ಮೈಸೂರು

ಸರ್ಕಾರಿ ತಂತ್ರಜ್ಞಾನ ಸಂಸ್ಥೆಗಳು `ಎಸ್‍ಎಂಇ’ಗೆ ಸ್ಪಂದಿಸುತ್ತಿಲ್ಲ
ಮೈಸೂರು

ಸರ್ಕಾರಿ ತಂತ್ರಜ್ಞಾನ ಸಂಸ್ಥೆಗಳು `ಎಸ್‍ಎಂಇ’ಗೆ ಸ್ಪಂದಿಸುತ್ತಿಲ್ಲ

February 22, 2021

ಮೈಸೂರು,ಫೆ.21(ಪಿಎಂ)-ಸಾರ್ವಜನಿಕ ವಲಯದ ತಂತ್ರ ಜ್ಞಾನ ಹಾಗೂ ತಾಂತ್ರಿಕ ಸಂಸ್ಥೆಗಳ ಪೈಕಿ ಬಹುತೇಕ ಸಂಸ್ಥೆ ಗಳು ಸಣ್ಣ ಉದ್ಯಮಿಗಳಿಗೆ ನಿರೀಕ್ಷೆ ಪ್ರಮಾಣದಲ್ಲಿ ಮಾರ್ಗ ದರ್ಶನ, ಅನುಭವದ ಜ್ಞಾನದ ನೆರವು ನೀಡುತ್ತಿಲ್ಲ ಎಂದು ಎನ್‍ಎಸ್‍ಐಆರ್‍ಸಿಇಎಲ್ ಮಾರ್ಗದರ್ಶಕ, ಐಐಟಿ ಖರಗ್ಪುರ್ ಹಳೆ ವಿದ್ಯಾರ್ಥಿ ಸುಕುಮಾರ್ ರಂಗಾಚಾರಿ ವಿಷಾದಿಸಿದರು. ಈ ಸಂಸ್ಥೆಗಳು ತಮ್ಮಲ್ಲಿನ ಸಂಶೋಧನೆಗೇ ಆದ್ಯತೆ ನೀಡು ತ್ತಿವೆಯೇ ಹೊರತು `ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳಿಗೆ’ ಅಗತ್ಯ ಮಾರ್ಗದರ್ಶನ ನೀಡುವಲ್ಲಿ ಹಿಂದುಳಿದಿವೆ. ಉದ್ಯಮಿಗಳೊಂದಿಗೆ ಸರಿಯಾದ ಸಂಪರ್ಕ, ಸಮನ್ವಯ ಸಾಧಿಸಿದರೆ ನಿರೀಕ್ಷಿತ ಯಶಸ್ಸು ಕಾಣಬಹುದು…

