ನವದೆಹಲಿ,ಫೆ.23-ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ 25 ಪೈಸೆ ಮತ್ತು ಡೀಸೆಲ್ 35 ಪೈಸೆ ಏರಿಕೆಯಾಗಿದೆ. ಭಾರತ ದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 25ರಿಂದ 35 ಪೈಸೆಯಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 90.83 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ದರ ಕೂಡ 81.32 ರೂ.ಗೆ ಆಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ 93.95 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ 86.19 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 97.32 ರೂ.ಗೆ ಏರಿಕೆಯಾದರೆ, ಡೀಸೆಲ್ 88.42…
ಮಹಾರಾಷ್ಟ್ರ, ಕೇರಳದಲ್ಲಿ 2 ರೂಪಾಂತರ ವೈರಸ್ ಪತ್ತೆ
February 24, 2021ನವದೆಹಲಿ, ಫೆ.23- SಂಖS-ಅoಗಿ-2 ನ ಓ440ಏ ಮತ್ತು ಇ484ಏ ಎರಡು ರೂಪಾಂತರಗಳು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪತ್ತೆಯಾಗಿವೆ. ಆದರೆ ಈ ಎರಡು ರಾಜ್ಯಗಳಲ್ಲಿನ ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳ ಉಲ್ಬಣಕ್ಕೆ ಅದೇ ಕಾರಣ ಎಂದು ನಂಬಲು ಸದ್ಯ ಯಾವುದೇ ಪುರಾವೆಯಿಲ್ಲ ಎಂದು ಕೇಂದ್ರವು ತಿಳಿಸಿದೆ. ಪತ್ರಿಕಾಗೋಷ್ಠಿ ನಡೆಸಿದ ನೀತಿ ಆಯೋಗ ಸದಸ್ಯ(ಆರೋಗ್ಯ) ವಿ.ಕೆ. ಪಾಲ್, ದೇಶದಲ್ಲಿ ಈವರೆಗೆ 187 ಜನರಲ್ಲಿ ಇಂಗ್ಲೆಂಡ್ ರೂಪಾಂ ತರದ ಸೋಂಕು ತಗುಲಿರುವುದು ಪತ್ತೆಯಾಗಿದೆ. 6 ಜನರಿಗೆ ದಕ್ಷಿಣ ಆಫ್ರಿಕಾದ ರೂಪಾಂತರ ಸೋಂಕು ತಗುಲಿದೆ….
ಉತ್ತಮ ಅರ್ಥವ್ಯವಸ್ಥೆಯು ದೇಶದ ಸದೃಢತೆ ಪ್ರತೀಕ
February 24, 2021ಮೈಸೂರು, ಫೆ.23(ಆರ್‍ಕೆ)- ಉತ್ತಮ ಅರ್ಥವ್ಯವಸ್ಥೆಯು ಯಾವುದೇ ದೇಶದ ಸದೃಢತೆಯ ಪ್ರತೀಕವಾಗುತ್ತದೆ ಎಂದು ಬೆಂಗ ಳೂರಿನ ಬ್ರೈನ್ಸ್ ನ್ಯೂರೊ ಸ್ಪೈನ್ ಆಸ್ಪತ್ರೆ ಸಂಸ್ಥಾಪಕ ಅಧ್ಯಕ್ಷ ಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಎನ್.ಕೆ. ವೆಂಕಟರಮಣ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಜೆಎಸ್‍ಎಸ್ ಮಹಾವಿದ್ಯಾಪೀಠವು ಮೈಸೂ ರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಏರ್ಪ ಡಿಸಿದ್ದ ‘ಸುವರ್ಣ ಮಹೋತ್ಸವ ದತ್ತಿ ಉಪ ನ್ಯಾಸ-10’ ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅವರ ‘ಸ್ಪೇಸ್ ಟೆಕ್ನಾಲಜಿ ಅಂಡ್ ಸೊಸೈ ಟಲ್ ಅಪ್ಲಿಕೇಷನ್ಸ್’, ಐಎಂಎಫ್ ಮುಖ್ಯ…
ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಮಾ.22ರಂದು ವಿಧಾನಸೌಧ ಚಲೋ ಚಳವಳಿ
February 24, 2021ಮೈಸೂರು,ಫೆ.23(ಪಿಎಂ)- ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಕೃಷಿ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಮಾ.22ರಂದು ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ, ಮೆಣಸು, ತಂಬಾಕು, ರೇಷ್ಮೆ ಮತ್ತು ಎಣ್ಣೆಕಾಳು ಸೇರಿದಂತೆ ಇನ್ನಿತರ ಉತ್ಪನ್ನಗಳಿಗೂ ಬೆಂಬಲ ಬೆಲೆ ವಿಸ್ತರಿಸುವಂತೆ ಹಾಗೂ…
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐತಿಹಾಸಿಕ ಕಾರ್ಯಕ್ರಮಗಳನ್ನು ಕೊಡಲು ಕಾರಣವೇ ಕಾಂಗ್ರೆಸ್ ಆರ್.ಧ್ರುವನಾರಾಯಣ್ ಅಭಿಮತ
February 24, 2021ಮೈಸೂರು: ಪ್ರತ್ಯೇಕ ಅಹಿಂದ ಸಂಘಟನೆ ಬೇಕಾಗಿಲ್ಲ. ಆ ರೀತಿಯ ಸಂಘಟನೆಯ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ. ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ನಮ್ಮ ಪರ ಇರುವಾಗ, ಅಹಿಂದ ಸಂಘಟನೆ ಏಕೆ? ಕಾಂಗ್ರೆಸ್ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಕೊಟ್ಟಿದೆ. ಕಟ್ಟ ಕಡೆಯ ವ್ಯಕ್ತಿಗಳಿಗೂ ರಾಜಕೀಯ ಸ್ಥಾನಮಾನ ಕೊಟ್ಟಿದೆ ಎಂದರು. ಸಣ್ಣ ಸಮುದಾಯದ ವೀರಪ್ಪಮೊಯ್ಲಿ, ಬಂಗಾರಪ್ಪರನ್ನು ಪಕ್ಷ ಸಿಎಂ…
ವಿದ್ಯಾರ್ಥಿನಿ ಮೇಲೆ ಸಮಾಜ ಕಲ್ಯಾಣ ಮಹಿಳಾ ಅಧಿಕಾರಿ ದೌರ್ಜನ್ಯ: ಆರೋಪ
February 24, 2021ಮೈಸೂರು,ಫೆ.23(ಪಿಎಂ)- ವಿದ್ಯಾರ್ಥಿ ನಿಲಯದ ನೀರಿನ ಸಮಸ್ಯೆ ಸರಿಪಡಿಸಲು ಆಗ್ರಹಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬ ರನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾ ಯಕ ನಿರ್ದೇಶಕಿ ಹಾಗೂ ಅವರ ಸಹ ಚರರು ಕಾರಿನಲ್ಲಿ ಕರೆದೊಯ್ದು ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘ ಟನೆಗಳ ಒಕ್ಕೂಟ, ಹೀಗೆ ದೌರ್ಜನ್ಯ ಎಸ ಗಿರುವ ಮಹಿಳಾ ಅಧಿಕಾರಿ ಅಮಾನತು ಗೊಳಿಸಿ, ಅವರ ಸಹಚರರನ್ನು ಬಂಧಿಸ ಬೇಕೆಂದು ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ…
ಕೊರೊನಾಗಿಂತ ಅದರ ಭಯವೇ ಹೆಚ್ಚು ಅಪಾಯಕಾರಿ
