂಭಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾಷರ್Àಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. 500ಕ್ಕಿಂತ ಹೆಚ್ಚು ಜನರಿರಬಾರದು, ಎಲ್ಲರೂ ಮಾಸ್ಕ್ ಧರಿಸುವ…
ಕೋರ್ಟ್ ಅಂಗಳದಲ್ಲಿ ಮೈಸೂರು ಮೇಯರ್ ಚುನಾವಣಾ ಭವಿಷ್ಯ
February 23, 2021ಮೈಸೂರು, ಫೆ.22(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವ ಸಂದರ್ಭದಲ್ಲಿ ಎಲ್ಲಾ ಪಕ್ಷಗಳೂ ನ್ಯಾಯಾ ಲಯದತ್ತ ಚಿತ್ತ ಹರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮೇಯರ್ ಮೀಸಲಾತಿ ಸಂಬಂಧ ಪಾಲಿಕೆಯ ಪಕ್ಷೇ ತರ ಸದಸ್ಯ ಸಮೀವುಲ್ಲಾ ಹೈಕೋರ್ಟ್ ಮೆಟ್ಟಿಲೇರಿದ್ದು, ನಿಗದಿಯಂತೆ ಫೆ.24ರಂದು ಮೇಯರ್ ಚುನಾವಣೆ ನಡೆಯಲು ಅವಕಾಶ ಸಿಗುವುದೋ? ಅಥವಾ ತಡೆಯಾಗು ವುದೋ? ಎಂಬುದು ಮಂಗಳವಾರ ಸ್ಪಷ್ಟವಾಗಲಿದೆ. ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ 2018ರಿಂದ 2020ರವರೆಗೆ ಮಹಿಳಾ ಮೀಸಲಾತಿ ನೀಡ ಲಾಗಿದೆ. ಪರಿಶಿಷ್ಟ…
`ಜನಪರ ಉತ್ಸವ’ದಲ್ಲಿ ಕಲೆ ಪ್ರದರ್ಶಿಸಿ ಸಂಭ್ರಮಿಸಿದ ವಿವಿಧ ಕಲಾ ತಂಡಗಳು
February 23, 2021ಮೈಸೂರು, ಫೆ.22(ಆರ್‍ಕೆಬಿ)- ಮೈಸೂ ರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಸೋಮವಾರ ನಡೆದ ಜನಪರ ಉತ್ಸವದಲ್ಲಿ ವಿವಿಧ ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು. ಮೊದಲಿಗೆ ಮೈಸೂರಿನ ಭಾಗ್ಯಲಕ್ಷ್ಮಿ ಮತ್ತು ತಂಡ ಗಣೇಶನ ಹುಟ್ಟಿನ ವಿಚಾರ ವನ್ನು ಕುರಿತು ಪ್ರಸ್ತುತಪಡಿಸಿದ `ಶ್ರೀ ಗಜಾ ನನ ಕಥೆ’ ನೃತ್ಯ ರೂಪಕ ಪ್ರೇಕ್ಷಕರನ್ನು ಸೆರೆ ಹಿಡಿಯಿತು. ಮೈಸೂರಿನ ನಿಖಿಲ್ ಮತ್ತು ತಂಡದ ಡೊಳ್ಳು ಕುಣಿತ, ತಿ.ನರಸೀ ಪುರದ ನಿಂಗರಾಜು ಮತ್ತು ತಂಡದ ಸುಗಮ ಸಂಗೀತ, ಹೆಚ್.ಡಿ.ಕೋಟೆ ತಾಲೂಕಿನ ಶಿರಮಳ್ಳಿಯ ಚಂದ್ರಕಾಂತ್…
ಮೈಸೂರು ರಿಂಗ್ ರಸ್ತೆ ಮುಂದುವರೆದ ಡಾಂಬರೀಕರಣಕ್ಕೆ ಉಸ್ತುವಾರಿ ಸಚಿವ ಸೋಮಶೇಖರ್ ಗುದ್ದಲಿಪೂಜೆ
February 23, 2021ಮೈಸೂರು,ಫೆ.22(ಆರ್‍ಕೆ)-ಮೈಸೂರಿನ ರಿಂಗ್ ರಸ್ತೆ ಮುಂದುವರಿದ ಡಾಂಬರೀಕರಣ ಕಾಮಗಾರಿಗೆ ದಟ್ಟಗಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೋಮ ವಾರ ಬೆಳಿಗ್ಗೆ ಗುದ್ದಲಿಪೂಜೆ ನೆರವೇರಿಸಿದರು. ಹಳೇ ಕೆಸರೆ ಗೇಟ್‍ನಿಂದ ದೇವೇಗೌಡ ವೃತ್ತ ಆರ್‍ಎಂಸಿ ಸರ್ಕಲ್, ಶ್ರೀರಾಂಪುರ ವೃತ್ತ, ದಟ್ಟಗಳ್ಳಿ ಕೆಇಬಿ ವೃತ್ತ ಮಾರ್ಗವಾಗಿ ಹಿನಕಲ್ ಜಂಕ್ಷನ್ ವರೆಗೆ 31.5 ಕಿ.ಮೀ. ಉದ್ದದ 6 ಪಥದ ರಿಂಗ್ ರೋಡ್ ಮತ್ತು ಎರಡೂ ಕಡೆಯ ಸರ್ವೀಸ್ ರಸ್ತೆ ಗಳ ಡಾಂಬರೀಕರಣ ಮತ್ತು ಅಭಿವೃದ್ಧಿಗೊಳಿಸುವ 14,471.88 ಲಕ್ಷ ರೂ. ಅಂದಾಜು…
ಕಲಾಮಂದಿರದ ‘ಕಿರುರಂಗ’ ಮಂದಿರದಲ್ಲಿ ಪಾಶ್ರ್ವಸಂಗೀತ ನಾಟಕ ಪ್ರದರ್ಶನ
February 23, 2021ಮೈಸೂರು,ಫೆ.22-ಮೈಸೂರಿನ ರಂಗವಲ್ಲಿ ತಂಡದಿಂದ ಫೆ.24 ಮತ್ತು 25ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಸಾಹಿತಿ ಶ್ರೀನಿವಾಸ ವೈದ್ಯ ಬರಹಗಳ ನ್ನಾಧರಿಸಿದ “ಪಾಶ್ರ್ವಸಂಗೀತ” ನಾಟ ಕದ ಪ್ರದರ್ಶನ ಏರ್ಪಡಿಸಿದೆ. ರಂಗಾ ಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ನಾಟಕ ನಿರ್ದೇಶಿಸಿದ್ದಾರೆ. ನಾಟಕದ ಕುರಿತು : ಪ್ರತಿಯೊಂದು ತಲೆಮಾರಿಗೂ ತಮ್ಮದೇ ಆದ ನೆಚ್ಚಿನ ಚಿತ್ರತಾರೆಯರು ಮತ್ತು ಮೆಚ್ಚಿನ ಹಾಡು ಗಳಿರುತ್ತವೆ. ಸಂಗೀತ ಲೋಕದ ಅದ್ಭುತ ಗಾಯಕರಾದ ಕೆ.ಎಲ್.ಸೈಗಲ್, ಜೊಹ್ರಾ ಬಾಯಿ ಅಂಬಾಲೆವಾಲಿ, ಅಮಿರ್ ಬಾಯಿ ಕರ್ನಾಟಕಿ,…