ಮರಗಳಿಗೆ ಅಳವಡಿಸಿದ ಅನಧಿಕೃತ ಜಾಹೀರಾತು ತೆರವು
ಮೈಸೂರು

ಮರಗಳಿಗೆ ಅಳವಡಿಸಿದ ಅನಧಿಕೃತ ಜಾಹೀರಾತು ತೆರವು

February 22, 2021

ಮೈಸೂರು,ಫೆ.21(ಎಂಟಿವೈ)- ಮೈಸೂರಿನ ರಸ್ತೆ ಬದಿ ಇರುವ ಗಿಡ-ಮರಗಳಿಗೆ ಅನಧಿಕೃತವಾಗಿ ಜಾಹೀರಾತು ಫಲಕ ಅಳವಡಿ ಸಿರುವುದನ್ನು ಭಾನುವಾರ ಕ್ಲೀನ್ ಮೈಸೂರು ಫೌಂಡೇಷನ್ ಕಾರ್ಯಕರ್ತರು ತೆರವು ಗೊಳಿಸುವ ಅಭಿಯಾನ ಆರಂಭಿಸಿದರು. ಮೈಸೂರಿನ ಒಂಟಿಕೊಪ್ಪಲ್‍ನಲ್ಲಿರುವ `ಮೈಸೂರು ಒನ್’ ಕಚೇರಿ ಸಮೀಪದಿಂದ ಸ್ವಚ್ಛ ಸರ್ವೇಕ್ಷಣ್ ಹಿನ್ನೆಲೆಯಲ್ಲಿ ಕ್ಲೀನ್ ಮೈಸೂರು ಫೌಂಡೇಷನ್ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಹಾಗೂ ಗಿಡಮರ ಗಳಿಗೆ ಅಳವಡಿಸಿರುವ ಜಾಹೀರಾತು ಫಲಕಗಳ ತೆರವಿನ ಅಭಿಯಾನದಲ್ಲಿ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವಿವಿಧ ತಂಡ ಗಳಾಗಿ ವಿಂಗಡಿಸಿ ಒಂಟಿಕೊಪ್ಪಲಿನ ವಿವಿಧ ರಸ್ತೆಗಳಲ್ಲಿ ಸ್ವಚ್ಛತಾ…

ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ
ಮೈಸೂರು

ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ

February 22, 2021

ಮೈಸೂರು,ಫೆ.21(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ವಿವಿಧ ಸಂಸ್ಥೆಗಳ ಕಾರ್ಯ ಕರ್ತರು, ಸ್ವಯಂಸೇವಕರು ಸ್ವಚ್ಛತಾ ಅಭಿಯಾನ ನಡೆಸಿ 10 ಚೀಲಕ್ಕೂ ಹೆಚ್ಚು ಪ್ಲಾಸ್ಟಿಕ್ ಸೇರಿದಂತೆ ನಿರುಪಯುಕ್ತ ಕಸ ಸಂಗ್ರಹಿಸಿದರು. ರೋಟರಿ ಮೈಸೂರ್ ಸೌತ್ ಈಸ್ಟ್, ಇನ್ನರ್‍ವೀಲ್ ಕ್ಲಬ್ ಆಫ್ ಸೌತ್ ಈಸ್ಟ್, ರೋಟರಾಕ್ಟ್ ಕ್ಲಬ್ ಮತ್ತು ರೋಟರಾಕ್ಟ್ ವಿಶ್ವಪ್ರಜ್ಞ, ಎಂ.ಐ.ಟಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ 7.30ರಿಂದ 9.30ರವರೆಗೆ ನಡೆದ ಸ್ವಚ್ಛತಾ ಅಭಿಯಾನÀ ದಲ್ಲಿ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕುಕ್ಕರಹಳ್ಳಿ ಕೆರೆಯ ವಾಕಿಂಗ್ ಪಾಥ್,…

ನಾಳೆ ಬೆಂಗಳೂರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ
ಮೈಸೂರು

ನಾಳೆ ಬೆಂಗಳೂರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ

February 22, 2021

ಮೈಸೂರು,ಫೆ.21(ಎಂಟಿವೈ)-ಖಾಸಗಿ ಶಾಲಾ ಅಭಿ ವೃದ್ಧಿ ಶುಲ್ಕ ಪಾವತಿಯಲ್ಲಿ ಶೇ.30ರಷ್ಟು ಕಡಿತಗೊಳಿಸಲು ಸೂಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಫೆ.23 ರಂದು ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ `ಸಿಸ್ಪ್ಮಾಮ್’ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾರಕವಾದ ಹೆಜ್ಜೆ…