February 24, 2021ಮೈಸೂರು, ಫೆ.23- ಕೊರೊನಾ ಎಂಬ ಒಂದು ಸಣ್ಣ ವೈರಾಣು ಉದಾಸೀನ ಮನೋಭಾವದ ಹಾಗೂ ನಾನು ನನ್ನದೆಂಬ ಸ್ವಾರ್ಥ ತುಂಬಿದ ದುರಹಂಕಾರಿ ಮನುಷ್ಯನಿಗೆ ತಕ್ಕ ಪಾಠ ಕಲಿಸಿದ್ದು, ಕೊರೊನಾ ರೋಗಕ್ಕಿಂತ ಹೆಚ್ಚಾಗಿ ಅದರ ಆತಂಕದಿಂದಲೇ ಜೀವ ಭಯದಿಂದ ಮನುಷ್ಯ ತತ್ತರಿಸುವಂತೆ ಮಾಡಿದೆ. ಸಾಂಕ್ರಾಮಿಕ ರೋಗ-ರುಜಿನಕ್ಕೆ, ಕಷ್ಟನಷ್ಟಕ್ಕೆ, ಸಂಕಷ್ಟ ದುಃಖಕ್ಕೆ, ಸಾವು ನೋವಿಗೆ ಎಲ್ಲರೂ ಸಮಾನರೆಂಬ ಸಮಾನತೆಯ ಸಂದೇಶವನ್ನು ಕೊರೊನಾ ವೈರಸ್ ನೀಡಿರುವುದರ ಜೊತೆಗೆ ರೋಗಕ್ಕಿಂತ ರೋಗದ ಬಗೆಗಿನ ಭಯ ಭೀತಿಯೇ ಹೆಚ್ಚು ಅಪಾಯಕಾರಿ ಯೆಂಬ ಜಾಗೃತಿ ಮೂಡಿಸಿದೆ ಎಂದು…
ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ರಾಜೀನಾಮೆ
February 24, 2021ಬೆಂಗಳೂರು, ಫೆ.23(ಕೆಎಂಶಿ)-ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ಎನ್ನುವ ಸಿದ್ಧಾಂತದ ಅನ್ವಯ ತಾವು ಸಚಿವ ಸ್ಥಾನ ಅಲಂಕರಿಸಿರುವುದ ರಿಂದ, ಪಕ್ಷದ ರಾಜ್ಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರಿಗೆ ಸಲ್ಲಿಸಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ ಅವಧಿಯಲ್ಲಿ ತಮಗೆ…
ಜಿಲೆಟಿನ್ ಸ್ಫೋಟ ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ: ಡಿಕೆಶಿ
February 24, 2021ಬೆಂಗಳೂರು,ಫೆ.23(ಕೆಎಂಶಿ)-‘ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದ 6 ಜನ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾ ಯಕ ಜೀವಗಳು ಬಲಿಯಾಗಬೇಕು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಳೆದ ಒಂದು ತಿಂಗಳಲ್ಲೇ 2ನೇ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಈ ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆ ನಿರ್ಮಿಸಬೇಕು, ನೀತಿ-ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು…
ಬ್ರಾಹ್ಮಣರಿಗೆ ಅವಹೇಳನ ಮಾಡಿದ `ಪೆÇಗರು’; ಮೌನ ಮುರಿದ ಪೇಜಾವರ ಸ್ವಾಮೀಜಿ
February 24, 2021ಉಡುಪಿ,ಫೆ.23-ನಂದ ಕಿಶೋರ್ ನಿರ್ದೇಶನದ ‘ಪೆÇಗರು’ ಚಲನಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಖಂಡಿಸಿದ್ದಾರೆ. ಚಿತ್ರದ ಅನೇಕ ದೃಶ್ಯಗಳಲ್ಲಿ ಬ್ರಾಹ್ಮಣರನ್ನು ತೀರಾ ಅವಮಾ ನಿಸಲಾಗಿದೆ. ಇದರಿಂದ ಬ್ರಾಹ್ಮಣರ ಮನಸ್ಸಿಗೆ ತೀರಾ ನೋವಾಗಿದೆ. ಇಂಥ ಬೆಳವಣಿಗೆ ಅಸಹನೀಯ. ಬ್ರಾಹ್ಮಣರನ್ನು ಮಾತ್ರವಲ್ಲ ಯಾವುದೇ ಜಾತಿ, ಸಮುದಾಯಗಳನ್ನು ನಿಂದಿಸುವ, ಅವಮಾನಿ ಸುವ ಪ್ರವೃತ್ತಿ ಸಲ್ಲ. ಮನರಂಜನೆ ಹೆಸರಲ್ಲಿ ವಿಕೃತಿ ಸಲ್ಲ, ಈ ಭ್ರಮೆಯಿಂದ ಚಿತ್ರರಂಗ ಹೊರಬರಬೇಕು. ಪೆÇಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜವನ್ನು ನಿಂದಿಸುವ ದೃಶ್ಯಗಳನ್ನು ತಕ್ಷಣ…