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಎಫ್‍ಕೆಸಿಸಿಐ ಸದಸ್ಯರು
ಮೈಸೂರು

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಎಫ್‍ಕೆಸಿಸಿಐ ಸದಸ್ಯರು

February 22, 2021

ಬೆಂಗಳೂರು, ಫೆ.21- ಕೊರೊನಾದಿಂದ ಸಾಕಷ್ಟು ನಷ್ಟ ಅನುಭವಿಸಿರುವ ಕೆಲವು ಕ್ಷೇತ್ರಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‍ಕೆಸಿಸಿಐ) ಸದಸ್ಯರು ಮನವಿ ಮಾಡಿದ್ದಾರೆ. ರಾಜ್ಯ ಬಜೆಟ್‍ಗೆ ಇನ್ನು ಕೆಲ ದಿನಗಳು ಬಾಕಿಯಿದ್ದು, ಈ ಹಿನ್ನೆಯಲ್ಲಿ ವಿವಿಧ ವಲಯಗಳ ಸದಸ್ಯರೊಂದಿಗೆ ಚರ್ಚೆ ನಡೆಸುವ ಸಲುವಾಗಿ ನಿರ್ಮಲಾ ಸೀತಾ ರಾಮನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಅವರನ್ನು ನಿನ್ನೆ ಭೇಟಿ ಮಾಡಿರುವ…

ನಾಳೆ ಮೈಸೂರಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ
ಮೈಸೂರು

ನಾಳೆ ಮೈಸೂರಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

February 22, 2021

ಮೈಸೂರು,ಫೆ.21(ಎಂಟಿವೈ)-ಮೈಸೂರಿನ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮು ದಾಯ ಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದಿಂದ ಫೆ.23ರ ಬೆಳಗ್ಗೆ 10.45ಕ್ಕೆ ಲಯನ್ಸ್ ಜಿಲ್ಲೆ 317ಎ ಪ್ರಾಂತ್ಯ ಐದರ ಪ್ರಾಂತೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಜೆ.ಲೋಕೇಶ್ ಮೈಸೂರಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಾಂತೀಯ ಸಮ್ಮೇಳನವನ್ನು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾ ಟಿಸಲಿದ್ದಾರೆ. ಮೈಸೂರು ಶಾಖಾ ಮಠದ ಶ್ರೀ ಸೋಮೇ ಶ್ವರ ಸ್ವಾಮೀಜಿ ಉಪಸ್ಥಿತರಿರುವರು. ಶಾಸಕ ಎಲ್. ನಾಗೇಂದ್ರ, ಮಾಜಿ ಲಯನ್ಸ್ ಗವ ರ್ನರ್ ಲ.ಕೆ.ದೇವೇಗೌಡ, ಅಂಕಣ…

ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಜನಗಣತಿ ವರದಿ ಅನುಷ್ಠಾನ ಅನಿವಾರ್ಯ
ಮೈಸೂರು

ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಜನಗಣತಿ ವರದಿ ಅನುಷ್ಠಾನ ಅನಿವಾರ್ಯ

February 21, 2021

ಮೈಸೂರು,ಫೆ.20(ಪಿಎಂ)- ರಾಜ್ಯದಲ್ಲಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಪೂರಕವಾಗಿರುವ ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವುದರ ಜೊತೆಗೆ ಅದನ್ನು ಅನುಷ್ಠಾನಗೊಳಿಸ ಬೇಕು ಎಂದು ಹೈಕೋರ್ಟ್ ಹಿರಿಯ ವಕೀ ಲರೂ ಆದ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ರವಿ ವರ್ಮ ಕುಮಾರ್ ಒತ್ತಾಯಿಸಿದರು. ಮೈಸೂರು ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋ ಧನಾ ಹಾಗೂ ವಿಸ್ತರಣಾ ಕೇಂದ್ರ ಹಾಗೂ ಅಭಿವೃದ್ಧಿ ಅಧ್ಯಯನ ಸಂಸ್ಥೆ ಜಂಟಿ…

ಮೈಸೂರಲ್ಲಿ ನಿತ್ಯ 5,000 ಪ್ರಕರಣ, 5 ಲಕ್ಷ ರೂ. ದಂಡ ವಸೂಲಿ
ಮೈಸೂರು

ಮೈಸೂರಲ್ಲಿ ನಿತ್ಯ 5,000 ಪ್ರಕರಣ, 5 ಲಕ್ಷ ರೂ. ದಂಡ ವಸೂಲಿ

February 21, 2021

ಮೈಸೂರು, ಫೆ. 20(ಆರ್‍ಕೆ)- ಮೈಸೂರಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮೈಸೂರು ನಗರ ದಾದ್ಯಂತ ವಾಹನ ಸಂಚಾರ ಹೆಚ್ಚುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಅಧಿಕ ವಾಗುತ್ತಿರುವುದರಿಂದ ಅಪಘಾತ ತಪ್ಪಿಸಿ ಜನರ ಪ್ರಾಣ ರಕ್ಷಿಸುವ ಸಲುವಾಗಿ ತಪಾಸಣಾ ಕಾರ್ಯಾ ಚರಣೆಯನ್ನೂ ತೀವ್ರಗೊಳಿಸಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ವಾಹನ ಚಾಲನೆ…

ಮೈಸೂರಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

February 21, 2021

ಮೈಸೂರು,ಫೆ.20(ಆರ್‍ಕೆ)- ಮೈಸೂ ರಿನ ಕಲಾಮಂದಿರದ ಮನೆಯಂಗಳದಲ್ಲಿ ಇಂದು ಸಂತಕವಿ ಸರ್ವಜ್ಞ ಅವರ ಜಯಂತಿ ಯನ್ನು ಸರಳವಾಗಿ ಆಚರಿಸಲಾಯಿತು. ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಏರ್ಪಡಿ ಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ ಅವರು ಸರ್ವಜ್ಞ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು, ನಮ್ಮ ಸಂಸ್ಕøತಿ, ಸಾಹಿತ್ಯ ಸಂಪದ್ಭರಿತವಾಗಿರುವುದಕ್ಕೆ ಸಂತಕವಿ ಸರ್ವಜ್ಞರು ನೀಡಿದ ಕೊಡುಗೆ ಕಾರಣ ಎಂದು ತಿಳಿಸಿದರು. ಅವರ ವಿಚಾರಧಾರೆ, ಕವಿ ಸಂತತಿ ಹಿನ್ನೆಲೆಯಿಂದಾಗಿ ಇಂದೂ ನಮ್ಮ ನಾಡು…

ಮುಂಜಾನೆ ಎಎಸ್ಪಿ ದಾಳಿ: ಮರಳು ಲಾರಿ ವಶ
ಮೈಸೂರು

ಮುಂಜಾನೆ ಎಎಸ್ಪಿ ದಾಳಿ: ಮರಳು ಲಾರಿ ವಶ

February 21, 2021

ಮೈಸೂರು, ಫೆ.20(ಆರ್‍ಕೆ)-ಅಕ್ರಮವಾಗಿ ಮರಳು ಸಾಗಿಸು ತ್ತಿದ್ದ ಲಾರಿಯನ್ನು ಬನ್ನೂರು ರಸ್ತೆಯ ವಾಜಮಂಗಲ ಗೇಟ್ ಬಳಿ ಮೈಸೂರಿನ ಅಡಿಷನಲ್ ಎಸ್ಪಿ ಶಿವಕುಮಾರ್ ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಬನ್ನೂರು ಕಡೆಯಿಂದ ನಿತ್ಯ ಮರಳು ಸಾಗಿಸುತ್ತಿದ್ದು, ಪೊಲೀಸರು ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಕಾನ್‍ಸ್ಟೇಬಲ್‍ಗಳಾದ ಶ್ರೀನಿವಾಸ ಮತ್ತು ದೀಪು ಅವರೊಂದಿಗೆ ಮಫ್ತಿಯಲ್ಲಿ ದಾಳಿ ನಡೆಸಿದಾಗ ಮುಂಜಾನೆ ಸುಮಾರು 4 ಗಂಟೆ ವೇಳೆ ಬನ್ನೂರು ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ವಾಜಮಂಗಲ ಬಳಿ ತಡೆದಾಗ…

1 290 291 292 293 294 1,611
Translate »